ಭಾರತದ ಏಕೈಕ ಶಕ್ತಿಶಾಲಿ ಗರುಡ ದೇವರು ಇರೋದು ಕರ್ನಾಟಕದಲ್ಲಿ ಮಾತ್ರ

0
1129

ಸೀತೆಯ ರಕ್ಷಣೆಗೆಂದು ಬಂದ ಜಟಾಯು ಪಕ್ಷಿಯನ್ನು ರಾವಣ ಕೊಲ್ಲಲ್ಪಟ್ಟ ಸ್ಥಳವೇ. ಕನ್ನಡ ನಾಡಿನಲ್ಲಿ ಇರುವ ಏಕೈಕ ಗರುಡ ದೇವಾಲಯ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ವಿಶ್ವದಲ್ಲೆ ಏಕೈಕ ದೇವಸ್ಥಾನ ಇದಾಗಿದ್ದು, ಪುರಾಣಗಳ ಪ್ರಕಾರ ಮಹಾಭಾರತದ ವೇಳೆ ಅರ್ಜುನನಿಂದ ಇಲ್ಲಿ ಶ್ರೀ ಗರುಡ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬ ಕಥೆ ಇದೆ.

ಗ್ರಾಮ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆ ಹೊಂದಿರುವ ಸ್ಥಳವಾಗಿದೆ. ಹಲವು ಶತಮಾನಗಳ ಹಿಂದೆ ಬೃಗ ಮಹಾಋಷಿಗಳಿಂದ ಈ ಪ್ರದೇಶಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಈ ದೇವಾಲಯ ಸಾವಿರ ವರ್ಷಗಳ ಹಿಂದೆಯೇ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ವಿಷ್ಣು ವರ ಕೊಟ್ಟು ಭೂ ಲೋಕಕ್ಕೆ ಹೋಗು ಎಂದಾಗ ಹನುಮನು ಇಲ್ಲಿ ಬಂದು ನೆಲೆಸಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುತ್ತದೆ.

ಪುರಾಣದಲ್ಲಿ ಈ ದೇಗುಲದ ಬಗ್ಗೆ ಹೇಳಿರುವುದು ಏನೆಂದರೆ. ಛಲವಂತ ರಾವಣ ಸೀತೆಯನ್ನು ಅಪಹರಿಸಿದ ವೇಳೆ ವಿಷ್ಣುವಿನ ವಾಹನ ಜಟಾಯು ಪಕ್ಷಿ ಸೀತೆಯನ್ನು ಕಾಪಾಡಲು ಮುಂದಾದಾಗ ರಾವಣ ಜಟಾಯುವಿನ ಎರಡು ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಾನೆ. ಆ ಎರಡು ರೆಕ್ಕೆಗಳು ಈ ಭಾಗದಲ್ಲಿ ಬಿದ್ದವು ಎನ್ನುವುದು ಇತಿಹಾಸ. ಹಾಗಾಗಿಯೇ ರಾವಣನಿಂದ ಗರುಡ ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಇನ್ನೂ ಜಟಾಯು ಬಿದ್ದ ಸ್ಥಳದಲ್ಲೇ ಹನುಮನು ಬಂದು ನೆಲೆಸಿದ್ದಾನೆ ಎನ್ನಲಾಗುತ್ತದೆ.

ಇಲ್ಲಿರುವ ಆಂಜನೇಯ ಹಲ್ಲು ಹಾಗೂ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ಹೊಂದಿದ್ದಾನೆ. ಗರುಡ ದೇವರ ದರ್ಶನ ಮಾಡಿದರೆ ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಗರುಡ ಪುರಾಣಗಳಲ್ಲಿ ಕಂಡುಬರುತ್ತದೆ.

ಈ ಗರುಡ ದೇವರನ್ನು ದರ್ಶನ ಮಾಡಿದ್ರೆ ಹಲವು ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯ ಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗುತ್ತವೆ. ವಾಮಾಚಾರ, ಮಾಟ-ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ.

ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾನೆ ಎಂಬ ಪ್ರತೀತಿ ಸಹ ಇಲ್ಲಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮಕ್ಕೆ ಹೋಗುವ ಮಾರ್ಗ. ಮುಳಬಾಗಿಳಿಂದ ಈ ಗ್ರಾಮಕ್ಕೆ 14 ಕಿಲೋಮೀಟರ್ ಇದೆ. ಕೋಲಾರ ಹೋಗಿ ಅಲ್ಲಿಂದ ಮೂಡಿಯನೂರು ಕ್ರಾಸ್ ಹೋಗಿ ಕೋಲದೇವಿ ಗ್ರಾಮಕ್ಕೆ ಹೋಗಬಹುದು.

ನಿಮಗೆ ಜೀವನದಲ್ಲಿ ಬರುವ ಎಲ್ಲ ಕಷ್ಟಗಳಿಗೆ ಒಮ್ಮೆ ಭೇಟಿ ಕೊಟ್ಟು ದೇವರ ಆಶಿರ್ವಾದ ಪಡೆಯಿರಿ ಎಲ್ಲವು ಸರಿ ಹೋಗುತ್ತೆ

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here