ಬೆಳ್ಳಿಗೆ ಬೇಗ ಏಳಲು ಕಷ್ಟ ಆದ್ರೆ ಈ ಟಿಪ್ಸ್ ಟ್ರೈ ಮಾಡಿ

0
985

ರಾತ್ರಿ ತುಂಬಾ ಹೊತ್ತು ಎಚ್ಚರವಾಗಿರುವ ಕಾರಣ ಬೆಳ್ಳಿಗೆ ಬೇಗ ಏಳೋದು ಅನೇಕರಿಗೆ ಕಷ್ಟ,ಮನೆಯ ಹಿರಿಯರು ಬೆಳ್ಳಿಗೆ ಬೇಗ ಏಳುವಂತೆ ಯುವಕರಿಗೆ ಹೇಳುತ್ತಿರುತ್ತಾರೆ. ಇದರಿಂದ ಸಾಕ್ಕಷ್ಟು ಪ್ರಯೋಜನಗಳಿವೆ,ಆರೋಗ್ಯ ವೃದ್ಧಿ ಜೊತೆಗೆ ಮನಸ್ಸು ಉಲ್ಲಾಸವಾಗಿರುತ್ತದೆ. ಬಹುತೇಕರು ಬೆಳ್ಳಿಗೆ ಬೇಗ ಏಳಲು ಪ್ರಯತ್ನಿಸುತ್ತಾರೆ ಆದ್ರೆ ಏಳೋದು ಕಷ್ಟವಾಗುತ್ತೆ ಅಂತವರಿಗೆ ಇಲ್ಲಿದೆ ಸುಲಭ ಟಿಪ್ಸ್.

1.ಬೆಳ್ಳಿಗೆ ಏಳಬೇಕೆಂಬ ಕಾರಣಕ್ಕೆ ಕೆಲವರು ಅಲಾರಾಂ ಇಟ್ಟು ಮಲಗಿರುತ್ತಾರೆ,ಆದ್ರೆ ತಲೆ ಬದಿಯಲ್ಲಿರುವ ಅಲಾರಾಂ ಸ್ವಲ್ಪ ದೂರದಲ್ಲಿಟ್ಟರೆ ಅಲಾರಾಂ ಬಂದ್ ಮಾಡಲು ಏಳಬೇಕಾಗುತ್ತದೆ,ಆಗ ಎಚ್ಚರವಾಗುತ್ತದೆ,ಎರಡು ದಿನ ಹೀಗೆ ಮಾಡಿದರೆ ಮೂರನೇ ದಿನ ಆ ಸಮಯಕ್ಕೆ ನಿಮಗೆ ಎಚ್ಚರವಾಗೋದ್ರಲ್ಲಿ ಅನುಮಾನವಿಲ್ಲ.

2.ರಾತ್ರಿ ಮಲಗುವ ಮೊದಲು ಒಂದು ಬಾಟಲಿ ನೀರನ್ನು ಹಾಸಿಗೆ ಬಳಿ ಇಟ್ಟು ಮಲಗಿ,ಎಚ್ಚರವಾದಾಗ ಕಣ್ಣು ಹಾಗು ಮುಖಕ್ಕೆ ಸ್ವಲ್ಪ ನೀರನ್ನು ಹಾಕಿ ಮಲಗಿ,ಹೀಗೆ ಮಾಡಿದ್ರೆ ಬೆಳ್ಳಿಗೆ ಬೇಗ ಎಚ್ಚರವಾಗಲಿದೆ.

3.ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಬಳಕೆ ಮಾಡಬೇಡಿ, ತಡರಾತ್ರಿಯವರೆಗೂ ಮೊಬೈಲ್ ಬಳಕೆ ಮಾಡುವುದು ಅನಿದ್ರೆಗೆ ಕಾರಣವಾಗುತ್ತದೆ,ಇದರಿಂದ ಬೆಳ್ಳಿಗೆ ಬೇಗ ಎಚ್ಚರವಾಗುವುದಿಲ್ಲ.

4.ರಾತ್ರಿ ಮಲಗುವ ಮೊದಲು ಒಳ್ಳೆ ಪುಸ್ತಕವನ್ನು ಓದಿ,ಇದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ ಕಡಿಮೆಯಾಗಿ ಬೇಗ ನಿದ್ರೆ ಬರುತ್ತದೆ,ಇದ್ರಿಂದ ಬೆಳ್ಳಿಗೆ ಬೇಗ ಎಚ್ಚರವಾಗುತ್ತದೆ.

5.ರಾತ್ರಿ ಮಲಗುವ ಮೊದಲು ನಾಳೆ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಳ್ಳಿ,ಬೇಗ ಎದ್ರೆ ಎಲ್ಲ ಕೆಲಸ ಸರಾಗವಾಗಿ ಸಾಗುತ್ತೆ ಎಂಬುದನ್ನು ಮನಸಿನಲ್ಲಿಯೇ ಹೇಳಿಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

 

LEAVE A REPLY

Please enter your comment!
Please enter your name here