ಗರ್ಭಿಣಿ ಮಹಿಳೆಯರಿಗೆ ಈ ಉಪಯುಕ್ತ ಟಿಪ್ಸ್

0
697

ಗರ್ಭಿಣಿಯರು ತಮ್ಮಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸುಲಭ ಮಾರ್ಗ. ಬೇರೆ ಮಹಿಳೆಯರಿಗಿಂತ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ತುಂಬಾ ಕಾಳಜೀವಹಿಸಬೇಕು. ಗರ್ಭಿಣಿ ಮಹಿಳೆಯರಲ್ಲಿ ಒಂದು ಜೀವ ಮಾತ್ರ ಇರುವುದಿಲ್ಲ ಎರಡು ಜೀವಗಳು ಇರುತ್ತವೆ. ಆ ಗರ್ಭಿಣಿ ಮಹಿಳೆಯು ಮತ್ತೊಂದು ಜೀವಕ್ಕೆ ಜನ್ಮ ನೀಡುವ ಪುಣ್ಯ ಕೆಲಸವನ್ನು ಮಾಡುತ್ತಿರುತ್ತಳೆ.

ಹಾಗಾಗಿ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸುಲಭ ಮಾರ್ಗಗಳು.

ಗರ್ಭಿಣಿಯರು ಒತ್ತಡದ ಕೆಲಸಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚು ನೀರು ಕುಡಿಯಬೇಕು.

ನಿಯಮಿತವಾಗಿ ಲಘು ಉಪಹಾರಗಳನ್ನು ಸೇವಿಸಬೇಕು.

ಗರ್ಭಿಣಿಯರು ಸೇವಿಸುವ ಆಹಾರದ ಸೇವನೆ ಹಾಗೂ ಮಾಡುವ ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.

ಗರ್ಭಧರಿಸಿದ ಅವಧಿಯಲ್ಲಿ ಆರೋಗ್ಯಕರ ಆಹಾರ ಸೇವಿಸಿ ವ್ಯಾಯಾಮ ಮಾಡುವುದು ತಾಯಂದಿರ ಆರೋಗ್ಯವನ್ನು ಕಾಪಾಡುತ್ತದೆ.

ದೊಡ್ಡ ಪ್ರಮಾಣದಲ್ಲಿ ಪೌಷ್ಟಿಕಗಳನ್ನು ಹೊಂದಿರುವ ಆಹಾರಗಳು ಮ್ಯಾಕ್ರೋನ್ಯೂಟ್ರಿಯಂಟ್ ಹಾಗೂ ಕಡಿಮೆ ಪ್ರಮಾಣದಲ್ಲಿ ಪೌಷ್ಟಿಕಗಳನ್ನು ಹೊಂದಿರುವ ಆಹಾರಗಳು ಮೈಕ್ರೋನ್ಯೂಟ್ರಿಯಂಟ್ ಗಳಾಗಿದ್ದು ಎರಡನ್ನೂ ಸಮತೋಲನವಾಗಿ ಸೇವಿಸುವುದು ಸೂಕ್ತ.

ಮೊಳಕೆ ಕಾಳುಗಳು, ಮೀನು, ಹಣ್ಣು ಮತ್ತು ತರಕಾರಿಗಳ ಬಳಕೆ ಅತ್ಯುತ್ತಮವಾದದ್ದು.

ಗರ್ಭಿಣಿಯರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯವಾಗಿದೆ.

ಲಘು ಯೋಗ ಹಾಗೂ ದೀರ್ಘ ಉಸಿರಾಟ ನಡೆಸುವುದು ವಿಶ್ರಾಂತಗೆ ಸಹಕಾರಿಯಾಗಲಿದೆ.

ಹೆಚ್ಚು ಉಪ್ಪು ಬಳಕೆ ರಕ್ತದೊತ್ತಡಕ್ಕೆ ಕಾರಣವಾಗುವುದರಿಂದ ಕಡಿಮೆ ಉಪ್ಪು ಬಳಸಬೇಕು.

ಮಕ್ಕಳಿಗೆ ಸೂಕ್ತವಾದ ಆಹಾರಗಳ ಸೇವನೆ ಮಾಡಬೇಕು.

ಹೆಚ್ಚು ಒತ್ತಡ. ಯೋಚನೆ. ಜಗಳ. ಕಿತ್ತಾಟ ಇವುಗಳಿಂದ ಆದಷ್ಟು ದೂರವಿರಬೇಕು. ನಮಗೆ ಹಗದಿರುವ ಕೆಲಸಗಳನ್ನು ಮಾಡಲು ಪ್ರಯತ್ನಿಸಬಾರದು.

ಹೆಚ್ಚು ಸಂತೋಷವಾಗಿ ಖುಷಿಯಾಗಿ ಇರಬೇಕು. ಹೆಚ್ಚು ಹೆಚ್ಚು ಜನಗಳ ಮದ್ಯ ಕಾಲವನ್ನು ಕಳೆಯಬೇಕು.

ಹೆಚ್ಚು ಆಯಾಸ ಮಾಡಿಕೊಳ್ಳಬಾರದು. ವೈದ್ಯರು ನೀಡಿದ ಸಲಹೆಗಳನ್ನು ಅನುಸರಿಸಬೇಕು.

ಗರ್ಭಿಣಿಯರು ಈ ಎಲ್ಲ ಮಾರ್ಗಗಳನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here