ಊಟದ ನಂತರ ಈ ಹಣ್ಣನ್ನು ಸೇವಿ ಜೀರ್ಣಶಕ್ತಿ ಹೆಚ್ಚುವುದು.

0
786

*ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ.

*ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಮ್ಮಿ ಇದ್ದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸೀತಾಫಲ ಹಣ್ಣನ್ನು ಸೇವಿ ಸುತ್ತಾ ಇದ್ದರೆ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚುತ್ತದೆ.

*ತಲೆ ತುಂಬಾ ಹೇನು, ಸೀರುಗಳಿವೆ? ಹಾಗಿದ್ದರೆ ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಸೀತಾಫಲ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲ ಬುಡಕ್ಕೆ ಹಚ್ಚಿ ನೋಡಿ. ಒಣಗಿದ ಎಲೆಗಳ ಚೂರ್ಣ ಚರ್ಮರೋಗಕ್ಕೆ ದಿವ್ಯ ಔಷಧ.

*ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ ಮಾರ್ಗ. ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಕ್ರಮೇಣ ಹೆಚ್ಚುತ್ತದೆ.

*ಮ್ಯಾಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಇದು ಸೀತಾಫಲದಲ್ಲಿ ಹೆಚ್ಚಾಗಿದೆ. ಇವು ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತವೆ.

*ಕುರುವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಗಿಡದ ಎಲೆ ಹೇಳಿ ಮಾಡಿಸಿದ ಮದ್ದು. ಈ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಬೇಕು. ಇದರಿಂದ ಕುರು ಬೇಗ ಗುಣವಾಗುತ್ತದೆ. ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಿದರೆ ಕುರುಗಳು ಹಣ್ಣಾಗಿ ಬೇಗ ಒಡೆಯುತ್ತವೆ.

*ಗರ್ಭಪಾತದ ಅಪಾಯವನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ಅಮ್ಮಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಇದರ ಸೇವನೆ ಒಳ್ಳೆಯದು.

*ಹೊಟ್ಟೆ ಉರಿ ಮತ್ತು ವಿಪರೀತ ದಾಹವಾಗುತ್ತಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು. ಈ ರಸವನ್ನು ಹೊಟ್ಟೆ ಮೇಲೆ ಲೇಪನ ಮಾಡಿದರೂ ದಾಹ ನಿವಾರಣೆಯಾಗುತ್ತದೆ.

*ಸೀತಾಫಲ ಗಿಡದ ತೊಗಟೆಯ ಕಷಾಯವನ್ನು ನಿಯಮಿತ ವಾಗಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ.
*ಸೀತಾಫಲದಲ್ಲಿ ಅನ್ನಾಂಗ ಅಂಶ (ಸಿ, ಬಿ6, ಮ್ಯಾಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠ) ಹೇರಳವಾಗಿದೆ. ಇವು ದೇಹಕ್ಕೆ ಪುಷ್ಟಿ ನೀಡುತ್ತವೆ.

*ಕ್ಯಾನ್ಸರ್ ಪ್ರತಿರೋಧಕ ಗುಣ ಸೀತಾಫಲಕ್ಕಿದೆ.

*ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರಲು ಸೀತಾಫಲ ಒಳ್ಳೆಯ ಮದ್ದು. ಇದರಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ನೆರವಾಗುತ್ತದೆ.

*ಸೀತಾಫಲವನ್ನು ಮಕ್ಕಳಿಗೆ ಜ್ಯೂಸ್‌ ಮಾಡಿ ಕುಡಿಸುವುದು ಬಲು ಉತ್ತಮ. ಹಾಲಿನ ಜೊತೆ ಜ್ಯೂಸ್‌ ಮಾಡುವ ಬದಲು, ಒಂದು ಕೋಳಿ ಮೊಟ್ಟೆ ಹಾಗೂ ಜೇನುತುಪ್ಪದ ಜೊತೆ ಕೊಟ್ಟರೆ ಮಕ್ಕಳಲ್ಲಿ ಶಕ್ತಿ ವೃದ್ಧಿಸುತ್ತದೆ.

*ಸೀತಾಫಲದಲ್ಲಿನ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಬೇಕು. ಒಂದು ಪ್ಯಾನ್‌ನಲ್ಲಿ ಹಾಲು ಕಾಯಿಸಿ ಅದಕ್ಕೆ ಮೊಟ್ಟೆ ಹಾಕಿ ಕದಡಬೇಕು. ಇದಕ್ಕೆ ಜೇನು ತುಪ್ಪ ಹಾಗೂ ರುಬ್ಬಿಕೊಂಡ ಸೀತಾಫಲದ ತಿರುಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಬಿಸಿ ಮಾಡಬೇಕು. ಈ ಸಮಯದಲ್ಲಿ ತಿರುವುತ್ತಾ ಇರಬೇಕು. ಅದನ್ನು ತಣ್ಣಗೆ ಮಾಡಿ ಮಕ್ಕಳಿಗೆ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆ ತಿನ್ನದವರು ಅದನ್ನು ಇಲ್ಲದೆಯೂ ಮಾಡಬಹುದು.

*ಸೀತಾಫಲವು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.

LEAVE A REPLY

Please enter your comment!
Please enter your name here