ತೆಂಗಿನಕಾಯಿ ಹೊಡೆಯುವಾಗ ಖಂಡಿತವಾಗಿ ಪಾಲಿಸಬೇಕಾದ ನಿಯಮಗಳು.
ಹಿಂದೂ ಸಂಪ್ರಾದಯದಲ್ಲಿ ಯಾವ ಪೂಜೆ ಮತ್ತು ಶುಭಕಾರ್ಯಗಳು ಮಾಡಬೇಕೆಂದರೆ ಖಂಡಿತವಾಗಿ ತೆಂಗಿನಕಾಯಿ ಇರಲೇಬೇಕು. ತೆಂಗಿನಕಾಯಿಯ ಬಗ್ಗೆ ನಮ್ಮ ಪುರಾಣ ಇತಿಹಾಸಗಳಲ್ಲಿ ಸಹ ತುಂಬಾ ಉಲ್ಲೇಖಿಸಲಾಗಿದೆ. ತೆಂಗಿನ ಕಾಯಿಯನ್ನು ಮನುಷ್ಯರ ತಲೆಯ ಪ್ರತೀಕವಾಗಿ ಭಾವಿಸುತ್ತಾರೆ. ಶಾಸ್ತ್ರದ ಪ್ರಕಾರ ತೆಂಗಿನಕಾಯಿಯನ್ನು ಹೊಡೆಯುವುದಕ್ಕೆ ಕೆಲವು ನಿಯಮಗಳು ಇದೆ. ಮೊದಲಿಗೆ ತೆಂಗಿನ ಕಾಯಿಯನ್ನು ಹೊಡೆಯುವ ಮುಂಚೆ ಅದನ್ನ ನೀರಿನಿಂದ ಸ್ವಚ್ಛಪಡಿಸಿಕೊಳ್ಳಬೇಕು. ನಂತರ ತೆಂಗಿನ ಕಾಯಿಯನ್ನು ಕೈನಲ್ಲಿ ಹಿಡಿದುಕೊಂಡು ದೇವರನ್ನು ಸ್ಮರಿಸಬೇಕು.
ತೆಂಗಿನ ಕಾಯಿಯನ್ನು ಯಾವಾಗಲು ಅಗ್ನಿಯ ದಿಕ್ಕಿನಲ್ಲಿ ಹೊಡೆಯಬೇಕು. ತೆಂಗಿನ ಕಾಯಿಯನ್ನು ಹೊಡೆಯುವಾಗ ಕನಿಷ್ಠ 9 ಅಂಗುಲ ಮೇಲಿನಿಂದ ಹೊಡೆಯುವಂತೆ ನೋಡಿಕೊಳ್ಳಬೇಕು. ಅದು ಸಮವಾಗಿ 2 ಭಾಗವಾಗಬೇಕು, ಅದು ಸ್ವಲ್ಪ ಹಾಗೆ ಹೀಗೆ ಇದ್ದರು ಪರವಾಗಿಲ್ಲ, ಅದು ಕೆಟ್ಟು ಹೋದರು ಪರವಾಗಿಲ್ಲ, ಅದನ್ನು ಅಶುಭ ಎಂದು ಭಯಪಡುವ ಅವಶ್ಯಕತೆ ಇಲ್ಲ. ನಂತರ ಕೈ ಕಾಲನ್ನು ತೊಳೆದುಕೊಂಡು, ಬೇರೆ ತೆಂಗಿನ ಕಾಯಿಯನ್ನು ಹೊಡೆದು ದೇವರಿಗೆ ಸಮರ್ಪಿಸಿದರೆ ಒಳ್ಳೆಯದಾಗುತ್ತದೆ. ಹೀಗೆ ಆಗಿದರೆ ‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಸರಿ ಹೋಗುತ್ತದೆ.
ತೆಂಗಿನ ಕಾಯಿಯನ್ನು ಹೊಡೆದಾಗ ಸರಿಯಾಗಿ 2 ವಿಭಾಗ ಮಾಡದೆ ದೇವರಿಗೆ ಅರ್ಪಿಸಬಾರದು. ಕೆಲ ಜನರು ತೆಂಗಿನಕಾಯಿ ಹೊಡೆದ ತಕ್ಷಣ ಆ ನೀರನ್ನು ತೆಂಗಿನಕಾಯಿಯಿಂದ ತಗೆಯದೆ ಹಾಗೆಯೇ ದೇವರಿಗೆ ಅಭಿಷೇಕ ಮಾಡುತ್ತಾರೆ. ಹೀಗೆ ಮಾಡಿದರೆ ಅದು ದೇವರಿಗೆ ಸಲ್ಲುವುದಿಲ್ಲ, ಯಾವಾಗಲು ತೆಂಗಿನಕಾಯಿ ನೀರನ್ನು ಬೇರೆ ಮಾಡಿದ ನಂತರವೇ ದೇವರಿಗೆ ಅಭಿಷೇಕ ಮಾಡಬೇಕು. ನಾವು ಭಕ್ತಿಯಿಂದ ಸಮರ್ಪಿಸುವ ತೆಂಗಿನಕಾಯಿಯನ್ನು ದೇವರು ಖಂಡಿತವಾಗಿ ಸ್ವೀಕರಿಸಿ,ನಮ್ಮ ಇಷ್ಟಾರ್ಥ ಗಳನ್ನೂ ನೆರವೇರಿಸುತ್ತಾರೆ ಎಂದು ನಮ್ಮ ಭಾಗವದ್ಗೀತೆಯಲ್ಲಿಯೂ ಸಹ ಉಲ್ಲೇಖಿಸಲಾಗಿದೆ.
ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.