ನಿಮ್ಮ ಮೊಬೈಲ್ ಗೆ ಬೇರೆ ಫೋನ್ ನ ಚಾರ್ಜರ್ ಬಳಸಿದ್ರೆ

0
915

ಎಲ್ಲರೂ ಸ್ಮಾರ್ಟ್ ಫೋನ್ ಗಳನ್ನು ತೆಗೆದುಕೊಂಡಾಗ ತುಂಬಾ ಖುಷಿಯಿಂದ ಇರುತ್ತೀರಿ. ಜೊತೆಗೆ ಈ ಮೊಬೈಲ್ ಗಳ ಮೇಲೆ ತುಂಬಾ ಕೇರ್ ಮಾಡುತ್ತೀರಿ. ಅಲ್ಲವೇ. ಆದರೆ ದಿನಗಳು ಕಳೆದಂತೆ ಮೊಬೈಲ್ ಕೇರ್ ಬಿಟ್ಟುಬಿಡುತ್ತೀರಿ. ಸರಿಯಾಗಿ ಚಾರ್ಜರ್ ಮಾಡುವುದಿಲ್ಲ. ಜೊತೆಗೆ ಯಾವುದೋ ಬೇರೆ ಚಾರ್ಜರ್ ಗಳಿಂದ ಚಾರ್ಜ್ ಮಾಡುತ್ತೀರಿ. ದಿನಗಳು ಕಳೆದಂತೆ ನಿಮ್ಮ ಮೊಬೈಲ್ಗಳು ಹ್ಯಾಂಗ್ ಆಗುವುದು.ಮೊಬೈಲ್ ಸ್ಪೋಟಗೊಳ್ಳುವುದು. ಸ್ಮಾರ್ಟ್‌ಫೋನ್ ಒಎಸ್ ಹಾಳಾಗುವುದು. ಈ ರೀತಿಯ ಸಮಸ್ಯೆ ಗಳು ಕಾಡುತ್ತವೆ. ಆದರೆ ಇದಕ್ಕೆಲ್ಲಾ ಕಾರಣ ಏನೋ ಎಂದು ರಿಪೇರಿ ಮಾಡಿಸುತ್ತೀರಿ.

ಸಾಮಾನ್ಯವಾಗಿ, ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಅಂಗಡಿಯವನು ಸ್ಮಾರ್ಟ್‌ಫೋನ್ ಜೊತೆಗೆ ನೀಡಿರುವ ಚಾರ್ಜಿಂಗ್ ಕೇಬಲ್‌ನಲ್ಲಿ ಮಾತ್ರ ಪೋನ್ ಚಾರ್ಜ್ ಮಾಡಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಮ್ಮ ಸ್ಮಾರ್ಟ್‌ಫೋನನ್ನು ಇತರೆ ಚಾರ್ಜಿಂಗ್ ಕೇಬಲ್‌ಗಳ ಮೂಲಕ ಚಾರ್ಜ್ ಮಾಡಿದಾಗ ಸ್ಮಾರ್ಟ್‌ಫೋನಿನಲ್ಲಿ ಆಗುವ ವ್ಯತ್ಯಾಸಗಳು ಕೂಡ ನಿಮಗೆ ಗೊತ್ತಾಗಬಹುದು ಅಲ್ಲವೇ.

ನಿಮ್ಮ ಸ್ಮಾರ್ಟ್‌ಫೋನಿಗೆ ಇತರೆ ಯಾವುದೇ ಚಾರ್ಜರ್ ಬಳಕೆ ಮಾಡಿದರೂ ಕೂಡ ಅದು ಚಾರ್ಜ್ ಆಗುತ್ತಿರುತ್ತದೆ. ಆದರೆ, ನಿಮಗೆ ಗೊತ್ತಾ? ಮೊಬೈಲ್ ಸ್ಪೋಟಗೊಳ್ಳಲು, ಸ್ಮಾರ್ಟ್‌ಫೋನ್ ಒಎಸ್ ಹಾಳಾಗಲು ಹಾಗೂ ಮೊಬೈಲ್ ಹ್ಯಾಂಗ್ ಆಗುವಂತರ ಅಮಸ್ಯೆಗಳಿಗೆ ನಿಮ್ಮ ಸ್ಮಾರ್ಟ್‌ಫೋನಿಗೆ ಇತರೆ ಚಾರ್ಜರ್ ಬಳಸುವ ತಪ್ಪುಗಳಿಂದಲೇ ಆಗಿರುತ್ತವೆ.

ಅದರಲ್ಲೂ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುವ ಐಫೋನ್ ಗೆ ನಕಲಿ ಚಾರ್ಜರ್ ತಂದು ಹಾಕಿದ್ರೆ ನಿಮ್ಮ ಕಥೆ ಮುಗೀತು ಅಂತ ಅದು ದಿನ ದಿನಕ್ಕೆ ಸಂಪೂರ್ಣವಾಗಿ ನಿಮ್ಮ ಮೊಬೈಲ್ ಹಾಳು ಮಾಡಿ ಬಿಡುತ್ತೆ, ಕೆಲವೇ ದಿನದಲ್ಲಿ ಸಂಪೂರ್ಣ ಬ್ಯಾಟರಿ ಹಾಳಾಗುತ್ತೆ.

ಒಂದು ಸ್ಮಾರ್ಟ್‌ಫೋನ್ ಅನ್ನು ಇತರೆ ಯಾವುದೇ ಚಾರ್ಜರ್ ಬಳಸಿ ಚಾರ್ಜ್ ಮಾಡಬಾರದು.

ಕಳಪೆ ಗುಣಮಟ್ಟದ ಚಾರ್ಜ್ರ್ನಿಂದ ಚಾರ್ಜ್ ಮಾಡುವುದು ಅಪಾಯ.

ನಮ್ಮ ಸ್ಮಾರ್ಟ್‌ಫೋನ್ ಚಾರ್ಜರ್‌ಗಿಂತಲೂ ಹೆಚ್ಚು ಗುಣಮಟ್ಟದ ಚಾರ್ಜರ್ ಬಳಸುವುದು ಇನ್ನೂ ಹೆಚ್ಚು ಅಪಾಯ ಯಾಕೆ ಗೊತ್ತೇ?

ಮೊಬೈಲ್ ಕಂಪನಿಗಳು ನೀಡುವ ಚಾರ್ಜರ್‌ಗಳು ಯುಎಸ್‌ಬಿ ಆಧಾರದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್ ಆಗುವ ಅವಧಿ ನಿರ್ಧಾರವಾಗುತ್ತದೆ.

ಐಫೋನ್, ಸ್ಯಾಮ್ಸಂಗ್, ಎಲ್‌ಜಿ, ಶಿಯೋಮಿ ಹೀಗೆ ಬಹುತೇಕ ಎಲ್ಲಾ ಮೊಬೈಲ್ ತಯಾರಿಕಾ ಕಂಪೆನಿಗಳು ಯುಎಸ್‌ಬಿ 1.0, 2.0, 3.0 ಮತ್ತು 3.1 ಹೀಗೆ ಪ್ರತ್ಯೇಕ ಯುಎಸ್ಬಿಗಳನ್ನು ಬಳಸುತ್ತಿವೆ.

ಯಾವುದೇ ಸ್ಮಾರ್ಟ್‌ಫೋನ್ ಬ್ಯಾಟರಿಗೆ ನಿರ್ದಿಷ್ಟ ವೋಲ್ಟ್ ವಿದ್ಯುತ್ ಅಗತ್ಯವಿರುತ್ತದೆ. ಹೆಚ್ಚು ವಿದ್ಯುತ್ ಹರಿಯುವಿಕೆ ಮತ್ತು ಅಧಿಕ ವೋಲ್ಟೇಜ್ ನೀಡಿದರೆ ಬ್ಯಾಟರಿ ಬಹು ಬೇಗ ಚಾರ್ಜ್ ಆಗುತ್ತದೆ. ಸ್ಮಾರ್ಟ್‌ಪೋನ್ ತಯಾರಿಸಿರುವ ಕಂಪೆನಿ ಬ್ಯಾಟರಿ ವಿದ್ಯುತ್ ಸ್ವೀಕರಿಸುವ ಸಾಮರ್ಥ್ಯಕ್ಕೆ ಚಾರ್ಜ್ ನಿಯಂತ್ರಕದ ಚಿಪ್ ಅಳವಡಿಸಿ ಮಿತಿ ಒಡ್ಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಗೆ ನಿರ್ದಿಷ್ಟ ವೋಲ್ಟ್ ವಿದ್ಯುತ್ ಅಗತ್ಯವನ್ನು ಪೂರೈಸಲು ಕಳಪೆ ಚಾರ್ಜರ್‌ಗೆ ಸಾಧ್ಯವಾಗುವುದಿಲ್ಲದಿರುವುದರಿಂದ ಕಳಪೆ ಚಾರ್ಜರ್ ಬಳಸಬಾರದು.

ಬಹುತೇಕ ಎಲ್ಲಾ ಮೊಬೈಲ್ ತಯಾರಿಕಾ ಕಂಪೆನಿಗಳು 1.0, 2.0, 3.0 ಮತ್ತು 3.1 ಹೀಗೆ ಪ್ರತ್ಯೇಕ ಯುಎಸ್ಬಿಎಗಳನ್ನು ಬಳಸುವುದರಿಂದ ಶಿಯೋಮಿ ಮೊಬೈಲ್‌ಗೆ ಸ್ಯಾಮ್‌ಸಂಗ್ ಚಾರ್ಜರ್ ಬಳಕೆ ಮಾಡಬಾರದು. ಹೀಗೆ ಅದಲು ಬದಲು ಚಾರ್ಜರ್ ಬಳಕೆ ಮಾಡುವುದರಿಂದ ಯುಎಸ್‌ಬಿ ಶಕ್ತಿ ಬದಲಾಗಿ ಬ್ಯಾಟರಿ ಹಾಳಾಗುತ್ತದೆ.

ನಿಮ್ಮ ಬ್ಯಾಟರಿ ಹಾಳಾಗೋದಕ್ಕೆ ಕಾರಣ ಏನಿರಬಹುದು ಅನ್ನೋದನ್ನ ತಿಳಿದುಕೊಂಡ್ರಿ ಅಲ್ವ.

ಹಾಗಿದ್ಮೇಲೆ ಮತ್ತೆ ಬೇರೆ ಚಾರ್ಜರ್ ನಿಂದ ನಿಮ್ಮ ಮೊಬೈಲ್ ಚಾರ್ಜ್ ಮಾಡಿ ಮೊಬೈಲ್ ಬ್ಯಾಟರಿಯನ್ನ ಹಾಳುಮಾಡಿಕೊಳ್ಳಬೇಡಿ.ನಿಮ್ಮ ಮೊಬೈಲ್ ಚಾರ್ಜರ್ ಗಳಿಂದಲೇ ಚಾರ್ಜ್ ಮಾಡಿ.ಮೊಬೈಲ್ ಹಾಳಾಗುವುದನ್ನು ತಪ್ಪಿಸಿಕೊಳ್ಳಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here