ನೆಲದ ಮೇಲೆ ಕುಳಿತು ಉಟ ಮಾಡುವವರಿಗೆ ಇಪ್ಪತ್ತು ಲಾಭಗಳು ಸಿಗುತ್ತೆ

0
1557

ಇತ್ತೀಚಿನ ದಿನಗಳಲ್ಲಿ ಯಾರು ಸಹ ನೆಲದ ಮೇಲೆ ಕುಳಿತು ಊಟ ಮಾಡಲು ಇಷ್ಟ ಪಡುವುದಿಲ್ಲ ಆದರೆ ಹಿಂದಿನ ಕಾಲದಲ್ಲಿ ಕೆಳಗೆ ಕೂತು ಊಟ ಮಾಡಿದರೆ ತೃಪ್ತಿ ಸಿಗುತ್ತದೆ ಎಂದು ಹೇಳಿ ಕೆಳಗೆ ಕೂತು ಊಟ ಮಾಡುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ಯಾರು ಸಹ ಕೆಳಗೆ ಕೂತು ಊಟ ಮಾಡಲು ಇಷ್ಟ ಪಡುವುದಿಲ್ಲ ಜೊತೆಗೆ ಮೈ ಬಗ್ಗಿಸಿ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಕೆಳಗೆ ಕೂತು ಕಾಲು ಮಡಚಿ ಊಟ ಮಾಡಲು ಇಷ್ಟ ಪಡುವುದಿಲ್ಲ.

ನಮ್ಮಲ್ಲಿ ಕೆಲವು ಜನ ಊಟ ಮಾಡಲೆಂದೆ ಡೈನಿಂಗ್ ಟೇಬಲ್,ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ನಿಮಗೆ ಆರಾಮದಾಯಕವಾಗಿರಬಹುದು.ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ.

ಕೆಳಗೆ ಕೂತು ಊಟ ಮಾಡುವುದರಿಂದ ನಮಗೆ ಅರಿವೇ ಇಲ್ಲದಸ್ಟು ಉಪಯೋಗಗಳನ್ನು ನಾವು ಪಡೆದುಕೊಳ್ಳಬಹುದು. ಅದು ಏನು ಎಂದು ಯೋಚಿಸುತ್ತಿದ್ದಿರ ಬನ್ನಿ ತಿಳಿಯೋಣ…

ಕೆಳಗೆ ಕೂತು ಊಟ ಮಾಡುವಾಗ ನಾವೂ ಎರಡು ಕಾಲುಗಳನ್ನು ಮಾಡಚಿ ಕುಳಿತುಕೊಳ್ಳುತ್ತೇವೆ ಇದು ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಮಾಡುವ ವ್ಯಾಯಾಮ ಎಂದು ಸಹ ಏಳಬಹುದು.. ಜೊತೆಗೆ ಕೆಳಗೆ ಕುಳಿತು ಊಟ ಮಾಡುವಾಗ ಮನೆಯಲ್ಲಿ ಯಾವ ಯಾವ ಅಡುಗೆಗಳನ್ನು ಮಾಡಿರುತ್ತಾರೆ ಎಂಬುದು ಗೊತ್ತಾಗುತ್ತದೆ ಜೊತೆಗೆ ನಮಗೆ ಇಷ್ಟ ಆಗುವುದನ್ನು ನಾವು ಬಡಿಸಿಕೊಂಡು ಊಟ ಮಾಡಬಹುದು.

ಕೆಳಗೆ ಕುಳಿತುಕೊಂಡಗ ಅದು ನಮ್ಮ ದೇಹಕ್ಕೆ ಒಂದು ರೀತಿಯ ವ್ಯಾಯಾಮವಾಗಿ ನಮ್ಮ ಮನಸ್ಸಿಗೆ ಶಾಂತಿಯನ್ನು ತಂದು ಕೊಡಲು ಸಹಾಯಕ ವಾಗುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡಿದರೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸು ದೇಹ ಸ್ಥಿರ ಪ್ರಜ್ಞೆಯನ್ನು ಕಾಯ್ದುಕೊಳ್ಳುತ್ತದೆ.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ದೇಹದ ಹೆಚ್ಚಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ದೇಹದ ತೂಕವನ್ನು ಇಳಿಕೆಯಾಗುತ್ತದೆ.

ನೆಲದ ಮೇಲೆ ಊಟಕ್ಕೆ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ಸಹ ವಿಶ್ರಾಂತಿಯನ್ನು ಪಡೆಯುತ್ತದೆ.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹೆಚ್ಚು ದಿನಗಳು ಬದುಕಬಹುದು ಎಂದು ಯುರೋಪಿಯನ್ ಅಧ್ಯಯನದ ಮೂಲಕ ತಿಳಿಸಿದೆ. ಹೆಚ್ಚು ಮಂದಿಗೆ ಕೋಪ ಬೇಗನೆ ಬರುತ್ತದೆ ಅಂತವರು ನೆಲೆದ ಮೇಲೆ ಊಟ ಮಾಡಿದರೆ ಕೋಪ ಕಡಿಮೆಯಾಗುತ್ತದೆ.

ಮನೆಯ ಮಂದಿಯಲ್ಲ ಊಟಕ್ಕೆ ಕುಳಿತು ಎಲ್ಲಾ ರೀತಿಯ ಅಡುಗೆಯನ್ನು ನೆಲದ ಮೇಲೆ ಇಟ್ಟುಕೊಂಡು ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದರೆ ಅದರಲ್ಲಿ ಸಿಗುವ ಆನಂದ ಬೇರೆ ಹೌದು ಎಲ್ಲರ ಮನಸ್ಸಿಗೂ ಸಂತೋಷ ಸಿಗುತ್ತದೆ ಜೊತೆಗೆ ಮನೆಯ ಮಂದಿಗೆಲ್ಲ ಭಾಂಧವ್ಯ ಹೆಚ್ಚುತ್ತದೆ. ಇನ್ನೊಂದು ಉತ್ತಮ ಉಪಯೋಗ ಎಂದರೆ ನೆಲದ ಮೇಲೆ ಊಟಕ್ಕೆ ಕುಳಿತುಕೊಂಡರೆ ನಮ್ಮ ಬೆನ್ನು ನೆರವಾಗುತ್ತದೆ ಜೊತೆಗೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಚಿಕ್ಕ ಪುಟ್ಟ ನೋವುಗಳು ಇದ್ದರೆ ಮಾಯವಾಗುತ್ತದೆ.

ಕೆಳಗೆ ಕುಳಿತು ಊಟ ಮಾಡುವುದರಿಂದ ನಮ್ಮ ದೇಹದ ಎಲ್ಲ ಭಾಗಗಳಿಗೂ ರಕ್ತ ಪರಿಚಲನೆ ಸರಗವಾಗುತ್ತದೆ. ಜೊತೆಗೆ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ಎಲ್ಲರೂ ಹೇಳುವ ಇಂದಿನ ಸಾಮಾನ್ಯ ಸಮಸ್ಯೆ ಸಂಧಿ ನೋವು ಮೊಣಕಾಲು ಮೊಣಕೈ ಮಂಡಿ ಕತ್ತು ಬೆನ್ನು ಹೀಗೆ ಹೇಳುವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಡಿ ಮಾಡಿಕೊಳ್ಳಬೇಕು. ನೆಲದಲ್ಲಿ ಅಯಸ್ಕಾಂತ ಇರುತ್ತದೆ ಇದು ಮಾನವನ ದೇಹವನ್ನು ಆಕರ್ಷಿಸುತ್ತದೆ. ಹಾಗಾಗಿ ನೆಲದ ಮೇಲೆ ಕುಳಿತು ಊಟ ಮಾಡುವಾಗ ನಮ್ಮ ದೇಹಕ್ಕೆ ಹೆಚ್ಚು ಕಬ್ಬಿಣದ ಅಂಶ ದೊರಕುತ್ತದೆ.

ನೆಲದ ಮೇಲೆ ಕುಳಿತು ಊಟ ಮಾಡುವುದರ ಜೊತೆಗೆ ನಾವು ಊಟ ಮಾಡುವ ತಟ್ಟೆ ಅಥವಾ ಎಲೆಯನ್ನು ಸಹ ನೆಲದ ಮೇಲೆ ಇಟ್ಟುಕೊಂಡು ಬಗ್ಗಿ ಊಟಮಾಡಬೇಕು ಹೀಗೆ ಮಾಡುವುದರಿಂದ ನಮ್ಮ ಭುಜಗಳಿಗೆ. ಬೆನ್ನಿಗೆ ಕೈಗೆ ಒಂದು ರೀತಿಯ ಕೆಲಸವಾಗುತ್ತದೆ ಜೊತೆಗೆ ಮೂಳೆಗಳು ಫ್ರೀ ಯಾಗುತ್ತವೆ. ಜೊತೆಗೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಹಾಗೂ ನಾವು ಮಾಡಿದ ಊಟ ತೃಪ್ತಿ ಸಿಗುತ್ತದೆ.

ಹಾಗಾಗಿ ಎಷ್ಟೇ ಡೈನಿಂಗ್ ಟೇಬಲ್. ಚೆರ್.ಬೆಂಚುಗಳು ಇದ್ದರು ನೆಲದ ಮೇಲೆ ಕುಳಿತು 10 ರಿಂದ 15 ನಿಮಿಷ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಹಲವಾರು ರೀತಿಯ ಸಮಸ್ಯೆಗೆ ಪರಿಹಾರ ಸಿಕ್ಕಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಂಡು ಖುಷಿಯಾಗಿ ಇರಬಹುದು.

ನಮ್ಮ ವೆಬ್ಸೈಟ್ ಎಲ್ಲ ಬರವಣಿಗೆಗಳಿಗೆ ಮತ್ತು ಚಿತ್ರಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಮಾಹಿತಿ ನಕಲು ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ರೀತಿಯ ಕ್ರಮ ಜರಗುಗಿಸಲಾಗುವುದು.

 

LEAVE A REPLY

Please enter your comment!
Please enter your name here