ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಬೆಳ್ಳಿಯ ವಸ್ತುಗಳು ಇದ್ದೆ ಇರುತ್ತವೆ.ಅಲ್ಲವೇ. ಮಹಿಳೆಯರು ಸಹ ಬೆಳ್ಳಿಗೆ ಕಾಲುಂಗರ. ಬೆಳ್ಳಿಗೆ ಕಾಲು ಗೆಜ್ಜೆ.ಗಳನ್ನು ಧರಿಸಿರುತ್ತಾರೆ. ಆದರೆ ಈ ಬೆಳ್ಳಿಯ ವಸ್ತುಗಳು ಬೇಗ ಕಪ್ಪಾಗುತ್ತವೆ. ಇನ್ನು ಬಿಸಿಲು. ಗಾಳಿ. ನೀರಿಗೆ ಬೇಗ ಬೆಳ್ಳಿಯು ಕಪ್ಪಾಗುತ್ತವೆ.
ಹಾಗಾದರೆ ಈ ಬೆಳ್ಳಿಯ ವಸ್ತುಗಳನ್ನು ಕಪ್ಪಾಗದ ಅಗೆ ನೋಡಿಕೊಳ್ಳುವುದು ಹೇಗೆ. ಜೊತೆಗೆ ಕಪ್ಪಾಗಿರುವ ಬೆಳ್ಳಿಯ ವಸ್ತುಗಳನ್ನು ಪಳ ಪಳ ಹೊಳೆಯುವ ಹಾಗೆ ಮಾಡುವುದು ಹೇಗೆ ಎಂದು ನೋಡೋಣ . ಬೆಳ್ಳಿಯ ಆಭರಣಗಳನ್ನು ಧರಿಸಿ ಮಳೆಯಲ್ಲಿ ಏನಾದರೂ ಹೊರಗೆ ಹೋದರೆ ಮರಳಿ ಬಂದ ಕೂಡಲೆ ಅವುಗಳನ್ನು ಒಣ ಬಟ್ಟೆಯಿಂದ ವರೆಸಿ ಸ್ವಲ್ಪ ಸಮಯ ಗಾಳಿಯಲ್ಲಿ ಒಣಗಲು ಬಿಡಬೇಕು.
ಬೆಳ್ಳಿಯ ವಸ್ತುಗಳನ್ನು ಆದಷ್ಟು ಟಿಶ್ಯೂ ಪೇಪರ್ನಿಂದ ಸುತ್ತಿ, ತೇವಾಂಶ ಇಲ್ಲದ ಆಭರಣ ಪೆಟ್ಟಿಗೆಯಲ್ಲಿ ಇಡಬೇಕು.
ಬೆಳ್ಳಿ ವಸ್ತುಗಳನ್ನು ಒಂದು ಕಪ್ ನೀರಿನಲ್ಲಿ ಒಂದು ಸ್ಫೂನ್ ಟೂತ್ಪೇ ಸ್ಟ್ ಹಾಕಿ ಚೆನ್ನಾಗಿ ಬೆರೆಸಿ, ಅದರಲ್ಲಿ ಬೆಳ್ಳಿ ವಸ್ತುಗಳನ್ನು 30 ನಿಮಿಷ ಇಡಬೇಕು. ನಂತರ ಮೆತ್ತನೆಯ ಬ್ರೇಶ್ ಅಲ್ಲಿ ಚೆನ್ನಾಗಿ ಉಜ್ಜಿ ತೊಳೆದು ವರೆಸಿದರೆ ಫಳಫಳ ಎಂದು ಹೊಳೆಯುತ್ತವೆ.
ಹಲ್ಲು ಹುಜ್ಜಲು ಬಳಸುವ ಕೋಲ್ಗೇಟ್ ಪೌಡರ್ ಅನ್ನು ಬೆಳ್ಳಿಯ ವಸ್ತುಗಳನ್ನು ತೊಳೆದರೆ ಪಳ ಪಳ ಹೊಳೆಯುತ್ತವೆ.
ಪಿತಂಬರಿ ಪೌಡರ್ ಅನ್ನು ಸಹ ಬೆಳ್ಳಿಯ ವಸ್ತುಗಳಿಗೆ ಹಾಕಿ ತೊಳೆದರೆ ಬೆಳ್ಳಿಯ ವಸ್ತುಗಳು ಪಳ ಪಳ ಹೊಳೆಯುತ್ತವೆ.
ಬೆಳ್ಳಿಯ ವಸ್ತುಗಳಿಗೆ ಟೊಮೊಟೊ ಕೇಚಪ್ ಹಾಕಿ ಸುಮಾರು 20 ರಿಂದ 25 ನಿಮಿಷ ಬಿಟ್ಟು ಬ್ರೇಶ್ ಅಲ್ಲಿ ಉಜ್ಜಿದರೆ ಬೆಳ್ಳಿಯ ವಸ್ತುಗಳು ಹೊಳೆಯುತ್ತವೆ.
ಸ್ವಲ್ಪ ಅಡುಗೆ ಸೋಡಾವನ್ನು ಬಿಸಿ ನೀರಿಗೆ ಹಾಕಿ ಅದನ್ನು ಕರಗಿಸಿ ನಂತರ ಬೆಳ್ಳಿಯ ವಸ್ತುಗಳನ್ನು ಅದರಲ್ಲಿ ಮುಳುಗಿಸಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ನೀರಿನಿಂದ ತೆಗೆದು ಮೃದುವಾದ ಬಟ್ಟೆಯಲ್ಲಿ ಬೆಳ್ಳಿಯ ವಸ್ತುಗಳನ್ನು ಒರೆಸಬೇಕು.
ಬೆಳ್ಳಿ ವಸ್ತುಗಳನ್ನು ಸ್ಪಂಜ್ ನಿಂದ ಶುಚಿಗೊಳಿಸಿದ ಬಳಿಕ ಅವುಗಳಿಗೆ ಬೆಳ್ಳಿ ಪಾಲಿಶಿಂಗ್ ಮಾಡುವ ಕ್ರೀಮ್ ಹಾಕಿ. ಮೃದುವಾದ ಬಟ್ಟೆ ಅಥವಾ ಹತ್ತಿಯಿಂದ ಕ್ರೀಮ್ ಹಚ್ಚಿದರೆ ಪಳ ಪಳ ಹೊಳೆಯುತ್ತವೆ.
ರೋಜ್ ವಾಟರ್ ಗೆ ಸ್ವಲ್ಪ ಸಕ್ಕರೆಯನ್ನು ಹಾಕಿ ಅದನ್ನು ಚೆನ್ನಾಗಿ ಕರಗಿಸಬೇಕು. ನಂತರ ಅದನ್ನು ಬೆಳ್ಳಿ ಪಾತ್ರೆಗಳ ಮೇಲೆ ಹಾಕಿ ಉಜ್ಜಿದರೆ ಪಳ ಪಳ ಹೊಳೆಯುತ್ತವೆ.
ನಿಮ್ಮ ಮನೆಯಲ್ಲೂ ಇರುವ ಬೆಳ್ಳಿಯ ಆಭರಣ. ಬೆಳ್ಳಿಯ ಪಾತ್ರೆಗಳನ್ನು ತೊಳೆಯಲು ಇವುಗಳನ್ನು ಬಳಕೆ ಮಾಡಿ. ನಿಮ್ಮ ಬೆಳ್ಳಿ ವಸ್ತುಗಳು ಪಳ ಪಳ ಹೊಳೆಯುತ್ತವೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.