ನೆಗಡಿ ಬಂದ್ರೆ ಮಾತ್ರೆ ಏಕೆ, ಈ ಮನೆ ಮದ್ದು ಮಾಡಿ ಸಾಕು

0
1363

ತುಂಬಾ ಶೀತವಾಗಿದೆಯೇ? ಹಾಗಾದರೆ ನೀವು ಮನೆಯಲ್ಲಿಯೇ ಬಳಸುವ ಆಹಾರಗಳಿಂದ ಅದನ್ನ ಗುಣ ಮಾಡಿಕೊಳ್ಳಬಹುದು. ಶೀತಕ್ಕೆ ಮಾತ್ರೆ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಸಿಗುವ ಈ ವಸ್ತುಗಳಿಂದ ಗುಣ ಮಾಡಿಕೊಳ್ಳೋಣ

ಚಳಿಗಾಲ ಮತ್ತು ಮಳೆ ಕಾಲ ಶುರು ಆಯಿತು ಅಂದ್ರೆ  ವಾತಾವರಣ ತಂಪು ದೇಹದಲ್ಲಿ ರೋಗ ನಿರೋಧಕ ಕಡಿಮೆ ಆಗುತ್ತದೆ.
ಇದಕ್ಕೆ ಕಾರಣವಾದ ,ರಹಿನೋ ವೈರಸ್, ಚಳಿಗಾಲದಲ್ಲಿ ದ್ವಿಗುಣವವಾಗುತ್ತದೆ . ಈ ವೈರಸ್ ಗಳು ಅಂಟು ಕಾಯಿಲೆ. ಈ ಕಾಯಿಲೆ ಕೆಮ್ಮಿನಿಂದ ಕಫಕ್ಕೆ ತಿರುಗುತ್ತದೆ , ಅದಕ್ಕೆ ನಾವು ದೇಹವನ್ನು ಚಳಿಗಾಲದಲ್ಲಿ ಮತ್ತು ಮಳೆ ಕಾಲದಲ್ಲಿ ಅತೀ ಹೆಚ್ಚು ಬೆಚ್ಚಗೆ ಇರಬೇಕು. ಶೀತವಾದಗ ನಮಗೆ ಆಹಾರವನ್ನು ರುಚಿಸಲು ಸಾಧ್ಯವಿಲ್ಲ ಹಾಗೆಯೇ ಈ ಮನೆಯಲ್ಲೇ ಮಾಡಿಕೊಳ್ಳುವ ಈ   ಮನೆಮದ್ದನ್ನು ಉಪಯೋಗಿಸಿ.

ಬಿಸಿನೀರು;. ಬಿಸಿನೀರಿಗೆ ನಿಂಬೆರಸ ಮತ್ತು ಜೇನತುಪ್ಪವನ್ನು ಹಾಕಿ ಕುಡಿಯುವುದರಿಂದ ನಿಮಗೆ ತುಂಬಾ ಉಪಕ್ತವಾಗಿವೆ. ನಿಂಬೆರಸ ಮತ್ತು ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಗಂಟಲಿನ ಕಿರಿಕಿರಿ, ಪ್ರತಿರೋಧಕ ಶಕ್ತಿ, ವೈರಲ್ ಕೊಲ್ಲುವಿಕೆ, ಇನ್ನು ಮುಂತಾದ ಉಪಯೋಗ ನಿಮಗೆ ಸಿಗುತ್ತದೆ.

ಎಳನೀರು;. ಇದರಲ್ಲಿ ವಿದ್ಯಿದ್ವಿಚ್ಚೆದಗಳು, ದ್ರವಗಳು, ಪ್ರತಿರೋಧಕಗಳು,ಲಾರಿಕ್ ಆಮ್ಲ, ಮತ್ತು ಕ್ಯಾಪ್ರಿಲಿಕ್ ಆಮ್ಲ ಇದೆ. ಎಳನೀರು ಕುಡಿಯಿರಿ ಹಾಗೂ ಇದು ಬ್ಯಾಕ್ಟೀರಿಯಾಗಳನ್ನು ಕೊ ಲ್ಲುತ್ತದೆ ಮತ್ತು ಶೀತಕ್ಕೆ ಒಳ್ಳೆಯದು.

ಬೆಳ್ಳುಳ್ಳಿ;. ಇದು ಶೀತದಲ್ಲಿ ತುಂಬಾ ಪಾತ್ರವಹಿಸುತ್ತದೆ. ಇದರಲ್ಲಿ, ನಂಜು ನಿರೋಧಕ, ವಿಟಮಿನ್ ಸಿ, ಸೆಲೆನಿಯಮ್, ಮತ್ತು ಖನಿಜಾಂಶಗಳನ್ನು ಹೊಂದಿದೆ. ಇದು ಕಫಹಾರಿ ಯಾಗಿದ್ದು , ಶೀತವನ್ನು ಕಡಿಮೆ ಮಾಡಲು ಇದು ತುಂಬಾ ಪಾತ್ರವಹಿಸುತ್ತದೆ. ಇದನ್ನೂ ಒಂದು ಲೋಟ ನೀರಿಗೆ ಬೆಳ್ಳುಳ್ಳಿ ಪೇಸ್ಟ್ ಹಾಕಿ ಪ್ರತಿದಿನ ಕುಡಿಯಿರಿ.

ಗೆಣಸು;. ಗೆಣಸಿನಲ್ಲಿ ವಿಟಮಿನ್ ಸಿ ಇದೆ, ಗೆಣಸು ಪ್ರತಿರೋಧಕ ಶಕ್ತಿ ಹಾಗೂ ದೇಹಕ್ಕೂ ಶಕ್ತಿ ನೀಡುತ್ತದೆ. ಗೆಣಸನ್ನು ಬೇಯಿಸಿ ಅದರ ನೀರು ಸೇವಿಸಿ ಆರೋಗ್ಯ ನಿಮ್ಮದಾಗಿಸಿ.

ಬಾಳೆಹಣ್ಣು;. ಇದನ್ನು ನೋಡಿ ಆಶ್ಚರ್ಯ ಪಡಬೇಕಾಗಿಲ್ಲ, ಆದರೆ ಇದರಲ್ಲಿ ವಿಟಮಿನ್ ಸಿ, ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ಕೆಲವರಿಗೆ ಬಾಳೆ ಹಣ್ಣು ಶೀತ ಎನ್ನುವುದರಿಂದ ಶೀತವಾದಾಗ  ಏಲಕ್ಕಿ ಬಾಳೆ ಹಣ್ಣು ಮಾತ್ರ ಸೇವನೆಗೆ ಯೋಗ್ಯ.

ಕೆಲವರಿಗೆ ಅತೀಯಾದ ಉಷ್ನದಿಂದ ಸಹ ಶೀತ  ಶುರು ಆಗುತ್ತೆ ಅಂತಹ ಜನರು ದೇಹವನ್ನು ತಂಪಾಗಿ ಇಡಲು ಉಷ್ಣವನ್ನು ಕಡಿಮೆ ಮಾಡಲು ಸಬ್ಬಕಿ ಪಾಯಸ ಅಥವ ಹೆಸರು ಬೆಳೆ ಕೀರು ಮಾಡಿ ಸೇವಿಸಿದರೆ ಶೀತ ಬೇಗ ಗುಣವಾಗುತ್ತದೆ.

ತಿಳಿಯಿರಿ 8 ದಿನಕ್ಕೂ ಹೆಚ್ಚು ಶೀತ ಹಾಗೇ ನಿಮ್ಮಲ್ಲಿ ಉಳಿದುಕೊಂಡರೆ ಮನೆ ಮದ್ದು ನಿಲ್ಲಿಸಿ ಹತ್ತಿರದ ವೈದ್ಯರ ಸಂಪರ್ಕ ಮಾಡಿಕೊಳ್ಳುವುದು ಸೂಕ್ತ, ಅನವಶ್ಯ ಮಾತ್ರೆ ನುಂಗುವ ಬದಲು ಮನೆಯಲ್ಲೇ ಸಿಗುವ ಆಹಾರ ಧಾನ್ಯಗಳಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ಸ್ನೇಹಿತರೇ ನಮ್ಮ ವೆಬ್ಸೈಟ್ ನಲ್ಲಿರುವ ಎಲ್ಲ ಮಾಹಿತಿಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರ ನಕಲು ಮಾಡುವುದು ಅಥವ ಬರಹಗಳು ಬಳಕೆ ಮಾಡಿದ್ರೆ ಕಾನೂನು ರೀತಿಯ ಕ್ರಮ ಜರಗುಗಿಸಲಾಗುವುದು.

LEAVE A REPLY

Please enter your comment!
Please enter your name here