ಬೇಸಿಗೆಯಲ್ಲಿ ಮದ್ಯ ಮಾಂಸ ಸೇವನೆ ಮಾಡಿದ್ರೆ ಏನಾಗುತ್ತೆ ಅಂದ್ರೆ

0
745

ಬೇಸಿಗೆಯಲ್ಲಿ ಬಿಸಿಲಿನ ದೆಗೆ ಹೆಚ್ಚಿರುತ್ತದೇ ಇಂತಹ ಸಮಯದಲ್ಲಿ ನಮಗೆ ಯಾವ ಆಹಾರಗಳನ್ನು ಸೇವಿಸಿದರೂ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಜೊತೆಗೆ ಈ ಸಮಯದಲ್ಲಿ ಹೆಚ್ಚಾಗಿ ತಂಪು ಪಾನೀಯಗಳ ಸೇವನೆ ಮಾಡಬೇಕು.ತಾಂಪಿಗಿರುವುದನ್ನೂ ಸೇವಿಸಬೇಕು ಎನ್ನಿಸುತ್ತದೆ. ಆದರೆ ಕೆಲವರು ಈ ಬೇಸಿಗೆಯಲ್ಲಿ ಮದ್ಯಪಾನ. ಧೂಮಪಾನ. ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಿಗೆ ಸೇವನೆ ಮಾಡುತ್ತಾರೆ ಅದರೆ ಇದು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ.

ಜೊತೆಗೆ ಇಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಪರೀತ ಸೆಖೆ, ಬಿಸಿಲು.ದೆಗೆ ಕಾಣಿಸುತ್ತಿದೆ ಇದು ಮುಂದಿನ ಎರಡು ತಿಂಗಳುಗಳಲ್ಲಿ ಇನ್ನು ಅಧಿಕ ತಾಪಮಾನವನ್ನು ಹೆಚ್ಚುತ್ತದೆ.ಇದು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.

ಹಾಗಾಗಿ ಈ ಉಷ್ಣಾಂಶ ಹೆಚ್ಚಿರುವಾಗ ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಈ ಬೇಸಿಗೆಯ ಸಮಯದಲ್ಲಿ ಯಾವ ಆಹಾರ ಸೇವಿಸುತ್ತಿದ್ದೇವೆ ಎಂದು ಗಮನಹರಿಸದಿದ್ದರೆ ಅಜೀರ್ಣ, ನಿರ್ಜಲೀಕರಣ, ಆಸಿಡಿಟಿ ಹಾಗೂ ಇತರ ತೊಂದರೆಯುಂಟಾಗುತ್ತದೆ.

ಹಾಗಾದರೆ ನಾವು ಈ ಬೇಸಿಗೆಯಲ್ಲಿ ಹೆಚ್ಚಾಗಿ ಯಾವ ಆಹಾರ ಸೇವಿಸಬಾರದು ನೋಡೋಣ.. ಬೇಸಿಗೆಯಲ್ಲಿ ಮದ್ಯ, ಮಾಂಸ ಸೇವನೆಯನ್ನು ಆರೋಗ್ಯ ದೃಷ್ಟಿಯಿಂದ ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.

ಮದ್ಯ ಮಾಂಸವು ನಮ್ಮ ಆರೋಗ್ಯವನ್ನು ಕೆಡಿಸಿ ನಮಗೆ ಹಲವಾರು ರೀತಿಯ ಸಮಸ್ಯೆಗಳನ್ನು ತಂದುಕೊಡಲು ಕಾರಣವಾಗುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಮದ್ಯ ಮಾಂಸದ ಸೇವನೆ ಮಾಡಬಾರದು. ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಬೇಸಿಗೆಯಲ್ಲಿ ವಿಶೇಷ ಕಾಳಜಿ ವಹಿಸಬೇಕು.

ಮಕ್ಕಳು ಸಾಮಾನ್ಯವಾಗಿ ಬಿಸಿಲಿಗೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು, ಐಸ್ ಕ್ರೀಂ ಇತ್ಯಾದಿಗಳನ್ನು ಇಷ್ಟಪಡುತ್ತಾರೆ. ಆದರೆ ಇಂತಹ ತಂಪು ಪಾನೀಯಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಅದರ ಬದಲಿಗೆ ಪೋಷಕರು ನೈಸರ್ಗಿಕ ಪಾನೀಯಗಳನ್ನು ಮಕ್ಕಳಿಗೆ ಕುಡಿಸಬೇಕು.

ಅಧಿಕ ಸಿಹಿ ತಿನಿಸುಗಳು, ಮಸಾಲೆ ಪದಾರ್ಥಗಳು, ಕಾರ್ಬೊನೇಟ್ಸ್, ಸೋಡಾ ಮಿಶ್ರಣ ಮಾಡಿ ತಯಾರಿಸಿದ ಪಾನೀಯಗಳನ್ನು ಕುಡಿಸುವ ಬದಲು ಹಣ್ಣಿನ ಜ್ಯೂಸ್, ಸಕ್ಕರೆ ಮತ್ತು ಉಪ್ಪು ಹಾಕಿ ತಯಾರಿಸಿದ ನೀರು, ಎಳನೀರು ಆರೋಗ್ಯಕ್ಕೆ ಉತ್ತಮ .

ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿದು ಹಣ್ಣು ಮತ್ತು ತರಕಾರಿ ಸೇವಿಸಿ. ಮಸಾಲೆ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಬೇಸಿಗೆಯಲ್ಲಿ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ

LEAVE A REPLY

Please enter your comment!
Please enter your name here