ಮಂಗಳವಾರ ಆಂಜನೇಯನನ್ನು ಹೀಗೆ ಪೂಜಿಸಿದರೆ ನೀವು ಅಂದುಕೊಂಡಂತೆ ಆಗುತ್ತದೆ.

0
1046

ಮಂಗಳವಾರ ಆಂಜನೇಯನನ್ನು ಹೀಗೆ ಪೂಜಿಸಿದರೆ ನೀವು ಅಂದುಕೊಂಡಂತೆ ಆಗುತ್ತದೆ.
ಮಂಗಳವಾರ ಆಂಜನೇಯನ ದಿನ. ಭಕ್ತರೆಲ್ಲರೂ ಆಂಜನೇಯನನ್ನು ಭಕ್ತಿಯಿಂದ ಪೂಜಿಸುವ ದಿನ. ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರನ್ನು ಪೂಜೆ ಮಾಡುವುದು ನಮ್ಮ ಹಿಂದೂ ಸಂಪ್ರದಾಯ. ಹಾಗೆಯೇ ಮಂಗಳವಾರ ಆಂಜನೇಯನಿಗೆ ಭಕ್ತರು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ದೇವಸ್ಥಾನಕ್ಕೂ ಸಹ ಹೋಗುತ್ತಾರೆ. ಕೆಲ ಜನರು ಈ ದಿವಸ ಉಪವಾಸ ಕೂಡ ಇರುತ್ತಾರೆ. ಉಪವಾಸವಿದ್ದು ದೇವರನ್ನು ಪೂಜಿಸಿದಾಗ ದೇವರ ಅನುಗ್ರಹ ಬೇಗ ಸಿಗುತ್ತದೆ ಎಂಬುದು ಹಿರಿಯರ ತರ್ಕ.

ಮಂಗಳವಾರ ಆಂಜನೇಯನಿಗೆ ಹೇಗೆ ಪೂಜೆ ಮಾಡಿದರೆ ಬೇಗ ಅನುಗ್ರಹ ಸಿಗುತ್ತದೆ ಎಂದು ಈಗ ನಾವು ತಿಳಿದುಕೊಳ್ಳೋಣ.
ಗಂಡ ಹೆಂಡತಿ ಇಬ್ಬರೂ ಮಂಗಳವಾರದ ದಿನ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು, ದೇವರ ಮನೆಯನ್ನು ಶುಚಿಗೊಳಿಸಿ, ರಂಗೋಲಿ ಹಾಗೂ ಅಲಂಕರದೊಂದಿಗೆ ಸಜ್ಜುಗೊಳಿಸಿಕೊಂಡು, ಭಕ್ತಿ ಶ್ರದ್ಧೆಯಿಂದ ದಿನವಿಡೀ ಉಪವಾಸವಿದ್ದು, ಆಂಜನೇಯನಿಗೆ ಪೂಜೆ ಮಾಡುವುದರಿಂದ ಅವರಿಗೆ ಬೇಗ ಸಂತಾನ ಪ್ರಾಪ್ತಿ ಸಿಗುತ್ತದೆ,ಏನಾದರೂ ದೋಷ ಇದ್ದರೂ ಸಹ ಅದು ದೂರವಾಗಿ ಮಕ್ಕಳು ಚೆನ್ನಾಗಿ ಹುಟ್ಟುತ್ತಾರೆ.ಮಂಗಳವಾರದ ದಿನ ಆಂಜನೇಯನಿಗೆ ಕೆಂಪು ಅಥವಾ ಕೇಸರಿಯ ವಸ್ತ್ರವನ್ನು ಧರಿಸಿಕೊಂಡು, ಕೆಂಪು ಬಣ್ಣದ ಹೂವಿನಿಂದ ಪೂಜೆ ಮಾಡಿದರೆ ದೇವರ ಕೃಪೆ ವೇಗವಾಗಿ ಸಿಗುತ್ತದೆ.

ಹೀಗೆ ಪೂಜೆ ಮಾಡುವುದರಿಂದ ಗ್ರಹದೋಷಗಳು ಇದ್ದರೆ ಅದು ದೂರವಾಗುತ್ತದೆ. ದೀರ್ಘ ಕಾಲದಿಂದ ತೊಂದರೆಗಳನ್ನು ಅನುಭವಿಸುತ್ತಿರುವವರು, 5 ಮಂಗಳವಾರ ಉಪವಾಸವಿದ್ದು ಆಂಜನೇಯನನ್ನು ಪೂಜೆ ಮಾಡಿದರೆ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಮ್ಮದಿಗಳು ಸಿಗುತ್ತದೆ.ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಇಂತಹ ಕಷ್ಟಗಳು ಇದ್ದರೂ ಅದು ದೂರವಾಗುತ್ತದೆ. ಮಂಗಳವಾರ ವೀಳ್ಯದೆಲೆಯಿಂದ ಮಾಡಿದ ಹಾರವನ್ನು ಆಂಜನೇಯನಿಗೆ ಅಲಂಕರಿಸಿದರೆ ನಾವು ಅಂದುಕೊಂಡಿರುವ ಕೆಲಸವು ಶುಭಪ್ರದವಾಗಿ ಆಗುತ್ತದೆ. ಹಾಗೂ ಮಂಗಳವಾರ ಗಾಳಿ ಆಂಜನೇಯನ ದೇವಾಲಯಕ್ಕೆ ಹೋಗಿ ತಾಯತ ಕಟ್ಟಿಸಿಕೊಂಡರೆ ಯಾವ ಬೂತ ಪ್ರೇತಗಳ ಭಾದೆ ಇದ್ದರೂ ಅದು ದೂರವಗುತ್ತದೆ.

LEAVE A REPLY

Please enter your comment!
Please enter your name here