ಹೆಚ್ಚು ಹಣವನ್ನು ಪಡೆದು ಶ್ರೀಮಂತರಾಗಲು ಪಠಿಸ ಬೇಕಾದ ಮನಿ ಮಂತ್ರ.

0
1291

ದುಡ್ಡು ಕಂಡರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ದುಡ್ಡು ಎಂದರೆ ಹೆಣನು ಬಾಯಿ ಬಿಡುತ್ತದೆ ಎನ್ನುತ್ತಾರೆ. ಪ್ರಾಣಕ್ಕೂ ಬೆಲೆ ಕೊಡದಷ್ಟು ಹಣಕ್ಕೆ ಬೆಲೆ ಕೊಡುತ್ತಾರೆ. ಹಗಲು ರಾತ್ರಿ. ಬಿಸಿಲು ಮಳೆ ಎಂಬುದನ್ನು ಲೆಕ್ಕಿಸದೆ ದುಡಿಯುತ್ತಾರೆ ಅದು ಹಣಕ್ಕಾಗಿ. ಇನ್ನು ಕೆಲವರು ಕಳ್ಳತನ. ಇನ್ನಿತರ ರೀತಿಯ ಕೆಟ್ಟ ಕೆಲಸವನ್ನು ಮಾಡುತ್ತಾರೆ ಅದು ಹಣಕ್ಕಾಗಿ. ಇನ್ನು ಕೆಲವರು ಭಿಕ್ಷೆ ಬೇಡುತ್ತಾರೆ ಅದು ಹಣಕ್ಕಾಗಿ. ಒಟ್ಟಾರೆ ಎಲ್ಲರೂ ಏನೇ ಕಷ್ಟ ಬಂದರು ಹೇದುರಿಸಿ ಬದುಕುವುದು ಒಳ್ಳೆಯ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂದು.

ಆದರೆ ಎಲ್ಲರಿಗೂ ಈ ಭಾಗ್ಯ ಇರುವುದಿಲ್ಲ. ಕೆಲವರು ಏನೇ ಪ್ರಯತ್ನ ಪಟ್ಟರು ಹೆಚ್ಚು ದುಡ್ಡು ಸಂಪಾದನೆ ಮಾಡಲು ಆಗುವುದಿಲ್ಲ. ಹಾಗೆಯೇ ಕೆಲವರಿಗೆ ಎಷ್ಟು ದುಡ್ಡು ಇದ್ದರು ಮತ್ತೆ ಮತ್ತೆ ದುಡ್ಡು ಪಡೆಯುವ ಆಸೆ ಬಿಡುವುದಿಲ್ಲ. ಇಂದಿನ ಜಗತ್ತಿನಲ್ಲಿ ದುಡ್ಡು ಇದ್ದರೆ ಬದುಕು.ಎನ್ನುವ ಪರಿಸ್ಥಿತಿ ಬಂದಿದೆ.

ಹಾಗಾದರೆ ಹೆಚ್ಚು ದುಡ್ಡು ಪಡೆದು ಶ್ರೀಮಂತರಾಗಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದಿರ. ನೀವು ಏಕೆ ಹಣ ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಜಾತಕದ ಪ್ರಕಾರ ತಿಳಿದುಕೊಳ್ಳಬಹುದು. ಜಾತಕದಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಗತಿಯ ಬಗ್ಗೆ ತಿಳಿಯಲು ಸಾಧ್ಯವಿದೆ.

ಕೇವಲ ಹಣದ ವಿಷಯವಷ್ಟೇ ಅಲ್ಲ, ಆ ವ್ಯಕ್ತಿ ಯಾವ ರೀತಿ ಹಣ ಗಳಿಸಿಕೊಳ್ಳಬಹುದು ಅಥವಾ ಕಳೆಯಬಹುದು ಎಂಬುದನ್ನೂ ತಿಳಿಸುತ್ತದೆ. ಹಣ ಪಡೆಯೋದಕ್ಕೆ ಗುರುಬಲ ಇರಬೇಕೆ? ಏಳಿಗೆ, ಉನ್ನತಿಯ ಸಂಕೇತವಾಗಿರುವ ಗುರುಬಲವನ್ನು ವ್ಯಕ್ತಿ ಹೊಂದಿದ್ದರೆ ಕಡಿಮೆ ಅವಧಿಯಲ್ಲೇ ಹಣಕಾಸಿನ ವಿಷಯದಲ್ಲಿ ಏಳಿಗೆ ಹೊಂದಬಹುದು.

ವ್ಯಕ್ತಿಯ ಜಾತಕದಲ್ಲಿ ಗುರು ಬಲ ಹೆಚ್ಚಿದ್ದರೆ ಆತನು ಬೇಗ ಸಂಪನ್ನನಾಗುವನು. ಆದರೆ ಗುರು ಬಲವಿಲ್ಲದಿದ್ದರೆ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೀಡಾಗುತ್ತಾನೆ ಎಂಬುದು ಜ್ಯೋತಿಷ್ಯದ ಮಾತು.

ರಾಶಿ ಚಕ್ರ, ಗ್ರಹಗತಿ, ಕುಂಡಲಿಯಲ್ಲಿ ಗುರುವಿನ ಸ್ಥಾನ ಎಲ್ಲಿದೆ ಎಂಬುದರ ಮೇಲೆ ವ್ಯಕ್ತಿ ಹೇಗೆ ಹಣ ಗಳಿಸಿಕೊಳ್ಳಬಹುದು ಎಂಬುದನ್ನು ತಿಳಿಯಬಹುದು. ಅದೇ ರೀತಿ ಇನ್ನಿತರ ಗ್ರಹಗಳೂ ಕೂಡ ಮನುಷ್ಯನ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತೆ. ಹಣ ಗಳಿಕೆ, ಕಳೆಯುವಿಕೆ ಕರ್ಮ ಫಲವೇ?

ನೀವು ಗಳಿಸುವ ಮತ್ತು ಕಳೆದುಕೊಳ್ಳುವ ಹಣ ನಿಮ್ಮ ಕರ್ಮ ಫಲದ ಮೇಲೇ ನಿಂತಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಒಂದು ವೇಳೆ ನಿಮ್ಮ ಜಾತಕದಲ್ಲಿ ಹಣ ಗಳಿಸುವ ಯೋಗ ಇಲ್ಲದಿದ್ದರೂ ನಿಮ್ಮ ಕರ್ಮ ಫಲದಿಂದ ಅಂದುಕೊಳ್ಳದೆಯೇ ಹಣ ಗಳಿಸಬಹುದು. ನಿರೀಕ್ಷೆಯಿಲ್ಲದೆ ಹಾಕಿದ ಬಂಡವಾಳದಿಂದ, ಹೂಡಿಕೆ, ಲಾಟರಿ ಮುಂತಾದ ಮೂಲದಿಂದ ಹೆಚ್ಚು ಹಣ ಬರಲೂಬಹುದು.

ಆದರೆ ಕೆಲವೊಂದು ಬಾರಿ ಜನ್ಮ ಸಂಬಂಧಿ ದೋಷ, ಸಮಯದ ದೋಷ, ಕಾಳಸರ್ಪ ದೋಷ ಅಥವಾ ಗ್ರಹಗಳ ಚಲನವಲನದಿಂದ ಹಣದ ಮುಗ್ಗಟ್ಟು ಉಂಟಾಗಬಹುದು. ಹನ್ನೊಂದನೆ ಮನೆಯಲ್ಲಿ ಅಡಗಿದೆ ನಿಮ್ಮ ಹಣ: ನೀವು ಹಣ ಗಳಿಸಬೇಕೆಂದರೆ ನಿಮ್ಮ ಜಾತಕದಲ್ಲಿ ಹನ್ನೆರಡನೆ ಮನೆಗಿಂತ ಹನ್ನೊಂದನೆ ಮನೆ ಹೆಚ್ಚು ಪ್ರಭಾವಶಾಲಿಯಾಗಿರಬೇಕು. ಹನ್ನೆರಡನೆ ಮನೆ ವ್ಯಯದ ಸಂಕೇತವಾದ್ದರಿಂದ ಹನ್ನೊಂದನೆ ಮನೆಯನ್ನು ಹಿಂದಿಕ್ಕಿದರೆ ಒಳ್ಳೆಯ ಸ್ಥಿತಿವಂತಿಕೆಯಿದ್ದವರೂ ಕೂಡ ಬರ್ಬಾತ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗಾದರೆ ಇದಕ್ಕೆ ಪರಿಹಾರ ಏನು? ಕೊನೆಯಲ್ಲಿ ಮಂತ್ರ ಹೇಳಲಾಗಿದೆ ಭಕ್ತಿಯಿಂದ ಪಠಿಸಿ 

ಹೋಮ ಹವನಗಳಿಂದ ದೇವರನ್ನು ಪ್ರಸನ್ನಗೊಳಿಸಿದರೆ ಆರ್ಥಿಕ ಮುಗ್ಗಟ್ಟು ಸರಿಹೋಗಬಹುದು. ಮಹಾ ಲಕ್ಷ್ಮಿ ಹೋಮ, ಲಕ್ಷ್ಮಿ ಕುಬೇರ ಹೋಮ, ಸತ್ಯನಾರಾಯಣ ಪೂಜೆ ಮತ್ತು ಲಕ್ಷ್ಮಿ ಗಾಯತ್ರಿ ಮಂತ್ರದ ಪಠಣ ಮಾಡಿ ಧನ ದೇವತೆಗಳನ್ನು ಒಲಿಸಿಕೊಳ್ಳಬಹುದು.

ಪುರಾತನ ಯುಗದಲ್ಲಿ ಯೋಗ ಮತ್ತು ಹವನದ ಮೂಲಕ ನಮ್ಮ ಪ್ರಾರ್ಥನೆ, ಮಂತ್ರಗಳನ್ನು ದೇವರಿಗೆ ತಲುಪಿಸಿ ಬೇಡಿಕೊಳ್ಳುವ ಪರಿಯಿತ್ತು.

ಅಗ್ನಿಯ ಮೂಲಕ ಇದು ದೇವರಿಗೆ ತಲುಪಿ ಅದರ ಫಲವಾಗಿ ದೇವನಿಂದ ರಕ್ಷಣೆ ಮತ್ತು ಜೀವನದಲ್ಲಿ ಬದಲಾವಣೆ ಸಂಭವಿಸುತ್ತದೆ ಎನ್ನಲಾಗಿದೆ.

ಹಾಗೆಯೇ ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಸಹ ಶ್ರೀಮಂತರಾಗಬಹುದು.ಅವುಗಳು ಮುಂಜಾನೆ ದಿನನಿತ್ಯವೂ ಎದ್ದು ನಿಮ್ಮ ಎರಡೂ ಅಂಗೈಗಳನ್ನು ನೋಡಿಕೊಂಡು ಲಕ್ಷ್ಮಿಯನ್ನು ನೆನಪಿಸಿಕೊಳ್ಳಿ. ಈ ಸಂದರ್ಭದಲ್ಲಿ ಹಣವನ್ನು ಪಡೆಯುವ ನಿಮ್ಮ ಇಚ್ಛೆಯ ಕುರಿತು ಸಕಾರಾತ್ಮಕವಾಗಿರಿ. ಕೆಲವು ಕಾಲ ನಿಯಮಿತ ಅಭ್ಯಾಸದ ಬಳಿಕ ನೀವು ಹಣ ಸಂಪಾದಿಸಲು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ.

ಪ್ರತಿ ಶುಕ್ರವಾರ ಗಜ ಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ದೀಪವನ್ನು ಹಚ್ಚಿ ಕೆಂಪು ಹೂವನ್ನು ದೇವರಿಗೆ ಅರ್ಪಿಸಿ ಶ್ರೀಮಂತರಾಗಲು ಪ್ರಾರ್ಥಿಸಿ.

ಮಹಿಳೆಯರನ್ನು ಎಲ್ಲೂ ಕೂಡ ಅವಮಾನಿಸಬೇಡಿ.

ಸೋಮವಾರ ಮುತ್ತಿನ ಉಂಗುರಕ್ಕೆ ಮಹಾಲಕ್ಷ್ಮಿಯ ಮಂತ್ರದೊಂದಿಗೆ ಅಭಿಷೇಕ ಮಾಡಿ ಮತ್ತು ಪವಿತ್ರ ಕಾಲದಲ್ಲಿ ಅದನ್ನು ಧರಿಸಿ. ಇದು ಹಣ ಆಕರ್ಷಣೆಗೆ ನೆರವಾಗುತ್ತದೆ.

ಸದಾ ನನ್ನ ಜೀವನ ಸಮೃದ್ಧಿಯಾಗುತ್ತದೆ, ಎಲ್ಲಾ ದಿಕ್ಕಿನಿಂದ ಹಣ ಹರಿದುಬರುತ್ತದೆಂದು ಯೋಚಿಸಿ.

ಪಿತೃದೋಷದಿಂದ ಯಾರಾದರೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ, ಪಿತೃಶಾಂತಿ ಪೂಜೆಯು ಹೆಚ್ಚು ನೆರವಾಗುತ್ತದೆ.

ರಾಹುವಿನ ದೋಷದ ಕೆಟ್ಟ ಪರಿಣಾಮದಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ರಾಹು ಶಾಂತಿ ಪೂಜೆ ಹೆಚ್ಚು ನೆರವಾಗುತ್ತದೆ.

ಮಹಾದಶದಲ್ಲಿ ಯಾವುದೇ ಉಪದ್ರವಕಾರಿ ಗ್ರಹವು ಸಂಚರಿಸುತ್ತಿದ್ದರೆ ಆ ವ್ಯಕ್ತಿ ಜೀವನದಲ್ಲಿ ವಿಚಿತ್ರ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಗುರು ಪುಷಾ ಯೋಗದಲ್ಲಿ ಜಲಕುಂಬಿಯನ್ನು ತೆಗೆದುಕೊಂಡು ಅದನ್ನು ಅಭಿಷೇಕದಿಂದ ಶುದ್ಧಗೊಳಿಸಿ ಹಳದಿ ಬಟ್ಟೆಯಲ್ಲಿ ಅದನ್ನು ಇರಿಸಿ ಮಹಾಲಕ್ಷ್ಮಿ ಮಂತ್ರವನ್ನು 11 ಬಾರಿ ಉಚ್ಚರಿಸಿ ಮನೆಯಲ್ಲಿ ಇರಿಸಿ. ಇದು ಹಣವನ್ನು ಆಕರ್ಷಿಸಲು ನೆರವಾಗಿ ಶ್ರೀಮಂತಿಕೆ ಲಭಿಸುತ್ತದೆ.

ತುಳಸಿ ಸಸ್ಯವನ್ನು ನಿಯಮಿತವಾಗಿ ಪೂಜಿಸಿ ಹಣಕ್ಕಾಗಿ ಪ್ರಾರ್ಥಿಸಿ.

ಸಿದ್ಧಾ ಸ್ಫಟಿಕದ ಶ್ರೀ ಯಂತ್ರವನ್ನು ಪಡೆದು ಮನೆಯಲ್ಲಿ ನಿಯಮಿತವಾಗಿ ಪೂಜಿಸಿ.

ಬೇಲ್ ಎಲೆಗಳನ್ನು ತೆಗೆದುಕೊಂಡು ಶ್ರೀಗಂಧದ ಪುಡಿಯಲ್ಲಿ ಶ್ರೀಂ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿ ಹಣಕ್ಕಾಗಿ ಪ್ರಾರ್ಥಿಸಿ.

ಈ ಶ್ಲೋಕವನ್ನು ಪಠಿಸಿರಿ: ಓಂ ಯಕ್ಷಾಯ, ಕುಬೇರಾಯ, ವ್ಯಾಸರವಸ್ಯಾಯ ತರಂತತ್ ಯದಿ, ಪ್ರದಾಯ ತರುತತ್ಯ ಸಂವೃದಯೇ ದೇಹಿ, ತಪಯ ಸ್ವಾಹ ಸ್ವಾಹ ಸ್ವಾಹ ಸ್ವಾಹ

 

LEAVE A REPLY

Please enter your comment!
Please enter your name here