ಮನೆಯಲ್ಲೇ ಸುಲಭವಾಗಿ ಸೋಪ್ ನೀವೇ ತಯಾರಿಸಿ

0
1334

ಮನೆಯಲ್ಲೇ ಸುಲಭವಾಗಿ ಸೋಪ್ ತಯಾರಿಸಿಕೊಳ್ಳಬಹುದು.

ಹಿಂದಿನ ಕಾಲದಲ್ಲಿ ಜನರು ತಮ್ಮ ದೇಹದ ಸ್ವಚ್ಛತೆಗಾಗಿ ಕಡಲೆ ಹಿಟ್ಟು. ಹಾಗೂ ಇನ್ನಿತರ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಆದರೆ ಇಂದಿನ ಜನರು ಹೆಚ್ಚಾಗಿ ಸುಗಂಧ ಬೀರುವ ವಸ್ತುಗಳ ಮೇಲೆ ಮೊರೆ ಹೋಗುತ್ತಾರೆ. ಈ ಸುಗಂಧ ಬೀರುವ ವಸ್ತುಗಳಲ್ಲಿ ಸೋಪು ಕೂಡ ಒಂದಾಗಿದೆ. ಈ ಸೋಪುಗಳು ಹಲವಾರು ರೀತಿಯಲ್ಲಿ ಹಲವಾರು ರೀತಿಯ ಸುಗಂಧವನ್ನು ಬೀರುತ್ತವೆ. ಜನರು ಸಹ ಹೆಚ್ಚು ಸುಗಂಧ ದ

ಕಡೆಗೆ ಹೋಗುತ್ತಾರೆ.

ಎಲ್ಲರೂ ಸಾಮಾನ್ಯವಾಗಿ ಬೆಳಿಗ್ಗೆಯಿಂದ ಮಲಗುವ ತನಕ 4 ರಿಂದ 5 ಬಾರಿ ತಮ್ಮ ಮುಖವನ್ನು ತೊಳೆಯಲು ಸೋಪ್ ಅನ್ನು ಬಳಸುತ್ತಾರೆ. ಎಲ್ಲರೂ ಬಳಸುವ ಸೋಪ್ ಗಳು ಒಂದೊಂದು ರೀತಿಯದು. ಕೆಲವರು ಕಾಲಕ್ಕೆ ತಕ್ಕಂತೆ,ಇನ್ನು ಕೆಲವರು ಸುಂದರವಾದ ಪ್ಯಾಕಿಂಗ್ ನೋಡಿ, ಮತ್ತೆ ಕೆಲವರು ಟಿವಿ ಯಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಸಾಬೂನನ್ನು ಉಪಯೋಗಿಸುತ್ತಾರೆ.

ಆದರೆ ಈ ಸೋಪ್ ಗಳಲ್ಲಿ ಹೆಚ್ಚು ಕೆಮಿಕಲ್. ಹಾಗೂ ಇನ್ನಿತರ ದ್ರಾವಕಗಳನ್ನು ಬಳಸಿ ಮಾಡಿರುತ್ತಾರೆ ಇವುಗಳು ನಮ್ಮ ಚರ್ಮವನ್ನು ಕೆಡಿಸುತ್ತದೆ.ಜೊತೆಗೆ ಸಾಬೂನುಗಳಿಗೆ ಅಧಿಕ ಹಣ ನೀಡಿ ಸಾಬೂನನ್ನು ಅಂಗಡಿಗಳಲ್ಲಿ ಕೊಂಡುಕೊಳ್ಳುವ ಬದಲು.ನೈಸರ್ಗಿಕವಾಗಿ ನಾವೇ ಮನೆಯಲ್ಲಿ ತಯಾರಿಸಿ ಉಪಯೋಗಿಸಿದರೆ,ಹಣದ ಉಳಿತಾಯವೂ ಆಗುತ್ತದೆ ಮತ್ತು ಹಲವು ರಾಸಾಯನಿಕಗಳನ್ನು ಉಪಯೋಗಿಸಿ ಮಾಡಿರಬಹುದಾದ ಸಾಬೂನುಗಳಿಂದ ದೂರವಿದ್ದು ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಹಾಗಾದರೆ ಹೇಗೆ ಸೋಪ್ ತಯಾರಿಸಬಹುದು ನೋಡೋಣ..
ಬೇಕಾಗುವ ಸಾಮಗ್ರಿಗಳು.
ಸೋಪು
ಲೋಳೆಸರ ತಿರುಳು.
ಕಾಸ್ಟಿಕ್ ಸೋಡ.
ಆಲೀವ್ ಎಣ್ಣೆ
ಶುದ್ಧ ನೀರು
ಪರಿಮಳ ಎಣ್ಣೆ

ತಯಾರಿಸುವ ವಿಧಾನ. ಚಾಕು ಅಥವ ಚಮಚದ ಸಹಾಯದಿಂದ ಲೋಳೆಸರದ ತಿರುಳನ್ನು ಬೇರ್ಪಡಿಸಿ ,ಮಿಕ್ಸಿಯಲ್ಲಿ ಹಾಕಿ ಜೆಲ್ ರೂಪ ಬರುವವರೆಗೂ ರುಬ್ಬಿಕೊಳ್ಳಬೇಕು.

ನೀರನ್ನು ಬಿಸಿಮಾಡಿ ಪ್ಲಾಸ್ಟಿಕ್ ಬೇಸಿನ್ ಗೆ ಹಾಕಿ. ಇದಕ್ಕೆ ಕಾಸ್ಟಿಕ್ ಸೋಡಾ ಬೆರೆಸಿ ಚೆನ್ನಾಗಿಮಿಶ್ರಣಮಾಡಿ ಕೊಳ್ಳಬೇಕು.
ನಂತರ ಈ ಮಿಶ್ರಣವನ್ನು ಚೆನ್ನಾಗಿ ತಣ್ಣಗಾಗಲು ಬಿಡಬೇಕು.

ನಂತರ ಆಲೀವ್ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿಕೊಳ್ಳಿ.ಕಾಸ್ಟಿಕ್ ಸೋಡಾ ಬೆರೆಸಿದ ನೀರಿಗೆ ಆಲೀವ್ ಎಣ್ಣೆಯನ್ನು ಸೇರಿಸಿ,ದಪ್ಪವಾಗುವವರೆಗೂ ಚೆನ್ನಾಗಿ ಕಲೆಸಿ. ನಂತರ ಲೋಳೆಸರ ಹಾಕಿ ಕಲೆಸಬೇಕು.

ಸೋಪಿನ ಸುವಾಸನೆಗಾಗಿ ಲ್ಯಾವೆಂಡರ್ ಆಯಿಲ್,ರೋಜ್ ವಾಟರ್ ಸೇರಿಸಿ. ಈ ರೀತಿ ತಯಾರಾದ ಮಿಶ್ರಣವನ್ನು ಆಳ ಕಡಿಮೆಯಿರುವ ತಟ್ಟೆಗೆ ಸುರಿಯಿರಿ. ಒಂದು ದಿನದವರೆಗೂ ಆರಲು ಬಿಡಿ. ನಂತರ ಘನರೂಪದಲ್ಲಿರುವ ಅಲೋವೆರ ಸೋಪ್ ನ್ನು ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಳ್ಳಬೇಕು.

15 ರಿಂದ 30 ದಿನಗಳಲ್ಲಿ ಗಟ್ಟಿಯಾದ ನಂತರ ಉಪಯೋಗಿಸಬಹುದು..

ಈ ರೀತಿಯ ವಿಧಾನಗಳನ್ನು ಬಳಸಿ ನಿಮ್ಮ ಸೋಪನ್ನ ನೀವೇ ತಯಾರಿಸಿಕೊಳ್ಳಬಹುದು. ಇಂತಹಾ ಸಾಬೂನು ತಯಾರಿಕೆಯಿಂದ ಸ್ವಚ್ಛತೆಯೊಂದಿಗೆ ಆರೋಗ್ಯಕರ ಸಾಬೂನನ್ನ ನಿಮ್ಮದಾಗಿಸಿ ಕೊಳ್ಳಬಹುದು.  ಹಾಗಾಗಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here