ಈ ಜ್ಯೂಸ್ ಮಾಡಿ ಕುಡಿದರೆ ನಿಮ್ಮ ಹೃದಯ ಸೇಫ್ ಆಗಿರುತ್ತೆ

0
813

ಹೃದ್ರೋಗ ಸಮಸ್ಯೆಗೆ ಸುಲಭ ಜ್ಯೂಸ್.

ಹೆಚ್ಚು ಶ್ರೀಮಂತ ಕಾಯಿಲೆ ಎಂದೇ ಕರೆಸಿಕೊಂಡಿರುವ ಹೃದ್ರೋಗ ಇಂದು ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ವಯಸ್ಸು, ಲಿಂಗ, ಸಮಯದ ಭೇದವಿಲ್ಲದೆ ಕಾಡುತ್ತಿರುವ ಸಮಸ್ಯೆ. ಒಂದು ಸಲ ಈ ಖಾಯಿಲೆ ಬಂದರೆ ಅದನ್ನು ಗುಣಪಡಿಸುವುದು ಬಲು ಕಷ್ಟ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಇದೆ ಕಾರಣವಾಗಿದೆ.

ಬಹುಪಾಲು ಜನರ ನಂಬಿಕೆಯ ಪ್ರಕಾರ 40 ವರ್ಷದಾಚೆಗೆ ಅದರಲ್ಲೂ, 50- 60 ವರ್ಷದಲ್ಲಿ ಹೃದಯಾಘಾತವಾಗುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಹೃದಯಾಘಾತ ಯಾವ ವಯಸ್ಸಿನಲ್ಲಿಯಾದರೂ ಆಗಬಹುದು. ಸರಿಯಾದ ಆಹಾರ ಕ್ರಮ, ವ್ಯಾಯಾಮವಿಲ್ಲದಿದ್ದರೆ ಹೃದಯಾಘಾದ ಸಮಸ್ಯೆ ಯಾರನ್ನಾದರೂ ಕಾಡಬಹುದು.

ಹೃದಯಕ್ಕೆ ರಕ್ತ ಸಾಗಿಸುವ ಮತ್ತು ಹೃದಯದಿಂದ ಶರೀರದ ಇತರ ಅಂಗಗಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಉಂಟಾಗುವ ತಡೆ ಇದಕ್ಕೆ ಮುಖ್ಯ ಕಾರಣವಾಗಿದೆ. ಜೀವನಶೈಲಿ ಮತ್ತು ಕೊಬ್ಬಿನಿಂದ ಕೂಡಿದ, ಸಂಸ್ಕರಿತ ಆಹಾರದ ಅತಿಯಾದ ಸೇವನೆ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಹಾರದಲ್ಲಿನ ಅತಿಯಾದ ಕೊಬ್ಬಿನ ಕಣಗಳು ರಕ್ತನಾಳದೊಳಗೆ ಶೇಖರಗೊಂಡು ರಕ್ತದ ಸುಗಮ ಸಂಚಾರಕ್ಕೆ ತಡೆಯನ್ನುಂಟು ಮಾಡುತ್ತವೆ.

ಇದರಿಂದಾಗಿ ಹೃದಯ ಮತ್ತು ಮಿದುಳಿಗೆ ರಕ್ತದ ಪೂರೈಕೆ ಕುಂಠಿತಗೊಳ್ಳುತ್ತದೆ. ಹೀಗಾಗಿ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ರಕ್ತವು ವಿವಿಧ ಅಂಗಾಂಗಗಳಿಗೆ ಮತ್ತು ಅಂಗಾಂಶಗಳಿಗೆ ತಲುಪುವುದಿಲ್ಲ ಮತ್ತು ಇದರಿಂದಾಗಿ ಅಂಗಾಂಗಗಳಿಗೆ ತೀವ್ರ ಹಾನಿಯುಂಟಾಗುತ್ತದೆ.

ಈ ಹೃದ್ರೋಗವನ್ನು ತಡೆಯಲು ಸರಳ ಉಪಾಯಕ್ಕೆ ಕೆಲವು ಜ್ಯೂಸ್ ರಾಮಬಾಣವಾಗಿದೆ.

ಈ ಜ್ಯೂಸ್ ಗಳು ಶರೀರದಲ್ಲಿಯ ನಂಜುಗಳನ್ನು ನಿವಾರಿಸುವ ಜೊತೆಗೆ ರಕ್ತನಾಳಗಳಲ್ಲಿ ಶೇಖರಗೊಂಡಿರುವ ಎಲ್ಲ ಕೊಬ್ಬನ್ನು ತೆಗೆದುಹಾಕಿ ಸ್ವಚ್ಛಗೊಳಿಸುತ್ತದೆ.

ಹಾಗಾದರೆ ಈ ಜ್ಯೂಸ್ ಯಾವುದು ಹೇಗೆ ತಯಾರಿಸುವುದು ನೋಡೋಣ.

ಅಜವಾನ ಗಿಡದ ಎರಡು ದಂಟುಗಳ ಸಣ್ಣ ತುಂಡುಗಳು, ಒಂದು ಕಪ್ ತಾಜಾ ಟೊಮೆಟೊ ಜ್ಯೂಸ್, ಒಂದು ಚಮಚ ಶುಂಠಿ ಚೂರುಗಳು, 1/4 ಕಪ್ ಲಿಂಬೆರಸ, ಒಂದು ಹಸಿಮೆಣಸು, 1/4 ಚಮಚ ಕಾಳುಮೆಣಸು, ಈ ಎಲ್ಲ ಸಾಮಗ್ರಿಗಳನ್ನು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿಕೊಂಡು ಒಂದು ಕಪ್ ಜ್ಯೂಸ್ ದೊರೆಯುತ್ತದೆ.

ನಿಮ್ಮ ಊಟಗಳ ನಡುವೆ ಈ ರಸವನ್ನು ಸೇವಿಸುತ್ತಿದ್ದರೆ ರಕ್ತನಾಳಗಳಲ್ಲಿಯ ಎಲ್ಲ ತಡೆಗಳು ನಿವಾರಣೆಯಾಗುತ್ತವೆ. ಆದರೆ ಈ ರಸವನ್ನು ಅತಿಯಾಗಿ ಸೇವಿಸಬಾರದು. ಹೆಚ್ಚೆಂದರೆ ದಿನಕ್ಕೆ ಒಂದು ಸಣ್ಣ ಕಪ್ ಸೇವಿಸಬಹುದು.

ಹೀಗೆ ಮಾಡಿದರೆ ನಿಮ್ಮ ಹೃದ್ರೋಗದ ಸಮಸ್ಯೆಯನ್ನು ಹೋಗಿಸಬಹುದು.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here