ಧರ್ಮಸ್ಥಳ ಮಂಜುನಾಥ ಸ್ವಾಮಿಯ ಚರಿತ್ರೆ ತಿಳಿಯಿರಿ

0
1515

ಧರ್ಮಸ್ಥಳ ಯಾರಿಗೆ ಗೊತ್ತಿಲ್ಲ ಹೇಳಿ ಆದ್ರೆ ಅಲ್ಲಿನ ಶಕ್ತಿ ದೇವರಾದ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಮತ್ತು ಆತನ ಶಕ್ತಿಗಳ ಬಗ್ಗೆ ನಿಮಗೆ ತಿಳಿದರೆ ಅಚ್ಚರಿ ಆಗುತ್ತೆ.

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಣ ಪ್ರತಿ ನಿತ್ಯ ಹತ್ತಾರು ಸಾವಿರ ಜನರು ಇಲ್ಲಿಗೆ ಬಂದು ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನ ನೆರವೇರಿಸಿಕೊಂಡು ತಮ್ಮ ಪಾಪ ಕರ್ಮಗಳನ್ನೂ ಕಳೆದುಕೊಳ್ಳುತ್ತಾರೆ. ಧರ್ಮಸ್ಥಳಕ್ಕೆ ಸರಿ ಸುಮಾರು 700 ವರ್ಷಗಳ ಇತಿಹಾಸ ಹೊಂದಿದೆ ಆಗಿನ ಉಡುಪಿಯ ಯತಿಗಳಾದ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದೆ. ಧರ್ಮಸ್ಥಳ ಅಂದ್ರೆ ಅದು ಸಾಮನ್ಯ ಅಲ್ಲ ಅದು ದಾನ ಧರ್ಮಕ್ಕೆ ಹೆಸರುವಾಸಿ ಯಾದ ಅತ್ಯಂತ ಪುಣ್ಯ ಕ್ಷೇತ್ರ.

ಧರ್ಮಸ್ಥಳ ಈ ಹಿಂದಿನ ಹೆಸರು ಕುಡುಮ ಎಂದು ಕರೆಯುತ್ತಿದ್ದರು, ಆಗಿನ ಪ್ರಾಂತ್ಯದಲ್ಲಿ ನೆಲ್ಯಾಡಿ ಬೀಡು ಎಂಬ ಮನೆಯಲ್ಲಿ ಬಿರ್ಮಣ್ಣ ಪರ್ಗದೇ ಹಾಗು ಬಲ್ಲಲ್ತಿ ಎಂಬ ಅತೀ ಹೆಚ್ಚು ದೈವವನ್ನು ನಂಬುವ ದಂಪತಿಗಳು ವಾಸ ಆಗಿದ್ದರು. ಒಮ್ಮೆ ಇವರ ಮನೆಗೆ ನಾಲ್ಕು ಜನ ಅತಿಥಿಗಳು ಬಂದರು, ಮನೆಗೆ ಬಂದ ಅತಿಥಿಗಳಿಗೆ ಈ ದಂಪತಿಗಳು ನಿಷ್ಠೆಯಿಂದ ಸತ್ಕಾರ ಮಾಡಿದರು, ಸತ್ಕಾರ ಮಾಡಿದ ರಾತ್ರಿಯೇ ಮನೆಯ ಒಡೆಯ ಬಿರ್ಮಣ್ಣ ಪರ್ಗದೇ ಕನಸಿನಲ್ಲಿ ನಾಲ್ಕು ದೈವಗಳು ಬಂದು ನಾವು ನಿಮ್ಮ ಮನೆಯಲ್ಲೇ ಶಾಶ್ವತವಾಗಿ ನೆಲೆಸಬೇಕು ಎಂದು ಹೇಳಿದರು,

ಕನಸು ಬಂದ ಮರು ದಿನ ದೈವದ ಇಚ್ಚೆಯಂತೆ ದಂಪತಿಗಳು ಮನೆಯನ್ನು ಬಿಟ್ಟು ಹೋದರು, ಪರುಷ ದೈವ ಕಾಳರಾಹು ಮತ್ತು ಕುಮಾರ ಸ್ವಾಮಿ. ಸ್ತ್ರೀ ದೈವಗಳಾದ ಕಳಕಾರ್ಯಿ ಮತ್ತು ಕನ್ಯಾಕುಮಾರಿ, ಈ ನಾಲ್ಕು ದೈವಗಳ ಇಚ್ಚೆಯಂತೆ ಒಂದು ದೇಗುಲ ಕಟ್ಟಿಸಿ ಅದಕೆ ಅರ್ಚಕರಿಂದ ಪ್ರತಿ ನಿತ್ಯ ಪೂಜೆ ನೆರವೇರಿಸಿದರು. ದೈವಗಳ ಇಚ್ಚೆಯಂತೆ ಅಲ್ಲೊಂದು ಶಿವ ಲಿಂಗದ ಪ್ರತಿಷ್ಠಾಪನೆ ಆಗಬೇಕೆಂದು ಬೇಡಿಕೆ ಬಂತು ಆಗ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಿದರು ಅವರು ಕದ್ರಿಯಲ್ಲಿ ಲಿಂಗ ತರುವ ಅಷ್ಟರಲ್ಲಿ ದೈವಗಳೇ ದೇಗುಲ ನಿರ್ಮಾಣ ಮಾಡಿದರು ನಂತರ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ.

ಧರ್ಮಸ್ಥಳದಲ್ಲಿ ಒಂದು ಲಕ್ಷ ಜನಕ್ಕೆ ಉಟ ಮಾಡುವ ವ್ಯವಸ್ತೆ ಇದೆ, ಅನ್ನಪೂರ್ಣ ಹೆಸರಿನ ಪ್ರಸಾದ ನಿಲಯದಲ್ಲಿ ಉಟ ಮಾಡುವುದು ಸಹ ಒಂದು ಪುಣ್ಯದ ಕೆಲಸ, ವೀರೇಂದ್ರ ಹೆಗ್ಗಡೆಯವರ ಆಳ್ವಿಕೆಯಲ್ಲಿ ಧರ್ಮಸ್ಥಳ ಮಂಜುನಾಥನ ಸನ್ನಿದಿ ಲಕ್ಷಾಂತರ ಜನಕ್ಕೆ ಅನ್ನ ನೀಡಿದೆ , ನೂರಕ್ಕೂ ಹೆಚ್ಚು ಶಾಲಾ ಕಾಲೇಜು ನಡೆಸುತಿದ್ದು ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ನಾಂದಿ ಆಗಿದೆ,

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಚರಿತ್ರೆ ಓದಿದ ನಂತರ ಶೇರ್ ಮಾಡುವುದು ಸಹ ಒಂದು ಪುಣ್ಯದ ಕೆಲಸ, ತಪ್ಪದೇ ನಕಲು ಮಾಡದೆ ಶೇರ್ ಮಾತ್ರ ಮಾಡಿ ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ತಿಳಿಸಿ

LEAVE A REPLY

Please enter your comment!
Please enter your name here