ಹೆಣ್ಣುಮಕ್ಕಳು ಪ್ರಿಯಕರನೊಂದಿಗೆ ಹಂಚಿಕೊಳ್ಳಬಾರದ ರಹಸ್ಯಗಳು.

0
762

ಎಲ್ಲ ಹುಡುಗಿಯರು ತಮ್ಮ ಜೀವನದಲ್ಲಿ ಒಬ್ಬರನ್ನು ಪ್ರಿಯಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಅವರನ್ನು ತಮ್ಮ ಜೀವನದ ಸಂಗಾತಿ ಮಾಡಿಕೊಳ್ಳಲು ಸಹ ಬಯಸುತ್ತಾರೆ. ಅದಕ್ಕಾಗಿ ಆ ಪ್ರಿಯಕರನ ಬಳಿ ತಮ್ಮ ಜೀವನ ಸುಖ. ದುಃಖ. ನೋವು .ನಲಿವು. ಎಲ್ಲವನ್ನು ಹಂಚಿಕೊಳ್ಳುತ್ತಾರೆ.

ಆದರೆ ಈ ಪ್ರೀತಿಯ ಜೀವನ ಕೆಲವು ಸಂಬಂಧಗಳಲ್ಲಿ ನೆಡೆಯುತ್ತದೆ ಇನ್ನು ಕೆಲವು ಸಂಬಂಧಗಳಲ್ಲಿ ನೆಡೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ವಯ೦ ಪ್ರೇರಣೆಯಿ೦ದ ನಿಮಗೆ ನೀವಾಗಿಯೇ ಹೇರಿಕೊಳ್ಳಬೇಕಾದ ಕೆಲವು ಕಟ್ಟುಪಾಡುಗಳು ಎದರಾಗುತ್ತವೆ.

ಆ ಸನ್ನಿವೇಶಗಳನ್ನು ಹೇದುರಿಸಿ ನಿಮ್ಮ ಜೀವನವನ್ನು ಸುಖಮಯ ಮಾಡಿಕೊಳ್ಳಬೇಕು.ಜೊತೆಗೆ ನಿಮ್ಮ ಭಾ೦ದವ್ಯವನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವುದು ಮಾತ್ರವೇ ಅಲ್ಲ ಬದಲಾಗಿ ಅದು ನಿಮ್ಮದೇ ಆದ ಖಾಸಗಿ ವಿಚಾರಗಳನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಹಾಗಾಗಿ ನೀವು ನಿಮ್ಮಪ್ರಿಯಕರನೊಂದಿಗೆ ಎಂದೆಂದಿಗೂ ಹೇಳಿಕೊಳ್ಳಬಾರದ ವಿಚಾರಗಳು.ಯಾವುವು ನೋಡೋಣ..

ನಿಮ್ಮ ಪ್ರಿಯಕರ ನಿಮ್ಮಲ್ಲಿ ವಿಶ್ವಾಸವನ್ನಿರಿಸಿಕೊ೦ಡಿರುತ್ತಾರೆ ಹಾಗೂ ನೀವು ಕೂಡ ಅ೦ತಹ ವಿಶ್ವಾಸವನ್ನು ಅವರ ವಿಚಾರದಲ್ಲಿ ಕಾಪಾಡಿಕೊ೦ಡಿರಬೇಕೆ೦ದು ಅವರು ನಿರೀಕ್ಷಿಸಿರುತ್ತಾರೆ. ಆದ್ದರಿ೦ದ ಅವರ ನ೦ಬಿಕೆ ಮತ್ತು ವಿಶ್ವಾಸಗಳನ್ನು ಹಾಗೆಯೇ ಗಟ್ಟಿಯಾಗಿ ಉಳಿಸಿಕೊಳ್ಳಿರಿ.

ನಿಮ್ಮ ಗೆಳೆಯನೊ೦ದಿಗೆ ಏನನ್ನಾದರೂ ಹ೦ಚಿಕೊಳ್ಳುವ ವಿಚಾರವು ಬ೦ದಾಗ, ನಿಮ್ಮ ಪಾಸ್ ವರ್ಡ್ ಅನ್ನು ಹ೦ಚಿಕೊಳ್ಳಬಾರದು. ನೀವು ನಿಮ್ಮ ಗೆಳೆಯನ ಕುರಿತು ಅದೆಷ್ಟೇ ನ೦ಬಿಕೆಯನ್ನಿರಿಸಿಕೊ೦ಡಿದ್ದರೂ ಕೂಡ ಅಥವಾ ಪದಗಳಿಗೆ ನಿಲುಕದಷ್ಟು ಆತನನ್ನು ನೀವು ಪ್ರೀತಿಸುತ್ತಿದ್ದರೂ ಕೂಡ, ಪಾಸ್ ವರ್ಡ್ ನ೦ತಹ ಸ೦ಗತಿಗಳನ್ನು ಎ೦ದಿಗೂ ಕೂಡ ಅವನೊಡನೆ ಹ೦ಚಿಕೊಳ್ಳಬಾರದು.

ನಿಮ್ಮ ಪ್ರಿಯಕರನ ಕುಟು೦ಬದ ಬಗ್ಗೆ ನಿಮಗೆ ಇಷ್ಟವಿಲ್ಲದ ವಿಷಯಗಳು ಇದ್ದರೆ ಈ ವಿಚಾರವನ್ನು ನೀವು ನಿಮ್ಮಲ್ಲಿಯೇ ಗುಪ್ತವಾಗಿರಿಸಿಕೊಳ್ಳುವುದು ಒಳ್ಳೆಯದು.ಹಾಗೂ ಇದರ ಕುರಿತು ನೀವು ಆತನಿಗಾಗಲೀ ಅಥವಾ ನಿಮ್ಮ ಗೆಳತಿಯರಿಗಾಗಲೀ ತಿಳಿಸಬಾರದು.

ನಿಮಗೆ ಬೇರೆ ಯಾರಾದರೂ ಹುಡುಗರ ಜೊತೆ ಸ್ನೇಹ ಪ್ರೀತಿ ಇದ್ದರೆ.ಆ ವಿಚಾರಗಳನ್ನು ನಿಮ್ಮ ಈಗಿನ ಗೆಳೆಯನಿಗೆ ನೀವು ತಿಳಿಸಿದ್ದರೂ ಕೂಡ, ಅದರ ಕುರಿತು ಕೂಲ೦ಕುಷವಾಗಿ ಎಲ್ಲಾ ವಿವರಗಳನ್ನೂ ಬಹಿರ೦ಗಗೊಳಿಸುವುದು ಬೇಡ.

ನಿಮ್ಮ ಪ್ರಿಯಕರನಿಗೆ ಇಷ್ಟವಾಗದ ಮಾತುಗಳು. ಕೆಲಸಗಳನ್ನು ನೀವು ಮಾಡಬೇಡಿ.

ಎಲ್ಲ ವಿಷಯಗಳನ್ನು ಪ್ರಿಯಕರನ ಬಳಿ ಹೇಳಿಕೊಂಡರೆ ಅವರಿಬ್ಬರ ಮದ್ಯ ಯಾವುದೇ ಅನುಮಾನ ಬರುವುದಿಲ್ಲ ಆದರೆ ಕೆಲವು ಸನ್ನಿವೇಶ. ಸಮಯದಲ್ಲಿ ಆ ವಿಚಾರಗಳು ಪ್ರೀತಿಗೆ ತೊಂದರೆ ಉಂಟುಮಾಡುತ್ತವೆ.

ಅಗಾಗಿ ನಿಮ್ಮ ಪ್ರಿಯಕರನ ಬಳಿ ಯಾವುದೇ ವಿಷಯವನ್ನು ಹಂಚಿಕೊಳ್ಳುವಾಗ ತುಂಬಾ ಯೋಚಿಸಿ ಹೇಳುವುದು ಒಳ್ಳೆಯದು.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here