ಪವಾಡಗಳನ್ನು ಮಾಡುತ್ತಿರುವ ಶಕ್ತಿಶಾಲಿ ಕಮಂಡಲ ಗಣಪತಿ

0
1410

ಕಮಂಡಲ ಗಣಪತಿ ಕ್ಷೇತ್ರದ ಮಹತ್ವ.

ಗಣಪತಿ ಅಂದರೆ ಸಾಕು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲೂ ಮಕ್ಕಳಿಗಂತೂ ಗಣಪತಿ ಅಂದರೆ ಏನೋ ಒಂದು ರೀತಿಯ ಭಕ್ತಿ. ಖುಷಿ.ಸರ್ವ ವಿಘ್ನಗಳನ್ನು ಕಳೆದು ಒಳ್ಳೆಯದು ಮಾಡುತ್ತಾನೆ ಅದಕ್ಕಾಗಿಯೇ ಗಣಪತಿಯನ್ನು ವಿಘ್ನೇಶ್ವರ ಎಂದು ಕರೆಯುತ್ತಾರೆ. ಗಣೇಶನಿಗೆ 108 ಹೆಸರುಗಳಿವೆ ಮತ್ತು ಪ್ರತಿಯೊಂದು ಅವತಾರವನ್ನು ಭಾರತದೆಲ್ಲೆಡೆ ಪೂಜಿಸಲಾಗುತ್ತದೆ. ಗಣಪತಿಯ ವಿವಿಧ ಹೆಸರುಗಳು ಗಣೇಶ. ವಿಘ್ನೇಶ್ವರ. ಮಂಗಳ ಮೂರ್ತಿ. ಗಜಾನನ. ವಕ್ರತುಂಡ. ಸಿದ್ದಿ ವಿನಾಯಕ. ಏಕದಂತ. ಓಂಕಾರ. ಯಜ್ಞಕಾಯ. ಹೀಗೆ ಹಲವಾರು ಹೆಸರುಗಳಿಂದ ಪೂಜಿಸುತ್ತಾರೆ.

ಕೇಳಿದ ವರಗಳನ್ನು ನೀಡುವ ಈ ಗಣೇಶನ ತುಂಬಾ ವಿಶೇಷವಾದ ಕ್ಷೇತ್ರವಾದ ಕಮಂಡಲ ಗಣಪತಿ ಕ್ಷೇತ್ರದ ಮಹಿಮೆ ಏನೆಂದು ನೋಡೋಣ ಬನ್ನಿ… ಮೊಟ್ಟಮೊದಲು ಈ ಗಣಪತಿ ದೇವಾಲಯಕ್ಕೆ ಕಮಂಡಲ ಎಂದು ಹೆಸರು ಬರಲು ಕಾರಣವೇನು ? ಇಲ್ಲಿನ ಗಣಪತಿ ದೇವರ ಮುಂದೇ ಒಂದು ಒಳಕ್ಕಲ್ಲಿನ ರೀತಿ ಕೊಳ ಇದೆ ಅದು ಕಮಲದ ಚಿತ್ರವನ್ನು ಒಳಗೊಂಡಿದೆ ಅದರಲ್ಲಿ ನೀರು ವರ್ಷದ 365 ದಿನಗಳು ಸಹ ಈ ಕೊಳದಿಂದ ನೀರು ಹೊರ ಧುಮುಕ್ಕುತ್ತಾನೆ ಇರುತ್ತದೆ. ಹಾಗೂ ಈ ನೀರು ಹೊರ ದುಮುಕುವುದು ಕಮಲದ ಹೂವಿನ ರೂಪದಲ್ಲಿ ಕಾಣುವುದರಿಂದ ಇದಕ್ಕೆ ಕಮಂಡಲ ಎಂದು ಹೆಸರು ಬಂತು.

ಈ ಕಮಂಡಲ ಗಣಪತಿ ಕ್ಷೇತ್ರದ ಇತಿಹಾಸ ತಿಳಿಯೋಣ. ಪಾರ್ವತಿ ದೇವಿಗೆ ಶನಿಯು ತುಂಬಾ ತೊಂದರೆಗಳನ್ನು ಕೊಡುತ್ತಿರುತ್ತಾನೆ ಆ ಸಂದರ್ಭದಲ್ಲಿ ಪಾರ್ವತಿ ದೇವಿಯು ಆ ಶನಿದೇವರ ಕಾಟದಿಂದ ಪಾರಾಗಲು ಭೂಮಿಗೆ ಈಳಿಯುತ್ತಳೇ ಅಂತಹ ಸಂದರ್ಭದಲ್ಲಿ ಅವಳು ಬಂದ ಸ್ಥಳವೇ ಮೈಗವದೇ ಎಂಬ ಸ್ಥಳ ನಂತರ ಪಾರ್ವತಿ ದೇವಿ ತಪಸ್ಸು ಮಾಡಲು ಭೂಮಂಡಲಕ್ಕೆ ಬಂದು ಮೈಗವಧೆ ಎಂಬ ಸ್ಥಳದಲ್ಲಿ ತಪಸ್ಸು ಮಾಡುವ ಮುಂಚೆ ಗಣೇಶನ ಪೂಜೆ ಮಾಡಬೇಕು ಎಂದು ದೇವಸ್ಥಾನಕ್ಕೆ ಬರುತ್ತಲೇ ಅಲ್ಲಿ ಸ್ನಾನ ಮಾಡಲು ನೀರು ಹುಡುಕಿದಾಗ ಸ್ವಲ್ಪ ಸಹ ನೀರು ಇರುವುದಿಲ್ಲ ಆಗ ಪಾರ್ವತಿ ದೇವಿ ಬ್ರಹ್ಮ ದೇವನನ್ನು ಕೇಳುತ್ತಾಳೆ ಆಗ ಬ್ರಹ್ಮದೇವ ಕಮಂಡಲದಲ್ಲಿ ಇದ್ದ ಜಲವನ್ನು ಭೂಮಿಗೆ ಹಾಕಿದಾಗ ಅಲ್ಲಿ ಜಲ ಉಗಮವಾಗುತ್ತದೆ. ಆ ಜಾಲಕ್ಕೆ ಬ್ರಾಹ್ಮೀ ಎಂದರೆ ಬ್ರಹ್ಮದೇವನಿಂದ ಉಗಮವಾದವಳು ಎಂಬರ್ಥದಲ್ಲಿ ಭ್ರಾಹ್ಮೀ ನದಿ ಉಗಮವಾಗುತ್ತದೆ.
ಅದರಿಂದ ಗಣಪತಿಯ ಪಾದದಡಿಯಲ್ಲಿ ಈ ನದಿ ಉಗಮವಾಗುತ್ತದೆ.

ಈ ಕಮಂಡಲ ಗಣಪತಿ ದೇವಸ್ಥಾನ ಸುತ್ತಲೂ ಕಾಡಿನ ರೀತಿ ಗಿಡ ಮರಗಳು ಹಬ್ಬಿಕೊಂಡಿವೆ ಈ ಕ್ಷೇತ್ರವನ್ನು ನೋಡುತ್ತಿದ್ದರೆ ಒಂದು ಕಾನನದ ಮದ್ಯ ಒಂದು ಗಣೇಶ ಕುಳಿತು ತಪಸ್ಸು ಮಾಡುತ್ತಿದ್ದಾನೆ ಅನ್ನುವ ರೀತಿ ಇದೆ ಏಕೆಂದರೆ ಈ ಗಣೇಶನ ವಿಗ್ರಹ ಕೂಡ ತಪಸ್ಸು ಮಾಡುತ್ತಿರುವ ಹಾಗೆ ಇರುವುದು. ಇಂತಹ ಗಣೇಶನ ವಿಗ್ರಹವನ್ನು ದೇಶದಲ್ಲಿ ಕಂಡು ಬರುವುದು ತುಂಬಾ ಅಪರೂಪ. ಇಲ್ಲಿನ ಕಮಂಡಲ ತೀರ್ಥದ ಮಹಿಮೆಯನ್ನು ಕೇಳಿದರೆ ಅಚ್ಚರಿ ಆಗುತ್ತದೆ ಅದು ಏನು ಗೊತ್ತೇ….

ಗಣೇಶನ ಮುಂದೇ ಇರುವ ಈ ಚಿಕ್ಕ ಮಂಡಲದಿಂದ ಬರುವ ನೀರು ಅಲ್ಲೇ ಇರುವ ಕೊಳಕ್ಕೆ ಹೋಗಿ ಸೇರುತ್ತದೆ. ಈ ತೀರ್ಥವೇ ಅಲ್ಲಿನ ಮಹಿಮೆ ಈ ನೀರಿನಲ್ಲಿ ಸ್ನಾನ ಮಾಡಿದರೆ ಯಾವುದೇ ರೀತಿಯ ರೋಗ ರೂಜಿನಗಳು ಇದ್ದರು ಗುಣವಾಗುತ್ತದೇ. ಯಾವುದೇ ರೀತಿಯ ಶನಿ ದೋಷ ಇರುವವರು ಈ ಕ್ಷೇತ್ರಕ್ಕೆ ಹೋಗಿ ಹರಕೆ ಕಟ್ಟಿಕೊಂಡರೆ ಶನಿ ದೋಷ ನಿವಾರಣೆ ಆಗುತ್ತದೆ.

ಇನ್ನೊಂದು ಮುಖ್ಯ ವಿಶೇಷ ಎಂದರೆ ಯಾವ ಮಕ್ಕಳು ವಿದ್ಯಾಭ್ಯಾಸದಲ್ಲಿ ಅಶಕ್ತಿ ಇರುವುದಿಲ್ಲ. ಏನು ಓದಿದರು ನೆನಪಿನಲ್ಲಿ ಇರುವುದಿಲ್ಲ. ಅರ್ಥ ಆಗುವುದಿಲ್ಲ ಎನ್ನುತ್ತಾರೋ ಅಂತಹ ಮಕ್ಕಳು ಇಲ್ಲಿಗೆ ಬಂದು ಸ್ನಾನ ಮಾಡಿ ಆ ಗಣಪನ ಹತ್ತಿರ ಬೇಡಿಕೊಂಡು ಮನೆಗೆ ಆ ತೀರ್ಥವನ್ನು ತೆಗೆದುಕೊಂಡು ಹೋಗಿ 21 ದಿನಗಳು ಆ ನೀರನ್ನು ಸೇವಿಸಿದರೆ ಅವರ ವಿದ್ಯಾಭ್ಯಾಸದ ತೊಂದರೆಗಳು ನಿವಾರಣೆ ಆಗುತ್ತವೆ.

ಮನಸ್ಸು ತುಂಬಾ ಗೊಂದಲಕ್ಕೆ ಒಳಗಾದಾಗ. ಮನಸ್ಸು ಸರಿ ಇಲ್ಲದ ಸಮಯದಲ್ಲಿ ಈ ಕ್ಷೇತ್ರಕ್ಕೆ ಹೋಗಿ ಬಂದರೆ ಸಾಕು ಮನಸ್ಸು ಶಾಂತವಾಗುತ್ತದೆ. ಯಾವುದೇ ರೀತಿಯ ಗೊಂದಲ. ತಕರಾರು ಇರುವುದಿಲ್ಲ. ನೆನಪಿನ ಶಕ್ತಿ ಕುಂದುತ್ತಿದೆ ಎನ್ನುವವರು ಈ ಕ್ಷೇತ್ರಕ್ಕೆ ಬಂದು ಈ ತೀರ್ಥವನ್ನು ಸೇವಿಸಿದರೆ ಅವರ ನೆನಪಿನ ಶಕ್ತಿ ವೃದ್ಧಿಸುತ್ತದೆ. ಮನಸ್ಸನ್ನು ಶಾಂತ ಮಾಡಿಕೊಳ್ಳಲು ಯೋಗ. ತಪಸ್ಸು. ಮಾಡಲು ಉತ್ತಮವಾದ ಸ್ಥಳವಿದು. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಈ ನದಿಯ ಬುಗ್ಗೆ ಮೇಲೆ ಬರುವ ಜಾಗದಲ್ಲಿ ಈ ನವೀಕರಣ ಮಾಡಿ ಒಂದು ಕಲ್ಲಿನ ತರ ಹಾಸಿದ್ದಾರೆ ಅಲ್ಲಿ ಒಂದು ಎಷ್ಟೇ ಮೌಲ್ಯದ ಪೈಸೆಯನ್ನು ಆ ಜಲದ ಬುಗ್ಗೆ ಬರುವ ಜಾಗಕ್ಕೆ ಗಣಪತಿ ದೇಗುಲದ ಮುಖ್ಯ ಧ್ವಾರದಿಂದ ಎಸೆದರೆ ಮನಸ್ಸಿನಲ್ಲಿ ಏನು ಎಣಿಸಿ ಪ್ರಾರ್ಥಿಸಿ ಪೈಸೆ ಹಾಕುತ್ತೇವೋ ಆ ಕಾರ್ಯ ಆಗುತ್ತದೆ ಎಂದು ಜನರು ನಂಬಿಕೆಯಿಂದ ಅಲ್ಲಿ ನಾಣ್ಯಗಳನ್ನು ಚಿಮ್ಮುತ್ತಾರೆ. ಇದು ಜನರ ನಂಬಿಕೆ .

ಈ ದೇವಸ್ಥಾನದ ಪಕ್ಕದಲ್ಲಿ ನವಗ್ರಹಗಳ ವಿಗ್ರಹಗಳಿದ್ದು ಹಿಂಭಾಗದಲ್ಲಿ ಹೋಮ, ಹವನಾದಿಗಳನ್ನು ನಡೆಸಲು ಯಾಗಶಾಲೆಯಿದೆ. ಕೊಳದ ಬಳಿಯಲ್ಲಿ ನಾಗವನ ಇದೆ. ಇಲ್ಲಿನ ದೇವಸ್ಥಾನದಲ್ಲಿ ಪೂಜೆ, ಉತ್ಸವಗಳು: ಪ್ರತಿನಿತ್ಯ ಬೆಳಗ್ಗೆ ಅಭಿಷೇಕ ಪೂಜೆ, ಎರಡು ಹೊತ್ತು ಆರಾಧನೆ ನಡೆಯುತ್ತದೆ. ಗಣಪತಿಗೆ ಪಂಚಾಮೃತ ಅಭಿಷೇಕ ಮತ್ತು ಜೇನುತುಪ್ಪದ ಅಭಿಷೇಕ ವಿಶೇಷ ಸೇವೆಗಳು. ಸಂಕಷ್ಟಿ, ಗಣೇಶ ಚತುರ್ಥಿಯಂದು ವಿಶೇಷ ಅರ್ಚನೆ, ಪೂಜೆ ನಡೆಯುತ್ತಿದೆ. ಫಾಲ್ಗುಣ ಚೌತಿಯಂದು ವಾರ್ಷಿಕ ವರ್ಧಂತಿ ಪೂಜೆ ನಡೆಯುತ್ತಿದ್ದು ನಾಡಿನ ನಾನಾ ಕಡೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ.

ಆ ದೇವಸ್ಥಾನ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಕಸವೆ ಎಂಬಲ್ಲಿ. ಇಲ್ಲಿಗೆ ಹೋಗುವ ಮಾರ್ಗ ಕೊಪ್ಪ ಬಸ್‌ನಿಲ್ದಾಣದಿಂದ 4 ಕಿ.ಮಿ ದೂರದಲ್ಲಿದೆ. ಬೆಂಗಳೂರಿನಿಂದ ಕೊಪ್ಪಕ್ಕೆ 359ಕಿ.ಮೀ ಇದೆ.ಕೊಪ್ಪದಿಂದ ಮೃಗವಧೆಗೆ ತೆರಳುವ ರಸ್ತೆಯಲ್ಲಿ ಸಿದ್ದರಮಠ ಎಂಬಲ್ಲಿ ಬಲಬದಿಗೆ ಕಚ್ಚಾ ರಸ್ತೆಯಿದ್ದು ಅಲ್ಲಿಂದ ಅರ್ಧ ಕಿ.ಮೀ. ಪ್ರಯಾಣಿಸಿದರೆ ದೇವಳವನ್ನು ತಲುಪಬಹುದು. ಕೊಪ್ಪದಿಂದ ಮೃಗವಧೆಗೆ ನಿಗದಿತ ವೇಳೆಯಲ್ಲಿ ಮಾತ್ರ ಖಾಸಗಿ ಬಸ್ಸುಗಳ ಸೌಕರ್ಯವಿದೆ. ಕೊಪ್ಪದಿಂದ ಬಾಡಿಗೆ ರಿಕ್ಷಾದಲ್ಲೂ ಹೋಗಬಹುದಾಗಿದೆ.

ನೀವು ಒಮ್ಮೆ ಹೋಗಿ ಈ ಗಣಪನ ದರ್ಶನ ಪಡೆಯಿರಿ. ಗಣೇಶನ ಪವಾಡ ನಡೆಸುವ ಕ್ಷೇತ್ರದ ಬಗ್ಗೆ ತಪ್ಪದೇ ಶೇರ್ ಮಾಡಿ ನಿಮಗೂ ಪುಣ್ಯ ಲಭಿಸಲಿ ಎಂದು ನಾವು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here