ಈ ಹೂವಿನ ವಾಸನೆ ಕುಡಿದರೆ ಏನೆಲ್ಲಾ ಉಪಯೋಗ

0
1429

ಪಾರಿಜಾತದ ಹೂವಿನಿಂದ ಆಗುವ ಲಾಭಗಳು.

ಪಾರಿಜಾತ ಹೂ ಇದರ ಹೆಸರನ್ನು ಕೇಳಿರಬಹುದು ಹಾಗೆ ನೋಡಿರಬಹುದು. ಈ ಹೂ ಒಂದು ಚಿಕ್ಕ ಹೂ ಇದು ಬಿಳಿ ಬಣ್ಣವನ್ನು ಹೊಂದಿದೆ ಆ ಹೂವಿನ ಮದ್ಯ ಹಾಗೂ ತೊಟ್ಟು ಹಳದಿ ಬಣ್ಣವನ್ನು ಹೊಂದಿರುವ ತುಂಬಾ ಸುವಾಸನೆ ಬರಿತವಾದ ಹೂವು. ಈ ಹೂವು ಹೆಚ್ಚು ಭಾರತದಲ್ಲಿ ಕಂಡು ಬರುತ್ತದೆ. ಈ ಹೂವು ರಾತ್ರಿಯ ಸಲ ಅರಳುತ್ತದೆ ಹಾಗೂ ಗಟ್ಟಿ ಇಲ್ಲದ ಹೂವು ಒಂದು ಸಣ್ಣ ಗಾಳಿ ಬಂದರು ಈ ಹೂವು ಗಿಡದಿಂದ ಉದುರಿಹೋಗುತ್ತದೆ. ಹಾಗೆ ಬೇಗ ಬಾಡಿ ಹೋಗುತ್ತದೆ.

ಆದರೆ ಹಿಂದಿನ ಕಾಲದಲ್ಲಿ ಜನರು ಪಾರಿಜಾತ ಹೂವಿನ ಮದ್ಯ ಮತ್ತು ತೊಟ್ಟಿನಲ್ಲಿ ಇರುವ ಹಳದಿ ಬಣ್ಣವನ್ನು ಬಳಸಿಕೊಂಡು ಕಾವಿ ಬಟ್ಟೆಯನ್ನು ತಯಾರು ಮಾಡುತ್ತಿದ್ದರು. ಏಕೆಂದರೆ ಈ ಹಳದಿ ಬಣ್ಣವು ತಿಳುವಳಿಕೆ ಜ್ಞಾನದ ಸಂಕೇತವಾಗಿದೆ. ಜೊತೆಗೆ ಇದು ರಾತ್ರಿಯ ಸಲ ಅರಳಲು ಹಾಗು ಇದಕ್ಕೆ ಪಾರಿಜಾತ ಎಂದು ಹೆಸರು ಬರಲು ಸಹ ಕಾರಣವಿದೆ ಅದೇನೆಂದರೆ.

ಹಿಂದಿನ ಕಾಲದ ಪುರಾಣ ಕಥೆಗಳಲ್ಲಿ ಇರುವ ಪ್ರಕಾರ ಪಾರಿಜಾತ ಎಂಬ ಹೆಸರು ಬರಲು ಕಾರಣವೇನೆಂದರೆ ಪಾರಿಜಾತ ಎಂಬ ಹೆಸರನ್ನು ಹೊಂದಿರುವ ಒಂದು ಮುದ್ದಿನ ಹುಡುಗಿ ಇದ್ದಳು ಇವಳು ಸೂರ್ಯನನ್ನು ತುಂಬ ಇಷ್ಟ ಪಡುತ್ತಿದ್ದಳು ಆದರೆ ಆ ಸೂರ್ಯ ಇವಳನ್ನು ಪ್ರೀತಿಸದೆ ನಿರಾಕರಿಸಿಬಿಟ್ಟ ಅದನ್ನು ಸಹಿಸಲು ಆಗದೆ ಅವಳು ಆತ್ಮಹತ್ಯೆ ಮಾಡಿಕೊಂಡಳು ನಂತರ ಅವಳ ದೇಹವನ್ನು ಬೆಂಕಿಯಲ್ಲಿ ಸುಟ್ಟಿ ಬಿಟ್ಟರೂ ಅವಳ ದೇಹ ಸುಟ್ಟು ಭೂದಿ ಆಯಿತು ಆ ಬೂದಿಯಿಂದಲೇ ಪಾರಿಜಾತ ಎಂಬ ಸುಂದರ ಗಿಡವು ಬೆಳೆಯಿತು .

ಅದಕ್ಕಾಗಿಯೇ ಈ ಗಿಡಕ್ಕೆ ಸೂರ್ಯ ಕಿರಣಗಳನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ ಹಾಗಾಗಿ ಪಾರಿಜಾತದ ಹೂವು ರಾತ್ರಿಯ ಸಲ ಅರಳಿ ಬೆಳಗ್ಗೆ ಸೂರ್ಯ ಹುಟ್ಟುವ ಹೊಳಗೆ ಉದುರಿ ಹೋಗುತ್ತದೆ .ಈ ಹೂವಿಗೆ ಸೂರ್ಯನ ಕಿರಣಗಳನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ .

ಪಾರಿಜಾತ ಗಿಡ ಹಾಗೂ ಪಾರಿಜಾತ ಹೂವಿನಿಂದ ಆಗುವ ಲಾಭಗಳು ಏನು ಎಂಬುದನ್ನು ನೋಡೋಣ ಬನ್ನಿ ..

ಪಾರಿಜಾತ ಹೂವು ಕೇವಲ ಒಂದು ಹೂವಲ್ಲ ಇದು ಒಂದು ಔಷಧೀಯ ಗಿಡ ಎಂದು ಸಹ ಹೇಳಬಹುದು .ಈ ಹೂವುಗಳಿಂದ ಸುಗಂಧ ದ್ರವ್ಯವನ್ನು ತಯಾರು ಮಾಡುತ್ತಾರೆ . ಪಾರಿಜಾತ ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ. ಪಾರಿಜಾತ ಎಲೆಗಳಿಂದ ರಸವನ್ನು ತೆಗೆದು ಅನ್ನು ಜಾಂಡಿಸ್ ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗ ಮಾಡುತ್ತಾರೆ .

ಈ ಪಾರಿಜಾತದ ಗಿಡಗಳಲ್ಲಿ ಬೀಜವು ಸಹ ಇರುತ್ತದೆ ಈ ಬೀಜಗಳನ್ನು ಪುಡಿ ಮಾಡಿ ಜೀರ್ಣಾಂಗ ಸಮಸ್ಯೆಗೆ ಔಷಧಿಯಾಗಿ ನೀಡುತ್ತಾರೆ. ಪಾರಿಜಾತದದ ಹೂವಿನಲ್ಲಿ ಕಷಾಯವನ್ನು ತಯಾರಿಸಿ ಕೀಲು ನೋವು . ತಲೆನೋವು . ಜ್ವರ . ಮೂಲವ್ಯಾದಿ ಸಮಸ್ಯೆ .ಇವುಗಳಿಗೆಲ್ಲ ಉತ್ತಮ ಆಯುರ್ವೇದ ಔಷಧಿಯಾಗಿದೆ .

ಪಾರಿಜಾತ ಎಲೆಗಳನ್ನು ಚೆನ್ನಾಗಿ ಅರೆದು ಅದನ್ನು ಗಾಯವಾಗಿರುವ ಜಾಗಕ್ಕೆ , ಮೂಳೆ ಮುರಿದಿರುವ ಜಾಗಕ್ಕೆ , ಉಳುಕಿರುವ ಜಾಗಕ್ಕೆ, ಊದಿಕೊಂಡಿರುವ ಜಾಗಕ್ಕೆ , ಅಚ್ಚುತ್ತ ಬರುತ್ತಿದ್ದರೆ ಎಲ್ಲ ಸಮಸ್ಯೆಗಳು ಗುಣವಾಗುತ್ತದೆ. ಪಾರಿಜಾತದ ಗಿಡದ ತೊಗಟೆಯನ್ನು ಪುಡಿ ಮಾಡಿ ಕೆಮ್ಮಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ . ಪಾರಿಜಾತ ಎಲೆಯಿಂದ ಕಷಾಯವನ್ನು ತಯಾರಿಕೊಂಡು ಸೇವಿಸುವುದರಿಂದ ಲಿವರ್ ವೈಫಲ್ಯತೆ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು.

ಈ ಪಾರಿಜಾತದ ಒಂದು ಮರ ಮನೆಯ ಮುಂದೆ ಇದ್ದಾರೆ ಸಾಕು ಅದರ ಸುವಾಸನೆ ಮನೆಯನ್ನೆಲ್ಲ ಆವರಿಸುತ್ತದೆ . ಹಾಗೂ ಇದರ ಸುವಾಸನೆಗೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಆಗು ಮನಸ್ಸು ಮನೆಯ ಅಂಗಳ ಯಾವಾಗಲು ಶಾಂತವಾಗಿರುತ್ತದೆ. ಹೆಚ್ಚು ಕೋಪ, ಉದ್ವೇಗ , ಇರುವವರು ಈ ಪಾರಿಜಾತದ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಅವರ ಕೋಪ , ಉದ್ವೇಗ , ಕಡಿಮೆಯಾಗುತ್ತದೆ .

ಒಟ್ಟಾರೆ ಈ ಪಾರಿಜಾತದ ಹೂವು , ಗಿಡ ಎಲೆ, ತೊಗಟೆ, ಬೀಜ, ಎಲವೂ ಸಹ ತುಂಬ ಉಪಯೋಗಕ್ಕೆ ಒಳಗಾಗುವಂತಹದು .ಆಗು ಈ ಪಾರಿಜಾತದ ಹೂವು ಕೆಳಗೆ ಬಿದ್ದ ನಂತರ ಇದನ್ನು ಯಾವುದೇ ಕಾರಣಕ್ಕೂ ಪೂಜೆಗೆ ಬಳಸುವುದು ಒಳ್ಳೆಯದಲ್ಲ . ಹೂವು ಪೂಜೆಗೆ ಒಳ್ಳೆಯದು ಆದರೆ ಗಿಡದಿಂದ ಕಿತ್ತಿರುವ ಹೂವಾದರೆ ಮಾತ್ರ ಪೂಜೆಗೆ ಬಳಸಿ .a

LEAVE A REPLY

Please enter your comment!
Please enter your name here