ಈ ದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

0
628

ಮೇಷ ರಾಶಿ : ಈ ದಿನ ನೀವು ನಿಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ಹೆಚ್ಚು ಕಾಳಜಿ ವಹಿಸಬೇಕು, ನಿಮಗೆ ಏನಾದ್ರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ರೆ ಈ ದಿನ ಅದರಿಂದ ಹೆಚ್ಚು ಲಾಭವನ್ನು ಪಡೆಯುತ್ತೀರಿ ಅಥವ ಸಾಧ್ಯ ಆಗದೆ ಇದ್ದಲ್ಲಿ ಮಹಾ ವಿಷ್ಣುವನ್ನು ಕೆಲವು ಸಮಯ ಧ್ಯಾನ ಮಾಡಿದ್ರೆ ಯಾವುದೇ ಸಮಸ್ಯೆ ಬರುವುದಿಲ್ಲ ಈ ದಿನ ಉತ್ತಮವಾಗಿದೆ.

ವೃಷಭ: ಈ ದಿನ ಉದ್ಯೋಗಕ್ಕೆ ಹೋಗುವವರು ಒಂದಿಷ್ಟು ಕಾಳಜಿ ವಹಿಸಿದರೆ ತುಂಬಾ ಒಳ್ಳೆಯದು, ನಿಮ್ಮ ಕೆಲಸದಲ್ಲಿ ಒಂದಿಷ್ಟು ಕಿರಿ ಕಿರಿ ಆಗುವ ಸಾಧ್ಯತೆ ನಿಮಗಿದೆ, ನೀವು ನಿಮ್ಮ ಎಲ್ಲ ಸಮಸ್ಯೆಗಳಿಂದ ಪಾರಾಗಲು ಗಣಪತಿಯ ಪ್ರಾರ್ಥನೆ ಮಾಡಿ, ಸಮಯ ಸಿಕ್ಕರೆ ಬೆಳ್ಳಗೆ ಅಥವ ಸಂಜೆ ಗಣಪನ ದರ್ಶನ ಮಾಡಿ ಈ ದಿನ ನಿಮಗೆ ಒಳ್ಳೇದು ಆಗುತ್ತೆ

ಮಿಥುನ: ಈದಿನ ನಿಮಗೆ ಒಂದಿಷ್ಟು ಮಾನಸಿಕ ಖಿನ್ನತೆ ಮೂಡುವುದು ಹಸುವಿಗೆ ಒಂದಿಷ್ಟು ಅಕ್ಕಿ ಬೆಲ್ಲ ನೀಡಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು ನಿಶ್ಚಿತ, ಈ ದಿನ ನಿಮ್ಮ ಸಮಸ್ಯೆಗಳಿಂದ ಪಾರಾಗಲು ನೀವು ಹನುಮನ ಸ್ತುತಿ ಪಾರಾಯಣ ಮಾಡಿ ನಂತರ ಹನುಮಂತನ ದೇಗುಲಕ್ಕೆ ಭೇಟಿ ನೀಡಿ, ಶುಭವಾಗುವುದು.

ಕರ್ಕಾಟಕ: ನಿಮ್ಮ ಈ ದಿನ ಆರೋಗ್ಯದ ಸಮಸ್ಯೆ ಕಾಡಿದರೆ ಆಶ್ಚರ್ಯ ಇಲ್ಲ, ಶೀತದ ಸಮಸ್ಯೆ ಮತ್ತು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಸೂಕ್ತ, ಈ ಕರ್ಕಾಟಕ ರಾಶಿಯವರಿಗೆ ಆರೋಗ್ಯಕ್ಕೆ ಸಂಭಂದಪಟ್ಟ ಸಮಸ್ಯೆ ಬರಬಹುದು ಆದ್ದರಿಂದ ನೀವು ಶಿವನ ಪಾರಾಯಣ ಮಾಡಿ,

ಸಿಂಹ: ಈ ದಿನ ನಿಮಗೆ ಒಂದಿಷ್ಟು ಹೆಚ್ಚು ಹಣ ಖರ್ಚು ಆಗುವ ಸಾಧ್ಯತೆ ಇದೆ ಆದ ಕಾರಣ ದುಂಡು ವೆಚ್ಚಗಳಿಗೆ ಕಡಿವಾಣ ಹಾಕಿ, ಶಾಲಾ ಕಾಲೇಜು ವಿದ್ಯಾರ್ಥಿಗಳ ಮನಸ್ಸು ಚಂಚಲ ಆಗುವ ಸಾಧ್ಯತೆ ಹೆಚ್ಚಿದೆ, ಈ ದಿನ ನಿಮ್ಮ ಮನಸನ್ನು ಆದಷ್ಟು ಸ್ಥಿರವಾಗಿ ಇಟ್ಟುಕೊಳ್ಳಿ.

ಕನ್ಯಾ : ಈ ದಿನ ನಿಮ್ಮ ಸರ್ಕಾರಿ ಕಚೇರಿ ಕೆಲಸಗಳು ಇದ್ರೆ ಅದನ್ನ ಮುಂದೂಡಿ, ಈ ದಿನ ಈ ರಾಶಿಯವರಿಗೆ ಅಷ್ಟು ಶುಭದಾಯಕ ಅಲ್ಲದ ಕಾರಣ ನೀವು ಆದಷ್ಟು ಎಲ್ಲ ಮುಖ್ಯವಾದ ಕೆಲಸವನ್ನ ಮುಂದಕ್ಕೆ ಹಾಕಿ, ಈ ದಿನ ನೀವು ನಿಮ್ಮ ಇಷ್ಟದ ದೇವರನ್ನ ಪ್ರಾರ್ಥನೆ ಮಾಡಿಕೊಳ್ಳಿ.

ತುಲಾ : ಈ ದಿನ ನಿಮ್ಮ ಕುಟುಂಬದಲ್ಲಿ ಒಂದಿಷ್ಟು ನೆಮ್ಮದಿ ತರಬಹುದು, ಆಫೀಸ್ ಕೆಲಸ ಮಾಡುವವರು ಎಚ್ಚರಿಕೆ ಇರಲಿ, ನಿಮ್ಮ ಈ ದಿನದ ಎಲ್ಲ ಕೆಲಸ ಕಾರ್ಯಗಳು ಸಿದ್ದಿಯಾಗಲು ನೀವು ಗಣೇಶನ ಪ್ರಾರ್ಥನೆ ಮಾಡಿ. ಕಪ್ಪು ಬಣ್ಣದ ನಾಯಿಗೆ ರೊಟ್ಟಿ ಅಥವ ಬಿಸ್ಕತ್ ಹಾಕಿದ್ರೆ ನಿಮಗೆ ಶ್ರೇಯಸ್ಸು.

ವೃಶ್ಚಿಕ: ಈ ದಿನ ನೀವು ಸಂಚಾರ ಮಾಡುವಾಗ ವಾಹನ ಓಡಿಸುವಾಗ ಜಾಗ್ರತೆ ಹೆಚ್ಚು ವಹಿಸಿ, ವಿದ್ಯಾರ್ಥಿಗಳು ಕಾಲೇಜು ತೆಳರುವ ಮುನ್ನ ಗಣೇಶನ ದರ್ಶನ ಮಾಡಿದ್ರೆ ತುಂಬಾ ಒಳ್ಳೆ ಫಲ ಸಿಗುತ್ತೆ. ಹಸುವಿಗೆ ಬೆಲ್ಲ ತಿನಿಸಿದ್ರೆ ನೀವು ಈ ದಿನ ವಿಶೇಷ ಲಾಭ ಪಡೆಯಿರಿ.

ಧನು: ಈ ದಿನ ನಿಮಗೆ ಒಂದಿಷ್ಟು ಒಳ್ಳೆ ಬೆಳವಣಿಗೆ ಆಗುವ ಸಾಧ್ಯತೆ ಹೆಚ್ಚು, ಸಾಕಷ್ಟು ದಿನದಿಂದ ಮಾನಸಿಕ ಕಿರಿ ಕಿರಿ ಅನುಭವಿಸುತ್ತಾ ಇರುವವರಿಗೆ ಒಳ್ಳೆ ಶುಭ ಕಾಲ ಬರಲಿದೆ, ನಿಮ್ಮ ಸಮಸ್ಯೆಗಳು ದೂರ ಆಗಲು ನೀವು ಈ ದಿನ ಸುಬ್ರಮಣ್ಯನ ದರ್ಶನ ಪಡೆಯಿರಿ, ಸುಬ್ರಮಣ್ಯ ದ್ಯಾನ ಮಾಡಿ. ಜೊತೆಗೆ ಹೆಚ್ಚಿನ ಫಲ ಸಿಗಲು ನೀವು ಒಂದು ಹಿಡಿ ಅಕ್ಕಿಯನ್ನು ಸಾದು ಸಂತರಿಗೆ ಅಥವ ದಾನ ಮಾಡಿ ಹೆಚ್ಚಿನ ಫಲ ನಿಮಗೆ ಸಿಗುತ್ತೆ.

ಮಕರ : ಈ ದಿನ ನಿಮಗೆ ಆಕಸ್ಮಿಕವಾಗಿ ಹೆಚ್ಚು ಖರ್ಚು ಆಗುವ ಸಾಧ್ಯತೆ ಇದೆ, ಈ ದಿನ ನೀವು ನಿಮ್ಮ ಹಣಕಾಸಿನ ಬಗ್ಗೆ ಹೆಚ್ಚು ಜಾಗ್ರತೆವಹಿಸಿ, ಸ್ನೇಹಿತರಿಗೂ ಅಥವ ಬಂದುಗಳಿಗೆ ಹಣ ಕೊಟ್ಟು ನಿಮ್ಮ ವಿಶ್ವಾಸ ಹಾಳು ಮಾಡಿಕೊಳ್ಳಬೇಡಿ. ಈ ದಿನ ನೀವು ಶ್ರೀ ಕೃಷ್ಣನ ದರ್ಶನ ಪಡೆಯಿರಿ.

ಕುಂಭ: ಈ ದಿನ ನಿಮ್ಮ ನೇರ ಮಾತುಗಳಿಂದ ಸಂಕಷ್ಟಕ್ಕೆ ಸಿಳುಕಿವಿರಿ ಆದರಿಂದ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಹೆಣ್ಣು ಮಕ್ಕಳು ಆದಷ್ಟು ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು, ಈ ದಿನ ನಿಮ್ಮ ಎಲ್ಲ ಕೆಲಸಗಳು ಸುಲಭವಾಗಿ ನೆರವೇರಲು ನೀವು ನಿಮ್ಮ ಮೆನೆ ದೇವರನ್ನು ಹೆಚ್ಚು ಪ್ರಾರ್ಥನೆ ಮಾಡಬೇಕು, ಈ ದಿನ ನೀವು ಉತ್ತರ ದಿಕ್ಕಿನಲ್ಲಿ ನಿಮಗೆ ಕಾಣುವ ಯಾವುದಾದರೂ ಒಂದು ಪ್ರಾಣಿಗೆ ಒಂದಿಷ್ಟು ಆಹಾರ ನೀಡಿದರೆ ನಿಮಗೆ ಹೆಚ್ಚಿನ ಶುಭಆಗಲಿದೆ.

ಮೀನಾ: ಈ ದಿನ ನಿಮ್ಮ ರಾಶಿಗೆ ಅಷ್ಟು ಶುಭದಾಯಕ ಅಲ್ಲ, ಸಣ್ಣ ಸಣ್ಣ ವಿಷಯಗಳು ದೊಡ್ಡ ಜಗಳ ಆಗುವ ಸಾಧ್ಯೆತೆ ಹೆಚ್ಚಿದೆ, ನೀವು ನಿಮ್ಮ ಮಾತಿನ ಮೇಲೆ ಸಂಪೂರ್ಣ ಹಿಡಿತ ಯೋಚಿಸಿ ಮಾತನಾಡುವುದು, ಯೋಚಿಸಿ ನಂತರ ಕೆಲಸವನ್ನು ಮಾಡಬೇಕು, ಆತುರದ ನಿರ್ಧಾರ ನಿಮಗೆ ಸಮಸ್ಯೆ ಉಂಟು ಮಾಡಲಿದೆ, ನಿಮ್ಮ ಈ ದಿನ ಎಲ್ಲ ಸಮಸ್ಯೆಗಳಿಂದ ದೂರ ಸಾಧ್ಯ ಆದರೆ ಹಳದಿ ವಸ್ತ್ರವನ್ನು ಬಡವರಿಗೆ ದಾನ ಮಾಡಿ. ಹೆಚ್ಚು ಶಿವನ ನಾಮ ಹೇಳಿಕೊಳ್ಳಿ.

LEAVE A REPLY

Please enter your comment!
Please enter your name here