ಹರಕೆ ಹೊತ್ತು ತೀರಿಸದಿದ್ದರೆ

0
916

ದೇವರಿಗೆ ಹರಕೆ ಹೊತ್ತು ಅದನ್ನು ತೀರಿಸದಿದ್ದರೆ..
ಬಹುಷಃ ಪ್ರತಿಯೊಬ್ಬರೂ ಒಂದಲ್ಲಾ ಒಂದು ವೇಳೆ ತಮಗೆ ಕಷ್ಟ ಬಂತೆಂದು ತಮ್ಮ ಇಷ್ಟ ದೇವರಿಗೆ ಹರಕೆ ಹೊತ್ತಿಕೊಳ್ಳುವುದು ಉಂಟು.
ನಾವು ಕಷ್ಟ ಅಥವಾ ಸುಖ ಯಾವುದೇ ಬಂದರು ನಾವು ದೇವರನ್ನು ಸ್ಮರಿಸುತ್ತೇವೆ, ಸುಖ ಬಂದರೆ ನಾವು ದೇವರನ್ನು ನೆನಪು ಮಾಡಿಕೊಳ್ಳೋದು ತುಂಬಾ ಕಡಿಮೆ ಆದರೆ ಕಷ್ಟ ಬಂದರೆ ಮಾತ್ರ ದೇವರನ್ನು ತಪ್ಪದೆ ನೆನೆಪಿಸಿಕೊಳ್ಳುತ್ತೇವ. ತಕ್ಷಣ ದೇವಸ್ಥಾನಕ್ಕೆ ಹೋಗಿ ದೇವರ ಹತ್ತಿರ ಬೇಡಿಕೊಳ್ಳುತ್ತೇವೆ.

ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಹೊತ್ತು ಶಾಂತವಾಗಿ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸುಖ, ನೆಮ್ಮದಿ ದೊರಕುತ್ತದೆ, ಹಾಗೆ ಯಾವದೇ ಕಷ್ಟ ಬಂದರೂ ಕಷ್ಟದಿಂದ ಪಾರು ಮಾಡೆಂದು ದೇವರಲ್ಲಿ ಬೇಡಿಕೆ ಇಡುತ್ತೇವೆ. ಹೀಗೆ ಕಷ್ಟಗಳು ಕಡಿಮೆ ಆದರೆ ನಿನ್ನ ಆಸ್ತಾನಕ್ಕೆ ಬರುತ್ತೇನೆ ಹಾಗು ಹಣ ಅಥವಾ ಚಿನ್ನ, ಇತರೆ ವಸ್ತು ಗಳನ್ನೂ ನೀಡುತ್ತೇನೆ ಎಂದು ಹರಕೆ ಹೊತ್ತಿ ಕೊಳ್ಳುತ್ತಾರೆ. ಅಥವಾ ಕುಂಕುಮಾರ್ಚನೆ, ಹಾಲಿನ ಅಭಿಷೇಕ ಇತ್ಯಾದಿಗಳನ್ನು ಮಾಡಿಸುತ್ತೇನೆ ಎಂದು ಹರಕೆ ಹೊತ್ತಿಕೊಳ್ತಾರೆ.

ಹಾಗೆಯೇ ತಮ್ಮ ಕಷ್ಟಗಳು ನಿವಾರಣೆ ಆದ ನಂತರ ಕೆಲವರು ಹರಕೆಯನ್ನು ಮರೆತು ಬಿಡುತ್ತಾರೆ. ಇನ್ನು ಕೆಲವರು ನೆನಪಿದ್ದರು ಎನು ತೊಂದರೆ ಆಗಲ್ಲ ಇನ್ನೊಮ್ಮೆ ಯಾವಾಗಲಾದರೂ ಕೊಟ್ಟರಾಯಿತು ಎಂದು ಸುಮ್ಮನಾಗ್ತಾರೆ. ಅವರಲ್ಲಿ ಸಮಯವಿದ್ದರೂ ದೇವಾಲಯಕ್ಕೇ ಹೋಗುವುದಿಲ್ಲ.

ಆದರೆ ಹರಕೆ ತೀರಿಸಲಿಲ್ಲ ಎಂದರೆ ಏನಾಗುತ್ತದೆ ಎಂಬುದನ್ನು ತಿಳಿಯೋಣ:
ಜೀವನದಲ್ಲಿ ಪ್ರತಿಯೊಬ್ಬರೂ ಎಡವುತ್ತಾರೆ. ಹಾಗೆಯೇ ಪ್ರತಿ ಸಲ ಎಡವಿದಾಗಲೂ ತಾಯಿಯಾದವಳು ತನ್ನ ಮಕ್ಕಳನ್ನು ಕ್ಷಮಿಸಿ, ಸರಿಯಾದ ದಾರಿ ತೋರಿಸುತ್ತಾಳೆ. ಒಬ್ಬ ತಾಯಿಗೆ ಹೇಗೆ ತಮ್ಮ ಮಕ್ಕಳನ್ನು ಕ್ಷಮಿಸುವ ಬುದ್ದಿ ಇರುತ್ತೋ ಹಾಗೆ ದೇವರು ಕೂಡ ಹಾಗೆ ಭಕ್ತರಿಗೆ ಹರಕೆ ತೀರಿಸಲಿಲ್ಲವೆಂದು ಯಾವತ್ತೂ ಕಷ್ಟಗಳನ್ನು ಕೊಡೋದಿಲ್ಲ. ಆ ದೇವರೂ ಕೂಡ ಕ್ಷಮಿಸುತ್ತಾನೆ.

ಆದರೆ ಕೆಲವೊಮ್ಮೆ ಹೊತ್ತ ಹರಕೆಯನ್ನು ತೀರಿಸದೇ ಇದ್ದಾಗ ಮುಂದೆ ನಮಗೆ ಇನ್ನಷ್ಟು ಕಷ್ಟಗಳು ಬರುತ್ತದೆ. ಹೆಚ್ಚಿನ ಸಮಸ್ಯೆಗಳು ಎದುರಾದಾಗ ಮತ್ತೆ ದೇವರ ಮೊರೆ ಹೋಗುತ್ತಾರೆ. ಆಗಲೂ ಸಹ ಹಳೆಯ ಹರಕೆಗಳು ನೆನಪಿಗೆ ಬರುತ್ತವೆ. ಏನೇ ಆಗಲಿ ಹೊತ್ತ ಹರಕೆಯನ್ನು  ಕೂಡಲೇ ತೀರಿಸಿಬಿಡಿ.

ಹಾಗೆಯೇ ಇನ್ನೊಮ್ಮೆ ಕಷ್ಟ ಬಂದಾಗ ಮತ್ತೆ ದೇವರಲ್ಲಿ ಹರಕೆ ಹೊತ್ತುಕೊಳ್ಳಲು ಹೋದಾಗ ಹಳೆಯ ಹರಕೆ ತೀರಲಿಲ್ಲ ಎನ್ನುವುದು ನೆನಪಿಗೆ ಬರುತ್ತದೆ. ಆಗ ಮೊದಲಿನ ಹರಕೆ ತೀರಿಸಲು ಪ್ರಯತ್ನ ಪಡುತ್ತಾನೆ. ಹೀಗೆ ದೇವರು ನಮ್ಮ ಕಷ್ಟ ಸುಖ ಗಳಲ್ಲಿನಮ್ಮ ಜೊತೆ ಇರುತ್ತಾನೆ ಎನ್ನುವುದು ಸತ್ಯವೇ ಸರಿ.

LEAVE A REPLY

Please enter your comment!
Please enter your name here