ಅಚ್ಚರಿ ಮೂಡಿಸುವ ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ಪವಾಡಗಳು

0
1413

ಕೊಲ್ಲಾಪುರ ಮಹಾಲಕ್ಷ್ಮೀಯ ಮಹಿಮೆ ನಿಮಗೆ ತಿಳಿದಿದಿಯೇ?

ಮಹಾರಾಷ್ಟದ ದಕ್ಷಿಣ ಭಾಗದಲ್ಲಿ ಇರುವುದೇ ಈ ಕೊಲ್ಲಾಪುರ . ಈ ಕೊಲ್ಲಾಪುರ ಒಂದು ಪುರಾಣ ಪುಣ್ಯಕತೆಗಳನ್ನು ಒತ್ತುಕೊಂಡು ಬಂದಿರುವ ಪುಣ್ಯಕ್ಷೇತ್ರ. ಇಂದಿನ ಕಾಲದಲ್ಲಿ ಪ್ರಚಲಿತದಲ್ಲಿರುವ ಶಕ್ತಿ ಪೀಠವಾಗಿದೆ.

ಇಂದಿನ ಕಾಲದಲ್ಲಿ ನಮ್ಮ ಪ್ರಪಂಚದಲ್ಲಿ ಧಾರ್ಮಿಕತೆ ಎಂಬುದು ತಕ್ಕ ಮಟ್ಟಿಗೆ ಉಳಿದುಕೊಂಡಿದೆ ಎಂದರೆ ಇಂತಹ ಧಾರ್ಮಿಕ ಕ್ಷೇತ್ರಗಳಿಂದ .
ಈ ಕೊಲ್ಲಾಪುರ ನಗರವು ಹತ್ತನೇ ಶತಮಾನದಲ್ಲಿ ಯಾದವರ ನಿರ್ಮಿಸದ ಸ್ಟಳವಾಗಿದೆ ಜೊತೆಗೆ ಈ ನಗರಕ್ಕೆ ಕೊಲ್ಲಾಪುರಎಂದು ಬರಲು ಹಲವಾರು ಪುರಾಣ ಕಥೆಗಳು ಇವೆ ಅವುಗಳು ಏನೆಂದರೆ

ಪುರಾಣದ ಕಥೆಗಳಲ್ಲಿ ಈ ಕೊಲ್ಲಾಪುರನ್ನು ಕರವೀರಪುರ ಎಂದು ಕರೆಯುತಿದ್ದರು. ಕೊಲಾಸುರನೆಂಬ ಅರಸನು ದೇವತೆಗಳಿಗೆ ತುಂಬ ಕಷ್ಟವನ್ನು ನೀಡುತ್ತಿದ್ದನು , ಇವನ ಕ್ರೋರ್ಯ , ಹಟ್ಟಹಾಸಕ್ಕೆ ಎದರಿ ಆ ಅರಸನಿಂದ ತಪ್ಪಿಸಿಕೊಳ್ಳಬೇಕು ಎಂಬ ಆಸೆಯಿಂದ ಆ ದೇವತೆಗಳು ದೇವಿಯ ಮೊರೆ ಹೋಗುತ್ತಾರೆ ಆಗ ಆ ದೇವಿಯು ಭೂಮಿಗೆ ಇಳಿದು ಆ ಅರಸನ್ನು ಸಂಹಾರ ಮಾಡಿದ ನಂತರ ಆ ಸ್ಥಳದಲ್ಲೇ ಆ ದೇವಿ ಉಳಿದುಕೊಂಡಳು ಆ ಸ್ಥಳವೇ ಕೊಲ್ಹಾಪುರ .

ಈ ದೇಗುಲವು ಮೊದಲು ಒಂದು ಚಿಕ್ಕ ಗುಡಿಯಾಗಿತ್ತು ನಂತರ ಈ ದೇಗುಲವನ್ನು ಸುಮಾರು ಕ್ರಿ. ಶ. ೬೦೦ ರಲ್ಲಿ ಚಾಲುಕ್ಯ ರಾಜ ಕರ್ಣ ದೇವನು ಈ ದೇವಾಲಯವನ್ನು ಪಿರಮಿಡ್ ಆಕಾರದಲ್ಲಿ ನಿರ್ಮಾಮಾಡಿದರು ನಂತರ ೧೮೧೮ ರಲ್ಲಿ ಗರುಡ ಮಂಟಪವನ್ನು ನಿರ್ಮಿಸಿದರು. ಈ ದೇಗುಲದ ಸುತ್ತಲೂ ಆಕರ್ಷಕ ಸುಂದರವಾದ ಕೆತ್ತನೆಗಳಿವೆ.ಈ ದೇಗುಲದ ಮೂಲ ಮಂದಿರದಲ್ಲಿ ಕಪ್ಪುಶಿಲೆಯ ಚತುರ್ಭುಜದ ಒಳಗೆ ಮಹಾಲಕ್ಷ್ಮೀ ನೆಲೆಯಾಗಿ ನಿಂತಿದ್ದಾಳೆ .

ಈ ದೇಗುಲದ ಮುಖ್ಯದ್ವಾರ ಪಶ್ಚಿಮ ದಿಕ್ಕಿನಲ್ಲಿ ಇದೆ ,ಈ ಮುಖ್ಯ ದ್ವಾರನ್ನು ಒಳಹೋಗಿದ ತಕ್ಷಣ ದೀಪವಿದೆ . ಈ ದೇವತೆಯ ತಲೆಯಲ್ಲಿ ಸರ್ಪದ ಮುಕುಟವಿದೇ , ಬೆಳ್ಳಿಯ ಮಂಟಪದಲ್ಲಿ ಅಸಂಖ್ಯಾತ ನೆರಿಗೆಗಳಿಂದ ಕೂಡಿದ ಸೀರೆಯನ್ನುಟ್ಟು ದೇವಿ ನಿಂತಿದ್ದಾಳೆ. ಈ ದೇವತೆಯ ವಿಗ್ರಹವನ್ನು ನೋಡುತ್ತಿದ್ದರೆ ಸಾಕ್ಷಾತ್ ಮಹಾಲಕ್ಷ್ಮಿಯೇ ವೈಕುಂಠದಿಂದ ಬಂದು ಇಲ್ಲಿ ನೆಲೆಸಿದ್ದಾಳೆ ಎಂಬ ಭಾವನೆ ಮೂಡುತ್ತದೆ .

ದೇವಾಲಯದ ಆವರಣವು ತುಂಬ ವಿಶಾಲವಾಗಿದೆ. ಹಾಗು ಪಂಚಕಲಸಗಳಿಂದ ಕೂಡಿದ ಈ ಶಿಖರ ಪಿರಮಿಡ್ ಆಕಾರದಲ್ಲಿದೆ. ಈ ದೇವಸ್ಥಾನದ ಮಹಿಮೆ ಏನೆಂದರೆ
ಈ ದೇವತೆಯು ಅಲಂಕಾರ ಭೂಷಿತಳಾಗಿದ್ದಾಳೆ ಈ ದೇಗುಲದ ಗುಡಿಯನ್ನು ಬೆಳಿಗ್ಗೆ ಐದು ಗಂಟೆಗೆ ತೆರೆದರೆ ರಾತ್ರಿ ಹತ್ತು ಮೂವತ್ತು ಗಂಟೆಯವರೆಗೆ ತೆರೆದಿರುತ್ತದೆ.

ಈ ದೇವತೆಗೆ ದಿನಕ್ಕೆ ಐದು ಬಾರಿ ಪೂಜೆ ನೆಡೆಯುತ್ತದೆ ಹಾಗು ಹುಣ್ಣಿಮೆ ಮತ್ತು ಶುಕ್ರವಾರ ವಿಶೇಷ ಪೂಜೆಗಳು ಹಾಗು ದೇವಿಯ ಉತ್ಸಹ ನೆಡೆಯುತ್ತದೆ .ಜೊತೆಗೆ ಐದು ಬಾರಿ ಆರತಿ ಮಾಡುವ ದೇಗುಲ ಇದಾಗಿದೆ ಜೊತೆಗೆ ಮಟ ಮದ್ಯಾಹ್ನದ ಹನ್ನೆರಡು ಗಂಟೆಯ ಸಮಯದಲ್ಲಿ ಮಹಾಮಂಗಳಾರತಿ ನೆಡೆಯುವ ವಿಶೇಷ ದೇಗುಲವಿದು .

ಇವೆಲ್ಲದರ ಜೊತೆಗೆ ಈ ಕೊಲ್ಲಾಪುರದ ವಿಶೇಷ ಏನೆಂದರೆ ಈ ಊರಿನಲ್ಲಿ ಗ್ರಾಮ ದೇವತೆಯಾದ ಟೀಮ್ಲಾಬಾಯಿ ದೇವತೆಯಿದೆ .
ಕೊಲಾಸುರನೆಂಬ ಅರಸನ ಕ್ರೋರ್ಯವನ್ನು ತೊಲಗಿಸಲು ಬಂದ ದೇವತೆಗೆ ಸಹಾಯ ಮಾಡಲೆಂದು ಈ ಟೀಮ್ಲಾಬಾಯಿ ಬಂದಳು .ಈ ಸಹಾಯವನ್ನು ನೆನೆದುಕೊಳ್ಳಲಿ ಎಂದು ದೇವತೆಯನ್ನು ಆ ಕೊಲ್ಲಾಪುರದ ಬೆಟ್ಟದ ಮೇಲೆ ದೇಗುಲ ಮಾಡಿ ಕುಳಿತಿದ್ದಾಳೆ ಎಂಬ ಉಲ್ಲೇಖವಿದೆ .

ನವರಾತ್ರಿ, ಹುಣ್ಣಿಮೆ ಹಾಗು ವಿಶೇಷ ಸಂಧರ್ಭಗಳಲ್ಲಿ ವಿಶೇಶವಾದ ಪೂಜೆಗಳು ನೆಡೆಯುತ್ತವೆ ಹಾಗು ಈ ದೇವತೆಗಳನ್ನು ಮೆರವಣಿಗೆ ಮಾಡುತ್ತಾರೆ .ಈ ದೇಗುಲಕ್ಕೆ ಈ ದೇವಿಯ ದರ್ಶನ ಪಡೆಯಲು ದೇಶ ವಿದೇಶಗಳಿಂದೆಲ್ಲ ಜನ ಸಾಗರ ಹರಿದು ಬರುತ್ತದೆ ಇಲ್ಲಿಗೆ ಬಂದವರಿಗೆ ಹುಲಿದು ಕೊಳ್ಳಲು ರೂಮ್ಗಳ ವ್ಯವಸ್ಥೆ ಇದೆ . ಹಾಗು ಇಲ್ಲಿ ಕೇವಲ ದೇಗುಲ ಮಾತ್ರ ಇಲ್ಲದೆ ಓಲ್ಡ್ ಪ್ಯಾಲೇಸ್ , ಪಂಚಗಂಗಾ ಪಾಟ್, ಶಹಾಜಿ ಮುಸಿಯೋ ,ಜ್ಯೋತಿ ಬಾ , ಶಿವಾಜಿ ಕಟ್ಟಿರುವ ಕೋಟೆ ಇನ್ನು ಮುಂತಾದ ಇತಿಹಾಸಿಕ ಸ್ಥಳಗಳು ಇಲ್ಲಿವೆ ,

ಜೊತೆಗೆ ಈ ಕೊಲ್ಹಾಪುರ ಖಾದ್ಯ ಪದ್ಧತಿ , ತಳೆದಿರಿಸು ,ಚಪ್ಪಲಿ ,ಒಡವೆಗಳು ,ಕುಸ್ತಿ ,ಇವು ಇಲ್ಲಿ ತುಂಬ ವಿಶೇಷವಾಗಿವೆ .
ಹಾಗು ಮಹಾವಿಷ್ಣುವೇ ಮಹಾಲಕ್ಶ್ಮಿಯ ರೂಪದಲ್ಲಿ ಇಲ್ಲಿ ನೆಲೆಸಿರುವುದರಿಂದ ಈ ಕ್ಷೆತ್ರವನ್ನು ದಕ್ಷಿಣ ಕಾಶಿ ಎಂದು ಸಹ ಕರೆಯುವದುಂಟು .
ಈ ಲಕ್ಷ್ಮಿಗೆ ತುಂಬ ಇಷ್ಟವಾಗುವ ಕಮಲದ ಹೂವನ್ನು ಲಕ್ಶ್ಮಿಗೆ ಸಮರ್ಪಣೆ ಮಾಡಲು ಇಲ್ಲಿ ಕಮಲದ ಹೂವು ಹೆಚ್ಚಗಿ ಇಲ್ಲಿ ಸಿಗುತ್ತವೆ .

ಈ ಕ್ಷೇತ್ರಕ್ಕೆ ಹೋಗಲು ರೈಲು ಹಾಗು ಬಸ್ಸಿನ ವ್ಯವಸ್ಥೆ ಇದೆ . ಬೆಂಗಳೂರಿಂದ ಕೊಲ್ಲಾಪುರಕ್ಕೆ ೭೯೬ ಕಿಲೋ ಮೀಟರ್ ಇದ್ದು ಇಲ್ಲಿಗೆ ರೈಲಿನ ವ್ಯವಸ್ಥೆ ಚೆನ್ನಾಗಿದೆ ಹಾಗು ಇಲ್ಲಿನ ರೈಲು ಹಾಗು ಬಸ್ಸಿನ ಸ್ಥಳದಿಂದ ನಾಲ್ಕು ಕಿಲೋ ಮೀಟರ್ ದೂರವಿದ್ದು ಇಲ್ಲಿಗೆ ಹೋಗಲು ಟ್ಯಾಕ್ಸಿ ಆಟೋಗಳ ವ್ಯವಸ್ಥೆ ಇದೆ .

ಒಟ್ಟಾರೆ ಒಂದು ಬಾರಿ ಆದರೂ ಈ ದೇಗುಲಕೆ ಹೋಗಿ ಆ ತಾಯಿಯ ದರ್ಶನವನ್ನು ಪಡೆದರೆ ನಮ್ಮ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ .ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಆ ದೇವಿಯ ಆಶೀರ್ವಾದ ಪಡೆಯಿರಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ .

ದೇವಿಯ ಪುರಾಣ ಮಹಿಮೆ ಶೇರ್ ಮಾಡುವುದು ಪುಣ್ಯದ ಕೆಲಸ, ಈ ಮಾಹಿತಿ ನಿಮಗೆ ಇಷ್ಟ ಆಗಿದಲ್ಲಿ ತಪ್ಪದೇ ಶೇರ್ ಮಾಡಿ ಕೊಲ್ಲಾಪುರ ಮಹಾಲಕ್ಷ್ಮಿ ತಾಯಿ ಕೃಪೆಗೆ ಪಾತ್ರರಾಗಿ.

LEAVE A REPLY

Please enter your comment!
Please enter your name here