ನಿಮ್ಮ ವಯಸ್ಸಿಗೆ ತಕ್ಕಂತೆ ಉಪ್ಪು ತಿನ್ನಿ ಇಲ್ಲ ಅಂದ್ರೆ ಮುಗೀತು ನಿಮ್ಮ ಕಥೆ

0
860

ಹೆಚ್ಚು ಉಪ್ಪು ಬಳಕೆ ಆರೋಗ್ಯಕ್ಕೆ ಹಾನಿಕಾರಕ ಇದು ಎಲ್ಲರಿಗು ಗೊತ್ತು, ಹಾಗಂತ ಉಪ್ಪು ತಿನೋದಿಲ್ಲ ಆದ್ರೆ ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆ ಆಗಿ  ಹೊಸ ಕಷ್ಟ ಶುರು ಆಗುತ್ತೆ, ಅದಕ್ಕೆ ಯಾವ ವಯಸ್ಸಲ್ಲಿ  ಎಷ್ಟು ಉಪ್ಪು  ತಿನ್ಬೇಕು ತಿಳಿದುಕೊಂಡು ಆರೋಗ್ಯವಂತ ಜೀವನ ನಡೆಸಿ.

‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ’. ಆದರೂ ಉಪ್ಪಿನ ಸೇವನೆ ಹಿತ-ಮಿತವಾಗಿರಲಿ. ಕೆಲವರು ಉಪ್ಪು ಕಂಡರೆ ತುಂಬಾ ಇಷ್ಟ ಪಡುತ್ತಾರೆ. ಊಟಕ್ಕೆ ಉಪ್ಪು ಹಾಕಿದರು ಉಪ್ಪು ಹಾಕಿಲ್ಲ ಎಂದು ಮತ್ತೆ ಮತ್ತೆ ಉಪ್ಪು ಹಾಕಿಸಿಕೊಳ್ಳುತ್ತಾರೆ. ಆದರೆ ಈ ಹೆಚ್ಚು ಉಪ್ಪಿನ ಸೇವನೆಯು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.

ಹಾಗಾದರೆ ಅತಿ ಹೆಚ್ಚು ಉಪ್ಪು ಸೇವನೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ..

ಅತಿ ಹೆಚ್ಚು ಉಪ್ಪು ಬಳಕೆಯಿಂದ ಪ್ರೌಢಾವಸ್ಥೆಯಲ್ಲಿ ಪಾರ್ಶ್ವವಾಯು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅತಿ ಹೆಚ್ಚು ಉಪ್ಪು ಬಳಕೆ ಹೃದಯರಕ್ತನಾಳದ ಮೇಲೆ ಪರಿಣಾಮ ಬೀರಲಿದ್ದು, ಆರ್ಟರಿ (ಅಪಧಮನಿಗಳು) ಗಟ್ಟಿಯಾಗುವಂತೆ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ಅತಿ ಹೆಚ್ಚು ಸೋಡಿಯಂ ಸೇವನೆಯಿಂದ ಲೋವರ್ ಬ್ರಾಂಕಿಯಲ್ ಆರ್ಟರಿ(ಕುಗ್ಗಿದ್ದ ಅಪಧಮನಿ) ಸಮಸ್ಯೆ ಎದುರಾಗಲಿದೆ.

ಉಪ್ಪಿನ ಸೇವನೆ ಯಾವ ವಯಸ್ಸಿನಲ್ಲಿ ಹೇಗಿರಬೇಕೆಂದರೆ.  ನಿಮ್ಮ ವಯಸ್ಸಿನ  ಆಧಾರದ ಮೇಲೆ ಹೇಳಬೇಕಾದರೆ.

51 ವರ್ಷಕ್ಕಿಂತ ಸಣ್ಣವರು ಒಂದು ದಿನಕ್ಕೆ 2300 ಮಿಲಿಗ್ರಾಂನಷ್ಟು ಉಪ್ಪನ್ನು ಸೇವಿಸಬಹುದು.

51 ವರ್ಷಕ್ಕಿಂತ ದೊಡ್ಡವರು 1500 ಮಿಲಿಗ್ರಾಂ ಉಪ್ಪಿನ ಸೇವನೆಯನ್ನು ಮಾಡಬಹುದು.

ದಿನಕ್ಕೆ 4 ರಿಂದ 5 ಗ್ರಾಂ ಉಪ್ಪು ದೇಹ ಸೇರಬೇಕಂತೆ. ಆದರೆ ಅಧ್ಯಯನದ ಪ್ರಕಾರ ಭಾರತೀಯರು ಸೇವಿಸುತ್ತಿರುವ ಪ್ರಮಾಣ ಹೆಚ್ಚಾಗಿದೆಯಂತೆ. ಇಷ್ಟೇ ಅಲ್ಲದೇ, ಅಧಿಕ ಉಪ್ಪು ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯಾಗುತ್ತೆ. ಜಾಸ್ತಿ ಉಪ್ಪು ಸೇವಿಸಿದರೇ ಮುಖದ ಕಾಂತಿಯು ಹಾಳಾಗುತ್ತದೆ.

ಹೆಚ್ಚು ಉಪ್ಪು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಕಣ್ಣು ಊದಿಕೊಂಡು ಕೆಂಪಾಗಿ ಕಾಣಬಹುದು. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಉಪ್ಪಿನ ಬಳಕೆಯನ್ನು ಮಾಡಿ ಆದ್ರೆ ಅತೀ ಕಡಿಮೆ ಮಾಡಿ.

ಹೆಚ್ಚು ಉಪ್ಪಿನ ಸೇವನೆಯಿಂದ ರಕ್ತದ ಒತ್ತಡ, ಹೃದಯ ಸ್ತಂಭನ, ಹೃದಯ ವೈಫ‌ಲ್ಯ, ಮೂಳೆಗಳ ಸವೆತ, ಹೊಟ್ಟೆಯ ಕ್ಯಾನ್ಸರ್‌, ಮೂತ್ರಕೋಶದ ತೊಂದರೆಗಳು, ಮೂತ್ರಕೋಶದಲ್ಲಿ ಕಲ್ಲು, ಹೃದಯದ ಮಾಂಸಖಂಡಗಳ ಗಾತ್ರ ಹೆಚ್ಚುವಿಕೆ, ತಲೆನೋವು, ಗೌಟ್‌, ಖನ್ನತೆ ಮುಂತಾದುವು ಉಂಟಾಗುತ್ತವೆ.

ಅತಿಯಾಗಿ ದಾಹವಾಗುತ್ತಿದ್ದರೆ ಅದು ನೀವು ಹೆಚ್ಚು ಉಪ್ಪು ತಿನ್ನುತ್ತಿರುವುದರ ಸಂಕೇತವಾಗಿದೆ. ಹಿಂದಿನ ದಿನ ಹೆಚ್ಚು ಉಪ್ಪು ಸೇವಿಸಿದ್ದರೆ, ರಾತ್ರಿ ಮಲಗಿದಾಗ ಅಥವಾ ಬೆಳಗ್ಗೆ ಎದ್ದೊಡನೆ ನೀರು ಕುಡಿಯಬೇಕೆನಿಸುತ್ತದೆ. ಈ ಸಂಕೇತ ಬಂದಾಗಲೇ ಎಚ್ಚೆತ್ತುಕೊಳ್ಳುವುದರಿಂದ ಹೆಚ್ಚಿನ ಉಪ್ಪಿನ ಸೇವನೆಯ ದುಷ್ಪರಿಣಾಮಗಳಿಗೆ ದೇಹ ತುತ್ತಾಗುವುದನ್ನು ತಪ್ಪಿಸಬಹುದು.

ಹೆಚ್ಚು ಉಪ್ಪು ಸೇವನೆಯಿಂದ ಉಂಟಾಗುವ ಹೆಚ್ಚಿನ ರಕ್ತದ ಒತ್ತಡದಿಂದಾಗಿ ರಕ್ತನಾಳಗಳಲ್ಲಿಯೂ ಒತ್ತಡ ಹೆಚ್ಚಾಗಿ, ಅವುಗಳ ಗೋಡೆಗಳಲ್ಲಿನ ಮಾಂಸಖಂಡಗಳು ಗಟ್ಟಿ ಮತ್ತು ದಪ್ಪಗಾಗುತ್ತವೆ. ಇದರಿಂದಾಗಿ ರಕ್ತನಾಳಗಳ ಒಳಗಿನ ಭಾಗವು ಚಿಕ್ಕದಾಗಿ, ರಕ್ತದ ಒತ್ತಡವು ಇನ್ನೂ ಹೆಚ್ಚಾಗುತ್ತದೆ.

ಹೆಚ್ಚು ಉಪ್ಪು ಸೇವನೆಯಿಂದಾಗಿ ಉಂಟಾಗುವ ಹೆಚ್ಚಿನ ರಕ್ತದ ಒತ್ತಡದಿಂದಾಗಿ ಮೆದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳಿಗೂ ಹಾನಿಯಾಗಿ, ಅಲ್ಲಿಗೆ ಕಡಿಮೆ ಪ್ರಮಾಣದ ರಕ್ತವು ಪೂರೈಕೆಯಾಗುತ್ತದೆ. ಇದರಿಂದ ಡಿಮೆನ್ಸಿಯಾ ಎಂಬ ಕಾಯಿಲೆ ಕಾಣಿಸಿಕೊಂಡು ನೆನಪಿನ ಶಕ್ತಿ ಕಡಿಮೆಯಾಗುತ್ತದೆ.

ಹೆಚ್ಚು ಉಪ್ಪು ಸೇವನೆಯ ಮತ್ತೂಂದು ಪ್ರಮುಖ ತೊಂದರೆಯೆಂದರೆ ಮೂಳೆಗಳ ಸವೆತ. ನಮ್ಮ ಮೂಳೆಗಳು ಅಶಕ್ತವಾಗಿವೆಯೆಂದರೆ ಅದು ಹೆಚ್ಚು ಉಪ್ಪು ಸೇವನೆಯಿಂದ ಆಗಿರಬೇಕು. ಸೋಡಿಯಂ ಮೂಳೆಗಳ ಸಾಂದ್ರತೆಯನ್ನು ಕಡಿಮೆಮಾಡುತ್ತದೆ. ಹೀಗಾಗಿ ಅವು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಹೆಚ್ಚು ಸೋಡಿಯಂ ಸೇವಿಸಿದಾಗ ದೇಹದಲ್ಲಿನ ನೀರು ಅಲ್ಲಿಯೇ ಶೇಖರಗೊಳ್ಳುತ್ತದೆ. “ತಾವು ಇತ್ತೀಚೆಗೆ ದಪ್ಪಗಾಗುತ್ತಿದ್ದೇವೆ’ ಎಂದು ಯಾರಿಗಾದರೂ ಅನಿಸಿದರೆ ಅದಕ್ಕೆ ಅವರು ಸೇವಿಸುತ್ತಿರುವ ಹೆಚ್ಚು ಉಪ್ಪು ಕಾರಣವಾಗಿರುತ್ತದೆ.

ನೋಡಿ ಹೆಚ್ಚು ಉಪ್ಪು ಸೇವನೆ ಎಷ್ಟೆಲ್ಲ ಸಮಸ್ಯೆಗಳನ್ನು ಉತ್ತ್ಪತಿ ಮಾಡುತ್ತದೆ. ಅಗಾಗಿ ಉಪ್ಪು ಸೇವನೆ ಮಿತವಾಗಿರಲಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here