ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಏಕೆಂದರೆ ನಮ್ಮ ರಕ್ತ ಯಾವ ಗುಂಪಿನದು ಎಂಬುದರ ಆಧಾರದ ಮೇಲೆ ನಮ್ಮ ಆರೋಗ್ಯ ಹೇಗೆ? ನಾವೆಷ್ಟು ಆರೋಗ್ಯವಂತರು? ಅದರಲ್ಲೂ ನಮ್ಮ ಹೃದಯ ಎಷ್ಟು ಆರೋಗ್ಯಪೂರ್ಣವಾಗಿದೆ ಎಂಬುದನ್ನು ನಿರ್ಧರಿಸಬಹುದು . ಯಾರಿಗೇ ಆಗಲಿ ಕಾಯಿಲೆ ತೀವ್ರವಾಗುತ್ತಿದ್ದಂತೆ ಯಾವುದಕ್ಕೇ ಆಗಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು ಎನ್ನುತ್ತಾರೆ ವೈದ್ಯರು.
ಏಕೆಂದರೆ ಹಲವು ಕಾಯಿಲೆಗಳು ದೇಹವನ್ನು ವ್ಯಾಪಿಸುವುದು ಈ ರಕ್ತದ ಮೂಲಕವೇ. ಆದ್ದರಿಂದ ನಮ್ಮ ದೇಹದಲ್ಲಿ ಸಂಚರಿಸುತ್ತಿರುವ ಈ ರಕ್ತದ ಬಗ್ಗೆ ಆದ್ಯವಾಗಿ ತಿಳಿದುಕೊಳ್ಳುವುದು ಕ್ಷೇಮಕರ. ಮನುಷ್ಯನ ರಕ್ತವನ್ನು A, B, AB ಮತ್ತು O ಎಂಬುದಾಗಿ ವಿಂಗಡಿಸಲಾಗುತ್ತದೆ. ಇದನ್ನು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಆಂಟಿಜಿನ್ ಅಂಶಗಳನ್ನು ನೋಡಿಕೊಂಡು ವಿಂಗಡಿಸಲಾಗುತ್ತದೆ.
ಈ ಆಂಟಿಜಿನ್ ಜೊತೆಗೆ ಇನ್ನೊಂದು rh ಆಂಟಿಜಿನ್ ಆಧಾರದ ಮೇಲೆ A+ve, A-ve, B+ve,B-ve, AB+ve, AB-ve, O-ve, O+ve ಎಂಬುದಾಗಿ ಪುನಃ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ A+ve ಮತ್ತು O+ve ಗುಂಪುಗಳ ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. B-ve O-ve ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ.
ಎಲ್ಲ ಮನುಷ್ಯನ ರಕ್ತದ ಗುಂಪು ಒಂದೇ ಇರುವುದಿಲ್ಲ. ಎಲ್ಲರದ್ದೂ ಬೇರೆಬೇರೆ ರೀತಿಯ ಗುಂಪುಗಳು ಇರುತ್ತವೆ. ರಕ್ತದ ಗುಂಪು ಆರೋಗ್ಯದ ಮೇಲೆ ಪರಿಣಾಮ ಬೀರುವ ಮುಖ್ಯ ಆನುವಂಶಿಕ ಅಂಶವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.
ಮನುಷ್ಯನ ಹಲವಾರು ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರ ಮತ್ತು ರಕ್ತವು ಕಾರಣವಾಗಿರುತ್ತದೆ. ನಮ್ಮ ರಕ್ತದ ಗುಂಪಿನ ಪ್ರಕಾರ ನಾವು ಯಾವ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ವಿವಿಧ ರಕ್ತ ಗುಂಪುಗಳೊಂದಿಗಿನ ಜನರು ವಿಭಿನ್ನ ರೀತಿಯಲ್ಲಿ ಆಹಾರ ವನ್ನು ಜೀರ್ಣಿಸಿಕೊಳ್ಳುತ್ತಾರೆ.
ಕೆಲವು ಜನರು ಸುಲಭವಾಗಿ ತೂಕವನ್ನು ಕಳೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಕೆಲವರು ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಇನ್ನು ಕೆಲವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಇತರರು ಆರೋಗ್ಯವಂತರಾಗುತ್ತಾರೆ.
ರಕ್ತದ ಗುಂಪಿನ ಪ್ರಕಾರ, ವ್ಯಕ್ತಿಯ ಮನೋಭಾವ ಮತ್ತು ಮನೋಧರ್ಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ರಕ್ತದ ಗುಂಪು ಮತ್ತು ಪೋಷಣೆಯ ಅಂಶಗಳ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಲು, ಕೆಲವು ಅಮೂಲ್ಯವಾದ ಮಾಹಿತಿಗಳಿಗೆ ಅವುಗಳನ್ನು ನೋಡೋಣ…
‘ಬ್ಲಡ್ ಟೈಪ್ ಡಯಟ್’ ಎನ್ನುವುದು ನಿರ್ದಿಷ್ಟ ಆಹಾರವನ್ನು ಸೇವಿಸುವುದರ ಮೇಲೆ ಅವಲಂಬಿಸಿದೆ, ಇದು ಉತ್ತಮ ಜೀರ್ಣಕ್ರಿಯೆಗೆ ಅವಕಾಶ ನೀಡುತ್ತದೆ, ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗಗಳನ್ನು ತಡೆಗಟ್ಟುತ್ತದೆ,
ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ವಿವಿಧ ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು ಒದಗುತ್ತದೆ. ಮತ್ತೊಂದೆಡೆ, ರಕ್ತದ ಗುಂಪು ದೇಹದ ವಿಭಿನ್ನ ಪೋಷಕಾಂಶಗಳೊಂದಿಗೆ ಕೆಲಸ ಮಾಡುತ್ತದೆ.
ಮಧುಮೇಹ, ಮೂತ್ರಪಿಂಡದ ಸಮಸ್ಯೆ, ಜಿ ಐಟಿ, ಕೊಲೆಸ್ಟರಾಲ್, ಅಧಿಕ ರಕ್ತದೊತ್ತಡ ಮುಂತಾದ ನಮ್ಮ ಆನುವಂಶಿಕ ವೈದ್ಯಕೀಯ ಸಮಸ್ಯೆಗಳನ್ನು ನಿಯಂತ್ರಿಸಲು ರಕ್ತದ ಗುಂಪು ಆಹಾರವು ನಮಗೆ ಸಹಾಯ ಮಾಡುತ್ತದೆ ”
ವಿವಿಧ ರಕ್ತದ ಗುಂಪುಗಳ ಪ್ರಕಾರ ಸೇವಿಸುವ ಆಹಾರದ ಪಟ್ಟಿಗಳನ್ನು ನೋಡೋಣ.
ರಕ್ತದ ಗುಂಪು: ಒ
ಮಾಂಸ, ಮೀನು, ಮೊಟ್ಟೆಗಳು, ಈರುಳ್ಳಿ, ಓಕ್ರಾ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಈ ಆಹಾರ ತುಂಬಾ ಒಳ್ಳೇದು ಆದ್ರೆ ಸಸ್ಯಾಹಾರಿಗಳು ಮಾಂಸವನ್ನು ತಿನೋದಿಲ್ಲ್ಲ ಹೀಗಾಗಿ ಅವರು ಅವರು ಈರುಳ್ಳಿ ಶುಂಟಿ ಬೇರ್ರ್ರಿ ಅತೀಯಾಗಿ ತಿನ್ನೋದು ಒಳ್ಳೇದು
ರಕ್ತದ ಗುಂಪು: ಎ
ಅಕ್ಕಿ, ಓಟ್ಸ್, ಪಾಸ್ಟಾ, ಕುಂಬಳಕಾಯಿ, ಕಾಳುಗಳು, ಅಂಜೂರದ ಹಣ್ಣು, ನಿಂಬೆಹಣ್ಣು, ಒಣದ್ರಾಕ್ಷಿ, ಹುರುಳಿ.ಗೋಧಿ ಆಧಾರಿತ ಸಸ್ಯಾಹಾರಿ ಆಹಾರ ಇತ್ಯಾದಿ
ರಕ್ತದ ಗುಂಪು: ಬಿ
ಹಸಿರು ತರಕಾರಿಗಳು, ಮೊಟ್ಟೆಗಳು, ಓಟ್ಸ್, ಹಾಲು ಉತ್ಪನ್ನ ಮತ್ತು ಪ್ರೊಟೀನುಗಳು ಇವುಗಳನ್ನು ಹೆಚ್ಚು ತಿಂದರೆ ಒಳ್ಳೆಯದು.
ರಕ್ತದ ಗುಂಪು: ಎಬಿ
ಸಮುದ್ರ ಆಹಾರ, ಮೊಸರು, ಮೇಕೆ ಹಾಲು, ಮೊಟ್ಟೆ, ಧಾನ್ಯಗಳು, ಓಟ್ಸ್,ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ ಇತ್ಯಾದಿ.
ತಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ನೀವು ಈ ಆಹಾರಗಳನ್ನು ಸೇವಿಸಿ ತುಂಬಾ ಒಳ್ಳೆ ಫಲಿತಾಂಶ ನಿಮಗೆ ಸಿಗುತ್ತೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.