ಬೆಳ್ಳಗೆ ಸಮಯ ಖಾಲಿ ಹೊಟ್ಟೆಯಲ್ಲಿ ಟೀ ಕಾಫೀ ಕುಡಿಯೋ ಬದಲು ನೀರು ಕುಡಿದರೆ ಹತ್ತಾರು ಲಾಭ

0
1047

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳು ನಿಮಗೆ ಗೊತ್ತೇ ?

ಅಮೃತ ಎಂಬುದು ಎಷ್ಟು ಒಳ್ಳೆಯದು ಎಂದು ಎಲ್ಲರಿಗು ಗೊತ್ತು ಆ ಅಮೃತಕ್ಕೆ ಸಮಾನವಾದದ್ದು ನೀರು ಎಂಬುದು ಸಹ ನಿಮಗೆ ಗೊತ್ತೇ ನೀರು ಮನುಷ್ಯನ ಎಲ್ಲ ರೀತಿಯ ಆರೋಗ್ಯದ ಸಮಸ್ಯೆಯನ್ನು ದೂರಮಾಡಬಲ್ಲ ಜೊತೆಗೆ ಯಾವ ರೋಗವು ಸಹ ಹತ್ತಿರ ಬಾರದ ಹಾಗೆ ನೋಡಿಕೊಳ್ಳುವ ಶಕ್ತಿಯನ್ನು ಹೊಂದಿದೆ .

ಇಂತಹ ನೀರನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂಬುದು ಸಹ ಅಷ್ಟೇ ಮುಖ್ಯ ಹೌದು ಈಗ ಹೇಗೆ ನಾವು ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವಿಸುತ್ತೇವೋ ಜೊತೆಗೆ ಯಾವ ಯಾವ ಡ್ರೆಸ್ ಯಾವ ಸಮಯದಲ್ಲಿ ಅಕೋಬೇಕು ಎಂಬುದನ್ನು ಯೋಚಿಸುತ್ತೇವೆ ಅಲ್ಲವೇ ಅದೇ ರೀತಿ ನೀರು ಸಹ ಈಗ ಊಟ ಅದ ನಂತರ ಒಂದೇ ಸಲ ಎರಡು ಲೀಟರು ನೀರು ಕುಡಿದರೆ ಅದು ಒಳ್ಳೆಯದೇ ಹಾಗೆ ಕುಡಿದರೆ ತಿಂದ ಆಹಾರದ ಜೊತೆಗೆ ಕುಡಿದ ನೀರೆಲ್ಲ ಹೊರಗೆ ಬರುತ್ತದೆ ಅಲ್ಲವೇ .

ಅದಕ್ಕೆ ಆಹಾರ ಸೇವಿಸಿದ ತಕ್ಷಣ ಹೆಚ್ಚು ನೀರು ಸೇವಿಸುವುದೇ ಆಗಲಿ ,ಇಲ್ಲ ಊಟ ಮಾಡುವ ಮದ್ಯದಲ್ಲಿ ನೀರು ಕುಡಿಯುವುದು ಮಾಡಬೇಡಿ ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ .

ಹಾಗಾದರೆ ಯಾವ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದು ಎಂದರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ಆರೋಗ್ಯವನ್ನು ಉತ್ತಮ ಪಡಿಸುತ್ತದೆ . ಜೊತೆಗೆ ನಿಮ್ಮ ಎಲ್ಲ ರೀತಿಯ ಅರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ .

ಹಾಗಾದರೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಆಗುವ ಲಾಭಗಳು ಏನು ಎಂಬುದನ್ನು ನೋಡೋಣ ಬನ್ನಿ.

ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ರೀತಿಯ ಆಹಾರವನ್ನು ಸೇವಿಸದೇ ಮೊದಲು ನೀರು ಕುಡಿಯಿರಿ ಇದು ನಿಮಗೆ ಆ ದಿನದ ಒಳ್ಳೆಯ ಅಮೂಲ್ಯವಾದ ಶಕ್ತಿಯನ್ನು ಒದಗಿಸುವ ಪೌಷ್ಠಿಕವಾದ ಆಹಾರವಾಗಿರುತ್ತದೆ .ಜೊತೆಗೆ ಆ ಇಡೀ ದಿನವನ್ನು ಲವಲವಕಿಯಿಂದ ಕೂಡಿರಲು ಸಹಾಯವಾಗುತ್ತದೆ .
ಹಾಗೆಂದು ಬೆಳಿಗ್ಗೆ ನೀರು ಕುಡಿಯಬೇಕು ಎಂದು ಫ್ರೀಜ್ ನೀರು ಅಥವಾ ತಣ್ಣೀರು ಕುಡಿದರೆ ಅರೋಗ್ಯ ಸಮಸ್ಯೆ ಹೋಗುವುದಿಲ್ಲ ಹೆಚ್ಚುತ್ತದೆ ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಬೇಕು ಇದರಿಂದ ಆಗುವ ಲಾಭಗಳು ಏನು ನೋಡೋಣ ಬನ್ನಿ .

ನೀರು ಕುಡಿದ ನಂತರ ನೀವು ಮಲ ವಿಸರ್ಜನೆ ಮಾಡುತ್ತೀರಿ ಇದು ನಿಮ್ಮ ಕರುಳಿನ ಕೆಟ್ಟ ಅಂಶವನ್ನು ತೆಗೆದು ಹಾಕಿ ಆರೋಗ್ಯವಾಗಿ ಇರಲು ಸಹಾಯ ಮಾಡುತ್ತದೆ .

ಬಿಸಿ ನೀರು ಕುಡಿಯುವುದರಿಂದ ಬೆಳಗ್ಗಿನ ನಿತ್ಯ ಕಾರ್ಯಗಳು ಸರಾಗವಾಗಿ ಆಗುತ್ತದೆ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಹೊರ ಹೋಗುತ್ತವೆ . ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವನೆಯಿಂದ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪದಾನೆ ಹೆಚ್ಚುತ್ತದೆ. ಕರುಳಿನಲ್ಲಿ ಯಾವುದೇ ರೀತಿಯ ಕಲ್ಲುಗಳು ಇದ್ದರು ಈ ನೀರು ಅದನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ .

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುವ ತಲೆನೋವು ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಸುಲಭ ಮಾರ್ಗ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಸೇವನೆ .  ಜೊತೆಗೆ ಇಂದಿನ ದಿನಗಳಲ್ಲಿ ಎಲ್ಲರ ಸಾಮಾನ್ಯ ಸಮಸ್ಯೆ ಹೆಚ್ಚುತ್ತಿರುವ ತೂಕ. ಹಾಗು ಹೆಚ್ಚಿನ ಬೊಜ್ಜು .ಇದನ್ನು ಕಡಿಮೆ ಮಾಡಿಕೊಳ್ಳಲು ಮಾಡುವ ಹಾರ ಸಾಹಸ ಒಂದಲ್ಲ ಎರಡಲ್ಲ ಆದರೆ ಇದಕ್ಕೆ ಸುಲಭ ಮಾರ್ಗ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಸುಲಭವಾಗಿ ತೂಕ ಬೊಜ್ಜು ಇಳಿಸಬಹುದು .

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮಲ್ಲಿನ ಹೆಚ್ಚು ಕೋಪ. ಉದ್ವೇಗ. ವನ್ನು ಸಹ ಕಡಿಮೆಯಾಗುತ್ತದೆ . ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವನೆಯಿಂದ ನಮ್ಮ ತ್ವಚೆ ಸಹ ಮೃದುವಾಗುತ್ತದೆ .ಮೊಡವೆಗಳು . ನುಚ್ಚು ತುರಿಕೆಗಳು . ನರಿಗೆಗಳು ಬರುವುದನ್ನು ತಡೆಯಬಹುದು .

ಹಾಗಾಗಿ ಎಲ್ಲರು ಬೆಳಿಗ್ಗೆ ಎದ್ದು ಟೀ, ಕಾಫಿ ,ಕುಡಿಯುವುದನ್ನು ಬಿಟ್ಟು ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದರಿಂದ ನಿಮ್ಮ ಎಲ್ಲ ರೀತಿಯ ಅರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಂಡು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ ಹಾಗಾಗಿ ನೀವು ಸಹ ಇದನ್ನು ರೂಡಿಸಿಕೊಳ್ಳಿ ಆರೋಗ್ಯವಾಗಿರಿ .

LEAVE A REPLY

Please enter your comment!
Please enter your name here