ಭೂಮಿ ಮೇಲೆ ಪವಾಡ ಮಾಡುತ್ತಿರುವ ಗುರು ರಾಘವೇಂದ್ರ ಸ್ವಾಮಿಗಳು

0
1193

ರಾಯರ ಬಗ್ಗೆ ನಾವು ನಿಜಕ್ಕೂ ಎಷ್ಟು ಹೇಳಿದ್ರು ಸಾಕಾಗೋದಿಲ್ಲ ಏಕೆ ಅಂದ್ರೆ ನಾವು ರಾಯರ ಎಲ್ಲ ಮಹಿಮೆಗಳನ್ನ ಸಾವಿರ ಪುಸ್ತಕದಲ್ಲಿ ಬರೆದರೂ ಅದು ಕಡಿಮೆ ಬಿಡಿ ಅಷ್ಟು ಪವಾಡಗಳನ್ನ ರಾಯರು ಮಾಡಿದ್ದಾರೆ, ಹೀಗೆ ಹೇಳುತ್ತಾ ಹೋದ್ರೆ ರಾಯರ ಬಗ್ಗೆ ದಿನವಿಡೀ ಹೇಳಿದ್ರು ಸಾಕಾಗೋದಿಲ್ಲ ಆದರು ನನಗೆ ಅನುಭವ ಆಗಿರೋ ಒಂದು ಅದ್ಬುತ ಘಟನೆ ಹೇಳಲು ಇಚ್ಚಿಸುತ್ತೇನೆ.

ಇತ್ತೀಚಿಗೆ ನಾನು ನನ್ನ ಕೆಲವು ಸ್ನೇಹಿತರೊಂದಿಗೆ ಮಂತ್ರಾಲಯ ಭೇಟಿ ನೀಡಿದ್ದೆ ತುಂಗೆಯಲ್ಲಿ ಮಿಂದು ಬೆಳ್ಳಂ ಬೆಳ್ಳಗೆ ಗುರು ರಾಯರ ದರ್ಶನ ಪಡೆಯಲು ಹೊರಟೆ,
ಸರದಿ ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆದು ನಂತರ ಜನ ಸಂದಣಿ ಕಡಿಮೆ ಇರೋದಕ್ಕೆ ರಾಯರ ಬೃಂದಾವನದ ಎದುರು ಕುಳಿತು ಸ್ವಲ್ಪ ಸಮಯ ರಾಯರ ಧ್ಯಾನ ಮಾಡಿದೆ.

ನಂತರ ಸ್ನೇಹಿತರ ಕೂಗುವಿಗೆ ಹೋಗೋಣ ಎಂದು, ಅಷ್ಟರಲ್ಲಿ ಒಂದು ದೃಶ್ಯ ಕಂಡೆ ಹತ್ತಾರು ಸಾವಿರ ಹಣ ಕೊಟ್ಟವರಿಗೆ ಮಾತ್ರ ಗುರುಗಳ ಮುಂದೆ ನಿಂತು ನೇರ ದರ್ಶನ ಮಾಡಲು ಅವಕಾಶ ಕೊಟ್ಟಿದ್ದು ಮತ್ತು ಅವರಿಗೆ ರಾಯರ ಮುಂದೆ ಇರುವ ಮಂತ್ರಾಕ್ಷತೆ ಮತ್ತು ಪುಷ್ಪ ಪ್ರಸಾದ ನೀಡುತ್ತಾ ಇರೋದು.

ಇದೆಲ್ಲವೂ ನೋಡಿ ನನಗು ಆಸೆ ಆಯಿತು, ನನಗು ಹೀಗೆ ರಾಯರ ಮುಂದೆ ದರ್ಶನಕ್ಕೆ ಹೋಗ್ಬೇಕು ಅಲ್ಲಿರುವ ಪುಷ್ಪ ಪ್ರಸಾದ ಮತ್ತು ಮಂತ್ರಾಕ್ಷತೆ ಪಡೆದುಕೊಳ್ಳಬೇಕು ಎಂದು ಆದ್ರೆ ಅಲ್ಲಿ ಹತ್ತಾರು ಸಾವಿರ ಹಣ ಕೊಟ್ಟವರಿಗೆ ಮಾತ್ರ ಪ್ರವೇಶ ಇತ್ತು ನನ್ನ ಬಳಿ ಅಷ್ಟು ಹಣ ಕೊಡ ಇರಲಿಲ್ಲ ಏಕೆ ಅಂದ್ರೆ ನಾನೊಬ್ಬ ಬಡವ.

ಯೋಚನೆ ಮಾಡದೆ ಹೊರಡುವ ಮುನ್ನ ರಾಯರ ಬಳಿ ಕೇಳಿಯೇ ಬಿಟ್ಟೆ ಹೇ ಗುರುವೇ ನಾನು ನಿಮ್ಮ ಮುಂದೆ ನಿಂತು ನನ್ನ ಕಣ್ಣಲ್ಲಿ ನಿಮ್ಮನು ತುಂಬಿಕೊಳ್ಳಬೇಕು, ಮತ್ತು ನನಗೆ ನಿಮ್ಮ ಮುಂದೆ ಇರುವ ಮಂತ್ರಾಕ್ಷತೆ ಮತ್ತು ಪುಷ್ಪ ಪ್ರಸಾದ ಬೇಕು ಎಂದು ಹೇಳಿ ಅಲ್ಲಿಂದ ಹೊರಟು ಬಿಟ್ಟೆ.

ನಂತರ ನಮ್ಮ ಸ್ನೇಹಿತರೊಂದಿಗೆ ಬಿಚ್ಚಾಲೆಯಲ್ಲಿ ಗುರುಗಳ ದರ್ಶನ ಪಡೆದು ಅಪ್ಪಣ್ಣಚಾರ್ಯರ ಮನೆಗೆ ಹೊರಟೆ ಅಲ್ಲಿದ್ದ ಅಪ್ಪಣ್ಣಚಾರ್ಯ ವಂಶಸ್ಥರೊಬ್ಬರು ಆ ಮನೆಯ ಹಿನ್ನಲೆ ವಿವರಣೆ ನೀಡಿದರು ನಂತರ ನಾವು ಮಠಕ್ಕೆ ಮತ್ತೊಮ್ಮೆ ದರ್ಶನಕ್ಕೆ ಹೊರಟೆವು.

ನಾನು ರಾಯರ ಬಳಿ ಹೇಳಿದ ಹಾಗೇ ನಮಗೆ ರಾಯರ ವಿಶೇಷ ದರ್ಶನ ನೋಡುವ ಸೌಭಾಗ್ಯ ಸಿಕ್ಕಿತು ನಂತರ ಕೆಲವು ಸಮಯ ರಾಯರ ಬೃಂದಾವನದ ಬಳಿ ನಿಂತು ಭಕ್ತಿಯಿಂದ ಗುರುಗಳನ್ನು ಪ್ರಾರ್ಥನೆ ಮಾಡಿ ನಂತರ ಹೊರಡುವಷ್ಟರಲ್ಲಿ ಅಲ್ಲಿದ್ದ ಅರ್ಚಕರಲ್ಲಿ ಒಬ್ಬರು ಮಗು ತಗೋ ಈ ಕಲ್ಲು ಸಕ್ಕರೆ ಪ್ರಸಾದ ಮತ್ತು ಹೂವಿನ ಪ್ರಸಾದ ಎಂದು ನೀಡಿದರು,

ಪ್ರಸಾದ ಪಡೆದುಕೊಂಡ ನನಗೆ ಏನೋ ಆಶ್ಚರ್ಯ, ಏನೋ ಆನಂದ ನನ್ನ ಮನಸಿನ ಮಾತು ಗುರು ರಾಯರಿಗೆ ಕೇಳಿಸಿದೆ, ನಾನು ಕೇಳಿದ ಹಾಗೇ ತಮ್ಮ ಬೃಂದಾವನದ ಮುಂದೆ ಇರುವ ಪ್ರಸಾದ ಸಿಗುವ ಹಾಗೇ ಮಾಡಿದಕ್ಕೆ ಕೋಟಿ ಕೋಟಿ ನಮನಗಳು ತಿಳಿಸಿದೆ,

ಇದು ಕೇವಲ ನನಗೆ ಸಿಕ್ಕ ಒಂದು ಉದಾಹರಣೆ ಅಷ್ಟೇ, ನಮ್ಮ ಮನಸಿನಲ್ಲಿ ಅಂದುಕೊಂಡ ಅದೆಷ್ಟೋ ಕಾರ್ಯಗಳು ಮತ್ತು ಕೆಲಸಗಳು ನಮ್ಮ ಗುರು ರಾಯರು ನಡೆಸಿಕೊಟ್ಟಿದ್ದಾರೆ, ಕಲಿಯುಗದ ಕಾಮಧೇನು ಭಕ್ತರ ಪಾಲಿನ ಸಂಜೀವಿನಿ ಗುರು ರಾಘವೇಂದ್ರ ಗುರು ಸಾರ್ವಭೌಮರ ನಂಬಿದ್ರೆ ಎಂದು ಕೆಡುಕು ಆಗೋದಿಲ್ಲ.

ಮಹಿಮೆ ಓದಿದ ಮೇಲೆ ಶೇರ್ ಮಾಡಿ ಏಕೆ ಅಂದ್ರೆ ರಾಯರ ಮಹಿಮೆ ಪ್ರಚಾರ ಮಾಡುವುದು ಕೂಡ ಒಂದು ಪುಣ್ಯದ ಕೆಲಸ,

LEAVE A REPLY

Please enter your comment!
Please enter your name here