ಮನೆಯಲ್ಲಿ ಬೀರು ಯಾವ ವಿಧವಾಗಿ ಇದ್ದರೆ, ಶ್ರೀ ಮಹಾಲಕ್ಷ್ಮೀ ಅನುಗ್ರಹ ಲಭಿಸುತ್ತದೆ ಎಂದು ಈಗ ನಾವು ತಿಳಿಯೋಣ. ಬೀರು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿಯೇ ಇರಬೇಕು,ಅಂದರೆ ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ಮಧ್ಯ ಭಾಗದಲ್ಲಿ ಇರುವ ಪ್ರದೇಶ. ಬೀರು ಬಾಗಿಲನ್ನು ತೆರೆದಾಗ ಅದು ಉತ್ತರ ದಿಕ್ಕನ್ನು ನೋಡುವಂತೆ ಇರಬೇಕು. ಬೀರು ಬಾಗಿಲು ತೆರೆದಾಗ ಒಳ್ಳೆ ಸುವಾಸನೆ ಬರಬೇಕು,ಅದಲ್ಲದೆ ಹಳೆ ಬಟ್ಟೆಯ ವಾಸನೆ,
ಜಿರಲೆಯ ವಾಸನೆ ಬರಬಾರದು. ಅಂತಹ ವಾಸನೆ ಆ ಬೀರುವಿನಲ್ಲಿ ಬಂದರೆ ಆ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುವುದಿಲ್ಲ ಎಂದು ಅರ್ಥ. ಕುಬೇರ ರಂಗೋಲಿಯನ್ನು ನೀಲಿಬಣ್ಣದಿಂದ ಬರೆದು,ಆ ರಂಗೋಲಿಯನ್ನು ನಗದು ಇಡುವ ಜಾಗದಲ್ಲಿ ಇಡಬೇಕು, ಈ ರಂಗೋಲಿ ಬರೆದ ಕಾಗದಕ್ಕೆ 4 ಮೂಲೆಗಳಿಗೆ ಅರಶಿನ ಮತ್ತು ಕುಂಕುಮದಿಂದ ಬೊಟ್ಟನ್ನು ಇಡಬೇಕು. ಈ ಕುಬೇರ ರಂಗೋಲಿಯ ಮೇಲೆ ಬಂಗಾರ ಮತ್ತು ನಗದನ್ನು ಇಟ್ಟುಕೊಂಡರೆ ಲಕ್ಷ್ಮೀಯ ಅನುಗ್ರಹವನ್ನು ಪಡೆಯಬಹುದು. ಹೀಗೆ ಕುಬೇರ ರಂಗೋಲಿ ಚಿತ್ರ ಇಡುವ ಮುಂಚೆ ಅದನ್ನ ದೇವರ ಮುಂದೆ ಇಟ್ಟು ಪ್ರಾರ್ಥನೆ ಮಾಡಬೇಕು.
ಪೂಜಾ ಸಾಮಗ್ರಿ ಅಂಗಡಿಯಲ್ಲಿ ದೊರೆಯುವ ಮರದ ಬೇರನ್ನು ತೆಗೆದುಕೊಂಡು ಕರ್ಪೂರ, ಸುಗಂಧ ದ್ರವ್ಯಗಳನ್ನೂ ಒಂದು ಬೆಳ್ಳಿ ಬಟ್ಟಲಿನೊಳಕ್ಕೆ ಅಥವಾ ತಾಮ್ರದ ಬಟ್ಟಲಿನಲ್ಲಿ ಇದನ್ನು ಇಟ್ಟು ಬೀರುವಿನಲ್ಲಿ ಇಡಬೇಕು,ಇದ್ದರಿಂದ ಧನ ಅಭಿವೃದ್ದಿ ಆಗುತ್ತದೆ.
ಬೀರು ಬಾಗಿಲ ಮೇಲೆ ಯಾವ ಪರಸ್ಥಿತಿಯಲ್ಲಿಯೂ ಸಹ ದೇವರ ಫೋಟೋಗಳನ್ನೂ ಅಂಟಿಸಬಾರದು, ಕಬ್ಬಿಣದ ಆಯಸ್ಕಾoತದ ದೇವರ ಪ್ರತಿಮೆಗಳನ್ನು ಅಂಟಿಸಬಾರದು.
ಯಾವಾಗಲೂ ಬೀರು ಬಾಗಿಲ ಮೇಲೆ ಒಂದು ಕಡೆ ಶುಭ ಲಾಭ ಮತ್ತೊಂದು ಕಡೆ ಸ್ವಸ್ತಿಕ್ ಚಿಹ್ನೆಯನ್ನು ಇರುವಂತೆ ನೋಡಿಕೊಳ್ಳಬೇಕು, ಆ ಸ್ವಸ್ತಿಕ್ ಚಿಹ್ನೆಯನ್ನು ಸಹ ಸರಿಯಾಗಿ ಬರೆಯಬೇಕು. ಅದನ್ನು ಬರೆಯುವಾಗ ಅರಶಿನ,ಕುಂಕುಮದಿಂದ ಮಾತ್ರ ಬರೆಯಬೇಕು, ಹೀಗೆ ಮಾಡಿದರೆ ನಮ್ಮಗೆ ಲಕ್ಷ್ಮೀಯ ಅನುಗ್ರಹ ದೊರೆಯುವ ಜೊತೆಗೆ ಐಶ್ವರ್ಯವನ್ನು ಪಡೆಯಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತಿದೆ. ನಾವು ಕೆಳಗಿನ ಚಿತ್ರದಲ್ಲಿ ಲಕ್ಷ್ಮಿ ಕುಬೇರ ಯಂತ್ರದ ಚಿತ್ರ ಕೊಟ್ಟಿದ್ದೇವೆ ನೀವು ಈ ಚಿತ್ರವನ್ನ ಇಂಟರ್ನೆಟ್ ನಲ್ಲಿ ಉಚಿತವಾಗಿ ಡೌನ್ಲೋಡ್ ಕೂಡ ಮಾಡಬಹುದು ಅಥವ ನೀವೇ ಖಾಲಿ ಹಾಳೆಯಲ್ಲಿ ಬರೆದು ಇಟ್ಟುಕೊಳ್ಳಬಹುದು.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.