ಒಂದು ಬೆಂಡೆಕಾಯಿ ಎಷ್ಟೆಲ್ಲಾ ಆರೋಗ್ಯದ ಸಮಸ್ಯೆ ದೂರ ಮಾಡುತ್ತೆ ಅಂದ್ರೆ

0
1572

ಬೆಂಡೆಕಾಯಿಯಲ್ಲಿ ಎಷ್ಟೆಲ್ಲ ರೀತಿಯ ಆರೋಗ್ಯದ ಸಮಸ್ಯೆಗಳನ್ನು ಹೋಗಲಾಡಿಸಬಹುದು ನಿಮಗೆ ಗೊತ್ತೇ.

ತರಕಾರಿಗಳು ಮತ್ತು ಹಣ್ಣುಗಳು ನಮಗೆ ಆರೋಗ್ಯದ ದೃಷ್ಟಿಯಿಂದ ಬಹಳ ಅವಶ್ಯಕ ಮತ್ತು ಯಾಕೆಂದರೆ ಇವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದರ ಉಪಯುಕ್ತತೆ ತುಂಬಾ ಜನರಿಗೆ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ ಎನ್ನುವುದರ ಬಗ್ಗೆ ಅರಿವಿದೆ. ತರಕಾರಿಗಳಲ್ಲಿ ರೋಗನಿರೋಧಕ ಜೀವಸತ್ವಗಳು ಮತ್ತು ಖನಿಜಗಳ ಅಂಶಗಳು ಹೇರಳವಾಗಿದ್ದು ಇವು ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿದೆ.

ಪ್ರಾಚೀನ ಕಾಲದಲ್ಲಿ, ಜನರು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ತರಕಾರಿಯಿಂದ ತಯಾರಿಸಲಾದ ಹಲವು ಬಗೆಯ ಮದ್ದುಗಳನ್ನು ಬಳಸುತ್ತಿದ್ದರು, ಇಂದಿಗೂ ಕೂಡ ಆಯುರ್ವೇದ ಔಷಧಿಗಳಲ್ಲಿ ವಿವಿಧ ತರಕಾರಿಗಳ ಸಾರಗಳನ್ನು ಉಪಯೋಗಿಸಿ ಕೆಲವು ಕಾಯಿಲೆಗಳ ಲಕ್ಷಣಗಳನ್ನು ದೂರಗೊಳಿಸುವಲ್ಲಿ ಉಪಯೋಗಿಸಲ್ಪಡುತ್ತಿದ್ದಾರೆ.
ಅಂತಹ ತರಕಾರಿಗಳಲ್ಲಿ ಒಂದಾಗಿರುವ ಬೆಂಡೆಕಾಯಿ ಇದು ಬೆಂಡೆಕಾಯಿ (ಹಣ್ಣು) ಸರಳ ಮತ್ತು ಶುಷ್ಕ ಫಲ. ಇದಕ್ಕೆ ಕ್ಯಾಪುಲಾರ್ ಫ್ರೊಟ್ ಎಂಬುದು ಸರಿಯಾದ ಹೆಸರು. ಎಳೆಯ ಬೆಂಡೆ ಕಾಯಿಯಲ್ಲಿ ಲೋಳೆ ವಸ್ತು ಇರುವುದು.

ಬೆಂಡೆಕಾಯಿಯಿಂದ ಸಾರು, ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಬೋಂಡಾ ಗೊಜ್ಜು ಮುಂತಾದ ಹಲವು ವಿಧದ ರೀತಿಯ ಅಡುಗೆಗಳನ್ನು ಮಾಡಬಹುದು. ಇದರಿಂದ ಅಡುಗೆ ಮಾಡಿ ತಿನ್ನುವುದಕ್ಕಿಂತ ಇದನ್ನು ಹಸಿಯಾಗಿ ಸೇವಿಸಿದರೆ ಇದಕ್ಕಿಂತ ಒಳ್ಳೆಯ ಆಹಾರ ಇನ್ನುವುದು ಬೇಡ ಎನ್ನಿಸುತ್ತದೆ ಅಷ್ಟು ಒಳ್ಳೆಯದು.

ಈ ಬೆಂಡೆಕಾಯಿ ಕೇವಲ ತರಕಾರಿಯಲ್ಲ .ಇದು ಎಲ್ಲ ರೋಗಗಳಿಗೂ ಮನೆಮದ್ದು. ಹಾಗಾದರೆ ಈ ಬೆಂಡೆಕಾಯಿ ಏನೆಲ ಸಮಸ್ಯೆಗಳಿಗೆ ಮನೆಮದ್ದು ಎಂಬುದನ್ನು ನೋಡೋಣ ಬನ್ನಿ . ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುವ ಬೆಂಡೆಕಾಯಿ ಸಮೃದ್ಧ ಪೋಷಕಾಂಶಗಳನ್ನು ಹೊಂದಿದೆ. ನಾರು, ವಿಟಾಮಿನ್ ಎ ಮತ್ತು ಬಿ ಹಾಗೂ ಫಾಲಿಕ್ ಆ್ಯಸಿಡ್‌ಗಳ ಉತ್ತಮ ಮೂಲವಾಗಿದೆ. ವಿಟಾಮಿನ್ ಕೆ ಮತ್ತು ಬಿ, ಕಬ್ಬಿಣ, ಪೊಟ್ಯಾಷಿಯಂ, ಸತುವು, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮ್ಯಾಗ್ನೇಷಿಯಂ ಕೂಡ ಹೇರಳವಾಗಿವೆ.

ಈ ಬೆಂಡೆಕಾಯಿಯು ಮಧುಮೇಹ, ಅಸ್ತಮಾ, ಅನೀಮಿಯಾ, ಮಂಜಾಗುತ್ತಿರುವ ಕಣ್ಣಿನ ದೃಷ್ಟಿ ಸೇರಿದಂತೆ ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ಈ ಬೆಂಡೆಕಾಯಿಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುತ್ತ ಬಂದರೆ ದೇಹವು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು, ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.

ಈ ಬೆಂಡೆಕಾಯಿಯು ಫ್ರೀರ್ಯಾಡಿಕಲ್ಸ್‌ಗಳಿಂದ ರಕ್ಷಣೆ ನೀಡುತ್ತದೆ ಮತ್ತು ಜೀವಕೋಶಗಳ ವಿಭಜನೆಯನ್ನು ತಡೆಯುತ್ತದೆ. ತನ್ಮೂಲಕ ಕ್ಯಾನ್ಸರ್ ನಿರೋಧಕವಾಗಿ ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸುತ್ತದೆ. ಬೆಂಡೆಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಅಸ್ತಮಾವನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಿದೆ.

ಬೆಂಡೆಕಾಯಿಯಲ್ಲಿರುವ ಫೊಲೇಟ್ ಎಲುಬುಗಳನ್ನು ಗಟ್ಟಿಯಾಗಿಸುವ ಜೊತೆಗೆ ಅಸ್ಥಿರಂಧ್ರತೆಯನ್ನು ತಡೆಯುತ್ತದೆ. ಬೆಂಡೆಕಾಯಿಯು ಕರಗಬಲ್ಲ ನಾರನ್ನೊಳಗೊಂಡಿದ್ದು, ರಕ್ತಸಾರದಲ್ಲಿಯ ಕೊಲೆಸ್ಟ್ರಾಲ್ ನ್ನು ತಗ್ಗಿಸುವುಲ್ಲಿ ನೆರವಾಗುತ್ತದೆ ಮತ್ತು ತನ್ಮೂಲಕ ಹೃದ್ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿಯಲ್ಲಿನ ನಾರು, ಅಂಟು ಮತ್ತು ವಿರೇಚಕ ಅಂಶಗಳು ಮಲ ವಿಸರ್ಜನೆಯನ್ನು ಸುಲಭಗೊಳಿಸುತ್ತವೆ. ಹಾಗೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಜೊತೆಗೆ ದೊಡ್ಡಕರುಳಿನ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ.

ಬೆಂಡೆಕಾಯಿಯು ಇನ್ಸುಲಿನ್‌ನಂತೆ ವರ್ತಿಸುವ ಗುಣವನ್ನು ಹೊಂದಿರುವುದ ರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಮಧುಮೇಹಿಗಳು ಪ್ರತಿದಿನ 6-8 ಎಳೆಯ ಬೆಂಡೆಕಾಯಿಗಳನ್ನು ಹಸಿಯಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಗಣನೀಯವಾಗಿ ಕಡಿಮೆಯಾಗುತ್ತದೆ. ಬೆಂಡೆಕಾಯಿಯು ಬೀಟಾ ಕ್ಯಾರೊಟಿನ್, ಲುಟೀನ್ ಮತು ಝಾಂತಿನ್‌ಗಳ ಸಮೃದ್ಧ ಮೂಲವಾಗಿದ್ದು, ಇವು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಕ್ಯಾಟರಾಕ್ಟ್ ಮತ್ತು ಗ್ಲುಕೋಮಾದಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುವಲ್ಲಿ ಬೆಂಡೆಕಾಯಿ ನೆರವಾಗುತ್ತದೆ.

ಬೆಂಡೆಕಾಯಿಯ ಸೇವನೆಯಿಂದ ಕಿಡ್ನಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಮಧುಮೇಹಕ್ಕೆ ಹಸಿ ಬೆಂಡೆಕಾಯಿ ಉತ್ತಮ ಮನೆಮದ್ದು. ಬೆಂಡೆಕಾಯಿಯಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. ಬೆಂಡೆಕಾಯಿಯಿಂದ ತಯಾರಿಸುವ ಸೂಪ್ ನ್ನು ಸೇವಿಸುವುದರಿಂದ ದೀರ್ಘಕಾಲದ ಭೇದಿ ಗುಣವಾಗುತ್ತದೆ. ಬೆಂಡೆಕಾಯಿಯಲ್ಲಿರುವ ಕೆ. ಜೀವಸತ್ವಗಳು ಮೂಳೆಗಳನ್ನು ಗಟ್ಟಿಗೊಳ್ಳಿಸುತ್ತದೆ.

ಮನುಷ್ಯನ ಜಠರದ ಲೋಳ್ಪರೆಯಲ್ಲಿ ಹೆಲಿಕೋಬ್ಯಾಕ್ಟರ್ ರೋಗಾಣುಗಳು ಅಂಟಿಕೊಳ್ಳುವುದನ್ನು ನಿವಾರಿಸಲು ಹಸಿ ಬೆಂಡೆಕಾಯಿಯ ರಸ ಸಮರ್ಥವಾಗಿದೆ. ಬೆಂಡೆಕಾಯಿ ಸೇವನೆಯಿಂದ ಮಲಬದ್ದತೆ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಬೆಂಡೆಕಾಯಿ ಸೇವನೆಯಿಂದ ಉರಿಯೂತ, ಜ್ವರ, ತಲೆನೋವು, ಸಂಧಿವಾತ, ಅತಿಸಾರ ಶಮನಗೊಳಿಸುತ್ತದೆ. ಬೆಂಡೆಕಾಯಿಯ ರಸ ಸೇವನೆಯಿಂದ ಕೆಮ್ಮು ಮತ್ತು ಗಂಟಲುನೋವನ್ನು ಹೋಗಿಸಬಹುದು.

ಬೆಂಡೆಕಾಯಿಯು ಕೊಲೆಸ್ಟ್ರಾಲ್ ಮತ್ತು ಪಿತ್ಥರಸಗಳನ್ನು ಪ್ರತಿಬಂಧಿಸಿ ದೇಹದ ಅಧಿಕ ತೂಕವನ್ನು ಇಳಿಸುತ್ತದೆ. ಮೊಡವೆ. ತುರಿಕೆ. ಕೆಂಪು ಗುಳ್ಳೆಗಳಿಗೆ ಬೆಂಡೆಕಾಯಿಯ ರಸವನ್ನು ಲೇಪಿಸುತ್ತ ಬಂದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಬೆಂಡೆಕಾಯಿಯ ಸೇವನೆಯು ಯಕೃತ್ತಿನ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ. ಬೆಂಡೆಕಾಯಿಯಲ್ಲಿ ಎ ಜೀವಸತ್ವ ಇದ್ದು ಇದು ದೃಷ್ಟಿದೋಷ ನಿವಾರಿಸುವ ಗುಣ ಹೊಂದಿದೆ. ಕೀಲುರೋಗ ಮತ್ತು ಸಂಧಿವಾತ ತಡೆಯಲು ಶಕ್ತವಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವ ಬೆಂಡೆಕಾಯಿಯಲ್ಲಿದೆ. ಬೆಂಡೆಕಾಯಿಯನ್ನು ಕ್ರಮವಾಗಿ ಆಹಾರದಲ್ಲಿ ಬಳಸಿದರೆ ದೇಹಕ್ಕೆ ತಂಪು, ಹೊಟ್ಟೆಯ ಉರಿ, ಗುದದ್ವಾರದ ಉರಿ ಶಾಂತವಾಗುತ್ತದೆ. ಆದ್ದರಿಂದ ಎಲ್ಲ ತರಕಾರಿ ಸೇವನೆಯ ಜೊತೆಗೆ ನಿಮ್ಮ ನಿತ್ಯದ ಆಹಾರದಲ್ಲಿ ಈ ಬೆಂಡೆಕಾಯಿಯ ಸೇವನೆಯನ್ನು ಹೆಚ್ಚು ಮಾಡಿ. ನಿಮ್ಮ ಆರೋಗ್ಯ ಕೆಡುವುದನ್ನು ತಪ್ಪಿಸಿಕೊಳ್ಳಿ

LEAVE A REPLY

Please enter your comment!
Please enter your name here