ಸಖತ್ ಆಗಿ ಮನೆ ಕ್ಲೀನ್ ಮಾಡುತ್ತೆ ಕೋಕೋ ಕೋಲಾ

0
925

ತಂಪು ಪಾನೀಯಗಳಲ್ಲಿ ಒಂದಾದ ಕೋಕೋ ಕೋಲಾವನ್ನು. ಇಂದಿನ ಜನರು ಒಂದು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ. ಇದರ ಸೇವನೆಯು ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಕೆಲವರು ಪಿಜ್ಜಾ. ಬರ್ಗರ್. ಹಾಗೂ ಹೊರಗಡೆ ಶಾಪಿಂಗ್ ಅಥವಾ ರೆಸ್ಟೋರೆಂಟ್ ಗೆ ಹೋದಾಗ ಅಥವಾ ಪಾರ್ಟಿಗಳಲ್ಲಿ ಕೋಲಾ ಕುಡಿಯುವುದು ಅಭ್ಯಾಸವಾಗಿದೆ.

ಈ ರೀತಿಯ ಫುಡ್ ಸೇವನೆ ಮಾಡುವಾಗ ಈ ಕೋಲಾ ವನ್ನು ಕುಡಿಯುತ್ತಾರೆ. ಆದರೆ ಈ ಕೋಲಾವು ನಮ್ಮ ಆರೋಗ್ಯಕ್ಕೆ ಅಪಾಯಕಾರಿ. ಇದು ಒಂದು ಕಾರ್ಬನೆಟೆಡ್ ಅಮಾದಕ ಪಾನೀಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ಕೋಲಾವನ್ನು ಮನೆಯನ್ನು ಶುದ್ದಿ ಮಾಡುವುದಕ್ಕೆ ಬಳಸಿದರೆ ಒಳ್ಳೆಯ ಪರಿಣಾಮ ಪಡೆಯಬಹುದು.

ಈ ಕೋಲಾವನ್ನು ಮನೆ ಶುದ್ಧಿಯಲ್ಲಿ ಯಾವ ರೀತಿ ಬಳಸಬಹುದು ಎಂದು ತಿಳಿಯೋಣ ಬನ್ನಿ.

ಅಡುಗೆ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಪಾತ್ರೆ ಸೀದು ಹೋಗುತ್ತದೆ ಹೀಗೆ ಸೀದು ಹೋದ ಪಾತ್ರೆಗಳನ್ನು ತೊಳೆಯುವುದು ಕಷ್ಟ. ಇಂತಹ ಸೀದು ಹೋದ ಪಾತ್ರೆಯಲ್ಲಿ ತೊಳೆಯುವಾಗ ಸ್ವಲ್ಪ ಕೋಲಾ ಹಾಕಿಟ್ಟು 10 ನಿಮಿಷದ ಬಳಿಕ ತೊಳೆದರೆ ಪಾತ್ರೆ ತುಂಬಾ ಚೆನ್ನಗಿ ಸ್ವಚ್ಛವಾಗುತ್ತವೆ.

ಬಟ್ಟೆಯ ಗ್ರೀಸ್, ರಕ್ತ, ಎಣ್ಣೆ ಕಲೆಗಳನ್ನು ತೆಗೆಯಲು ಕೋಲಾ ಬಳಸಬಹುದು. ಬಕೆಟ್ ನೀರಿನಲ್ಲಿ ಕೋಲಾ ಹಾಕಿ ಅದಕ್ಕೆ ಸೋಪಿನ ಪುಡಿ ಹಾಕಿ ಮಿಶ್ರ ಮಾಡಿ ಬಟ್ಟೆಯನ್ನು ಅದರಲ್ಲಿ ಅರ್ಧಗಂಟೆ ಕಾಲ ನೆನೆ ಹಾಕಬೇಕು. ನಂತರ ಒಗೆದರೆ ಕಲೆ ಹೋಗು ತುಂಬಾ ಸ್ವಚ್ಛವಾಗಿ ಕಾಣುತ್ತದೆ.

ಬಾತ್ ಟಬ್, ಟಾಯ್ಲೆಟ್, ಸಿಂಕ್ ಇವುಗಳ್ನು ಕೋಲಾ ಹಾಕಿ ತೊಳೆದರೆ ಪಳಪಳ ಹೊಳೆಯುತ್ತಿರುತ್ತದೆ. ಕೋಲಾವನ್ನು ಬಾತ್ ಟಬ್ ಅಥವಾ ಟಾಯ್ಲೆಟ್ ಗೆ ಹಾಕಿ ಅರ್ಧ ಗಂಟೆ ಬಿಟ್ಟು ಬ್ರಷ್ ನಿಂದ ತಿಕ್ಕಿ ತೊಳೆದರೆ ಟಾಯ್ಲೆಟ್ ಸ್ವಚ್ಛವಾಗುತ್ತವೆ.

ತಾಮ್ರ ಅಥವಾ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿದರೆ ಆ ವಸ್ತುಗಳ ಮೇಲೆ ಕೋಲಾ ಸುರಿದು ಒಂದು ರಾತ್ರಿ ಇಟ್ಟು ಮಾರನೆ ದಿನ ತೊಳೆದರೆ ಆ ತುಕ್ಕು ಕಲೆಗಳು ಮಾಯವಾಗುತ್ತವೆ.

ಮನೆ ಕಿಟಕಿಗಳನ್ನು ಶುದ್ಧ ಮಾಡಲು ಕೋಲಾವನ್ನು ಬಳಸಬಹುದು. ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದರಿಂದ ಗ್ಲಾಸ್ ಉಜ್ಜಿದರೆ ಗ್ಲಾಸ್ ಪಳಪಳ ಹೊಳೆಯುವಂತಾಗುವುತ್ತದೆ.

ನೀವು ಕೋಲಾವನ್ನು ಸೇವಿಸುವ ಬದಲು ಸ್ವಚ್ಛ ಮಾಡಲು ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here