ಸುಖನಿದ್ರೆ ಎಲ್ಲರಿಗೂ ಒಲಿಯುವಂಥದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದರೆ ತಪ್ಪಾಗಲಾರದು. ಕೆಲವರು ನಿದ್ದೆ ಮಾತ್ರೆ ಸೇವಿಸುತ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ ಬೆಳಗಿನ ಕೆಲಸವನ್ನು ಖುಷಿ ಖುಷಿಯಾಗಿ ಮಾಡಲು ಸಾಧ್ಯ. ಸಂತೆಯಲ್ಲಿಯೂ ನಿದ್ದೆ ಮಾಡುವವರಿದ್ದಾರೆ. ಹಾಗೆ ಕೆಲವರಿಗೆ ಆರಾಮ ನೀಡುವ ಬೆಡ್ ಬೇಕು. ನಿದ್ದೆ ಬರುವುದೊಂದೇ ಮುಖ್ಯವಲ್ಲ, ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಮೇಲೆ ಈ ನಿದ್ದೆಯ ಪ್ರಭಾವವಿದೆ.
ನಮ್ಮ ಜೀವನ ನಿರ್ಧಾರ ಆಗೋದು ನಕಾರಾತ್ಮಕ ಮತ್ತು ಸಕಾರಾತ್ಮಕ ದಿಂದ ಹೇಗೆ ಅಂದ್ರೆ ಒಬ್ಬ ವ್ಯಕ್ತಿಗೆ ಸಕಾರಾತ್ಮಕ ಶಕ್ತಿ ಹೆಚ್ಚಾದರೆ ಅವನ ಬದುಕು ಬದಲಾಗುತ್ತದೆ ಅವನಿಗೆ ಅದೃಷ್ಟ ಹೊಡೆಯುತ್ತೆ, ಆದ್ರೆ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಕೆಲವು ಸರಳವಾದ ಉಪಾಯಗಳನ್ನು ಹೇಳಿದ್ದೇವೆ ನೀವು ಆದನ್ನ ಪಾಲಿಸಿದರೆ ಸಾಕು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಿಮಗೆ ಯಾವಾಗಲು ಒಳ್ಳೆದೇ ಆಗುತ್ತೆ.
ಹಾಸಿಗೆ ಬಳಿ ಕೆಲ ವಸ್ತುಗಳನ್ನಿಟ್ಟು ಮಲಗಿದ್ರೆ ಯಾವೆಲ್ಲಾ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಈ ಹಿಂದೆಯೇ ಹೇಳಿದ್ದೇವೆ. ಈ ಹಾಸಿಗೆ ಬಳಿ ಯಾವ ವಸ್ತುಗಳನ್ನಿಟ್ಟು ಮಲಗಿದ್ರೆ ಏನೇನು ಉಪಯೋಗ ಎಂಬುದನ್ನು ಹೇಳುತ್ತವೆ. ಪರೀಕ್ಷೆಯ ಭಯ ದೂರ ಮಾಡಲು ಪ್ರತಿದಿನ ದೇವಿ ಸರಸ್ವತಿಗೆ ದೀಪ ಹಚ್ಚಿ. ಹಾಗೇ ಮಲಗುವಾಗ ಹಾಸಿಗೆಯ ಬಳಿ ಪುಸ್ತಕವನ್ನಿರುಸುವುದರಿಂದ ಸಫಲತೆ ಸಿಗುತ್ತದೆ. ಸ್ವಪ್ನ ಬೀಳುತ್ತಿದ್ದರೆ ಮಲಗುವ ಮುನ್ನ ಹನುಮಾನ್ ಚಾಲೀಸ್ ಅಥವಾ ಸುಂದರ ಕಾಂಡ ಪಠಿಸಿ ಮಲಗಿರಿ.
ಆ ಪುಸ್ತಕ ನಿಮ್ಮ ತಲೆ ದಿಂಬಿನ ಕೆಳಗಿರಲಿ, ಇದರಿಂದ ಒತ್ತಡ ಹಾಗೂ ಭಯ ಕಡಿಮೆಯಾಗುತ್ತದೆ. ಹಾಸಿಗೆಯ ಬಳಿ ಕಬ್ಬಿಣದ ವಸ್ತುವನ್ನಿಟ್ಟು ಮಲಗುವುದರಿಂದ ನಕಾರಾತ್ಮಕ ಶಕ್ತಿ ಹತ್ತಿರ ಸುಳಿಯುವುದಿಲ್ಲ. ಮಾನಸಿಕ ಒತ್ತಡಕ್ಕೊಳಗಾಗಿದ್ದಾರೆ,ಹಾಸಿಗೆ ಬಳಿ ಮೂಲಂಗಿ ಇಟ್ಟು ಮಲಗಿರಿ. ಬೆಳಿಗ್ಗೆ ಆ ಮೂಲಂಗಿಯನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಿ. ದಿಂಬಿನ ಕೆಳಗೆ ದೇವರಿಗೆ ಅರ್ಪಿಸಿದ ಹೂವನ್ನಿಟ್ಟು ಮಲಗುವುದರಿಂದ ಸುಖನಿದ್ರೆ ಬರುತ್ತದೆ. ಬೆಳ್ಳುಳ್ಳಿ ಅದೃಷ್ಟದ ಸಂಕೇತ. ಹಾಗಾಗಿ ಮಲಗುವ ವೇಳೆ ಜೇಬಿನಲ್ಲಿ ಅಥವಾ ದಿಂಬಿನ ಬಳಿ ಬೆಳ್ಳುಳ್ಳಿ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.