ವೀಸಾ ವೆಂಕಟೇಶ್ವರ ದೇಗುಲದ ಮಹಿಮೆ.

0
625

ಬೇರೆ ದೇಶಗಳಿಗೆ ಹೋಗುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಬೇರೆ ದೇಶಗಳಿಗೆ ಹೋಗುವುದು ತುಂಬಾ ಸುಲಭವಾದ ವಿಷಯವಲ್ಲ. ಕೆಲವು ದೇಶಗಳಿಗೆ ಪಾಸ್ ಪೋರ್ಟ್ ಇದ್ದರೆ ಸಾಕು ಆ ದೇಶಗಳಿಗೆ ಹೋಗಿ ವೀಸಾವನ್ನು ಪಡೆಯಬಹುದು.

ಉದಾಹರಣೆಗೆ. ಶ್ರೀಲಂಕಾ. ಸಿಂಗಾಪುರ. ಮಲೇಷಿಯಾ.ಇತ್ಯಾದಿ. ಆದರೆ ಕೆಲವು ದೇಶಗಳಿಗೆ ಹೋಗಬೇಕು ಎಂದರೆ ವೀಸಾ ಪಡೆಯಲೇಬೇಕು. ಉದಾಹರಣೆಗೆ. UK. US. ಜರ್ಮನಿ. ಕೆನಡಾ. ದುಬೈ. ಇತ್ಯಾದಿ. ಈ ದೇಶಗಳಿವೆ ಹೋಗಲು ವೀಸಾ ಬೇಕೇ ಬೇಕು ಜೊತೆಗೆ ಅಷ್ಟು ಸುಲಭವಾಗಿ ಸಹ ವೀಸಾ ಸಿಗುವುದಿಲ್ಲ. ಹಾಗಾಗಿ ಈ ವೀಸಾವನ್ನು ನಾವು ಸುಲಭವಾಗಿ ಪಡೆಯಬೇಕು ಎಂದರೆ ಹೈದರಾಬಾದಿನ ಚಿಲ್ಕುರ್ ನಲ್ಲಿರುವ ವೀಸಾ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಬೇಕು.

ಹೈದರಾಬಾದಿನ ಹೊರವಲಯದಲ್ಲಿರುವ ಚಿಲ್ಕೂರಿನ ಉಸ್ಮಾನ್ ಸಾಗರದ ತೀರದಲ್ಲಿ ನೆಲೆನಿಂತಿದ್ದಾನೆ ಈ ವೀಸಾ ವೆಂಕಟೇಶ್ವರ. ಇಷ್ಟಕ್ಕೂ ಈ ತಿಮ್ಮಪ್ಪನಿಗೆ ಈ ಹೆಸರು ಬರುವ ಹಿಂದೆ ಒಂದು ವಿಶೇಷವಾದ ಕಾರಣವಿದೆ. ಹೈದರಾಬಾದಿನ ಬಹಳಷ್ಟು ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೀಟು ಸಿಗಲಿ ಎಂದು ಹರಕೆ ಹೊರುತ್ತಿದ್ದರು. ಬಹಳಷ್ಟು ಮಂದಿಗೆ ವೆಂಕಟೇಶ್ವರ ಅಭಯಹಸ್ತ ನೀಡಿದ ಮೇಲೆ ದೇವಾಲಯ ಇನ್ನಷ್ಟು ಜನಪ್ರಿಯವಾಯಿತು. ಕಡೆಗೆ ವೀಸಾ ವೆಂಕಟೇಶ್ವರ ಎಂಬ ಹೆಸರು ಬಂದಿತು.

ಈ ದೇವಾಲಯಕ್ಕೆ ವಾರದಲ್ಲಿ 1,00,000ಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ವೀಸ ಕೊಡಿಸಪ್ಪ ವೆಂಕಟೇಶ ಎಂಬುದೇ ಇಲ್ಲಿಗೆ ಬರುವ ಭಕ್ತರ ಕೋರಿಕೆ.

ಈ ದೇವಾಲಯಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಜೊತೆಗೆ ಈ ಆಲಯದಲ್ಲಿ ಯಾವುದೇ ಹುಂಡಿ ಇಲ್ಲ. ಯಾವುದೇ ಕಾಣಿಕೆಗಳನ್ನೂ ಸ್ವೀಕರಿಸದಿರುವುದು ಈ ವೆಂಕಟೇಶ್ವರ. 11 ಬಾರಿ ಪ್ರದಕ್ಷಿಣೆ ಹಾಕಿ ವೀಸಾ ಸಿಕ್ಕಿದರೆ ಬಂದು 108 ಪ್ರದಕ್ಷಿಣೆ ಹಾಕುತ್ತೇನೆ ಎಂದು ಬೇಡಿಕೊಳ್ಳುವುದು ಅಷ್ಟೇ ಇಲ್ಲಿನ ಕಾಣಿಕೆ.

ವೀಸಾ ವೆಂಕಟೇಶ್ವರ ದೇವಸ್ಥಾನದ ಪಕ್ಕ ಶಿವನ ಆತ್ಮ ಲಿಂಗ ಕೂಡ ಇದೆ. ಲಿಂಗದ ಮುಂದೆ ಒಂದು ಮರವಿದೆ ಅದರ ವಿಶೇಷವೇನು ಅಂದರೆ ಆ ಮರಕ್ಕೆ ನಮ್ಮ ಎರಡು ಅಂಗೈಯನ್ನು ಒತ್ತಿ ಹಿಡಿದು ನಮ್ಮ ಕಷ್ಟವನ್ನು ಹೇಳಿಕೊಂಡರೆ ನಮ್ಮ ಕಷ್ಟವೆಲ್ಲ ತೀರುತ್ತದೆ.

ಈ ದೇವಸ್ಥಾನ 500 ವರ್ಷಗಳಷ್ಟು ಹಳೆಯದು. ಇದು ಹೈದರಾಬಾದ್ ಮೆಹೇಡಿಪಟ್ಟಣಂನಿಂದ 33 ಕೀ.ಮಿ ಆಗುತ್ತದೆ.ಇಲ್ಲಿ ವಾರದ ಏಳು ದಿನಾನು ಪೂಜೆ ನಡೆಯುತ್ತದೆ. ಬೆಳ್ಳಿಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಪೂಜೆ ನಡೆಯುತ್ತದೆ.

ಈ ದೇಗುಲಕ್ಕೆ ಹೋಗುವ ದಾರಿ-288D ಮೆಹೇಡಿಪಟ್ಟಣಂ ಚಿಲ್ಕುರ್ ಬಾಲಾಜಿ ದೇವಸ್ಥಾನ
ಮೊದಲ ಬಸ್ಸ್ 05.00 am 06.00 am
ಕೊನೆಯ ಬಸ್ಸ್ 08:40 pm 08.50 pm

ನೀವು ಕೂಡ ಹೊರ ದೇಶಗಳಿಗೆ ಹೋಗುವ ಆಸೆ ಇದಿಯೇ ವೀಸಾ ಸಿಗುವ ತೊಂದರೆಯೇ ಈ ದೇಗುಲಕ್ಕೆ ಹೋಗಿ ವೆಂಕಟೇಶ್ವರ ದರ್ಶನ ಪಡೆಯಿರಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here