ಇದು ತಿಂದವರಿಗೆ ಮಾತ್ರ ಗೊತ್ತಿರುತ್ತೆ ಇದರ ಲಾಭ ಎಷ್ಟು ಎಂದು, ಇನ್ನು ಕೆಲವು ಜನಕ್ಕೆ ಒಟ್ಸ್ ಅಂದ್ರು ಅಷ್ಟು ಮಾಹಿತಿ ಇರೋದಿಲ್ಲ ಅದನ್ನ ಹಗುರವಾಗಿ ಪರಿಗಣಿಸುತ್ತಾರೆ, ಈ ಒಟ್ಸ್ ತಿನ್ನೋದ್ರಿಂದ ಒಂದಾ ಎರಡ ಇದ್ರಿಂದ ಹತ್ತಾರು ಲಾಭಗಳು ಇದೆ ಇದನ್ನ ನೀವು ತಿಳಿಯಲೇ ಬೇಕು.
ಪ್ರತಿ ನಿತ್ಯ 40 ರಿಂದ 50 ಗ್ರಾಂ ಒಟ್ಸ್ ತಿನ್ನುವವರಿಗೆ ಈ ಕೆಳಕಂಡ ಖಾಯಿಲೆಗಳು ಬರೋದಿಲ್ಲ ಮತ್ತು ಅನೇಕ ಲಾಭಗಳನ್ನು ಅವರು ಪಡೆಯಬಹುದು.
ಅಧಿಕ ರಕ್ತದೊತ್ತಡ ಇದ್ದವರಿಗೆ ಒಟ್ಸ್ ಒಂದು ಉತ್ತಮ ಆಹಾರ ಇದ್ದಂತೆ, ಇದ್ರಲ್ಲಿ ಫೈಬರ್ ಇರೋದ್ರಿಂದ, ಇದು ನಿಮ್ಮ ದೇಹದ ಅಧಿಕ ರಕ್ತದೊತ್ತಡ ನಿರ್ವಹಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹಾರ್ಟ್ ಅಟ್ಯಾಕ್ ಆಗುವ ಸಂಭವ ಕಡಿಮೆ ಏಕೆ ಅಂದ್ರೆ ದೇಹಕ್ಕೆ ಯಾವಾಗ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚು ಆಗುತ್ತೆ ಆಗ ರಕ್ತ ನಾಳಗಳನ್ನ ಬ್ಲಾಕ್ ಮಾಡಿ ಹೃದಯಕ್ಕೆ ಸಮಸ್ಯೆ ಉಂಟು ಮಾಡುತ್ತೆ ಆದ್ರೆ ಒಟ್ಸ್ ತಿನ್ನುವುದರಿಂದ ನಿಮಗೆ ಇದ್ರಲ್ಲಿರುವ ಲಿಯೋನಿಕ್ ಆಸಿಡ್ ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತನಾಳ ಸ್ವಚ ಮಾಡಿ ನಿಮ್ಮ ಆರೋಗ್ಯ ಕಾಪಾಡುತ್ತೆ.
ಪ್ರತಿ ನಿತ್ಯ ಒಟ್ಸ್ ಸೇವನೆ ಮಾಡುವವರಿಗೆ ಮಲಬದ್ದತೆ ಸಮಸ್ಯೆ ಬರೋದಿಲ್ಲ, ಅಕಸ್ಮಾತ್ ನಿಮಗೆ ಏನಾದ್ರು ಮಲಬದ್ದತೆ ಸಮಸ್ಯೆ ಇದ್ರೆ ಒಟ್ಸ್ ತಿನ್ನುವುದರಿಂದ ಅದರಲ್ಲಿರುವ ಫೈಬರ್ ಅಂಶ ಮಲಬದ್ದತೆ ಕಡಿಮೆಮಾಡುತ್ತದೆ.
ಎಷ್ಟೋ ಜನಕ್ಕೆ ಜೀರ್ಣಕ್ರಿಯೆ ಸರಿಯಾಗಿ ಆಗ್ತಾ ಇರೋದಿಲ್ಲ ಅಂತ ಜನ ಜಿಲುಸಿಲ್ ನಂತಹ ನಾನಾತರ ಟ್ಯಾಬ್ಲೆಟ್ ಟಾನಿಕ್ ತಗಂಡು ಅವಸ್ತೆ ಪಡುತ್ತಾ ಇರ್ತಾರೆ ಅಂತಹ ಜನಕ್ಕೆ ಒಟ್ಸ್ ಒಂದು ಉತ್ತಮ ಆಹಾರ ಇದ್ರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಪೊಟಾಷಿಯಂ ಹೆಚ್ಚು ಇರೋದ್ರಿಂದ ನಿಮ್ಮ ಜೀರ್ಣ ಕ್ರಿಯೆಗೆ ನೆರವಾಗುತ್ತೆ.
ಮುಖಕಾಂತಿಯುತವಾಗಿ ಇರಲು ರಾಸಾಯನಿಕ ಸೋಪ್ ಮತ್ತು ಕ್ರೀಮ್ಗಳ ಮೊರೆ ಹೋಗೋದು ಬಿಟ್ಟು ಶುದ್ದ ಹಾಲಿನಲ್ಲಿ ಒಂದಿಷ್ಟು ಒಟ್ಸ್ ಒಂದು ಗಂಟೆ ನೆನೆಸಿ ನಂತರ ಅದನ್ನ ಪೇಸ್ಟ್ ನಂತೆ ಕಲಿಸಿ ಮುಖಕ್ಕೆ ಹಚ್ಚಿ, ಸ್ವಲ್ಪ ದಿನ ಹೇಗೆ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತೆ.
ನಿಮ್ಮ ದೇಹದ ತೂಕ ಕಡಿಮೆ ಮಾಡೋಕೆ ಇದು ಉತ್ತಮ ಆಹಾರ ಸ್ವಲ್ಪ ಒಟ್ಸ್ ತಿಂದರೆ ಸಾಕು ಹೊಟ್ಟೆ ತುಂಬಿದ ಹಾಗೇ ಅನುಭವ ಆಗುತ್ತೆ, ಇದ್ರಲ್ಲಿರುವ ಕ್ಯಾಲ್ಷಿಯಂ, ಕಬ್ಬಿಣ, ಮೆಗ್ನಿಶಿಯಂ, ದೇಹಕ್ಕೆ ಹೆಚ್ಚು ಕ್ಯಾಲೋರಿ ನೀಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮ ವಾಗಿಸುವುದರಿಂದ ದೇಹದ ತೂಕ ಕಡಿಮೆ ಆಗುತ್ತೆ.
ಇದಿಷ್ಟೇ ಅಲ್ಲ ಒಟ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ಮತ್ತಷ್ಟು ಹತ್ತಾರು ಲಾಭ ಸಿಗುತ್ತೆ, ಮತ್ತೇಕೆ ತಡ ನಾಳೆಯಿಂದಲೇ 40 ರಿಂದ 50 ಗ್ರಾಂ ನಷ್ಟು ಒಟ್ಸ್ ತಿನ್ನುವ ಅಭ್ಯಾಸ ರೂಡಿ ಮಾಡಿಕೊಳ್ಳಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ.
ನಮ್ಮ ವೆಬ್ಸೈಟ್ ನಲ್ಲಿರುವ ಎಲ್ಲ ಮಾಹಿತಿಗೆ ಕಾಪಿ ರೈಟ್ಸ್ ಒಳಗೊಂಡಿದೆ ಅನುಮತಿ ಇಲ್ಲದೆ ಚಿತ್ರಗಳು ಅಥವ ಮಾಹಿತಿ ನಕಲು ಮಾಡಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಚ್ಚರಿಕೆ.