ಈ ಲಕ್ಷಣಗಳು ನಿಮಗೆ ಇದ್ರೆ ಅದು ಕ್ಯಾನ್ಸರ್ ಆಗಿರಬಹುದು ತಿಳಿದುಕೊಳ್ಳಿ

0
1994

ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವ ಸಂಬಂಧಿಸಿದ ಅನೇಕ ರೋಗಗಳ ಗುಂಪು. ಕ್ಯಾನ್ಸರ್‌ ಎಂಬುದು ನಮ್ಮ ಶರೀರದಲ್ಲಿ ಆರಂಭವಾಗಿ ಶರೀರದಲ್ಲಿಯೇ ಕೊನೆಗೊಳ್ಳುವ ಒಂದು ಕಾಯಿಲೆ. ಈ ಕಾಯಿಲೆಯು ಸಂಪೂರ್ಣವಾಗಿ ಗುಣವಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್‌ ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ.

ಕ್ಯಾನ್ಸರ್‌ ಉಂಟು ಮಾಡುವ ಕಾರಕಗಳಾದ ವೈರಸ್‌ಗಳು, ತಂಬಾಕು, ಮದ್ಯಪಾನ, ರಾಸಾಯನಿಕಗಳು ನಮ್ಮ ಶರೀರದಲ್ಲಿ ಕ್ಯಾನ್ಸರ್‌ ಮ್ಯುಟೇಶನ್‌ ಅನ್ನು ಉತ್ತೇಜಿಸುವ ಅಂಶಗಳು. ಕೆಲವು ರೀತಿಯ ಮ್ಯುಟೇಷನ್‌ಗಳನ್ನು ದಾಟಿಸುವಲ್ಲಿ ಆನುವಂಶಿಕತೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ, ಇದು ಹಲವಾರು ಪೀಳಿಗೆಗಳಿಂದ ಸಾಗುತ್ತ ಬರಬಹುದು ಮತ್ತು ಕೆಲವು ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಲು ಇದೂ ಸಹ ಕಾರಣ ಆಗಬಹುದು.

ಯಾವುದಾದರೂ ಅಂಗದ ಜೀವಕೋಶಗಳು, ಅಥವಾ ಅಂಗಾಂಶಗಳು ಅಥವಾ ಕಣಗಳು ಮಿತಿಮೀರಿ ಬೆಳೆದರೆ ಇದು ಅನಗತ್ಯವಾದ ಗಡ್ಡೆಯಾಗಿ ಬೆಳೆಯುತ್ತದೆ. ಇದು ಯಾವ ಅಂಗ, ಅಂಗಾಂಶ ಅಥವಾ ಕಣಗಳ ಬೆಳವಣಿಗೆಗೆ ಕಾರಣವಾಗುತ್ತದೆಯೋ ಅದೇ ಅಂಗದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಸ್ತನ ಕ್ಯಾನ್ಸರ್, ಕರುಳು ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟ್ರೇಟ್ ಕ್ಯಾನ್ಸರ್ ಇತ್ಯಾದಿಗಳು.

ಹಾಗಾದರೆ ಈ ಕ್ಯಾನ್ಸರ್ ನ ಲಕ್ಷಣಗಳನ್ನು ತಿಳಿದುಕೊಳ್ಳೋಣ ಬನ್ನಿ…..

ಆಹಾರವು ಸರಿಯಾಗಿ ಜೀರ್ಣವಾಗದೆ ಜೀರ್ಣಕೋಶದಲ್ಲಿ ರಕ್ತಸ್ರಾವವಾಗುತ್ತದೆ. ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸುತ್ತದೆ. ಯಾವುದೇ ರೀತಿಯ ಆಹಾರವನ್ನು ಸೇವಿಸಲು ಆಗುವುದಿಲ್ಲ. ಕರುಳಿನ ಚಲನೆ ಸರಿಯಾಗಿ ಇಲ್ಲದಿರುವಂತಹ ಸಮಸ್ಯೆಗಳು ಕ್ಯಾನ್ಸರ್‌ನ ಲಕ್ಷಣಗಳು.

ನೀವು ಯಾವುದೇ ರೀತಿಯ ಕಾರಣಗಳು ಇಲ್ಲದೆ ತಮ್ಮ ತೂಕ ಕಡಿಮೆಯಾಗುತ್ತಿದ್ದರೆ ನೀವು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೀರಿ ಎಂದು ಗುರುತಿಸಬೇಕು.

ನಿಮ್ಮ ಚರ್ಮದ ಮೇಲೆ ತುರಿಕೆಗಳು ಹೆಚ್ಚುತ್ತಿದ್ದರೆ ಜೊತೆಗೆ ನಿಮ್ಮ ಚರ್ಮದ ಮೇಲೆ ಇರುವ ಮಚ್ಚೆಗಳು. ಗುಳ್ಳೆಗಳ. ಮೇಲೆ ಬದಲಾವಣೆ ಆಗುತ್ತಿದ್ದರೆ. ಅದನ್ನು ಕ್ಯಾನ್ಸರ್ ನ ಲಕ್ಷಣಗಳು ಎಂದು ತಿಳಿಯಬಹುದು. ಯಾಕೆಂದರೆ ಕ್ಯಾನ್ಸರ್ ಇದ್ದರೆ ಚರ್ಮದ ಮೇಲೆ ಇರುವ ಮಚ್ಚೆಗಳು. ಗುಳ್ಳೆಗಳಲ್ಲಿ ಬಣ್ಣ, ಹಾಗೂ ಇನ್ನಿತರೆ ಬದಲಾವಣೆಗಳು ಆಗುತ್ತಿರುತ್ತವೆ.  ದೇಹದಲ್ಲಿ ಎಲ್ಲಾದರೂ ಅಸಹಜವಾಗಿ ಗಡ್ಡೆಗಳು ಕಾಣಿಸಿದರೆ ಅವನ್ನು ಚೆಕ್ ಮಾಡಿಸಿಕೊಳ್ಳಬೇಕು. ಅವು ಕ್ಯಾನ್ಸರ್ ಗಡ್ಡೆಗಳು ಆಗಿರಬಹುದು.

ಕೆಲವು ಸಲ ಕೊಬ್ಬಿನ ಗಡ್ಡೆಗಳು ಸಹ ಉಂಟಾಗುತ್ತವೆ. ಅವುಗಳಿಂದ ತೊಂದರೆ ಏನೂ ಇಲ್ಲ. ಆದರೆ ಕ್ಯಾನ್ಸರ್ ಗಡ್ಡೆಗಳಾದರೆ ಮಾತ್ರ ಎಚ್ಚರ ವಹಿಸಬೇಕು. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ದೇಹದ ನಿರ್ದಿಷ್ಟ ಭಾಗಗಳಲ್ಲಿ ವಿಪರೀತ ನೋವು ಇರುತ್ತದೆ. ಉದಾಹರಣೆಗೆ ಬೋನ್ ಕ್ಯಾನ್ಸರ್ ನೋಡುವುದಾದರೆ ಮೂಳೆಗಳ ನೋವು ಉಂಟಾಗುತ್ತದೆ.

ವಾರಗಳು. ತಿಂಗಳುಗಳಿಗಿಂತ ಹೆಚ್ಚು ಸಮಯ ಕೆಮ್ಮ ಕಂಡು ಬಂದರೆ ಅದು ಶ್ವಾಸಕೋಶದ ಕ್ಯಾನ್ಸರ್ ಆಗಿರಬಹುದು. ಆದಕಾರಣ ಒಮ್ಮೆ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.

ಸೇವಿಸಿದ ಆಹಾರ ಜೀರ್ಣವಾಗದಿದ್ದರೂ ಅಥವಾ ಆಹಾರವನ್ನು ನುಂಗುವಾಗ ಗಂಟಲಲ್ಲಿ ಉರಿಯಾದರೂ ಅದನ್ನು ಕ್ಯಾನ್ಸರ್ ಎಂದು ಅನುಮಾನಿಸಬೇಕು. ಕ್ಯಾನ್ಸಾರ್ ಕಣಗಳು ಗಂಟಲಲ್ಲಿ ಉರಿ ಉಂಟು ಮಾಡುತ್ತವೆ.

ಮಲದಲ್ಲಿ ರಕ್ತ, ಕಫದಲ್ಲಿ ರಕ್ತ, ಕೆಮ್ಮುವಾಗ ರಕ್ತ ಬರುವುದು ಮತ್ತು ರಕ್ತಸ್ರಾವವಾಗುವುದು ಕೆಲವು ವಿಧದ ಕ್ಯಾನ್ಸರ್ ನ ಲಕ್ಷಣವಾಗಿರುತ್ತದೆ.

ಅಸಾಮಾನ್ಯ ಕೂದಲು ಬೆಳವಣಿಗೆಯು ಕ್ಯಾನ್ಸರ್ ನ ಲಕ್ಷಣವಾಗಿದೆ. ಆದರೆ ಕೆಲವು ಸಲ ಇದು ಯಾವುದೇ ರೀತಿಯ ಲಕ್ಷಣವಾಗದೇ ಇರಬಹುದು. ಅಸಾಮಾನ್ಯ ಕೂದಲು ಬೆಳೆಯುತ್ತಾ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ನಿಯಮಿತವಾಗಿ ಜ್ವರ ಬರುವುದು ಕೂಡ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದೆ. ಪದೇ ಪದೇ ನೀವು ಮೂತ್ರ ಮಾಡಲು ಹೋಗುತ್ತಾ ಇದ್ದರೆ ಅಥವಾ ಮೂತ್ರ ಮಾಡುವಾಗ ತೊಂದರೆಯಾಗುತ್ತಿದ್ದರೆ ಇದು ಕ್ಯಾನ್ಸರ್ ನ ಲಕ್ಷಣವಾಗಿದೆ.

ಒಟ್ಟಾರೆ ಈ ಮೇಲಿನ ಎಲ್ಲಾ ಲಕ್ಷಣಗಳು ಕ್ಯಾನ್ಸರ್ ನ ಲಕ್ಷಣಗಳಾಗಿವೇ ಅಗಾಗಿ ನಿಮ್ಮಲ್ಲಿ ಇವುಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ ದಯವಿಟ್ಟು ಕೊಡಲೇ ವೈದ್ಯರ ಸಂಪರ್ಕ ಮಾಡಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here