ಹೃದಯ ಬಡಿತ ಏರುಪೇರು ಆಗೋಕೆ ಇವುಗಳೇ ಕಾರಣ

0
1463

ಹೃದಯ ಬಡಿತದ ಏರುಪೇರಿನಿಂದ ಆಗುವ ಸಮಸ್ಯೆಗಳು. ಹೃದಯವು ನಮ್ಮ ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗವಾಗಿದೆ.

ಹೃದಯವು ನಮ್ಮ ದೇಹದ ಇತರ ಅಂಗಗಳಿಗಿಂತ ಇದು ಸ್ವಲ್ಪ ಭಿನ್ನ. ಏಕೆಂದರೆ ಇತರ ಅಂಗಗಳು ಬರೀ ನಮ್ಮ ದೈಹಿಕ ಆರೋಗ್ಯಕ್ಕೆ ಅವಶ್ಯಕವಾದರೆ, ಹೃದಯ ಮಾತ್ರ ನಮ್ಮ ಮಾನಸಿಕ ಆರೋಗ್ಯಕ್ಕೂ ಅವಶ್ಯಕ. ಯಾವುದೇ ಆರೋಗ್ಯಕರ ವ್ಯಕ್ತಿಗೆ ಪ್ರತಿ ನಿಮಿಷಕ್ಕೆ 72 ಬಾರಿ ಹೃದಯ ಬಡಿತವಾಗಬೇಕು ಈ ಹೃದಯ ಬಡಿತ ಸರಿಯಾಗಿ ಕಾರ್ಯನಿರ್ವಹಿಸಿದರೆ ಅವನು ಆರೋಗ್ಯವಾಗಿ ಇದ್ದಾನೆ ಎಂದು ಅರ್ಥ ಇದರಲ್ಲಿ ಕೊಂಚ ಏರಿಳಿತವಾದರೂ ಆತ ಹೃದಯದ ಸಮಸ್ಯೆಗೆ ಗುರಿಯಾಗುತ್ತಾನೆ.ಇಲ್ಲ ಗುರಿಯಾಗಿದ್ದಾನೆ ಎಂದರ್ಥ.

ಆದರೆ ಕೆಲವೊಮ್ಮೆ ಅಂದರೆ ನಡೆಯುವಾಗ, ಓಡುವಾಗ, ಹೆದರಿದಾಗ, ಮಲಗಿದಾಗ ಇದರಲ್ಲಿ ಏಳಿತ ಸಹಜ. ಆದರೆ ವ್ಯಕ್ತಿ ಏನನ್ನೂ ಯೋಚಿಸದೆ, ಯಾವುದೇ ದೈಹಿಕ ಅಥವಾ ಮಾನಸಿಕವಾಗಿ ಆರೋಗ್ಯವಾಗಿದ್ದ ವೇಳೆ ಇದ್ದಕ್ಕಿದ್ದಂತೆ ಹೃದಯ ಬಡಿತ ಹೆಚ್ಚುವುದು ಇಲ್ಲವೆ ಕಡಿಮೆಯಾಗುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ.

ರಕ್ತದಲ್ಲಿ ಥೈರಾಯ್ಡ ಹಾರ್ಮೋನ್ ಹೆಚ್ಚಾದರೆ ಅದು ಹೃದಯ ಬಡಿತದಲ್ಲಿ ಏರುಪೇರುಗಳಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಸಹಜ ಹೃದಯ ಬಡಿತಕ್ಕೆ ನಿಖರವಾದ ಕಾರಣವೆಂದರೆ ಹೃತ್ಕರ್ಣಗಳೆಂದು ಕರೆಯಲಾಗುವ ಹೃದಯದ ಮೇಲ್ಭಾಗದ ಎರಡು ಕೋಣೆಗಳು ಅಸಹಜವಾಗಿ ಮತ್ತು ಸಾಮಾನ್ಯಕ್ಕಿಂತ ರಭಸವಾಗಿ ಬಡಿದುಕೊಳ್ಳುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ರಕ್ತದಲ್ಲಿ ಅಧಿಕ ಮಟ್ಟದ ಥೈರಾಯ್ಡ ಹಾರ್ಮೋನ್ ಹೊಂದಿದವರಲ್ಲಿ ಅಸಹಜ ಹೃದಯ ಬಡಿತದ ಅಪಾಯ ಶೇ.45ರಷ್ಟು ಹೆಚ್ಚಿಗೆ ಇದ್ದಿದ್ದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿತ್ತು. ಥೈರಾಯ್ಡಿ ಹಾರ್ಮೋನ್‌ನ ಮಟ್ಟದಲ್ಲಿ ಅಲ್ಪ ಏರಿಕೆಯಾದರೂ ಅದು ಹೃದಯ ಬಡಿತದಲ್ಲಿ ಏರುಪೇರಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಹೃದಯ ಬಡಿತದ ಮುಖ್ಯ ಲಕ್ಷಣಗಳು ತಿಳಿಯೋಣ.

ಹೃದಯದ ಬಲಭಾಗದಲ್ಲಿ ವಿದ್ಯುತ್‌ಶಕ್ತಿ ಉತ್ಪಾದನಾ ಕೇಂದ್ರವಿದೆ. ಅದಕ್ಕೆ ಸೈನಸ್‌ನೋಡ್ ಎಂದು ಹೇಳಲಾಗುತ್ತದೆ. ಇದು ಹೃದಯಕ್ಕೆ ಅಗತ್ಯವಾದಷ್ಟು ವಿದ್ಯುತ್ತನ್ನು ಉತ್ಪಾದಿಸಿ, ಅದನ್ನು ಹೃದಯದ ಬೇರೆ ಬೇರೆ ಭಾಗಗಳಿಗೆ ಪೂರೈಸುತ್ತದೆ.

ಈ ಸೈನಸ್‌ನೋಡ್‌ಗೆ ಕೊಂಚ ಕೆಳಭಾಗದಲ್ಲಿರುವುದೇ ಎ.ವಿ.ನೋಡ್ ಇದು ಸೈನಸ್‌ನೋಡ್ ಉತ್ಪಾದಿಸಿದ ವಿದ್ಯುತ್ತನ್ನು ಹೃದಯದ ಎಲ್ಲಾ ಭಾಗಗಳಿಗೂ ಸಮಾನವಾಗಿ ಪೂರೈಸುತ್ತದೆ.

ಇವುಗಳಲ್ಲಿ ಕೊಂಚ ವ್ಯತ್ಯಾಸವಾದರೂ ಹೃದಯ ಬಡಿತ ಹೆಚ್ಚಾಗುವ ಇಲ್ಲವೆ ಕಡಿಮೆಯಾಗುವ ಸಾಧ್ಯತೆಗಳಿವೆ.

ಸಾಮಾನ್ಯ ಸ್ಥಿತಿಯಲ್ಲಿ ನಮ್ಮ ಹೃದಯವು ದಿನವೊಂದಕ್ಕೆ ಸರಾಸರಿ ಒಂದು ಲಕ್ಷ ಬಾರಿ ಬಡಿದುಕೊಳ್ಳುತ್ತದೆ ಮತ್ತು ಒಟ್ಟು ಸುಮಾರು 2,000 ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ.

ಆದರೆ ಹೃದಯ ಬಡಿತವು ಇದನ್ನು ಮೀರಿದರೆ ಅಥವಾ ಇದಕ್ಕೂ ತುಂಬ ಕಡಿಮೆಯಾದರೆ ಅದು ಮಿದುಳು, ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳಂತಹ ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಹೃದಯ ಬಡಿತವು ಅಸಹಜವಾಗಿದ್ದಾಗ ಅದು ಎದೆ ಮತ್ತು ಕುತ್ತಿಗೆಯಲ್ಲಿ ಒಂದು ಬಗೆಯ ಡವಗುಡುವಿಕೆಗೆ ಕಾರಣವಾಗುತ್ತದೆ.

ಇದು ರಕ್ತವನ್ನು ಪಂಪ್ ಮಾಡುವ ಹೃದಯದ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೃದಯ ಬಡಿತದಲ್ಲಿ ಏರುಪೇರು ಆದಾಗ ಮಿದುಳಿಗೆ ಆಮ್ಲಜನಕದ ಕೊರತೆಯನ್ನುಂಟು ಮಾಡುತ್ತದೆ ಆಗ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ.

ನಿಯಮಿತವಾಗಿ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗದಿದ್ದಾಗ ಅದು ಶರೀರದ ಸಹಜ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುತ್ತದೆ.

ಇದು ಶರೀರದಲ್ಲಿ ನಿಶ್ಶಕ್ತಿಯನ್ನುಂಟು ಮಾಡುತ್ತದೆ ಮತ್ತು ವ್ಯಕ್ತಿಗೆ ಬವಳಿಯುಂಟಾಗಬಹುದು ಅಥವಾ ಮೂರ್ಚೆ ಹೋಗಬಹುದು.

ರಕ್ತ ಸಂಚಾರ ಮತ್ತು ಹೃದಯ ಬಡಿತ ಅಸಹಜಗೊಂಡಾಗ ಅದು ಉಸಿರಾಟದ ತೀವ್ರ ತೊಂದರೆ ಮತ್ತು ಉಬ್ಬಸಕ್ಕೆ ಕಾರಣವಾಗುತ್ತದೆ.

ವೇಗವಾಗಿ ಹೃದಯ ಬಡಿದು ಕೊಳ್ಳುವುದು ತೀವ್ರ ಎದೆನೋವನ್ನೂ ಉಂಟು ಮಾಡುತ್ತದೆ. ಇಂದಿನ ದಿನಗಳಲ್ಲಿ ಹೃದಯ ಬಡಿತದ ಏರಿಳಿತದ ಸಮಸ್ಯೆಗೂ ಸೂಕ್ತ ಚಿಕಿತ್ಸೆ ಲಭ್ಯವಿದೆ.
ಪೇಸ್‌ಮೇಕರ್ ಎಂಬ ಯಂತ್ರವನ್ನು ಹೃದಯದ ಒಳಭಾಗದಲ್ಲಿ ಅಳವಡಿಸುವ ಮೂಲಕ ವ್ಯಕ್ತಿಯ ಹೃದಯ ಬಡಿತ ಆರೋಗ್ಯಕರ ರೀತಿಯಲ್ಲಿ ನಡೆಯುವಂತೆ ಮಾಡಲಾಗುತ್ತದೆ. ಆದರೂ ಸಹ ನಿಮ್ಮ ಹೃದಯದ ಆರೈಕೆ ನಿಮ್ಮದು ಅಗಾಗಿ ಯಾವುದೇ ರೀತಿಯ ಅಪಾಯಗಳು ಬರದ ಹಾಗೆ ಎಚ್ಚರವಹಿಸಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here