ಐದು ಸಾವಿರ ವರ್ಷಗಳ ಪುರಾತನ ದೇಗುಲ

0
1105

ಬೇಡಿ ಬಂದವರ ಕಷ್ಟಗಳನ್ನೂ ನಿವಾರಿಸುತ್ತಿರುವ ತಾಯಿ. ಇಂತಹ ವಿಶಿಷ್ಟ ದೇವರ ಮೂರ್ತಿ ಇಡೀ ಪ್ರಪಂಚದಲ್ಲೇ ಮತ್ತೊಂದಿಲ್ಲ ಎಂದು ಹೇಳಿದ್ರೆ ತಪ್ಪಾಗಲಾರದು.

ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಾಲಯ ನಮ್ಮ ದೇಶದಲ್ಲಿರುವ ಅತ್ಯಂತ ಪುರಾಣ ದೇವಾಲಯಾಗಳಲ್ಲಿ ಇದು ಒಂದು ಎಂದರೆ ತಪ್ಪಾಗಲಾರದು ಏಕೆ ಅಂದ್ರೆ ಈ ದೇಗುಲಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇದೆ,

ಈ ದೇವಾಲಯ ದಲ್ಲಿರುವ ರಾಜರಾಜೇಶ್ವರಿ ತಾಯಿ ಅತ್ಯಂತ ಶಕ್ತಿ ಮತ್ತು ಜನರ ಕಷ್ಟಗಳನ್ನ ಪವಾಡದ ರೀತಿಯಲ್ಲಿ ಬಗೆಹರಿಸುತ್ತಾಳೆ, ಪ್ರತಿ ನಿತ್ಯ ಸಾವಿರಾರು ಜನ ದೇವಿಯ ದರ್ಶನ ಪಡೆಯಲು ನಾನಾ ರಾಜ್ಯಗಳಿಂದ ಬರುತ್ತಾರೆ.

ಈ ದೇವಾಲಯವನ್ನು ಸುರಥ ಮಹಾರಾಜ ಕಟ್ಟಿಸಿದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ, ವೈರಿಗಳ ಎದುರು ಯುದ್ದವನ್ನು ಸೋತ ಸುರಥ ಮಹಾರಾಜ ತನ್ನ ಬಳಿ ಇರುವ ಸರ್ವವನ್ನು ಕಳೆದುಕೊಂಡು ಬೀದಿಪಾಲಾಗುತ್ತಾನೆ, ಹೀಗೆ ಒಮ್ಮೆ ತನ್ನ ಎಲ್ಲ ಕಷ್ಟಗಳನ್ನು ಋಷಿಮುನಿಗೆ ತಿಳಿಸುತ್ತಾನೆ ಆಗ ಆ ಅರಸನಿಗೆ ಋಷಿಗಳು ಮಂತ್ರೋಪದೇಶ ಮಾಡಿ ತಾಯಿ ಆದಿ ಶಕ್ತಿಯನ್ನು ಧ್ಯಾನ ಮಾಡಲು ತಿಳಿಸುತ್ತಾರೆ,

ಋಷಿಗಳ ಮಾತು ಪಾಲಿಸಿದ ಸುರಥ ಮಹಾರಾಜ ತಾಯಿಯನ್ನು ಜಪಿಸುತ್ತಾನೆ, ಧ್ಯಾನ ಮಾಡುತ್ತಾನೆ ದಿನಗಳು ಕಳೆದಂತೆ ಸುರಥ ಮಹಾರಾಜರಿಗೆ ಒಂದು ಕನಸು ಬೀಳುತ್ತೆ, ಆಸ್ಥಾನರೂಢಳಾಗಿ ಪರಿವಾರ ಸಮೇತ ಕುಳಿತಿರುವ ದೇವಿಯನ್ನು ಕನಸಿನಲ್ಲಿಕಂಡು ಆಶ್ಚರ್ಯ ಪಡುತ್ತಾನೆ, ತನ್ನ ಕನಸಿನ ಬಗ್ಗೆ ಋಷಿಗಳ ಬಗ್ಗೆ ತಿಳಿಸಿದಾಗ, ನೀನು ಕನಸಿನಲ್ಲಿ ಕಂಡಂತೆಯೇ ಮೂರ್ತಿಯನ್ನು ಸ್ಥಾಪನೆ ಮಾಡು ಎಂದು ತಿಳಿಸುತ್ತಾರೆ. ಆ ಋಷಿಗಳು ತಿಳಿಸಿದ ಹಾಗೇ ಸುರಥ ಮಹಾರಾಜ ಮಣ್ಣಿನ ರೂಪದಲ್ಲಿ ತಾಯಿ ರಾಜರಾಜೇಶ್ವರಿ ವಿಗ್ರಹ ಸ್ಥಾಪನೆ ಮಾಡಿ ಅದಕ್ಕೆ ಪೂಜಿಸುತ್ತಾರೆ, ಹೀಗೆ ಮಾಡಿದ ಕೆಲವು ದಿನದಲ್ಲೇ ತಾನು ಕಳೆದುಕೊಂಡ ಸಂಪೂರ್ಣ ರಾಜ್ಯವನ್ನು ಮರಳಿ ಪಡೆಯುತ್ತಾನೆ, ರಾಜನಿಗೆ ಸುಖ ಸಂಪತ್ತು, ಆರೋಗ್ಯ ಎಲ್ಲವು ವ್ರುದ್ದಿಯಾಗುತ್ತೆ.

ಪೋಳಲ್ ಎಂದರೆ ಮಣ್ಣು ಎಂಬ ಅರ್ಥ ಬರುತ್ತೆ ಅದಕ್ಕೆ ಈ ಊರಿಗೆ ಪೊಳಲಿ ಎಂಬ ಹೆಸರು ಬಂದಿದೆ ಎಂದು ಪುರಾಣಗಳಲ್ಲಿ ತಿಳಿಯಬಹುದು, ರಾಜರಾಜೇಶ್ವರಿ ಎಡಗಡೆಯಲ್ಲಿ ಭದ್ರಕಾಳಿ, ಬಲ ಕಡೆಯಲ್ಲಿ ಶ್ರೀ ಸುಬ್ರಮಣ್ಯ ದೇವರು ಇದ್ದಾರೆ.

ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇಗುಲದಲ್ಲಿ ಸುಬ್ರಮಣ್ಯ ದೇವರ ಸಾನಿಧ್ಯ ಇದೆ ವಿಶೇಷ ಜಾತ್ರೆ ಎಲ್ಲವು ನಡೆಯುತ್ತೆ, ಮಂಗಳವಾರ ಗುರುವಾರ ಮತ್ತು ಭಾನುವಾರ ಭದ್ರಕಾಳಿ ದೇವಿಗೆ ವಿಶೇಷ ಗಾಯತ್ರಿ ಪೂಜೆ ನೆರವೇರುತ್ತದೆ. ಹಾಗೇ ಇಲ್ಲಿ ಇಲ್ಲಿ ಸಾನಿಧ್ಯವೃದ್ಧಿಗಾಗಿ ಪ್ರತೀ 12 ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ.

ತಾಯಿ ರಾಜರಾಜೇಶ್ವರಿ ಶಕ್ತಿಶಾಲಿ ಮೂರ್ತಿ ಇಲ್ಲಿಯವರೆಗೂ ಲಕ್ಷಾಂತರ ಜನರ ಕಷ್ಟಗಳನ್ನ ನಿವಾರಣೆ ಮಾಡಿದೆ, ಈ ದೇಗುಲ ಇರೋದು ಪೊಳಲಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸ್ನೇಹಿತರೇ ತಾಯಿಯ ಶಕ್ತಿ ಬಗ್ಗೆ ನಿಮಗೆ ತಿಳಿಯಿತು ಅಲ್ಲವೇ ತಪ್ಪದೇ ಈ ವಿಶೇಷ ಮಾಹಿತಿ ಶೇರ್ ಮಾಡಿ ಎಲ್ಲ ಜನಕ್ಕೂ ರಾಜರಾಜೇಶ್ವರಿ ತಾಯಿ ಬಗ್ಗೆ ತಿಳಿಯಲಿ ಪೊಳಲಿ ಕ್ಷೇತ್ರ ಇನ್ನಷ್ಟು ಪ್ರಸಿದ್ದವಾಗಲಿ.

ನಮ್ಮ ವೆಬ್ಸೈಟ್ ಎಲ್ಲ ಮಾಹಿತಿಗಳಿಗೆ ವಿಶೇಷ ಕಾಪಿ ರೈಟ್ಸ್ ಇದೆ ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದವರಿಗೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here