ಕತ್ತರಿಸಿದ ಈರುಳ್ಳಿಯನ್ನು ಹೆಚ್ಚು ಸಮಯ ಇಟ್ಟು ಅಡುಗೆಗೆ ಬಳಸಲೇಬೇಡಿ. ಅದು ವಿಷಕಾರಿಯಾಗಿ ಪರಿಣಮಿಸುತ್ತದೆ.

0
1098

ಕತ್ತರಿಸಿದ ಈರುಳ್ಳಿಯನ್ನು ಹೆಚ್ಚು ಸಮಯ ಇಟ್ಟು ಅಡುಗೆಗೆ ಬಳಸಲೇಬೇಡಿ. ಅದು ವಿಷಕಾರಿಯಾಗಿ ಪರಿಣಮಿಸುತ್ತದೆ.

ನಮ್ಮಲ್ಲಿ ನೂರಾರು ಜನ ಸೇರುನ ಸಮಾರಂಭಗಳಿಗೆ ಅಡುಗೆ ತಯಾರಿಸಲು ಹಿಂದಿನ ದಿನವೇ ಈರುಳ್ಳಿ ಕೊಯ್ದು ಬಕೇಟಿನಲ್ಲಿ ತುಂಬಿಡುವ ಪರಿಪಾಠವಿದೆ, ಅಲ್ಲವೇ? ಇದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ನೀವೇ ಓದಿ ತಿಳಿದುಕೊಳ್ಳಿ. ಈ ವಿವರಣೆ ನಿಮಗೋಸ್ಕರ..

೧೯೧೯ನೆಯ ವರ್ಷದಲ್ಲಿ, ಫ್ಲು ರೋಗವು ೪೦ ಮಿಲಿಯನ್ ಅಂದರೆ, ೪ ಕೋಟಿ ಜನರ ಮರಣಕ್ಕೆ ಕಾರಣವಾಯಿತು.

ವೈಧ್ಯರು ಈ ಕಾಯಿಲೆಗೆ ತುತ್ತಾದ ರೈತರನ್ನು ನೋಡಲು, ಹಾಗೂ ಫ್ಲೂ ರೋಗದ ವಿರುದ್ಧ ಹೋರಾಡಲು ಏನು ಮಾಡಬಹುದು ಎಂಬ ವಿಷಯದಲ್ಲಿ ಆಸಕ್ತಿ ತಾಳಿದರು.

ಬಹಳಷ್ಟು ರೈತರು ಹಾಗು ಅವರ ಕುಟುಂಬದವರು ಫ್ಲೂ ಕಾಯಿಲೆ ತಗುಲಿದ್ದರ ಕಾರಣ ಮೃತರಾದರು.

ಆದಾಗ್ಯೂ, ಆ ವೈದ್ಯರು ಫ್ಲೂ ಕಾಯಿಲೆ ತಗಲದೇ ಇದ್ದು, ಆರೋಗ್ಯವಂತರಾಗಿದ್ದ ಕುಟುಂಬದ ಜನರನ್ನು ಭೇಟಿ ಮಾಡಿದರು.

ಅವರೆಲ್ಲರೂ ಆರೋಗ್ಯವಂತರಾಗಿರವುದಕ್ಕೆ, ಉಳಿದವರಿಗಿಂತ ಭಿನ್ನವಾಗಿರುವ ಕಾರ್ಯವನ್ನೇನು ಮಾಡಿದಿರೆಂದು ವೈದ್ಯರು ಅವರನ್ನು ಕೇಳಿದರು.

ಸಿಪ್ಪೆಯನ್ನು ಸುಲಿಯದೇ ಇದ್ದ ಈರುಳ್ಳಿಯನ್ನು ಒಂದು ತಾಟಿನಲ್ಲಿಟ್ಟು ತಮ್ಮ ಮನೆಯ ಎಲ್ಲಾ ಕೋಣೆಯಲ್ಲಿ ಒಂದೊಂದು ತಾಟಿನಂತೆ ಇಡಲಾಯಿತೆಂದು ಆ ಮನೆಯ ರೈತನ ಹೆಂಡತಿ ಉತ್ತರಿಸಿದಳು.

ಆ ವೈದ್ಯರು, ಬಹುಶಃ ಆ ವಿಧಾನವು ರೋಗನಿವಾರಣೆಗೆ ಕಾರಣವಾಗಿರಬಹುದೆಂದು ಯೋಚಿಸಿ, ಆ ಈರುಳ್ಳಿಗಳಲ್ಲಿ ಒಂದನ್ನು ತಂದು ತೋರಿಸಲು ಹೇಳಿದರು.

ಆ ಈರುಳ್ಳಿಯನ್ನು ವೈದ್ಯರು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ವೀಕ್ಷಿಸಿದಾಗ ಅದರಲ್ಲಿ ಫ್ಲೂ ರೋಗದ ಸೂಕ್ಷ್ಮಾಣುಗಳು ಗೋಚರವಾದವು. ಆ ಈರುಳ್ಳಿಗಳು ಸಹಜ ಹಾಗೂ ನಿಖರವಾಗಿ ಸೂಕ್ಷ್ಮರೋಗಾಣುಗಳನ್ನು ತಮ್ಮೆಡೆಗೆ ಸೆಳೆದುಕೊಂಡು, ಆ ಕಾರಣವಾಗಿ ಆ ಮನೆಯಲ್ಲಿನ ಕುಟುಂಬವನ್ನು ಆರೋಗ್ಯವಂತ ಸ್ಥಿತಿಯಲ್ಲಿ ಇರಿಸಿದವು.

ನ್ಯುಮೋನಿಯಾ ಆದಾಗ ಈರುಳ್ಳಿಯ ಎರಡೂ ತುದಿಗಳನ್ನು ಕತ್ತರಿಸಿ ಅದನ್ನು ಒಂದು ಖಾಲಿ ಪಾತ್ರೆಯಲ್ಲಿಟ್ಟು, ರಾತ್ರಿಯಿಡೀ ತನ್ನ ಸಮೀಪದಲ್ಲಿ ಇಟ್ಟುಕೊಂಡು ನಿದ್ರಿಸಿದರೆ ಮುಂಜಾನೆಯಾಗುವಷ್ಟರಲ್ಲಿ ನೀವು ಸುಧಾರಿಸಿದಂತೆ ಅನುಭವವಾಗುತ್ತದೆ. ಅಂತೆಯೇ ಆ ಈರುಳ್ಳಿಯು ಕಪ್ಪು ವರ್ಣಕ್ಕೆ ತಿರುಗುತ್ತದೆ.

ಬಹಳಷ್ಟು ಸಲ ನಮಗೆ ಉದರ ಸಂಬಂಧಿ ತೊಂದರೆಗಳಾದಾಗ ಯಾವುದನ್ನು ದೂಷಿಸಬೇಕೆಂದು ತಿಳಯೋದಿಲ್ಲ. ಬಹುಶಃ ಆ ಮೊದಲಿಗೆ ನಾವು ತಿಂದ ಈರುಳ್ಳಿಗಳನ್ನೇ ದೂಷಿಸಬೇಕು.

ಈರುಳ್ಳಿಗಳು ಸೂಕ್ಷ್ಮರೋಗಾಣುಗಳನ್ನು ಹೀರಿಕೊಳ್ಳುತ್ತವೆ ಹಾಗೂ ಆ ಕಾರಣವಾಗಿಯೇ ಅವು ನೆಗಡಿ ಹಾಗೂ ಫ್ಲೂ ತೊಂದರೆಗಳಿಂದ ನಮಗೆ ಉತ್ತಮ ಸಂರಕ್ಷಣೆ ನೀಡುತ್ತವೆ.

ಮತ್ತು ಅದೇ ಕಾರಣಕ್ಕಾಗಿ ಹೋಳು ಅಥವಾ ಚೂರು ಮಾಡಲ್ಪಟ್ಟು ಹೆಚ್ಚು ಕಾಲ ಇಟ್ಟ ಈರುಳ್ಳಿಯನ್ನು ಖಂಡಿತವಾಗಿಯೂ ತಿನ್ನಲೇಬಾರದು. ಹೆಚ್ಚಿದ ನಂತರ ಹೆಚ್ಚಾಗಿ ಉಳಿದ ಈರುಳ್ಳಿ ಬಹಳ ವಿಷಕಾರಿಯಾಗಿರುತ್ತದೆ.

ಯಾವುದೇ ವಿಷಾಹಾರ ಸೇವನೆಯ ವರದಿಯಾದಾಗ ಅದಕ್ಕೆ ಬಲಿಯಾದವರು ಈರುಳ್ಳಿಯ ಸೇವನೆ ಮಾಡಿದ್ದಾರೆಯೇ, ಮತ್ತು ಆ ಈರುಳ್ಳಿಗಳು ಎಲ್ಲಿಂದ ಸರಬರಾಜು ಆಗಿವೆಯೆಂದು ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈರುಳ್ಳಿಯೇ ಅದಕ್ಕೆ ಕಾರಣ ಆಗಿರುತ್ತದೆ.

ಈರುಳ್ಳಿಗಳು ಸೂಕ್ಷ್ಮರೋಗಾಣುಗಳನ್ನು ಸೆಳೆದುಕೊಳ್ಳುವ ಬೃಹತ್ ಚುಂಬಕಶಕ್ತಿಯನ್ನು ಹೊಂದಿರುತ್ತದೆ. ವಿಶೇಷತಃ ಬೇಯಿಸದೇ ಇದ್ದ ಈರುಳ್ಳಿಗಳು.

ಯಾವುದೇ ಕಾರಣಕ್ಕೂ ಕತ್ತರಿಸಿದ ಈರುಳ್ಳಿಯ ಭಾಗವನ್ನು ಹೆಚ್ಚಿನ ಸಮಯ ಇಟ್ಟು ನಂತರದ ಅಡುಗೆಗೆ ಬಳಸಬೇಡಿ ಅಷ್ಟೇ ಅಲ್ಲ, ಕತ್ತರಿಸಿದ ಈರುಳ್ಳಿಯನ್ನು ಭದ್ರವಾಗಿ ಡಬ್ಬದಲ್ಲಿ ಮುಚ್ಚಿ ಶೀತಕ ಅಥವಾ ರೆಫ್ರಿಜಿರೇಟರ್ ದಲ್ಲಿ ಇಟ್ಟರೂ ಅದು ಸುರಕ್ಷಿತವಲ್ಲ. ಅದು ಇನ್ನೂ ಹೆಚ್ಚು ವಿಷಕಾರಿಯಾಗಿರುತ್ತದೆ.

ಹಾಗೆಯೇ ನಾಯಿಗಳಿಗೆ ಈರುಳ್ಳಿಯನ್ನು ತಿನ್ನಿಸಬೇಡಿ. ಅವುಗಳ ಉದರವು ಈರುಳ್ಳಿಯನ್ನು ಜೀರ್ಣಿಸುವ ಶಕ್ತಿ ಹೊಂದಿರುವದಿಲ್ಲ.

ನೆನಪಿರಲಿ.. ಈರುಳ್ಳಿಯನ್ನು ಕತ್ತರಿಸಿಟ್ಟು ಉಳಿಸಿ ಮರುದಿನದ ಅಡುಗೆಗೆ ಬಳಸುವುದು ಅತ್ಯಂತ ಅಪಾಯಕಾರಿಯಾದುದು. ಏಕೆಂದರೆ, ಕೇವಲ ಒಂದು ರಾತ್ರಿಯ ಅವಧಿಯಲ್ಲಿ ಅದು ಅತ್ಯಂತ ವಿಷಕಾರಿಯಾಗಿ ಪರಿಣಮಿಸುತ್ತದೆ. ಏಕೆಂದರೆ, ಅದು ಅತ್ಯಂತ ಅಪಾಯಕಾರಿಯಾದ ಉದರ ದೋಷಗಳನ್ನು ಮಾಡುವಂತಹ ವಿಷಕಾರಿ ಸೂಕ್ಷ್ಮಾಣುಗಳನ್ನು ಸೃಷ್ಟಿಸಿ, ಹೆಚ್ಚಿನ ನಿರ್ನಾಳ ಗ್ರಂಥಿಗಳ ಸ್ರಾವಕ್ಕೆ ಮೂಲವಾಗಿ, ಆಹಾರ ವಿಷಮಯಕ್ಕೂ ಕಾರಣವಾಗುತ್ತದೆ.

LEAVE A REPLY

Please enter your comment!
Please enter your name here