ರಾತ್ರಿಯ ಹೊತ್ತಿನಲ್ಲಿ ನಿದ್ದೆ ಬಿಟ್ಟರೆ ನಿಮ್ಮ ಆರೋಗ್ಯ ಕೆಡುತ್ತದೆ.
ಪ್ರತಿಯೊಬ್ಬರಿಗು ನಿದ್ದೆ ಎಂಬುದು ತುಂಬಾ ಮುಖ್ಯ ಏನನ್ನು ಬಿಟ್ಟರು ನಿದ್ದೆ ಮಾಡುವುದನ್ನು ತಪ್ಪಿಸಬಾರದು. ಈ ನಿದ್ದೆ ಎಂಬುದು ಯಾವ ಯಾವ ವಯಸ್ಸಿನವರೆಗೆ ಎಷ್ಟು ಗಂಟೆಗಳ ನಿದ್ದೆ ತುಂಬಾ ಬೇಕು ಎಂಬುದು ಅಷ್ಟೇ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ. ಮಕ್ಕಳ ಪರೀಕ್ಷೆ. ಮುಗಿಯದ ಕೆಲಸಗಳು. ಇವೆಲ್ಲದಕ್ಕಿಂತ ಮುಖ್ಯವಾಗಿ ಇಂದಿನ ಕಾಲದ ಹುಡುಗ, ಹುಡುಗಿಯರ ಕೈಯಲ್ಲಿ ಮೊಬೈಲ್ ಫೋನ್ ಇದ್ದರೆ ಮುಗಿಯಿತು ಅವರಿಗೆ ಕೆಲಸ. ನಿದ್ದೆ. ಊಟ ಸಮಯ ಎಲ್ಲವನ್ನು ಮರೆತು ರಾತ್ರಿಯೆಲ್ಲ ಫೋನ್ ಇಟ್ಟುಕೊಂಡೆ ಕಾಲ ಕಳೆಯುತ್ತಾರೆ.
ಆದರೆ ಇದು ಎಷ್ಟು ಅಪಾಯ ಎಂಬುದು ಗೊತ್ತಿರುವುದಿಲ್ಲ. ಒಂದೇ ಒಂದು ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಮಾರನೆಯ ದಿನ ನಮಗೆ ಗೊತ್ತಿಲ್ಲದ ಅಗೆ ನಮ್ಮ ದೇಹ , ಮನಸ್ಸುಗಳು ವಿಚಿತ್ರವಾಗಿ ಅಡುತ್ತಿರುತ್ತವೆ. ನಾವು ಮಾಡುವ ಕೆಲಸಕ್ಕೆ ನಮ್ಮ ದೇಹ, ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಎಲ್ಲದಕ್ಕೂ ವಿಚಿತ್ರವಾಗಿ ಅಡುತ್ತದೆ.
ಅದಕ್ಕಾಗಿ ಪ್ರತಿಯೊಬ್ಬರಿಗೂ ನಿದ್ದೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಒಂದು ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಯಾವ ಯಾವ ರೀತಿಯ ಸಮಸ್ಯೆಗಳು ನಮ್ಮನ್ನು ಆವರಿಸುತ್ತದೆ ನೋಡೋಣ ಬನ್ನಿ…. ನಮ್ಮ ದೇಹಕ್ಕೆ ಸರಿಯಾದ ಸಮಯಕ್ಕೆ ಆಹಾರ. ವ್ಯಾಯಾಮ. ನಿದ್ದೆ ಎಂಬುದು ಬೇಕು. ಹಾಗೆಯೇ ನಮ್ಮ ದೇಹವು ಒಂದು ವ್ಯವಸ್ಥೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗಲು ದೇಹದಲ್ಲಿ ಹಲವಾರು ರಸದೂತಗಳು ಸಮಯಕ್ಕೆ. ಕಾಲಕಾಲಕ್ಕೆ ಸ್ರವಿಸಬೇಕು. ಅದನ್ನು ಬಿಟ್ಟು ನಿದ್ದೆಯನ್ನೇ ಮಾಡದೇ ಇದ್ದಾಗ ಕಾರ್ಟೀಸೋಲ್ ಉತ್ಪಾದನೆಯೂ ಹೆಚ್ಚುತ್ತದೆ ಹಾಗೂ ಇದು ಮಾನಸಿಕ ಒತ್ತಡದ ಸಹಿತ ಹಲವಾರು ಇತರ ತೊಂದರೆಗಳನ್ನು ಉಂಟುಮಾಡುತ್ತದೆ.
ನಿದ್ದೆ ಮಾಡದೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮಧುಮೇಹ ಸಮಸ್ಯೆಗಳು ಬರುತ್ತದೆ. ನಿದ್ದೆ ಸರಿಯಾಗಿಲ್ಲ ಎಂದರೆ ಮಧುಮೇಹ, ಸ್ಥೂಲಕಾಯ ಹಾಗೂ ಹೃದ್ರೋಗ ಸಮಸ್ಯೆ ಹೆಚ್ಚುತ್ತದೆ. ನಿದ್ದೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ನಿದ್ದೆ ಕಡಿಮೆಯಾದರೆ ನಮ್ಮ ಹೃದಯಕ್ಕೆ ಹೆಚ್ಚಿನ ಭಾರ ಬೀಳುತ್ತದೆ. ನಿದ್ದೆಯ ಕೊರತೆಯಿಂದ ನಮ್ಮ ಚಿಂತನಾ ಸಾಮರ್ಥ್ಯ ಕಡಿಮೆಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಶಕ್ತಿಯೂ ಕುಂದುತ್ತದೆ. ಸುಸ್ತು, ಸಂಕಟವಾಗುತ್ತದೆ.
ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ನಮ್ಮ ಮೆದುಳಿಗೆ ಹೆಚ್ಚು ಒತ್ತಡ ಬಿಳುವುದರ ಜೊತೆಗೆ ಕ್ಯಾನ್ಸರ್ ಎಂಬ ಭಯಾನಕ ಕಾಯಿಲೆಗಳು ಉತ್ಪತ್ತಿ ಆಗುತ್ತದೆ. ರಾತ್ರಿಯ ನಿದ್ದೆಯಿಂದ ಮಾಡದೆ ಇದ್ದರೆ ಮಾರನೇ ಬೆಳಿಗ್ಗೆ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ ಜೊತೆಗೆ ನಿತ್ಯಾ ಮಾಡುವ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ಸಹ ನಮಗೆ ಆಗುವುದಿಲ್ಲ. ರಾತ್ರಿಯ ನಿದ್ದೆ ಮಾಡದೆ ಇರುವುದರಿಂದ ನಮಗೆ ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ಗಳು ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ.
ಮದ್ಯರಾತ್ರಿಯವರೆಗೆ ಕೆಲಸವನ್ನು ಮಾಡುವ ವ್ಯಕ್ತಿಗಳಿಗೆ ಯೋಚನಾ ಸಾಮರ್ಥ್ಯ ಕುಂಠಿತವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯ ಬಂದರೆ ಸಾಕು ಹಿಂದಿನ ರಾತ್ರಿ ನಿದ್ದೆ ಮಾಡದೆ ಮಧ್ಯರಾತ್ರಿಯ ವರೆಗೂ ಓದಿ ಎರಡು ಇಲ್ಲ ಮೂರು ಗಂಟೆ ನಿದ್ದೆ ಮಾಡಿ ಪರೀಕ್ಷೆ ಬರೆಯಲು ಹೋದರೆ ರಾತ್ರಿ ಓದಿದೆಲ್ಲ ಮರೆತು ಹೋಗುತ್ತದೆ. ಒಂದು ರಾತ್ರಿ ನಿದ್ದೆ ಮಾಡದೇ ಇದ್ದರೆ ಸಾಕು ಮರುದಿನ ನಮ್ಮ ಮೆದುಳಿನ ಕ್ಷಮತೆ ಕುಂದುತ್ತದೆ ಜೊತೆಗೇ ಮರೆವು ಎಂಬುದು ನಮ್ಮನ್ನು ಹೆಚ್ಚಾಗಿ ಕಾಡುತ್ತದೆ ರಾತ್ರಿ ನಿದ್ದೆಯನ್ನು ಸರಿಯಾಗಿ ಮಾಡದೆ ಇರುವ ಪುರುಷರಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಪ್ರಮಾಣ ಕಡಿಮೆಯಾಗುತ್ತದೆ ಇದರಿಂದ ಅವರ ಲೈಂಗಿಕ ಸಾಮರ್ಥ್ಯ ಸಹ ಕುಂದುತ್ತದೆ.
ರಾತ್ರಿ ನಿದ್ದೆ ಮಾಡದೆ ಇರುವುದರಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬಿದ್ದು ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಭವಿಸುತ್ತಿರುವ ಸಮಸ್ಯೆ ಎಂದರೆ ಹೆಚ್ಚು ತಲೆ ನೋವು ಆದರೆ ಇದಕ್ಕೆ ಕಾರಣ ಸರಿಯಾಗಿ ಮಾಡದೆ ಇರುವ ನಿದ್ದೆ ಎಂದು ಹೇಳಬಹುದು.
ರಾತ್ರಿಯ ಸಲ ನಿದ್ದೆ ಸರಿ ಹೋಗಿಲ್ಲ ಎಂದರೆ ಕೈ. ಕಾಲು ಎಲ್ಲ ನೋವು ಬರುತ್ತವೆ. ರಾತ್ರಿ ಸರಿಯಾಗಿ ನಿದ್ದೆ ಆಗಿಲ್ಲ ಎಂದರೆ ನಮ್ಮ ನಿತ್ಯದ ಆಹಾರದಲ್ಲೂ ಬದಲಾವಣೆ ಉಂಟಾಗುತ್ತದೆ. ಜೊತೆಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗುತ್ತದೆ. ರಾತ್ರಿ ನಿದ್ದೆಯ ಕೊರತೆ ಉಂಟಾದರೆ ನಮ್ಮ ದೇಹದಲ್ಲಿ ಬಿಡುಗಡೆಯಾಗ ಬೇಕಾಗಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಆಗಾಗಿ ನಮ್ಮ ದೇಹ ಇದನ್ನು ಬಳಸಿಕೊಳ್ಳಲು ಅಸಮರ್ಥವಾಗಿ ಇರುವುದರಿಂದ ಟೈಪ್ 2 ಮಧುಮೇಹ ಎಂಬುದು ನಿಧಾನವಾಗಿ ನಮ್ಮನ್ನು ಆವರಿಸುತ್ತದೆ.
ಹಾಗಾಗಿ ನಮ್ಮ ಆರೋಗ್ಯ ಉತ್ತಮವಾಗಿ ಇರ್ಬೇಕು ಎಂದರೆ ತಮ್ಮ ವಯಸ್ಸಿಗೆ ಕನಿಷ್ಠ ಎಷ್ಟು ಗಂಟೆಯ ಕಾಲ ನಿದ್ದೆ ಮಾಡಬೇಕು. ಎಂಬುದನ್ನು ತಿಳಿದುಕೊಂಡು ನಿದ್ದೆ ಮಾಡಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಅಂದರೆ ಸ್ವಲ್ಪ ನಿದ್ದೆ ಹೆಚ್ಚು ಆದರು ಕಡಿಮೆ ಆದರು ಸಹ ನಮ್ಮ ಆರೋಗ್ಯ ಕೆಡುತ್ತದೆ.
ಏಕೆಂದರೆ ನಿದ್ದೆಯ ಸಮಯದಲ್ಲಿ ಕೇವಲ ಅನೈಚ್ಛಿಕ ಕಾರ್ಯಗಳು ಮಾತ್ರವೇ ಜರುಗುತ್ತದೆ ಹಾಗೂ ಈ ಸಮಯದಲ್ಲಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ. ನಿದ್ದೆಯ ಸಮಯವನ್ನು ಏರುಪೇರುಗೊಳಿಸುವ ಮೂಲಕ, ವಿಶೇಷವಾಗಿ ನಿದ್ದೆಯ ಸಮಯವನ್ನು ಕಡಿಮೆ ಮಾಡುವ ಮೂಲಕ ಹೃದಯ ಹೆಚ್ಚು ಕಾಲ ತನ್ನ ಪೂರ್ಣ ಕ್ಷಮತೆಯಿಂದ ಕೆಲಸ ಮಾಡಬೇಕಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರಿ ಹೃದ್ರೋಗ, ಸ್ತಂಭನ ಮೊದಲಾದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಒಂದು ರಾತ್ರಿಯ ನಿದ್ದೆ ಬಿಟ್ಟರೆ ಮರುದಿನ ಮೆದುಳಿಗೆ ತಲುಪಬೇಕಾಗುವಷ್ಟು ರಕ್ತ ಹಾಗೂ ಪೋಷಕಾಂಶಗಳು ತಲುಪುವುದಿಲ್ಲ. ಒಂದು ರಾತ್ರಿ ನಿದ್ದೆಯ ಕೊರತೆ ಕಲಿಕಾ ಸಾಮರ್ಥ್ಯ ಹಾಗೂ ಸ್ಮರಣಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಮೆದುಳು ಗ್ರಹಿಸಿದ ವಿಷಯಗಳನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಸಾಕಷ್ಟು ನಿದ್ದೆ ಅವಶ್ಯವಾಗಿದೆ. ರಾತ್ರಿ ನಿದ್ದೆ ಬಿಟ್ಟರೆ ಹಾರ್ಮೋನುಗಳು ಕುಂಠಿತಗೊಳ್ಳುತ್ತವೆ ದಾಂಪತ್ಯ ಜೀವನದಲ್ಲಿ ದಂಪತಿಗಳ ನಡುವಣ ಬಾಂಧವ್ಯ ಉತ್ತಮಗೊಳ್ಳಲು ಸಾಧ್ಯವಾಗುವುದಿಲ್ಲ. ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಹಾಗೂ ತೂಕ ಹೆಚ್ಚಾಗುತ್ತದೆ.
ಸರಿಯಾಗಿ ನಿದ್ದೇ ಮಾಡದೆ ಇದ್ದರೆ ನಮ್ಮ ಚರ್ಮದಲ್ಲಿ ಸುಕ್ಕು ಹೆಚ್ಚುತ್ತದೆ. ಮೊಡವೆಗಳು ಹೆಚ್ಚುತ್ತದೆ. ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ವೃದ್ಧಾಪ್ಯ ಎಂಬುದು ಬೇಗನೇ ಆವರಿಸುತ್ತದೆ. ಕಡಿಮೆ ನಿದ್ದೆ ಅಥವಾ ಕ್ರಮಬದ್ಧವಲ್ಲದ ನಿದ್ದೆ ಮಾಡುವ ವ್ಯಕ್ತಿಗಳು ತಮ್ಮ ನಿಜವಾದ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ.
ನಿದ್ದೆಯ ಕೊರತೆಯಿಂದ ಮುಖದಲ್ಲಿ ನೆರಿಗೆಗಳು, ಹಾಗೂ ಕಣ್ಣಿನ ಸುತ್ತ ಕಪ್ಪು ಕಲೆಗಳು ಹೆಚ್ಚುತ್ತದೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಕಣ್ಣಿಗೆ ತೊಂದರೆಯಾಗುತ್ತದೆ. ಕೆಲವು ವೇಳೆ ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆ ಸಹ ಬರುತ್ತದೆ. ರಾತ್ರಿಯ ಸಮಯದಲ್ಲಿ ನಿದ್ದೆ ಮಾಡದೆ ಬೆಳಿಗ್ಗೆ ಎದ್ದರೆ ಆ ನಿದ್ದೆಯ ಗುಂಗಿನಲ್ಲೇ ಇರುತ್ತೇವೆ ಆ ಸಮಯದಲ್ಲಿ ನಮ್ಮನ್ನು ಯಾರು ಮತನಾಡಿಸಿದರು ಅವರ ಜೊತೆ ಸರಿಯಾಗಿ ಮಾತಾಡಲು ಆಗುವುದಿಲ್ಲ.
ಹಾಗಾಗಿ ಎಷ್ಟೇ ಕೆಲಸವಿದ್ದರು ಸಹ ರಾತ್ರಿಯ ನಿದ್ದೆಯನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ. ನಿಮ್ಮ ವಯಸ್ಸನ್ನು ನೋಡಿಕೊಂಡು ನೀವು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕೋ ಅಷ್ಟು ನಿದ್ದೆಯನ್ನು ತಪ್ಪದೆ ಮಾಡಿ ಇದರಿಂದ ನಿಮ್ಮ ಮಾನಸಿಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಿ.