ಇಂದಿನ ದಿನಗಳಲ್ಲಿ ಜೀವನ ನೆಡೆಸುವುದು ತುಂಬಾ ಕಷ್ಟವಾಗಿದೆ. ಏಕೆಂದರೆ ನಾವು ಎಷ್ಟೇ ಕಷ್ಟ ಪಟ್ಟು ದುಡಿದರು ಅದನ್ನು ನಮ್ಮ ಮನೆಗಳಲ್ಲಿ ತಂದು ಇಟ್ಟಿಕೊಳ್ಳಲು ಕಷ್ಟವಾಗಿದೆ. ಏಕೆಂದರೆ ಕಷ್ಟ ಪಟ್ಟು ದುಡಿಯಲು ಆಗದೆ ಕೆಟ್ಟ ಅಭ್ಯಾಸವಾಗಿ ಮಾಡಿಕೊಂಡಿರುವ ಕಳ್ಳತನವು ನೆಮ್ಮದಿಯನ್ನು ಕೆಡಿಸುತ್ತದೆ.
ತಮ್ಮ ಜೀವನವನ್ನು ನೆಡೆಸಲು ಬೇರೆಯವರು ಕಷ್ಟ ಪಟ್ಟು ದುಡಿದಿರುವ ಹಣ ಮತ್ತು ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಈ ಕಳ್ಳರ ವಿರುದ್ಧ ತಿರುಗಿ ಬಿದ್ದರೆ ಅವರು ಸಾವನ್ನು ಅನುಭವಿಸಬೇಕಾಗುತ್ತದೆ.
ಕಳ್ಳರಿಂದ ಎಚ್ಚೆತ್ತುಗೊಂಡು ಮನೆಯಲ್ಲಿ ಎಷ್ಟು ಜೋಪಾನವಾಗಿ ಇಟ್ಟರು.ಸಹ ಈ ಕಳ್ಳರು ತುಂಬಾ ಜಾಣರಾಗಿರುತ್ತಾರೆ. ವಸ್ತುಗಳನ್ನು ಸಾಕಷ್ಟು ಎಚ್ಚರಿಕೆ ವಹಿಸಿ ಇಟ್ಟರೂ ಕ್ಷಣಾರ್ಧದಲ್ಲಿ ಅಲ್ಲಿಂದ ಅಪಹರಿಸಿ ಬಿಡುತ್ತಾರೆ.
ಕಳ್ಳತನ ಅದ ನಂತರ ಏನು ಮಾಡುವುದಕ್ಕೆ ಆಗದೆ ಕೈ ಕಟ್ಟಿ ಕುಟಿತುಕೊಳ್ಳುತ್ತೇವೆ.ಅಗಾಗಿ ಕಳ್ಳತನ ಆಗುವ ಮುಂಚೆಯೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಳ್ಳತನ ಆಯಿತು ಎಂದು ಯೋಚಿಸಿ. ಚಿಂತಿಸುವ ಅವಶ್ಯಕತೆ ಇರುವುದಿಲ್ಲ.
ಹಾಗಾದರೆ ಈ ಕಳ್ಳರಿಂದ ಹೇಗೆ ಎಚ್ಚವಾಹಿಸಬೇಕು ತಿಳಿಯೋಣ ಬನ್ನಿ..
ಮನೆಯಿಂದ ಹೊರಗೆ ಹೋಗುವಾಗ ಲ್ಯಾಂಡ್ ಲೈನ್ ಫೋನ್ ಶಬ್ದವನ್ನು ಕಡಿಮೆಯಲ್ಲಿ ಇಡಿ. ಫೋನ್ ಜೋರಾಗಿ ಬಡಿದುಕೊಳ್ಳುತ್ತಿದ್ದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗುತ್ತದೆ.
ಇತ್ತೀಚಿಗೆ ಆನ್ಲೈನ್ ನಲ್ಲಿ ಸೆನ್ಸಾರ್ ಲೈಟ್ಗಳು ಹೆಚ್ಚು ಸಿಗ್ತಾ ಇದೆ, ಇದು ನಮ್ಮ ಮನೆಗೆ ಒಂದು ನಾಯಿಯಂತೆ ನೀಯತ್ತಾಗಿ ಕಾವಲು ಕಾಯುತ್ತೆ, ಸಣ್ಣ ಬೆಡ್ ಲೈಟ್ ನಂತೆ ಬರುವ ಸೆನ್ಸಾರ್ ಲೈಟ್ ನಾವು ಊರಿಗೆ ಹೋಗುವಾಗ ಆನ್ ಮಾಡಿ ಹೋದ್ರೆ ಅಕಸ್ಮಾತ್ ಕಳ್ಳರು ಮನೆಗೆ ನುಗಿದ್ರೆ ಜೋರಾಗಿ ಸೈರನ್ ಕೂಗಿ ಅಕ್ಕಪಕ್ಕದ ಮನೆಯವರಿಗೆ ತಿಳಿಯುವ ಹಾಗೇ ಮಾಡುತ್ತೆ.
ಹಾಗೇ ನಿಮ್ಮ ಮನೆ ಗೋಡೆಗೆ ಒರಗಿಸಿ ಏಣಿಯನ್ನು ಇಡಬಾರದು. ಹೀಗೆ ಇಟ್ಟರೆ ನಾವೇ ಕಳ್ಳರಿಗೆ ಆಹ್ವಾನ ಕೊಟ್ಟ ಹಾಗೇ
ಮನೆಗೆ ಮತ್ತು ಗೇಟಿಗೆ ಗಟ್ಟಿಯಾದ ಬೀಗವನ್ನು ಹಾಕಬೇಕು. ಮನೆಯಲ್ಲಿ ನಿದ್ರೆ ಮಾಡುವ ಮುಂಚೆ ಕಿಟಕಿಗಳನ್ನು ಸರಿಯಾಗಿ ಹಾಕಿ ಮಲಗಬೇಕು.
ಕೀಯನ್ನು ಮನೆಯ ಮುಂದೆ ಬಚ್ಚಿಟ್ಟು ಹೋಗಬಾರದು, ಹಾಗೆ ಮಾಡಿದರೆ ಕಳ್ಳರು ಸುಲಭವಾಗಿ ಕೀಯನ್ನು ಹುಡುಕಿ ತೆಗೆಯುತ್ತಾರೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪಕ್ಕದ ಮನೆಯವರ ಹತ್ತಿರ ಮನೆ ಕಡೆ ಸ್ವಲ್ಪ ನೋಡಿಕೊಳ್ಳಲು ಹೇಳಿ ಹೋಗಬೇಕು.
ಮನೆಗೆ ಬೆಲೆಬಾಳುವ ವಸ್ತುಗಳನ್ನು ತಂದರೆ ಅದರ ಬಾಕ್ಸ್ ಹೊರಗೆ ಕಾಣುವಂತೆ ಇಡಬಾರದು, ಅಲ್ಲದೆ ಅಧಿಕ ಹಣ, ಚಿನ್ನ, ಇನ್ಸೂರೆನ್ಸ್ ಪಾಲಿಸಿಗಳನ್ನು ಬ್ಯಾಂಕ್ ನಲ್ಲಿ ಸೇಫ್ ಲಾಕರ್ ನಲ್ಲಿ ಇಡಬೇಕು.
ಅಪರಿಚಿತರು ಮನೆ ಅಕ್ಕ-ಪಕ್ಕ ಸುಳಿದಾಡುತ್ತಿದ್ದರೆ ಗಮನ ಹರಿಸಬೇಕು. ಅಪರಿಚಿತರನ್ನು ನಂಬಲು ಹೋಗಬೇಡಿ.
ಒಬ್ಬರೇ ಇರುವಾಗ ಮನೆಯ ಬಾಗಿಲುಗಳನ್ನು ಹಾಕುವುದನ್ನು ಮರೆಯಬೇಡಿ.
ನಿಮ್ಮ ಮನೆಗೆ ಯಾರಾದರೂ ಬಂದಾಗ ಬಾಗಿಲು ತೆಗೆಯದೆ. ಅವರನ್ನು ವಿಚಾರಿಸುವ ರೀತಿಯಲ್ಲಿ ಬೇರೆ ವಿಧಾನವನ್ನು ಬಳಸಿಕೊಳ್ಳಿ.
ನಿಮಗೆ ಗೊತ್ತಿಲ್ಲದವರು ಬಂದಾಗ ಯಾವುದೇ ಕಾರಣಕ್ಕೂ ಸರಿಯಾಗಿ ವಿಚಾರಿಸಿ ನಿಮಗೆ ಗೊತ್ತಿರುವವರೆಗೂ ಬಾಗಿಲು ತೆಗೆಯಬೇಡಿ.
ಇಂದಿನ ದಿನಗಳಲ್ಲಿ ಕಳ್ಳತನ ಎಂಬುದು ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂದರೆ ಅದನ್ನು ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಅಗಾಗಿ ಆದಷ್ಟು ಹೆಚ್ಚರವಹಿಸಿ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.