ಕುಲ್ಫಿ ಐಸ್ ಕ್ರೀಮ್ ಮನೆಯಲ್ಲೇ ಮಾಡಿ

0
1299

ಐಸ್ ಕ್ರೀಮ್. ಕುಲ್ಫಿ ಯನ್ನು ಮನೆಯಲ್ಲಿ ತಯಾರಿಸುವ ವಿಧಾನ.

ಬೇಸಿಗೆ ಬಂದರೆ ಸಾಕು ಎಲ್ಲರೂ ತಂಪು ಪಾನೀಯಗಳ ಕಡೆಗೆ ಮುಖ ಮಾಡುತ್ತಾರೆ. ಈ ಬಿಸಿಲಿನ ದೆಗೆಯಿಂದ ತಪ್ಪಿಸಿಕೊಳ್ಳಲು. ಐಸ್ ಕ್ರೀಮ್. ಕುಲ್ಫಿ. ಜ್ಯೂಸ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ ಅದರಲ್ಲೂ ಮಕ್ಕಳು ತುಂಬಾ ಇಷ್ಟ ಪಡುತ್ತಾರೆ. ಆದರೆ ಇವುಗಳನ್ನು ಕೆಮಿಕಲ್. ರಾಸಾಯನಿಕ. ಮಿಶ್ರಣದಿಂದ ತಯಾರು ಮಾಡಿರುವುದರಿಂದ ಹಲವಾರು ಸಮಸ್ಯೆಗಳು ಉತ್ತ್ಪತಿಯಾಗುತ್ತವೆ.

ಹಾಗಾಗಿ ಈ ಹೊರಗೆ ಸಿಗುವ ಐಸ್ ಕ್ರೀಮ್. ಕುಲ್ಫಿ. ಜ್ಯೂಸ್ ಗಳ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿಕೊಂಡು ಸೇವಿಸುವ ಮೂಲಕ ಹಲವು ಸಮಸ್ಯೆಗಳನ್ನು ತಡೆಯಿರಿ.

ಹಾಗಾದರೆ ಮನೆಯಲ್ಲಿ ಹೇಗೆ ಐಸ್ ಕ್ರೀಮ್. ಕುಲ್ಫಿ. ಜ್ಯೂಸ್ ತಯಾರಿಸಬಹುದು ಎಂದು ನೋಡೋಣ…

ವೀಳ್ಯದೆಲೆ ಕುಲ್ಫಿ ಬೇಕಾಗುವ ವಸ್ತುಗಳು:
1 ಲೀಟರ್ ಹಾಲು,
5-6 ಚಮಚ ಹಾಲಿನ ಪುಡಿ,
4 ಏಲಕ್ಕಿ, ಸ್ವಲ್ಪ ಬಾದಾಮಿ,
3 ಚಮಚ ಸೋಂಪು,
4 ವೀಳ್ಯದೆಲೆ,
2ಚಮಚ ಗುಲ್ಕನ್,
2 ಚಮಚ ಸಕ್ಕರೆ,
2 ಚಮಚ ಪಿಸ್ತಾ ಚೂರುಗಳು.

ಮಾಡುವ ವಿಧಾನ:
ವೀಳ್ಯದೆಲೆಯ ತೊಟ್ಟು, ನಾರು ತೆಗೆದು ಸಣ್ಣಗೆ ಚೂರು ಮಾಡಿ ಕುಟ್ಟಾಣಿಗೆ ಹಾಕಿ ಗುದ್ದಿಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ ಕುದಿಸಿ. ಳಿ ಲೀಟರ್ ಪ್ರಮಾಣಕ್ಕೆ ಹಾಲು ಬಂದಾಗ ಹಾಲಿನ ಪುಡಿ, ಸಕ್ಕರೆ, ಏಲಕ್ಕಿ, ಸೋಂಪು, ಬಾದಾಮಿ, ಪಿಸ್ತಾ ಚೂರು ಹಾಕಿ ಕೆಳಗಿಳಿಸಿ. ಹಾಲು ತಣ್ಣಗಾದ ಮೇಲೆ ಗುಲಕನ್, ವೀಳ್ಯದೆಲೆ ಚೂರು ಹಾಕಿ ಸರಿಯಾಗಿ ಬೆರೆಸಿ. ನಂತರ ಕುಲ್ಫಿ ಮೋಲ್ಡ್ ಯಾ ಗ್ಲಾಸಿಗೆ ಹಾಕಿ ಫ್ರೀಜರ್ ನಲ್ಲಿಡಿ. 2 ಗಂಟೆ ನಂತರ ಐಸ್ ಕ್ರೀಮ್ ಕಡ್ಡಿ ಚುಚ್ಚಿ 6-8 ಗಂಟೆ ಫ್ರಿಜರ್ ನಲ್ಲಿಟ್ಟು ತೆಗೆದರೆ ರುಚಿಯಾದ ವೀಳ್ಯದೆಲೆ ಕುಲ್ಫಿ ಸವಿಯಲು ಸಿದ್ಧ.

ಸೇಬಿನ ಐಸ್ ಕ್ರೀಮ್‌ ಬೇಕಾಗುವ ವಸ್ತುಗಳು:
2 ಸೇಬು,
4 ಚಮಚ ಸಕ್ಕರೆ ಪುಡಿ,
4 ಕಪ್ ಕಂಡೆನ್ಸ್ಡ್ ಹಾಲು,
2 ಕಪ್ ಹಾಲು.

ಮಾಡುವ ವಿಧಾನ: ಸೇಬು ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು, ಸಣ್ಣಗೆ ತುಂಡು ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು 1 ಗಂಟೆ ಫ್ರಿಜರಿನಲ್ಲಿಡಿ. ಬಳಿಕ ಹೊರ ತೆಗೆದು ಮತ್ತೆ ರುಬ್ಬಿದರೆ ಮಿಶ್ರಣ ಮೃದುವಗುತ್ತದೆ. ನಂತರ 4 ಗಂಟೆ ಫ್ರಿಜರಿನಲ್ಲಿಟ್ಟು ಬಳಿಕ ಹೊರ ತೆಗೆದರೆ ರುಚಿಯಾದ ಪೌಷ್ಟೀಕ ಸೇಬಿನ ಐಸ್ ಕ್ರೀಮ್ ಸವಿಯಲು ಸಿದ್ಧ.

ವೀಳ್ಯದೆಲೆ ಮಿಲ್ಕ್ ಶೇಕ್ಬೇ ಬೇಕಾಗುವ ವಸ್ತುಗಳು:
1-2 ವೀಳ್ಯದೆಲೆ ಚೂರುಗಳೂ,
1 ಸಣ್ಣ ಅಡಿಕೆ ತುಂಡು,
2 ಚಮಚ ಕೆಂಪು ಕಲ್ಲು ಸಕ್ಕರೆ,
2 ಚಮಚ ವೆನಿಲಾ ಐಸ್ ಕ್ರೀಮ್,
1 ಕಪ್ ಹಾಲು.

ಮಾಡುವ ವಿಧಾನ:  ವೀಳ್ಯದೆಲೆ ಚೂರುಗಳೂ, ಅಡಿಕೆ ತುಂಡು, ವೆನಿಲಾ ಐಸ್ ಕ್ರೀಮ್, ಸ್ವಲ್ಪ ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಉಳಿದ ಹಾಲು ಹಾಕಿ ಬೆರೆಸಿ ಗ್ಲಾಸಿಗೆ ಹಾಕಿ ಕುಡಿಯಿರಿ.

ಹಣ್ಣುಗಳ ಜ್ಯೂಸ್. ನಿಮಗೆ ಇಷ್ಟವಾದ ಹಣ್ಣುಗಳನ್ನು ತೊಳೆದುಕೊಂಡು ಕಟ್ಟು ಮಾಡಿಕೊಂಡು. ಅದಕ್ಕೆ ಎಷ್ಟು ಪ್ರಮಾಣ ಸಕ್ಕರೆ ಬೇಕು ಎಂದು ತಿಳಿದು ಮಿಕ್ಸಿಯಲ್ಲಿ ರುಬ್ಬಿ ಸೋಸಿಕೊಂಡರೆ ಸಿಹಿಯಾದ ಜ್ಯೂಸ್ ರೇಡಿಯಾಗುತ್ತದೆ. ಹಾಗಾಗಿ ನೀವು ಹೊರಗೆ ಇವುಗಳನ್ನು ಸೇವಿಸುವ ಬದಲು ಮನೆಯಲ್ಲೇ ಮಾಡಿಕೊಂಡು ಸೇವಿಸಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here