ನಿಮಗೆ ಲವ್ ಮ್ಯಾರೇಜ್ ಆಗುತ್ತಾ ಅಥವ ಅರೇಂಜ್ ಮ್ಯಾರೇಜ್ ಆಗುತ್ತಾ ಹೇಗೆ ತಿಳಿಯೋದು

0
1123

ನಿಮ್ಮ ಮದುವೆ ನೀವು ಪ್ರೀತಿ ಮಾಡಿದವರ ಜೊತೇನೋ ಇಲ್ಲ ನಿಮ್ಮ ಮನೆಯ ಜನರು ಒಪ್ಪಿಗೆ ಮಾಡಿರುವವರ ಜೊತೇನೋ ಎಂದು ನಿಮ್ಮ ಜನ್ಮ ದಿನಾಂಕದ ಮೂಲಕವೇ ತಿಳಿದುಕೊಳ್ಳಿ .

ಯಾವುದೇ ಹೆಣ್ಣು ಮಕ್ಕಳಿಗಾಗಲಿ ಗಂಡು ಮಕ್ಕಳಿಗಾಗಲಿ ಮದುವೆ ಎಂಬುದು ಅವರ ಇನ್ನೊಂದು ಜೀವನ ಈ ಜೀವನವನ್ನು ಎಲ್ಲರು ಇಷ್ಟ ಪಡುತ್ತಾರೆ ಜೊತೆಗೆ ಎಲ್ಲರು ಆ ಜೀವನದ ಬಗ್ಗೆ ಹಲವಾರು ರೀತಿಯ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರಂತೂ ಮದುವೆ ,ಅದರ ನಂತರದ ಜೀವನವನ್ನು ಹೇಗೆ ಕಳೆಯಬೇಕು ಎಬುದಕ್ಕೆ ಒಂದು ದೊಡ್ಡ ಕನಸ್ಸಿನ ಮನೆಯನ್ನೇ ಕಟ್ಟಿಕೊಂಡಿರುತ್ತಾರೆ .

ಈ ಮದುವೆ ಎಂಬುದು ಒಬ್ಬಬ್ಬರ ಜೀವನದಲ್ಲಿ ಒಂದೊಂದು ಬಗೆಯಲ್ಲಿ ಇರುತ್ತದೆ ಅದರಲ್ಲಿ ಒಂದು ಮನೆಯ ಮಂದಿಯಲ್ಲ ನೋಡಿ ಇಷ್ಟ ಪಟ್ಟು ಒಪ್ಪಿಗೆ ತೆಗೆದುಕೊಂಡು ಮದುವೆ ಆದರೆ , ಇನ್ನು ಕೆಲವರು ಅವರ ಜೀವನದಲ್ಲಿ ತಮಗೆ ಇಷ್ಟವಾದ ವ್ಯಕ್ತಿಯನ್ನು ತಾವೇ ಆಯ್ಕೆ ಮಾಡಿಕೊಂಡು ಮದುವೆ ಆಗುತ್ತಾರೆ . ಇನ್ನು ಕೆಲವರು ತಾವು ಆಯ್ಕೆ ಮಾಡಿಕೊಂಡರು ಅವರನ್ನು ಮದುವೆ ಆಗಿ ಜೀವನ ನೆಡೆಸಲು ಆಗದೆ ನೋವು ಅನುಭವಿಸುತ್ತಾರೆ ಆದರೆ ಇನ್ನು ಕೆಲವರಂತೂ ತಮ್ಮ ಪ್ರಾಣಕ್ಕೆ ಆಪತ್ತು ತಂದು ಕೊಳ್ಳುತ್ತಾರೆ. ಇದಕ್ಕೆಲ್ಲ ಕಾರಣ ಅವರ ಜನ್ಮ ದಿನ ಸಹ ಒಂದು ರೀತಿಯಲ್ಲಿ ಕಾರಣವಾಗುತ್ತದೆ .

ಏನು ಇದು ನಮ್ಮ ಜನ್ಮ ದಿನಕ್ಕೂ ನಮ್ಮ ಮದುವೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ನೀವು ಮಾಡುವೆ ಮಾತುಕತೆ ನೆಡೆಯುವ ಸಂದರ್ಭದಲ್ಲಿ ನಿಮ್ಮ ಜನ್ಮ ದಿನ , ರಾಶಿ, ನಕ್ಷತ್ರ , ಹೆಸರು , ಇವುಗಳನ್ನು ನೋಡಿ ಅಲ್ಲವೇ ಮದುವೆಯ ಕಾರ್ಯವನ್ನು ನೆಡೆಸುವುದು . ಹಾಗೆಯೆ ನಿಮ್ಮ ಜನ್ಮ ದಿನವನ್ನು ನೋಡಿ ನೋಡಿ ನೀವು ಇಷ್ಟ ಪಟ್ಟವರ ಜೊತೆಯಲಿ ಮಾಡುವೆ ಆಗುತ್ತಿರೋ ಇಲ್ಲ ನಿಮ್ಮ ಮನೆಯವರ ಒಪ್ಪಿಗೆಯ ಮೆರೆಯಲಿ ನಿಮ್ಮ ಮದುವೆ ನೀವು ಪ್ರೀತಿ ಮಾಡಿದವರ ಜೊತೇನೋ ಇಲ್ಲ ನಿಮ್ಮ ಮನೆಯ ಜನರು ಒಪ್ಪಿಗೆ ಮಾಡಿರುವವರ ಜೊತೇನೋ ಎಂದು ನಿಮ್ಮ ಜನ್ಮ ದಿನಾಂಕದ ಮೂಲಕವೇ ತಿಳಿದುಕೊಳ್ಳಿ …

ಹಾಗೆಯೆ ನಿಮ್ಮ ಜನ್ಮ ದಿನವನ್ನು ನೋಡಿ ನೀವು ಇಷ್ಟ ಪಟ್ಟವರ ಜೊತೆಯಲಿ ಮಾಡುವೆ ಆಗುತ್ತಿರೋ ಇಲ್ಲ ನಿಮ್ಮ ಮನೆಯವರ ಒಪ್ಪಿಗೆಯ ಮೆರೆಯಲಿ ನೋಡಿರುವವರನ್ನು ಮದ್ವೆಯಾಗುತ್ತಿರೋ ಎಂದು ತಿಳಿಯೋಣ ಬನ್ನಿ …ಮದ್ವೆಯಾಗುತ್ತಿರೋ ಎಂದು ತಿಳಿಯೋಣ ಬನ್ನಿ …ನೋಡಿರುವವರನ್ನು ಮದ್ವೆಯಾಗುತ್ತಿರೋ ಎಂದು ತಿಳಿಯೋಣ ಬನ್ನಿ …

ಹಾಗಾದ್ರೆ  ಹೇಗೆ ಕಂಡು ಹಿಡಿಯುವುದು ಇದನ್ನು ಎಂದು ಯೋಚಿಸುತ್ತಿದ್ದಿರ ನಿಮ್ಮ ಜನ್ಮ ದಿನ ಒಂದರಿಂದ ಒಂಬತ್ತು ಈ ಸಂಖ್ಯೆಯವರೆಗೆ ಇದ್ದರೆ ಅದನ್ನು ಅನುಸರಿಸಿ 10 ರಿಂದ 31 ರವರೆಗೆ ಇದ್ದರೆ ಆಗ 10 ಇದ್ದರೆ 1+0 = 1, ಒಂದರಿಂದ ಸೊನ್ನೆಯನ್ನು ಕುಡಿದರೆ ನಮಗೆ ಸಿಗುವ ಉತ್ತರ ಒಂದು ಅಲ್ಲವೇ ಆಗ 1 ಎಂದು ಭಾವಿಸಿಕೊಳ್ಳಿ. 25 ಇದ್ದರೆ 2+5= 7. ಎರಡರಲ್ಲಿ ಐದನ್ನು ಕುಡಿದಾಗ ಬರುವ ಉತ್ತರ 7 ಆಗ ನೀವು 7 ಎಂದು ಭಾವಿಸಿಕೊಳ್ಳಿ.

ಈಗ ಯಾವ ದಿನಾಂಕಕ್ಕೆ ಯಾವ ರೀತಿಯಲ್ಲಿ ಇದೆ ನೋಡೋಣ ಬನ್ನಿ… ಮೊದಲು ಒಂದು ಈ ಒಂದನ್ನು ಸೂರ್ಯ ಎಂದು ಹೇಳುತ್ತೇವೆ. ಹಾಗಾಗಿ ಈ ದಿನಾಂಕದಲ್ಲಿ ಹುಟ್ಟಿದವರು ತುಂಬಾ ಅಂಜಿಕೆ. ನಾಚಿಕೆ. ಮೃದು. ಹಾಗೂ ಇನ್ನೊಬ್ಬರ ಜೊತೆ ಮಾತನಾಡಲು ಸಹ ತುಂಬಾ ತುಂಬಾ ನಾಚಿಕೆ ಪಡುವ ಸ್ವಭಾವದವರು ಹಾಗಾಗಿ ಇವರು ಎಂದು ಸಹ ಪ್ರೀತಿ. ಪ್ರೇಮ. ಎಂಬ ಸೋಜಿಗೆ ಹೋಗುವುದಿಲ್ಲ ಇವರು ತಮ್ಮ ಮನೆಯ ಮಂದಿಯವರು ನೋಡಿ ಒಪ್ಪಿಕೊಂಡವರನ್ನೇ ಮದುವೆಯಾಗುವುದು.

ಎರಡು ಈ ಸಂಖ್ಯೆ ಚಂದ್ರನನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರಿಗೆ ನಾಚಿಕೆ. ಮೃದು ಸ್ವಭಾವ ಎಂಬುದು ಇದ್ದರು ಅದು ಸಮಯಕ್ಕೆ ಅನುಗುಣವಾಗಿ ಬಳಸುತ್ತಾರೆ. ಹಾಗಾಗಿ ಇವರು ಪ್ರೀತಿ. ಪ್ರೇಮ. ಎಂಬುದು ಆದರೂ ತುಂಬಾ ನಿದಾನವಾಗಿ ತುಂಬಾ ಸಲ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ನಂಬಿಕೆ ಗಟ್ಟಿಯಾದರೆ ಇವರು ಆ ಪ್ರೀತಿ ಮಾಡಿದವರನ್ನು ಮದುವೆ ಆಗುತ್ತಾರೆ.

ಮೂರು ಈ ಸಂಖ್ಯೆ ಗುರುವನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ಪ್ರೀತಿ ಪ್ರೇಮ ಎಂಬುದನ್ನು ತುಂಬಾ ನಂಬುತ್ತಾರೆ. ಇವರು ನಮಗೆ ಇಷ್ಟವಾದವರನ್ನು ಅಯ್ಕೆ ಮಾಡಿಕೊಂಡು ಕೊನೆಯವರೆಗೂ ಅದನ್ನು ಉಳಿಸಿಕೊಂಡು ಅವರನ್ನೇ ಮದುವೆ ಆಗಿ ಅನಂದವಾಗಿ ಜೀವನ ನೆಡೆಸುತ್ತಾರೆ.

ನಾಲ್ಕು ಈ ಸಂಖ್ಯೆಯು ರಾಹುವನ್ನು ಸೂಚಿಸುತ್ತದೆ. ಈ ದಿನಾಂಕದಲ್ಲಿ ಜನಿಸಿದವರ ಮನಸ್ಸು ತುಂಬಾ ಚಂಚಲ ಮನಸ್ಸು ಇವರು ಪ್ರೇಮ ಪ್ರೀತಿಗೆ ಹೆಚ್ಚು ಬೆಂಬಲವನ್ನು ನೀಡುತ್ತಾರೆ ಆದರೆ ಇವರು ಪ್ರೀತಿ ಮಾಡುವ ಸಮಯದಲ್ಲಿ ಸರಿಯಾಗಿ ಆಲೋಚನೆ ಮಾಡುವುದಿಲ್ಲ ನಮಗೆ ಇಷ್ಟವಾದ ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದನ್ನು ಬಿಟ್ಟು ಹಲವರು ಮಂದಿಯನ್ನು ಇಷ್ಟ ಪಡುತ್ತಿರಿ ಇದು ನಿಮ್ಮ ಮದುವೆಗೆ ತೊಂದರೆ ಉಂಟು ಮಾಡಬಹುದು ಹಾಗಾಗಿ ಪ್ರೀತಿಸುವಾಗ ಸರಿಯಾಗಿ ಯೋಚಿಸಿ ಒಬ್ಬರನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಪ್ರೀತಿ ಲಭಿಸುತ್ತದೆ.

ಐದು ಈ ಸಂಖ್ಯೆಯು ಬುಧವನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ಮನಸ್ಸು ಒಂದು ರೀತಿಯದು ಇವರು ಹೆಚ್ಚು ಪ್ರಾಮುಖ್ಯತೆ ಕೊಡುವುದು ತಮ್ಮ ಸಂಭಂದ, ಅವರ ಖುಷಿಯನ್ನು ಹಾಗಾಗಿ ಇವರು ತಮ್ಮ ಮನೆಯವರು ಒಪ್ಪಿಗೆ ಪಡೆದುಕೊಂಡಿರುವ ವ್ಯಕ್ತಿಯನ್ನು ಮದುವೆ ಆಗುತ್ತಾರೆ ಜೊತೆಗೆ ಇವರ ಸಂಭಂದ ಕೂಡ ತುಂಬಾ ಮದುರವಾಗಿ ಇರುತ್ತದೆ.

ಆರು ಈ ಸಂಖ್ಯೆಯು ಶುಕ್ರವನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರ ಮನಸ್ಸು ತುಂಬಾ ತರ್ಕಕ್ಕೆ ಸಿಲುಕುವುದು ಹಾಗೂ ಇವರು ಪ್ರೀತಿ ಪ್ರೇಮಕ್ಕೆ ಹೆಚ್ಚು ಬೆಂಬಲ ಕೊಡುತ್ತಾರೆ ಆದರೆ ಒಬ್ಬ ವ್ಯಕ್ತಿಯನ್ನು ಇಷ್ಟ ಪಡದೆ ಹಲವಾರು ವ್ಯಕ್ತಿಯನ್ನು ಪ್ರೀತಿಸುತ್ತಾರೆ ಹಾಗಾಗಿ ಇವರು ತಮ್ಮ ಮದುವೆ ವೇಳೆ ತಮಗೆ ಬೇಕಾದ ಸೂಕ್ತವಾದ ಸಂಗಾತಿಯನ್ನು ಪಡೆಯಲು ಆಗುವುದಿಲ್ಲ .ಆದರೂ ಸಹ ಇವರು ತಾವು ಪ್ರೀತಿಸಿದ ವ್ಯಕ್ತಿಯನ್ನು ಮದುವೆ ಆಗುತ್ತಾರೆ.

ಏಳು ಈ ಸಂಖ್ಯೆ ಕೇತುವನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರ ಮನಸ್ಸು ತುಂಬಾ ಸಂಕುಚಿತವಾದದ್ದು ಹಾಗೂ ಇವರು ವ್ಯಕ್ತಿಯ ಸ್ವಭಾವ. ಗುಣ. ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವುದಕ್ಕಿಂತ ಅವರ ಸ್ಟೇಟಸ್ ಅನ್ನು ಹೆಚ್ಚು ನೋಡುತ್ತಾರೆ. ಅವರ ಸ್ಟೇಟಸ್ ಗೆ ಹೊಂದಿಕೊಳ್ಳುವ ವ್ಯಕ್ತಿಯನ್ನು ನೋಡಿ ಪ್ರೀತಿ ಮಾಡಿ ಮದುವೆ ಆಗುತ್ತಾರೆ.

ಎಂಟು ಈ ಸಂಖ್ಯೆಯು ಶನಿಯನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ತಮ್ಮ ಮನೆಯ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ, ಜೊತೆಗೆ ಇವರು ಹೆಚ್ಚಾಗಿ ಪ್ರೀತಿ. ಪ್ರೇಮದ ಮೊರೆ ಹೋಗುವುದಿಲ್ಲ ಆದರೆ ಯಾವುದಾದರೂ ವ್ಯಕ್ತಿಯನ್ನು ಪ್ರೀತಿಸಿದರೆ ಎಷ್ಟೇ ಕಷ್ಟ ಬಂದರೂ ಸಹ ಆ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ.

ಒಂಬತ್ತು ಈ ಸಂಖ್ಯೆಯು ಮಂಗಳವನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ತುಂಬಾ ಭಯ ಪಡುತ್ತಾರೆ ಜೊತೆಗೆ ಇವರ ಮನಸ್ಸು ತುಂಬಾ ವಿಶಾಲ ಹಾಗೂ ಇವರು ಯಾವುದೇ ರೀತಿಯ ಕಷ್ಟಕ್ಕೆ ಸಿಲುಕಲು ಇಷ್ಟ ಪಡುವುದಿಲ್ಲ. ಪ್ರೀತಿ ಪ್ರೇಮದಲ್ಲಿ ಯಾವಾಗಲೂ ಎಲ್ಲ ಸರಿಯಾಗಿರುವುದಿಲ್ಲ ಇದರಲ್ಲಿ ಹೆಚ್ಚು ನೋವು ಜಗಳ ಆಗುವುದು ಇರುತ್ತದೆ ಅದಕ್ಕೆ ಇವರು ಹೆಚ್ಚಾಗಿ ಪ್ರೀತಿಯ ಮೊರೆ ಹೋಗಲು ಇಷ್ಟ ಪಡುವುದಿಲ್ಲ ಇವರು ತಮ್ಮ ಮನೆಯ ಒಪ್ಪಿಗೆಯ ಮೂಲಕವೇ ಮದುವೆ ಆಗುತ್ತಾರೆ.

ಒಟ್ಟಾರೆ ಮದುವೆ ಎಂಬುದು ಒಂದು ಸುಮದುರವಾದ ಬಂಧನವನ್ನು ಶುರು ಮಾಡುವ ದಾರಿ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸಹ ಯಾವುದೇ ಬಗೆಯ ಮದುವೆ ಆದರೂ ಹಲವಾರು ಬಾರಿ ಆಲೋಚಿಸಿ ಮದುವೆ ಆಗಿ ನಿಮ್ಮ ಜೀವನವನ್ನು ಸಂತೋಷವಾಗಿ ನೆಡೆಸಿ.

 

LEAVE A REPLY

Please enter your comment!
Please enter your name here