ನಿಮ್ಮ ರಾಶಿ ಭವಿಷ್ಯ ಹೀಗಿದೆ ತಿಳಿದುಕೊಳ್ಳಿ

0
906

ನಾಳೆಯ ನಿಮ್ಮ ರಾಶಿ ಭವಿಷ್ಯ ಹೀಗಿದೆ ತಿಳಿದುಕೊಳ್ಳಿ

ಮೇಷ: ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ವೃಷಭ: ಅನೇಕ ರಕ್ಷ ಣಾವ್ಯೂಹಗಳನ್ನು ಹೆಣೆದು ಬಿಡಬೇಡಿ. ದೇವಿ ಆರಾಧನೆಯ ಜೊತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿ. ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.

ಮಿಥುನ: ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ಕರ್ಕಾಟಕ: ಕೆಲ ಗ್ರಹಗಳ ಸಂಚಾರದಿಂದ ಇಂದಿನ ನಿಮ್ಮ ಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ.

ಸಿಂಹ: ಅಧಿಕ ಗಳಿಕೆಗೆ ಇಂದು ಶುಭದಿನವಾಗಿದೆ. ಅದು ಹಣಗಳಿಕೆಯಾಗಿರಬಹುದು. ಇಲ್ಲವೇ ವಿದ್ಯೆಯ ಗಳಿಕೆ ಆಗಿರಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

ಕನ್ಯಾ: ಕಚೇರಿಯ ಕೆಲಸಕಾರ್ಯಗಳನ್ನು ವಿವೇಚನೆಯಿಲ್ಲದೆ ಸರ್ರನೆ ಮಾಡಬೇಡಿ. ಇದರಿಂದ ಹೊಸ ಸಮಸ್ಯೆಯೊಂದು ಉದ್ಭವ ಆಗುವ ಸಾಧ್ಯತೆ ಇದೆ ಹಾಗಾಗಿ ಇಂದು ಮಾಡುವ ಕೆಲಸವನ್ನು ಮುಂದೂಡುವುದು ಒಳ್ಳೆಯದು.

ತುಲಾ: ಆರಾಧನಾ ದೃಷ್ಟಿಯಿಂದಲೇ ಅತಿಥಿಯನ್ನು ಸ್ವೀಕರಿಸಿರಿ ಮತ್ತು ಅವರ ಸೇವೆಯನ್ನು ಮಾಡಿ. ಇದರಿಂದ ನಿಮ್ಮ ಮನಃಕ್ಷೋಭೆಯು ತಿಳಿಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ವೃಶ್ಚಿಕ: ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿ. ಮನೋಕಾಮನೆಗಳು ಪೂರ್ಣಗೊಳ್ಳುವುದು ಆದಷ್ಟು ತಾಳ್ಮೆಯಿಂದಿರಿ.

ಧನು: ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಶಿವ ಮತ್ತು ಆಂಜನೇಯ ಸ್ತುತಿ ಪಠಿಸಿ.

ಮಕರ: ಉತ್ತಮವಾದ ವಿಚಾರದಲ್ಲಿ ಕ್ಲಿಷ್ಟತೆ ಇದ್ದರೂ ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ಒದಗಿಸಿದ್ದಾನೆ. ನಿಮ್ಮಿಂದ ಮಾರ್ಗದರ್ಶನ ಪಡೆಯುವವರಿಗೆ ಬೇಕಾದ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ.

ಕುಂಭ: ಆರೋಗ್ಯದ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ದೂರವಾಗುವುದು. ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ: ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ಹೊಸದೇನೋ ಒಂದು ನಿಮ್ಮ ಜೀವನವನ್ನು ಪ್ರವೇಶಿಸಲಿದ್ದು, ಇದರಿಂದ ಉತ್ತಮವಾಗುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.

LEAVE A REPLY

Please enter your comment!
Please enter your name here