ಈ ದೇವಾಲಯದಲ್ಲಿ ತೆಂಗಿನ ಕಾಯಿ ನೀರಿನ ಮೇಲೆ ತೇಲುತ್ತೆ

0
1241

ಈ ದೇವಾಲಯದ ಬಗ್ಗೆ ನಿಮಗೆ ಅಚ್ಚರಿ ಆಶ್ಚರ್ಯ ಆಗಬಹುದು ಆದರು ಇದು ಸತ್ಯ ಭಾರತ ಅಂದ್ರೆ ಇದು ಪುಣ್ಯ ಭೂಮಿ ನಾನಾ ಸಂತರು ಜನಿಸಿದ ನಾಡು, ಅನೇಕ ವಿಶೇಷ ವಿಶಿಷ್ಟ ಪವಾಡ ದೇವಾಲಯ ನಮ್ಮ ಭಾರತದಲ್ಲಿ ಬಿಟ್ಟರೆ ಇಡೀ ಪ್ರಪಂಚದಲೇ ಎಲ್ಲೂ ಇಲ್ಲ, ಇಂತಹ ಅನೇಕ ಇತಿಹಾಸ ಸುಪ್ರಸಿದ್ದ ದೇವಾಲಯಗಳು ನಮ್ಮ ನಾಡಿನಲ್ಲಿ ಸಹ ಇದೆ, ಸಾಕಷ್ಟು ಜನಕ್ಕೆ ಈ ದೇವಾಲಯ ಬಗ್ಗೆ ಗೊತ್ತಿಲ್ಲ ಅದಕ್ಕೆ ನಾವು ಇಂದಿಷ್ಟು ಮಾಹಿತಿ ಸಂಗ್ರಹ ಮಾಡಿ ನಿಮ್ಮ ಮುಂದೆ ಇಟ್ಟಿದ್ದೇವೆ.

ಈ ಹಾಲು ರಾಮೇಶ್ವರ ದೇವಾಲಯ ಇರೋದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿ ಈ ದೇವಾಲಯವನ್ನು ರಾಮಾಯಣ ಕಾಲದಲ್ಲಿ ವಾಲ್ಮೀಕಿ ಋಷಿ ನಿರ್ಮಾಣ ಮಾಡಿದ್ದಾರೆ ಅಂದ್ರೆ ನೀವೇ ಅರ್ಥ ಮಾಡಿಕೊಳ್ಳಿ ಈ ದೇಗುಲಕ್ಕೆ ಎಷ್ಟು ಇತಿಹಾಸ ಇದೆ ಎಂಬುದು,

ಈ ದೇವಾಲಯಕ್ಕೆ ಪ್ರತಿ ನಿತ್ಯ ಹಲವು ರಾಜ್ಯಗಳಿಂದ ಸಾಕಷ್ಟು ಜನ ಭೇಟಿ ಕೊಡ್ತಾರೆ, ಸಂತಾನ ಸಮಸ್ಯೆ, ಹಣ ಕಾಸಿನ ಆರ್ಥಿಕ ಸಮಸ್ಯೆ, ಕೋರ್ಟು ಕಛೇರಿ ಸಮಸ್ಯೆ ಹೀಗೆ ಜೀವನದಲ್ಲಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಈ ದೇವರಿಂದ ನಿಶ್ಚಿತ ಪರಿಹಾರ ಸಿಕ್ಕಿದೆ ಈ ಲಾಭವನ್ನು ಲಕ್ಷಾಂತರ ಜನ ಪಡೆದಿದ್ದಾರೆ.

ಸ್ವತಹ ಮೈಸೂರು ರಾಜರೇ ಇಲ್ಲಿ ಸಂತಾನಕ್ಕಾಗಿ ಬಂದು ದೇವರ ಮುಂದೆ ಪ್ರಾರ್ಥನೆ ಮಾಡಿದ್ದೂ ಇಲ್ಲಿನ ಜನ ಈಗಲೂ ಸ್ಮರಿಸುತ್ತಾರೆ,
ಈ ದೇವಾಲಯದಲ್ಲಿ ಒಂದು ಪವಾಡ ಸಹ ನಡೆಯುತ್ತೆ ಅದನ್ನ ಯಾರು ಬೇಕಾದರು ಕಣ್ಣಾರೆ ನೋಡಬಹುದು ಮತ್ತು ಪರೀಕ್ಷೆ ಸಹ ಮಾಡಬಹುದು, ದೇವರ ಮುಂದೆ ಇರುವ ಕೊಳದಲ್ಲಿ ಎಲ್ಲ ಹವಾಮಾನ ದಲ್ಲಿಯೂ ಸಹ ನೀರು ತುಂಬಿರುತ್ತೆ ಎಂತಹ ಬೇಸಿಗೆ ಬಂದ್ರು ನೀಡು ಕಡಿಮೆ ಆಗೋದಿಲ್ಲ.

ಇಲ್ಲಿನ ನೀರಿಗೆ ವಿಶೇಷ ಶಕ್ತಿ ಇದೆ, ಕೊಳದಲ್ಲಿ ಬಾಳೆಹಣ್ಣು, ತೆಂಗಿನಕಾಯಿ ಹೋಳು ಹಾಕಿದ್ರೆ ಅದು ತೇಲುವುದು ಜೊತೆಗೆ ಹರಿಶಿನ ಕುಂಕುಮ ನೀರಿನಲ್ಲಿ ಹಾಕಿದ್ರೆ ಅದು ಕರಗುವುದಿಲ್ಲ, ಇಲ್ಲಿ ಜಾತಿ ಧರ್ಮ ಎಂಬ ಬೇದ ಭಾವ ಇಲ್ಲವೇ ಇಲ್ಲ ಭಕ್ತಿ ಮಾತ್ರ ಮುಖ್ಯ ನಾವೇ ಸ್ವತಹ ದೇವರನ್ನು ಮುಟ್ಟಿ ಪೂಜೆ ಮಾಡಬಹುದು. ಇಲ್ಲಿಗೆ ಬರೀ ಹಿಂದೂಗಳು ಮಾತ್ರ ಅಲ್ಲ ಅನ್ಯ ಧರ್ಮದ ಜನರಾದ ಮುಸ್ಲಿಂ, ಕ್ರೈಸ್ತ ಜನರು ಸಾಕಷ್ಟು ಭೇಟಿ ನೀಡುತ್ತಾರೆ, ಭಕ್ತಿಯಿಂದ ಪ್ರಾರ್ಥನೆ ಮಾಡಿದ್ರೆ ಹಾಲು ರಾಮೇಶ್ವರ ನಿಮ್ಮ ಎಲ್ಲ ಕಷ್ಯಗಳನ್ನು ದೂರ ಮಾಡಿ ನಿಮಗೆ ಆರೋಗ್ಯ ಐಶ್ವರ್ಯ ಕೊಡುತ್ತಾರೆ,

ಈ ಹಾಲು ರಾಮೇಶ್ವರ ಚರಿತ್ರೆ ಶೇರ್ ಮಾಡುವುದು ಸ್ವಾಮಿಯ ಬಗ್ಗೆ ಮತ್ತೊಬ್ಬರಿಗೆ ತಿಳಿಸುವುದು ಸಹ ಪುಣ್ಯದ ಕೆಲಸ ಆದ್ದರಿಂದ ನಕಲು ಮಾಡದೆ ಶೇರ್ ಮಾಡಿ ಎಲ್ಲರಿಗು ಶುಭವಾಗಲಿ. ದೇವಾಲಯ ಇರೋ ಸ್ಥಳ ಹಾಲು ರಾಮೇಶ್ವರ ದೇವಾಲಯ ನರಸಿಪುರ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ.

LEAVE A REPLY

Please enter your comment!
Please enter your name here