ಮೊಟ್ಟೆ ತಿಂದರೆ ಇಷ್ಟೊಂದು ಲಾಭ ಅಂತ ಇವತ್ತೇ ತಿಳಿದಿದ್ದು

0
998

ಮೊಟ್ಟೆ ಒಂದು ಅಧಿಕ ಪೌಷ್ಟಿಕಾಂಶ ಹೊಂದಿದ ಆಹಾರವಾಗಿದೆ. ಹೆಚ್ಚಿನ ಪ್ರೋಟೀನ್ ಇರುವ ಅಂಶ ಇದರಲ್ಲಿ ಇರುವುದರಿಂದ ಆಗಾಗ ಹಸಿವು ಆಗುವುದಿಲ್ಲ. ಪ್ರಮುಖವಾಗಿ ಮೊಟ್ಟೆ ಮಾನವನ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಇ ಮತ್ತು ಎ ಅಂಶಗಳನ್ನು ಪೂರೈಸುತ್ತದೆಯಂತೆ. ಇದಲ್ಲದೆ ಮೊಟ್ಟೆಯ ಹಳದಿ ಭಾಗ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್, ಜೀಕ್ಸಾಂಥಿನ್ ಅಂಶಗಳನ್ನು ಪೂರೈಸುತ್ತದೆಯಂತೆ ಇದರಲ್ಲಿರುವ ಕಾರ್ಬೊಹೈಡ್ರೇಟ್ ಕೊಬ್ಬಿನ ಅಂಶವನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ. ದಿನಕ್ಕೆ 4 ಮೊಟ್ಟೆ ಸೇವಿಸಬಹುದು. ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸಬಹುದು. ಮೊಟ್ಟೆಯ ಹಳದಿ ಭಾಗವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಅದರಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೊಟಿನ್ ಅಧಿಕವಿರುತ್ತದೆ. ಅದನ್ನು ಬೇಯಿಸಿ, ಸಕ್ಯೆಾಮ್‌ಬಲ್, ಪೋಚ್ಡ್, ಆಮ್ಲೆಟ್, ಬಟರ್ ಅಥವಾ ಎಣ್ಣೆ ಬಳಸದೆ ತೆಗೆದುಕೊಳ್ಳಬಹುದು. ದಿನದಲ್ಲಿ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು, ಫಿಟ್‌ನೆಸ್ ಪರಿಣಿತರು ಹೇಳುತ್ತಾರೆ. ಅದೇ ಮೊಟ್ಟೆಯನ್ನು ಬೆಳಗಿನ ಬ್ರೇಕ್‌ಫಾಸ್ಟ್‌ಗೆ ತಿಂದರೆ ಇನ್ನಷ್ಟು ಪ್ರಯೋಜನ ಪಡೆಯಬಹುದು. ಏನು ಎಂದು ನೋಡೋಣ…

ಬೆಳಿಗ್ಗೆ ಬ್ರೇಕ್‌ಫಾಸ್ಟ್ ಗೆ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು.

ಮೊಟ್ಟೆ ಸೇವನೆಯಿಂದ ದಿನವಿಡೀ ಹಸಿವು ಕಡಿಮೆಯಾಗುವುದು. ಇದರಿಂದ ಮಧ್ಯದಲ್ಲಿ ಬಿಸ್ಕಿಟ್, ಚಿಪ್ಸ್ ಇತರ ಜಂಕ್ ಫೂಡ್‌ಗಳನ್ನು ತಿನ್ನುವುದು ತಪ್ಪಿಸಬಹುದು. ಇದರಿಂದ ಇತರೇ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು.

ಬೆಳಗ್ಗೆ ಒಂದು ಅಥವಾ ಎರಡು ಮೊಟ್ಟೆಯ ಬಿಳಿಭಾಗವನ್ನು ತಿಂದರೆ ಅದು ದಿನಪೂರ್ತಿ ಚಟುವಟಿಕೆಯಿಂದ ಕೆಲಸ ಮಾಡಲು ದೇಹಕ್ಕೆ ಚೈತನ್ಯ ತುಂಬುತ್ತದೆ.

ಇದರಲ್ಲಿ ಅಲ್ಯುಮಿನ್ ಅಂಶವಿರುವುದರಿಂದ ಇದು ದೇಹವು ಪ್ರೊಟೀನ್ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ದಿನಕ್ಕೊಂದು ಮೊಟ್ಟೆ ತಿಂದರೆ ಪಾರ್ಶ್ವವಾಯು ದೂರವಾಗಿ ಹೃದಯ ಮತ್ತು ಮೆದುಳಿನ ಆರೋಗ್ಯ ವೃದ್ಧಿಸುತ್ತದೆ.

ಮಧ್ಯ ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ನಿತ್ಯ ಮೊಟ್ಟೆ ಸೇವಿಸುವುದರಿಂದ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದು.

ಮೊಟ್ಟೆಯಲ್ಲಿರುವ ವಿಶಿಷ್ಠ ಮತ್ತು ಯಥೇಚ್ಛ ಪ್ರೊಟೀನ್ ಗಳು ಮಾನವನ ದೇಹ ಮತ್ತು ಮೆದುಳಿನ ಆರೋಗ್ಯವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆ.

ಮೊಟ್ಟೆಯ ಹಳದಿ ಭಾಗದಲ್ಲಿ ಕಾಪರ್‌ ಅಂಶ ಅಧಿಕ ಇರುವುದರಿಂದ ಕೂದಲು ಉದುರುವುದಿಲ್ಲ. ಪುರುಷರು ತಲೆ ಬೋಳಾಗುವುದನ್ನು ತಡೆಯುತ್ತದೆ.

ಇದರಲ್ಲಿ ಪ್ರೋಟೀನ್‌ ಅಂಶ ಅಧಿಕವಿರುವುದರಿಂದ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ. ಇದು ಆ್ಯಬ್ಸ್‌ ಬರಿಸಲು ಸಹಾಯಕವಾಗಿದೆ.

ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್‌ ಡಿ ಇದೆ. ಅದನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ.

ಇದರಲ್ಲಿ ಕೋಲಿನ್‌ ಇರುತ್ತದೆ. ಇದು ಮೆದುಳನ್ನು ಆರೋಗ್ಯಯುತವಾಗಿಸುತ್ತದೆ. ನೆನಪಿನ ಶಕ್ತಿಯನ್ನ ಹೆಚ್ಚಿಸುತ್ತದೆ. ಇದರಲ್ಲಿರುವ ಕೈರೋಟನೈಡ್‌ ಕಣ್ಣಿನ ದೃಷ್ಠಿಗೆ ಒಳ್ಳೆಯದು. ಇದರಲ್ಲಿರುವ ಕಬ್ಬಿಣದ ಅಂಶವು ಎನಿಮಿಯಾದಿಂದ ಮುಕ್ತಿ ನೀಡುತ್ತದೆ. ಮೊಟ್ಟೆಯ ಹಳದಿಯಲ್ಲಿ ಕೊಲೆಸ್ಟ್ರಾಲ್‌ ಇರುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಯಿಂದ ಪಾರಾಗಲು ಸಹಕಾರಿಯಾಗಿದೆ.

ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್‌ ಕೆ ಇರುವುದರಿಂದ ಇದು ಕ್ಯಾನ್ಸರ್‌ನಿಂದ ಪಾರಾಗಲು ಸಹಾಯಕವಾಗಿದೆ. ಇದರಲ್ಲಿ ಫಾಸ್ಫೋರಸ್‌ ಪ್ರಮಾಣ ಅಧಿಕ ಇರುವುದರಿಂದ ಹಲ್ಲು ಗಟ್ಟಿಯಾಗುತ್ತದೆ. ಅಲ್ಲದೆ ದವಡೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಮುಕ್ತಿ ನೀಡುತ್ತದೆ.

ಒಂದು ಮೊಟ್ಟೆಯ ಬಿಳಿಭಾಗದಲ್ಲಿ ಸುಮಾರು ನಾಲ್ಕು ಗ್ರಾಂ ಪ್ರೋಟೀನ್ ಇದೆ. ಹಾಗಾಗಿ ಇದನ್ನು ಗರ್ಭಿಣಿಯರು ಸೇವಿಸಿದರೆ ತುಂಬಾ ಒಳ್ಳೆಯದು.
ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು ಇದು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುತ್ತದೆ ಹಾಗೂ ಊಟಕ್ಕೂ ಮುನ್ನ ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ತಡೆಯುತ್ತದೆ.

ಮೊಟ್ಟೆಯ ಬಿಳಿಭಾಗದಲ್ಲಿ ಪೊಟ್ಯಾಶಿಯಂ ಉತ್ತಮ ಪ್ರಮಾಣದಲ್ಲಿದೆ ಹಾಗೂ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟುಗಳನ್ನು ಸಾಕಷ್ಟು ಮಟ್ಟಿಗೆ ಪೂರೈಸುತ್ತದೆ. ಇದರಿಂದ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಸ್ನಾಯುಗಳ ಕ್ರಿಯೆ ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ದಿನನಿತ್ಯ ಮೊಟ್ಟೆಯನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಉತ್ತಮಗೊಳ್ಳಿಸಿಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here