ನಿಮ್ಮ ಫೋನ್ ಗಳಲ್ಲಿ ಈ ಅಪ್ಲಿಕೇಷನ್ಸ್ ಗಳನ್ನು ಇಟ್ಟುಕೊಳ್ಳಬೇಡಿ. ಇಂದು ಎಲ್ಲರ ಬಳಿಯೂ ಆಂಡ್ರಾಯ್ಡ್ ಮೊಬೈಲ್ ಇದೆ. ಇವುಗಳು ಹಲವಾರು ರೀತಿಯ ಉಪಯೋಗವಾಗುವ ಕೆಲಸಗಳನ್ನು ಸಹ ಹೊಂದಿದೆ. ಈ ಆಂಡ್ರಾಡ್ ಫೋನ್ಗಳು ಹಲವಾರು ರೀತಿಯ ಅಪ್ಲಿಕೇಶನ್ ಗಳನ್ನು ಹೊಂದಿದೆ. ಇವುಗಳಲ್ಲಿ ಕೆಲವು ಅಪ್ಲಿಕೇಶನ್ ಗಳಿಂದ ತುಂಬಾ ಸಹಾಯವಾಗುತ್ತದೆ.
ಅದೇ ರೀತಿಯಲ್ಲಿ ಕೆಲವು ಅಪ್ಲಿಕೇಶನ್ ಗಳು ತುಂಬಾ ತೊಂದರೆಗಳನ್ನು ತರುತ್ತವೆ. ಹಾಗಾದರೆ ಯಾವ ಅಪ್ಲಿಕೇಶನ್ ಗಳು ನಮಗೆ ತೊಂದರೆಯನ್ನು ಉಂಟುಮಾಡುತ್ತವೆ.ಅವು ಯಾವುವು ನೋಡೋಣ.
ಪ್ರತಿನಿತ್ಯ ಮಾಡುವ ತಪ್ಪಿನಿಂದಲೇ ಈ ಸ್ಮಾರ್ಟ್ ಫೋನ್ ಗಳು ಬಿಸಿಯಾಗಲು ಕಾರಣ. ಇನ್ಮುಂದೆ ಹೀಗೆ ಮಾಡ್ಬೇಡಿ. ಹೌದು, ಈ ಆಪ್ಗಳನ್ನು ಹ್ಯಾಕರ್ಗಳು ತಯಾರಿಸಿದ್ದು ಇದನ್ನು ನಿಮ್ಮ ಮೊಬೈಲ್ನಲ್ಲಿ ಲೋಡ್ ಮಾಡಿ ಇನ್ಸ್ಟಾಲ್ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್ನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಗಳ ಕೈ ಸೇರಲಿವೆ ಎಂದು ಗುಗಲ್ ಸಂಸ್ಥೆ ಹೇಳಿದೆ.
ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಇಂತಹ ಆಪ್ಗಳನ್ನು ಸೈಬರ್ ಸೆಕ್ಯುರಿಟಿ ಸಾಫ್ಟ್ವೇರ್ ಕಂಪನಿ ಪಟ್ಟಿ ಮಾಡಿದ್ದು, ಈ ಕೆಳಗಂಡ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ನಲ್ಲಿ ಇದ್ದಲ್ಲಿ ಕೂಡಲೇ ಅವುಗಳನ್ನು ಅನ್ಇನ್ಸ್ಟಾಲ್ ಮಾಡಿ ಎಂದು ಸಂಸ್ಥೆ ತಿಳಿಸಿದೆ.
ಅಂದಹಾಗೆ, ಈ ಅಪ್ಲಿಕೇಶನ್ಗಳು ನಿಮಗೆ ಗೊತ್ತಿಲ್ಲದೇ ನಿಮ್ಮ ಮೊಬೈಲ್ನಲ್ಲಿರುವ ಸಂಪರ್ಕಗಳು, ಸಂದೇಶಗಳು ಮತ್ತು ಬ್ಯಾಂಕ್ಗೆ ಸಂಬಂಧಿಸಿದ ಮಾಹಿತಿಗಳು ಇಲ್ಲವೇ ನಿಮ್ಮ ಮೊಬೈಲ್ನಲ್ಲಿರುವ ಗೌಪ್ಯ ಮಾಹಿತಿಯನ್ನು ಹಾಗೂ ನಿಮ್ಮ ಇತರ ಮೊಬೈಲ್ ಚಟುವಟಿಕೆಗಳ ಕುರಿತ ಮಾಹಿತಿಯನ್ನು ರವಾನಿಸುವ ತಂತ್ರಜ್ಞಾನವನ್ನು ಹೊಂದಿದ್ದು,
ನಿಮ್ಮ ಮೊಬೈಲ್ನ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ನಿಮ್ಮ ಆಂಡ್ರೊಯ್ಡ್ ಅನ್ನು ಹಾಳುಗೆಡುವುದರೊಂದಿಗೆ ನಿಮ್ಮ ಮೊಬೈಲ್ಗಳನ್ನು ಹಾಳುಮಾಡಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಹಾಗಾದರೆ ಆ ಅಪ್ಲಿಕೇಶನ್ಗಳು ಯಾವುವು ಎಂಬ ಕೂತೂಹಲ ನಿಮಗೆ ಇನ್ನೂ ಹೆಚ್ಚಾಗಿರಬಹುದು. ಅಲ್ಲವೇ ಆದ ಕಾರಣ ಆ ಅಪ್ಲಿಕೇಶನ್ಗಳ ತಿಳಿದುಕೊಳ್ಳಿ. ಅವುಗಳು…
ಸ್ಮಾರ್ಟ್ ಸ್ವೈಪ್, ರಿಯಲ್ಟೈಮ್ ಬೂಸ್ಟರ್, ಫೈಲ್ ಟ್ರಾನ್ಸ್ಫರ್ ಪ್ರೋ, ನೆಟ್ವರ್ಕ್ ಗಾರ್ಡ್, ಎಲ್ಇಡಿ ಫ್ಲಾಶ್ಲೈಟ್, ವೈಸ್ ರೆಕಾರ್ಡರ್ ಪ್ರೋ, ಫ್ರೀ ವೈಫೈ ಪ್ರೋ,
ಕಾಲ್ ರೆಕಾರ್ಡರ್ ಪ್ರೋ, ಕಾಲ್ ರೆಕಾರ್ಡರ್, ರಿಯಲ್ ಟೈಮ್ ಕ್ಲಿನರ್, ಸೂಪರ್ ಫ್ಲಾಶ್ಲೈಟ್, ವಾಲ್ಪೇಪರ್ ಎಚ್ಡಿ ಬ್ಯಾಕ್ಗ್ರೌಂಡ್, ಕೂಲ್ ಫ್ಲಾಶ್ಲೈಟ್, ಮಾಸ್ಟರ್ ವೈಫೈ ಕೀ,
ವೈಫೈ ಸೆಕ್ಯೂರಿಟಿ ಮಾಸ್ಟರ್, ವೈಫೈ ಅನಲೈಸರ್, ಸ್ಪೀಡ್ ಟೆಸ್ಟ್, ಫೀ ವೈಫೈ ಕನೆಕ್ಟ್, ಬ್ರೈಟೆಸ್ಟ್ ಎಲ್ಐಡಿ ಫ್ಲಾಶ್ಲೈಟ್, ಬ್ರೈಟೆಸ್ಟ್ ಫ್ಲಾಶ್ಲೈಟ್,
ಕಾಲ್ ರೆಕಾರ್ಡಿಂಗ್ ಮ್ಯಾನೇಜರ್, ಫ್ರೀ ವೈಫೈ ಸ್ಮಾರ್ಟ್, ಬ್ರೈಟೆಸ್ಟ್ ಎಲ್ಇಡಿ ಫ್ಲಾಶ್ಲೈಟ್-ಪ್ರೋ, ಡಾ. ಕ್ಲಿನ್ ಅತೀ ಮುಖ್ಯವಾಗಿ ನಿಮ್ಮ ಟ್ರು ಕಾಲರ್
ಉದಾಹರಣೆಗೆ ಟ್ರು ಕಾಲರ್ ಎಂಬ ಈ ಒಂದು ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಇರುವ ಎಲ್ಲ ಸ್ನೇಹಿತರ ಫೋನ್ ನಂಬರ್ ಮತ್ತು ಅವ್ರ ಹೆಸರು ಕದೆಯುತ್ತದೆ, ನಿಮಗೆ ನಂಬಿಕೆ ಇಲ್ಲ ಅಂದ್ರೆ ಬೇಕಾದರೆ ಯುಟುಬ್ ನಲ್ಲಿ ಹೆಚ್ಚು ವೀಡಿಯೊ ಗಳು ಇದೆ ಮತ್ತು ಗೂಗಲ್ ನಲ್ಲಿ ಕೂಡ ಇದರ ಬಗ್ಗೆ ಸಾಕಷ್ಟು ಮಾಹಿತಿ ಹಾಕಿದ್ದಾರೆ. ನಿಮ್ಮ ಮೊಬೈಲ್ ನಲ್ಲಿ ಟ್ರು ಕಾಲರ್ ಇದ್ರೆ ಇಂದೇ ಕಿತ್ತು ಬಿಸಾಕಿ.
ಅಷ್ಟೇ ಅಲ್ಲ ನೀವು ಗೂಗಲ್ ಪ್ಲೇ ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಲೋಡ್ ಮಾಡುವ ಮೊದಲು ಆ ಅಪ್ಲಿಕೇಶನ್ ಕುರಿತು ವಿವರವಾಗಿ ತಿಳಿದುಕೊಂಡು ಆನಂತರ ಮೊಬೈಲ್ ಅಪ್ಲಿಕೇಶನ್ ಅನ್ನು ಲೋಡ್ ಮಾಡಿಕೊಳ್ಳಿ ಇಲ್ಲ ಅಂದ್ರೆ ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿರುವ ಎಲ್ಲ ಮಾಹಿತಿ ಕಳ್ಳರ ಪಾಲಾಗುತ್ತೆ ಎಚ್ಚರ.
ಅಷ್ಟೇ ಅಲ್ಲ ಮೊಬೈಲ್ ಸುರಕ್ಷತೆಗಾಗಿ ಯಾವಾಗಲೂ ಆಂಟಿವೈರಸ್ ಬಳಸುವುದನ್ನು ಮರೆಯದಿರಿ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಆಂಟಿವೈರಸ್ ಸಿಗುತ್ತೆ ತಕ್ಷಣವೇ ಉತ್ತಮವಾದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.