ಎಲ್ಲರಿಗೂ ಅದರಲ್ಲು ಮಹಿಳೆಯರ ಅಂದವನ್ನು ಹೆಚ್ಚಿಸುವಲ್ಲಿ ತಮ್ಮ ಕೂದಲು ಸಹ ಒಂದು ಪ್ರಮುಖ ಅಂಶವಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರ ಸಾಮಾನ್ಯ ಸಮಸ್ಯೆ ಎಂದರೆ ಕೂದಲು ಉದುರುವುದು. ಇದಕ್ಕೆ ಕಾರಣ ಕೂದಲ ಆರೈಕೆ ಸರಿಯಾಗಿ ಇಲ್ಲದೆ ಇರುವುದು, ನಿಮ್ಮ ಆಹಾರದಲ್ಲಿ ಪ್ರೋಟೀನ್ ವಿಟಮಿನ್ ಕೊರತೆ ಇರಬಹುದು, ಪರಿಸರದ ಮಾಲಿನ್ಯವಾಗಿರಬಹುದು, ಇವುಗಳಿಂದ ತಲೆ ಹೊಟ್ಟು, ಕೂದಲು ದುರ್ಬಲಗೊಳ್ಳುವುದು, ಉದುರುವುದು, ಹೊಸ ಕೂದಲು ಹುಟ್ಟದೆ ಇರುವುದು ಸಹ ಇರಬಹುದು.
ಆದರೆ ಇಂದು ಈ ಸಮಸ್ಯೆಗಳಿಗೆ ಪರಿಹರವೆಂದು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ರೀತಿಯ ಕೆಮಿಕಲ್ ಮಿಶ್ರಣ ಸಾಂಪು. ಅಯಿಲ್. ಗಳನ್ನು ಬಳಸುತ್ತಾರೆ. ಇದರಿಂದ ತಮ್ಮ ಕೂದಲು ಇನ್ನು ಹಾಳಾಗುತ್ತದೆ. ಇದರಿಂದ ಇನ್ನು ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ಇದಕ್ಕೆಲ್ಲಾ ಸುಲಭವಾಗಿ. ನೈಸರ್ಗಿಕವಾಗಿ ಮನೆಯಲ್ಲೇ
ಪರಿಹಾರವನ್ನು ಮಾಡಿಕೊಳ್ಳಬಹುದು.
ಹಾಗಾದರೆ ಅದು ಏನು ಎಂದು ತಿಳಿದುಕೊಳ್ಳೋಣ ಬನ್ನಿ…
ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬೀಜವು ಒಂದು ಮನೆಮದ್ದಗಿದೆ.ಇದನ್ನು ಹೇಗೆ ಉಪಯೋಗಿಸುವುದು ನೋಡೋಣ..
ಬೇಕಾಗಿರುವ ಸಾಮಗ್ರಿಗಳು.
ಈರುಳ್ಳಿ ಬೀಜಗಳು.ಮೆಂತ್ಯೆ ಬೀಜ. ಕೊಬ್ಬರಿ ಎಣ್ಣೆ. ಹರಳೆಣ್ಣೆ.
ತಯಾರಿಸುವ ವಿಧಾನ.
ಮೊದಳು ಈರುಳ್ಳಿ ಬೀಜ ಮತ್ತು ಮೆಂತ್ಯ ಬೀಜವನ್ನು ಬೇರೆ ಬೇರೆಯಾಗಿ. ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು.
ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಪುಡಿ ಮಾಡಿದ ಬೀಜಗಳನ್ನೂ ಹಾಕಿ 10 ರಿಂದ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು.
ನಂತರ 8 ಗಂಟೆಗಳ ಕಾಲ ಹಾಗೆ ಅದನ್ನು ಇಟ್ಟು ನಂತರ ಇದನ್ನು ಶೋದಿಸಿ ಒಂದು ಬಾಟಲಿನಲ್ಲಿ ಶೇಖರಿಸಿಟ್ಟುಕೊಳ್ಳಬೇಕು.
ಈ ಎಣ್ಣೆಯನ್ನು ವಾರದಲ್ಲಿ 2 ರಿಂದ ಮೂರು ಬಾರಿ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.
ಎಣ್ಣೆಯನ್ನು ಹಚ್ಚಿಕೊಂಡು ಒಂದು ರಾತ್ರಿ ಪೂರ್ತಿ ಬಿಟ್ಟು ನಂತರ ತಲೆ ಸ್ನಾನ ಮಾಡಿಕೊಂಡರೆ ಒಳ್ಳೆಯದು.
ಒಂದು ರಾತ್ರಿ ಇರಲು ಸಾಧ್ಯವಾಗದಿದ್ದರೆ.ತಲೆಗೆ ಎಣ್ಣೆ ಹಚ್ಚಿ 5 ರಿಂದ 6 ಗಂಟೆಗಳ ಸಮಯ ಬಿಟ್ಟು ತೊಳೆಯಬಹುದು.
ಈ ಎಣ್ಣೆ ಹೇಗೆ ಉಪಯೋಗವಾಗುತ್ತದೆ ಎಂದರೆ.
ಈರುಳ್ಳಿ ಬೀಜದಲ್ಲಿ ವಿಟಮಿನ್, ಪ್ರೋಟಿನ್, ಪಾಲಿಕ್ ಆಸಿಡ್ಸ್, ಕಬ್ಬಿಣಾಂಶ, ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಿ, ಉದ್ದವಾಗಿ ಬೆಳೆಯಲು ಹಾಗು ಹೊಸ ಕೂದಲು ಹುಟ್ಟಲು ಸಹಾಯ ಮಾಡುತ್ತದೆ.
ಮೆಂತ್ಯದಲ್ಲಿ ಪ್ರೋಟೀನ್, ನಿಕೋಟಿನ್ ಅಂಶವಿರುತ್ತದೆ ಇದು ಕೂದಲು ವೇಗವಾಗಿ ಹಾಗು ಶಕ್ತಿಯುತವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ ಇ, ವಿಟಮಿನ್ ಕೆ ಹಾಗು ಕಬ್ಬಿಣಾಂಶ ಇರುತ್ತದೆ, ಇದು ಕೂದಲು ಬೆಳವಣಿಗೆಯಲ್ಲಿ ಕುಂಟಿತವಾಗಿರುವುದನ್ನು ಮುಂದಕ್ಕೆ ಬೆಳೆಯಲು ಸಹಾಯ ಮಾಡುತ್ತದೆ.
ಹರಳೆಣ್ಣೆಯಲ್ಲಿ ಒಮೇಗಾ 6 ಅಂಶ ಇರುತ್ತದೆ ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹಾಗಾಗಿ ನೀವು ಸಹ ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಂಡು ಹಚ್ಚಿಕೊಂಡು ಉಪಯೋಗ ಕಂಡುಕೊಳ್ಳಿ. ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಿ.