ಮನೆಯಲ್ಲಿ ಎಲ್ಲರಿಗೂ ಒಂದು ಪ್ರತ್ಯೇಕ ಕೊಠಡಿಗಳು ಇರುತ್ತವೆ. ಆ ಕೊಠಡಿಯ ವಿನ್ಯಾಸದಲ್ಲಿ ಆಗುವ ತಪ್ಪುಗಳು ಯಾವುವು? ಮನೆಯಲ್ಲಿ ಇರುವ ಜನರಿಗೆ ಅವರದೇ ಎಂದು ಪ್ರತ್ಯೇಕ ಕೊಠಡಿಗಳು ಇರುತ್ತವೆ.ಅವುಗಳನ್ನು ಅವರು ಇಷ್ಟ ಬರುವ ರೀತಿಯಲ್ಲಿ ವಿನ್ಯಾಸ ಪಡಿಸಿಕೊಂಡಿರುತ್ತಾರೆ. ಹಾಗೆಯೇ ಎಲ್ಲರಿಗೂ ತಮ್ಮ ಕೊಠಡಿಗಳು ತುಂಬಾ ಸುಂದರವಾಗಿ ಕಾಣಬೇಕು ಎಂದು ವಿಧವಿಧವಾದ ರೀತಿಯಲ್ಲಿ ವಿನ್ಯಾಸ ಪಡಿಸಿಕೊಂಡಿರುತ್ತಾರೆ.
ಜೊತೆಗೆ ಮನೆಯನ್ನು ಕಟ್ಟಿಸುವಾಗ ಮನೆಯ ಪ್ಲ್ಯಾನಿಂಗ್ ಸಿದ್ಧಗೊಳಿಸುವಾಗ ಹೆಚ್ಚಿನ ಪ್ರಾಮುಖ್ಯತೆಯನ್ನು ತಮ್ಮ ಬೆಡ್ ರೋಮ್ ಗಳಿಗೆ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೆಡ್ ರೂಮ್ ಗಳು ಕಂಪ್ಯೂಟರ್, ರೀಡಿಂಗ್ ರೂಂ, ವರ್ಕಿಂಗ್ ಮತ್ತು ಡ್ರೆಡಿಂಗ್ ರೂಂ ಕೂಡ ಆಗಿರುವುದರಿಂದ ಬೆಡ್ ರೂಮಿನ ವಿನ್ಯಾಸದಲ್ಲಿ ಹೆಚ್ಚು ಕಾಳಜಿವಹಿಸುತ್ತಾರೆ.
ಆದರೆ ಎಷ್ಟೇ ಕಾಳಜಿ ವಹಿಸಿ ವಿನ್ಯಾಸ ಮಾಡಿಸಿಕೊಂಡಿದ್ದರು ಕೆಲವು ತಪ್ಪುಗಳು ಆಗಿರುತ್ತವೆ.ಹಾಗಾದರೆ ಹೆಚ್ಚಾಗಿ ಎಲ್ಲರೂ ಸಾಮಾನ್ಯವಾಗಿ ತಮ್ಮ ಬೆಡ್ ರೂಮ್ ವಿನ್ಯಾಸದಲ್ಲಿ ಮಾಡುವ ಕೆಲವು ತಪ್ಪುಗಳನ್ನು ನೋಡೋಣ …
ಎಲ್ಲರೂ ಬೆಡ್ ರೂಮ್ ನಲ್ಲಿ ಮೊದಲು ಮಾನ್ಯತೆ ಕೊಡುವುದು ಮಂಚ ಇಡುವ ಸ್ಥಳವನ್ನು. ಎಲ್ಲರೂ ತಮ್ಮ ಕೋಣೆಯ ಮೂಲೆಯಲ್ಲಿ ಅಥವಾ ಕಬೋರ್ಡ್ ಗಳ ಬಳಿ ಮಂಚವನ್ನು ಇಡುತ್ತಾರೆ.ಹೀಗೆ ಇಟ್ಟರೆ ನಾವು ಕಬೋರ್ಡ್ ತೆಗೆಯಲು ಕಷ್ಟವಾಗುತ್ತದೆ. ಹಾಗೂ ಬಟ್ಟೆಗಳೆಲ್ಲವನ್ನು ಹರಡಿಕೊಂಡಿರುತ್ತೇವೆ.ಇದು ರೂಮ್ ನ ವಿನ್ಯಾಸವನ್ನೇ ಕೆಡಿಸುತ್ತದೆ.ಹಾಗಾಗಿ ಯಾವಾಗಲೂ ಮಂಚವನ್ನು ರೂಮ್ ನ ಮಧ್ಯ ಭಾಗದಲ್ಲಿ ಇಡಬೇಕು. ಇದು ತಮ್ಮ ರೂಮ್ ನ ಅಲಂಕಾರವನ್ನು ಹೆಚ್ಚಿಸುತ್ತದೆ ಜೊತೆಗೆ ಓಡಾಡಲು ಫ್ರೀ ಆಗಿ ಇರುತ್ತದೆ.ಮಂಚವನ್ನು ಹತ್ತಲು ಸುಲಭವಾಗಿರುತ್ತದೆ.
ಪ್ರತೇಕ ಕೊಠಡಿ ಎಂದಮೇಲೆ ಅಲ್ಲಿ ಅವರ ಸೌಂದರ್ಯವನ್ನು ನೋಡಿಕೊಳ್ಳಲು ಅವರು ಅಲಂಕಾರ ಮಾಡಿಕೊಳ್ಳಲು ಡ್ರೆಸಿಂಗ್ ಟೇಬಲ್ ಗಳು ಇರಬೇಕು. ಆದರೆ ಈ ಡ್ರೆಸ್ಸಿಂಗ್ ಟೇಬಲ್ಗಳು ಯಾವ ಜಾಗದಲ್ಲಿ ಇದ್ದರೆ ಒಳ್ಳೆಯದು ಎಂದು ನೋಡಿದರೆ.
ವಾಸ್ತು ಪ್ರಕಾರ ಹೇಳುವಂತೆ ನಾವು ಮಲಗಿ ಎದ್ದ ತಕ್ಷಣ ನಮ್ಮ ಮುಖಗಳು ಕನ್ನಡಿಯಲ್ಲಿ ಕಾಣಬಾರದು. ಜೊತೆಗೆ ಎದ್ದ ತಕ್ಷಣ ಕನ್ನಡಿ ಕಾಣುವಂತೆ ಇರಬಾರದು.
ಜೊತೆಗೆ ಇದು ಬೆಡ್ ಪಕ್ಕದಲ್ಲಿ ಇದ್ದರೆ ಪೌಡರ್, ಪರ್ಫ್ಯೂಮ್, ಕೂದಲು, ಕಾಸ್ಮೆಟಿಕ್ ಕಲೆಗಳು ಬೆಡ್ ಮೇಲೆ ಬೀಳುತ್ತವೇ ಅವು ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಡ್ರೆಸಿಂಗ್ ಟೇಬಲನ್ನು ಮಂಚದ ಬಲ ಅಥವಾ ಎಡಗಡೆ ಇಟ್ಟರೆ ಒಳ್ಳೆಯದು.
ಬೆಡ್ ರೂಮ್ ನ ವಿನ್ಯಾಸಕ್ಕೆ ಎಂದು ಇತ್ತೀಚಿನ ದಿನಗಳಲ್ಲಿ ವಿಧವಿದವಾದ ಲೈಟ್ ಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ ಇವುಗಳ ಸ್ವಿಚ್ ಬೋರ್ಡ್ಗಳು ಸಾಮಾನ್ಯವಾಗಿ ರೂಮ್ ನ ಬಾಗಿಲ ಹತ್ತಿರ ಇಲ್ಲವೋ ಇನ್ನು ಬೇರೆ ಕಡೆ ಹಾಕಿಕೊಂಡಿರುತ್ತಾರೆ. ಇದು ಲೈಟ್ ಆನ್ ಆಫ್ ಮಾಡೋದಿಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಲೈಟ್ ಸ್ವಿಚ್ ಗಳನ್ನು ನಮ್ಮ ಬೆಡ್ ಪಕ್ಕದಲ್ಲಿ ಅಥವಾ ಡಬಲ್ ಸ್ವಿಚ್ ಹಾಕಿಕೊಂಡರೆ ಒಳ್ಳೆಯದು.
ನಿಮ್ಮ ಬೆಡ್ ರೂಮ್ ಚೆನ್ನಾಗಿ ಕಾಣಬೇಕು ಎಂದು ತುಂಬಾ ಒಳಪು ನೀಡುವ ಬಲ್ಪ್ ಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಇದು ಒಂದು ರೀತಿಯಲ್ಲಿ ಮಂಜು ಬರಿಸುತ್ತದೆ ಹಾಗಾಗಿ ಯಾವಾಗಲೂ ಬೆಡ್ ರೂಮ್ ಗಳಲ್ಲಿ ರೊಮ್ಯಾಂಟಿಕ್ ಆಗಿ ಕಾಣುವ ಬಲ್ಪ್ ಗಳನ್ನು ಹಾಕಿಕೊಳ್ಳಿ. ಜೊತೆಗೆ ನಿಮ್ಮ ರೂಮ್ ಸ್ಟೇಡಿ ರೂಮ್ ಆಗಿದ್ದರೆ ಪ್ರತ್ಯೇಕ ಸ್ಟ್ಯಾಂಡಿಂಗ್ ಲೈಟ್ ಗಳನ್ನು ಬಳಸಿ.
ಬೆಡ್ ರೂಮ್ ನ ನೆಲಕ್ಕೆಂದು ಹಲವು ರೀತಿಯ ಫ್ಲೋರಿಂಗ್ ಇರುತ್ತದೆ. ಮಾರ್ಬಲ್, ಗ್ರಾನೈಟ್ ಫ್ಲೋರಿಂಗ್ ಬೇಸಿಗೆ ಕಾಲಕ್ಕೆ ಸೂಕ್ತ. ಮರ ಮತ್ತು ಗಾಜಿನಂತಹ ಟೈಲ್ಸ್ ಚಳಿಗಾಲಕ್ಕೆ ಸೂಕ್ತ. ಆದರೆ ಆಯ್ಕೆ ನಿಮಗೇ ಸೇರಿದ್ದು. ಒಳ್ಳೆಯ ವಿನ್ಯಾಸ, ಬಾಳಿಕೆ ಬರುವಂತಹ, ನಿಮ್ಮ ಅಭಿರುಚಿಗೆ ತಕ್ಕಂತಹ ಫ್ಲೋರಿಂಗ್ ಅನುಸರಿಸುವುದು ಒಳ್ಳೆಯದು. ಇನ್ನೂ ಚೆನ್ನಾಗಿ ಕಾಣಬೇಕೆಂದಿದ್ದರೆ ಕಾರ್ಪೆಟ್, ಮ್ಯಾಟ್ ಗಳನ್ನು ಹಾಕಿಕೊಂಡು ಸಿಂಗಾರಿಸಿಕೊಳ್ಳಬಹುದು. ನಿಮ್ಮ ಬೆಡ್ ರೂಮ್ ಗೆ ಉತ್ತಮವಾಗಿ ಗಾಳಿ. ಬೆಳಕು ಬರುವ ರೀತಿಯಲ್ಲಿ ಇರಬೇಕು. ಬೆಳಗಿನ ಜಾವಾದಲ್ಲೂ ಕತ್ತಲೆಯಿಂದ ಕೂಡಿರಬಾರದು.
ನಿಮ್ಮ ಬೆಡ್ ರೂಮ್ ಗಳಲ್ಲಿ ಪ್ರತ್ಯೇಕ ಸ್ನಾನದ ಗೃಹ ಇರುವಂತೆ ನೋಡಿಕೊಳ್ಳಿ. ಕೆಲವರು ಎಲ್ಲ ರೀತಿಯ ವಿನ್ಯಾಸ ಮಾಡಿಸಿ ಕೊನೆಗೆ ತಮ್ಮ ರೂಮ್ ನಿಂದ ಬಾತ್ರುಮ್ ಗೆ ಹೊರಗಡೆ ಹೋಗುವ ರೀತಿಯಲ್ಲಿ ಮಾಡಿಕೊಂಡಿರುತ್ತಾರೆ. ಈ ರೀತಿ ಮಾಡಿಕೊಳ್ಳದೆ ರೂಮ್ ನ ಒಳಗೆ ಬಾತ್ರುಮ್ ಮಾಡಿಸಿಕೊಳ್ಳಿ.
ಕೆಲವರು ರೂಮ್ ನಲ್ಲಿ ಹೆಚ್ಚು ಜಾಗವಿದೆ ಎಂದು ಎಲ್ಲ ಸಾಮಾನುಗಳನ್ನು ತಂದು ರೂಮ್ ನಲ್ಲಿ ಇಡುತ್ತಾರೆ. ಇದು ರೂಮ್ ನ ಚಂದವನ್ನೇ ಕೆಡಿಸುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ರೂಮ್ ನಲ್ಲಿ ಹೆಚ್ಚು ಸಾಮಾನು ತುಂಬಿಕೊಂಡು ದೊಡ್ಡಿಯ ರೀತಿ ಮಾಡಿಕೊಳ್ಳಬೇಡಿ.
ನೀವು ನಿಮ್ಮ ಪ್ರತ್ಯೇಕ ಕೊಠಡಿಯಲ್ಲಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಎಚ್ಚರವಹಿಸಿ ರೂಮ್ ನ ಅಂದ. ವಿನ್ಯಾಸ ಕಾಪಾಡಿಕೊಳ್ಳಿ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.