ತಿನ್ನಲು ಬಹಳ ರುಚಿಯಾದ ಹಣ್ಣು ಸೀತಾಫಲ,ಇದರ ಬೀಜ ಮತ್ತು ಎಳೆಗಳನ್ನು ಓಷಧಿಯಾಗಿಯೂ ಬಳಸಲಾಗುತ್ತದೆ. ಸೀತಾಫಲ ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಈ 10 ರೀತಿಯಲ್ಲಿ ಕಾಪಾಡುತ್ತೆ. ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸು =ವುದರಿಂದ ಜೀರ್ಣಶಕ್ತಿ ಹೆಚ್ಚುವುದು ಜತೆಗೆ ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ.
1. ಸೀತಾಫಲ ಸೇವಿಸುವುದರಿಂದ ಪಿತ್ತ ಮತ್ತು ವಾತ ಕಡಿಮೆಯಾಗುತ್ತದೆ.
2. ಸೀತಾಫಲದ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಸೇವಿಸಿದರೆ ಮೂತ್ರ ತಡೆದಿದ್ದರೆ ಸಲೀಸಾಗಿ ಹೋಗುತ್ತದೆ.
3. ಬಾಯಾರಿಕೆ ಹೆಚ್ಚಾದಾಗ ಸೀತಾಫಲದ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಕುಡಿದರೆ ದಾಹ ನಿವಾರಣೆಯಾಗುತ್ತದೆ.
4. ದೇಹದಲ್ಲಿ ಗಾಯಗಳಾಗಿದ್ದರೆ ಸೀತಾಫಲದ ಬೀಜವನ್ನು ತಣ್ಣೇರಿನಲ್ಲಿ ಅರೆದು ಬಟ್ಟೆಯಲ್ಲಿ ಹಾಕಿ ಕಟ್ಟಿದರೆ ಗಾಯ ಮಾಯುತ್ತದೆ
5. ನಿಯಮಿತವಾಗಿ ಸೀತಾಫಲ ಸೇವಿಸುತ್ತಿದ್ದರೆ ಹೃದಯದ ರಕ್ತ ಸಂಚಲನ ಚೆನ್ನಾಗಿ ಆಗಿ,ಹೃದಯದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
6. ಸೀತಾಫಲದ ಬೀಜದ ಪುಡಿಯನ್ನು ಮೇಕೆ ಹಾಲಲ್ಲಿ ಕಲಸಿ ತಲೆಗೆ ಲೇಪ ಮಾಡಿದರೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
7. ಬಿಸಲಿನಲ್ಲಿ ಒಣಗಿಸಿದ ಸೀತಾಫಲದ ತಿರುಳನ್ನು ಪುಡಿ ಮಾಡಿ,ಆ ಪುಡಿಯನ್ನು ತಣ್ಣೇರಿನಲ್ಲಿ ಕಲಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.
8. ವಾರಕ್ಕೆ ಒಂದು ದಿನ ಸೀತಾಫಲದ ಬೀಜವನ್ನು ನೀರಿನಲ್ಲಿ ಅರೆದು ತಲೆಗೆ ಲೇಪನ ಮಾಡಿ ಅರ್ಧ ಗಂಟೆ ನಂತರ ತಲೆ ಸ್ನಾನ ಮಾಡಿದರೆ ತಲೆಯಲ್ಲಿ ಹೇನು ಇದ್ದರೆ ನಿವಾರಣೆಯಾಗುತ್ತದೆ.
9. ದೇಹದ ತೂಕವನ್ನು ಹೆಚ್ಚಿಸಬೇಕೆಂದರೆ ಸೀತಾಫಲದ ಹಣ್ಣನ್ನು ಸೇವಿಸಬಹುದು.
10. ಸೀತಾಫಲದ ಎಲೆಗಳ ಕಷಾಯವನ್ನು ಮುಟ್ಟಿನ ಸಮಯದಲ್ಲಿ ಸೇವಿಸಿದರೆ ಮುಟ್ಟು ಸರಿಯಾಗಿ ಆಗುತ್ತದೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.