ರಾಗಿಯ ಮಹತ್ವ ತಿಳಿದರೆ ಆಶ್ಚರ್ಯವಾಗುತ್ತದೆ.
ಭಾರತದ ಮಹಾಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿಯೇ ರಾಗಿಯ ಮಹತ್ವ ಸಾರುವ ಕಥೆ ಇದೆ. ಕನಕದಾಸರು ಅದನ್ನೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಬರೆದಿದ್ದಾರೆ. ರಾಮನ ಓಲಗದಲ್ಲೊಮ್ಮೆ ರಾಗಿ ಶ್ರೇಷ್ಠವೋ, ಭತ್ತ ಶ್ರೇಷ್ಠವೋ ಎಂಬ ಚರ್ಚೆ ಮೊದಲಾಯಿತು. ಈ ವಾಗ್ವಾದಲ್ಲಿ ಸ್ವತಃ ರಾಗಿ ಮತ್ತು ಭತ್ತಗಳೂ ಪಾಲ್ಗೊಂಡು ತಮ್ಮ ತಮ್ಮ ಹಿರಿಮೆ ಗರಿಮೆಯನ್ನು ಹೇಳಿಕೊಂಡವು. ಇದನ್ನು ಆಲಿಸಿದ ರಾಮ- ಯಾವ ತೀರ್ಪನ್ನೂ ನೀಡದೆ ಇವುಗಳನ್ನು ಆರು ತಿಂಗಳ ಕಾಲ ಒಂದೆಡೆ ಇಡಿ ಎಂದ. ಆರು ತಿಂಗಳ ನಂತರ ಈ ಎರಡೂ ಧಾನ್ಯಗಳನ್ನು ವೀಕ್ಷಿಸಿದಾಗ ಅಕ್ಕಿ ಮುಗ್ಗಿಹೋಗಿತ್ತು. ರಾಗಿ ಸದೃಢವಾಗಿತ್ತು. ಕೊನೆಗೆ ರಾಮ, ರಾಗಿಯೇ ಶ್ರೇಷ್ಠ ಎಂದು ತೀರ್ಪು ನೀಡಿದ. ರಾಗಿಯನ್ನು ಮಾನ್ಯ ಮಾಡಿದ್ದಕ್ಕೆ ಆತ ‘ರಾಘವ’ ಎಂದು ಹೆಸರಾದ ಎನ್ನುತ್ತಾರೆ ಕನಕದಾಸರು. ಅದಕ್ಕೆ ನಮ್ಮ ಪೂರ್ವಿಕರು ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎನ್ನುತ್ತಾರೆ. ಅಂದರೆ, ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ ಎಂಬುದು ಅವರ ಮಾತಿನ ಸಾರ. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ರಾಗಿ ಪ್ರಮುಖ ಬೆಳೆ.
ರಾಗಿಯ ಕಾಳು ಉಳಿದ ಆಹಾರ ಧಾನ್ಯಗಳಿಗಿಂತ ಸಣ್ಣದಾಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಕೆಂಪು ಇಲ್ಲವೇ ಕಂದು ಬಣ್ಣದಿಂದ ಕೂಡಿರುವ ರಾಗಿಯಲ್ಲಿ ಪ್ರೊಟೀನಗ್ .ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ನಾರು, ಸೋಡಿಯಂ . ಪೊಟ್ಯಾಶಿಯಂ. ಗಂಧಕ ಅಂಶಗಳು ಇವೆ. ಈ ರಾಗಿ ಹೆಚ್ಚಿನವರಿಗೆ ಇಷ್ಟ ವಾಗುವುದಿಲ್ಲ ಏಕೆಂದರೆ ಅದು ಸಪ್ಪೆಯಾಗಿರುತ್ತದೆ.ಕಪ್ಪು ಬಣ್ಣದಲ್ಲಿ ಇದೆ ಎಂದು ಯಾರು ಅಷ್ಟು ಇಷ್ಟ ಪಡುವುದಿಲ್ಲ ಆದರೆ ಹಿಂದಿನ ಕಾಲದ ಜನರಿಗೆ ರಾಗಿ ಬಿಟ್ಟರೆ ಬೇರೆ ಆಹಾರಗಳೇ ಬೇಡವಾಗಿತ್ತು.ಅದಕ್ಕಾಗಿ ಅವರು ತುಂಬಾ ಗಟ್ಟಿಮುಟ್ಟಾಗಿ. ಯಾವುದೇ ರೋಗಗಳು ಇಲ್ಲದೆ ತುಂಬಾ ಆರೋಗ್ಯವಾಗಿದ್ದರು.
ಹಾಗಾದರೆ ಈ ರಾಗಿಯಲ್ಲಿ ಅಂತಹ ಮಹಿಮೆ ಏನಿದೆ ಇದರ ಉಪಯೋಗವೇನು ನೋಡೋಣ ಬನ್ನಿ ಈ ರಾಗಿಯಿಂದ ಮುದ್ದೆ. ಅಂಬಲಿ. ರೊಟ್ಟಿ. ಉಪ್ಪಿಟ್ಟು. ದೋಸೆ. ಪಡ್ಡು.ಸಿಹಿ ತಿಂಡಿಗಳನ್ನು ಸಹ ಮಾಡಬಹುದು. ಅದರಲ್ಲೂ ಈ ರಾಗಿಯನ್ನು ಪುಡಿ ಮಾಡಿ ಅದರಿಂದ ಮಾಡಿದ ಮುದ್ದೆಯನ್ನು ಸೇವಿಸಿದರೆ ಯಾವುದೇ ರೀತಿಯ ರೋಗಗಳು ಹತ್ತಿರ ಸುಳಿಯುವುದಿಲ್ಲ. ರಾಗಿ ಹಿಟ್ಟು ಮತ್ತು ಅರಿಶಿನವನ್ನು ಬೆರೆಸಿ ಸ್ವಲ್ಪ ಸ್ವಲ್ಪ ಕೆಂಡದ ಮೇಲೆ ಹಾಕುವಾಗ ಹೊಗೆ ಹೇಳುತ್ತದೆ ಈ ಹೊಗೆಯನ್ನು ತೆಗೆದುಕೊಂಡರೆ ಸಾಕು ಕೆಮ್ಮು .ನೆಗಡಿ. ಶೀತ ಕಡಿಮೆಯಾಗುತ್ತದೆ. ರಾಗಿ ಹಿಟ್ಟನ್ನು ಬೆಲ್ಲ ಮತ್ತು ಹುಣಸೆಸೊಪ್ಪಿನಲ್ಲಿ ಉರಿದು ಅದನ್ನು ಪುಡಿ ಮಾಡಿ ಹಾಲು ಅಥವಾ ನೀರಿನ ಜೊತೆ ಹಾಕಿ ಕುಡಿದರೆ ಪಿತ್ತದ ವಾಂತಿ ಕಡಿಮೆಯಾಗುತ್ತದೆ.
ಮಕ್ಕಳ ಪೌಷ್ಟಿಕ ಆಹಾರವೆಂದರೆ ರಾಗಿ.ಇದು ತುಂಬಾ ವಿಟಮಿನ್ಗಳನ್ನು ಒಳಗೊಂಡಿರುವ ಆಹಾರ. ಇದನ್ನು ಬಳಸಿ ಒಟ್ಟರಾಗಿಹಿಟ್ಟು ತಾಯಾರಿಸಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಮಕ್ಕಳು ತುಂಬಾ ಗಟ್ಟಿಯಾಗಿ ಶಕ್ತಿಯಿಂದ ಇರುತ್ತಾರೆ. ರಾಗಿಯನ್ನು ಚೆನ್ನಾಗಿ ಹುರಿದು ಅದನ್ನು ನುಣ್ಣಗೆ ಪುಡಿ ಮಾಡಿ ಅದಕ್ಕೆ ಬೆಲ್ಲದ ಪುಡಿ. ಹುಣಸೆ ಹುಳಿ. ಏಲಕ್ಕಿ ಪುಡಿ ಸೇರಿಸಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ. ಅಂಶವಿದ್ದು ಇದು ಮುಳೆಗಳನ್ನು ಬಲಪಡಿಸಲು ಸಹಾಯಕವಾಗುತ್ತದೆ. ರಾಗಿಯಲ್ಲಿರುವ ಅಮಿನೊ ಎಸಿಡ್ ಲೆಸಿತಿನ್ ಹಾಗೂ ಮೇಥೋನಿನ್ ನಿಮ್ಮ ಜೀರ್ಣಾಂಗವೂಹದಲ್ಲಿ ಇರುವ ಹೆಚ್ಚಿನ ಕೊಬ್ಬಿನಂಶವನ್ನು. ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ. ಮನಸ್ಸು ನೊಂದಿದರೆ. ಹೆಚ್ಚಿನ ಕೆಲಸದಿಂದ ಮನಸ್ಸಿಗೆ ಒತ್ತಡ ಬೀಳುತ್ತಿದ್ದಾರೆ ಮನಸ್ಸಿಗೆ ನೆಮ್ಮದಿ ಸಿಗಲು ನಿಮ್ಮ ಆಹಾರಗಳ ಜೊತೆ ರಾಗಿಯನ್ನು ಮಿಶ್ರಣ ಮಾಡಿಕೊಂಡು ಸೇವಿಸಬೇಕು.
ರಾಗಿಯಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಗಳು ಹೆಚ್ಚಾಗಿ ಇದ್ದು ಇದು ದೇಹವನ್ನು ಬಲಪಡಿಸುತ್ತದೆ.ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ರಾಗಿಯಲ್ಲಿ ಫೈಬರ್ ಗುಣ ಹೆಚ್ಚಾಗಿ ಇದ್ದು ಇದು ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ. ಥೈರಾಯ್ಡ್ ಸಮಸ್ಯಯಿಂದ ಬಳಲುತ್ತಿದ್ದರೆ ಅವರು ಹೆಚ್ಚಾಗಿ ಈ ರಾಗಿಯಿಂದ ಮಾಡಿದ ಆಹಾರವನ್ನು ಸೇವಿಸಿದರೆ ಬೇಗ ಗುಣವಾಗುತ್ತದೆ.
ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಲು ತಾಯಂದಿರಿಗೆ ರಾಗಿ ಉತ್ತಮ ಆಹಾರವಾಗಿದೆ. ಏನು ತಿನ್ನದಿದ್ದರು ಹಸಿವು ಆಗುವುದಿಲ್ಲ ಎನ್ನುವವರು ರಾಗಿಯಿಂದ ಮಾಡಿದ ಆಹಾರ ಸೇವಿಸಿದರೆ ಹಸಿವು ಆಗುತ್ತದೆ. ದೇಹವನ್ನು ತಂಪಾಗಿ ಇಡುವುದಕ್ಕೆ ಉತ್ತಮ ಮದ್ದು ರಾಗಿ ಇದರಲ್ಲಿ ಗಂಜಿ ಮಾಡಿಕೊಂಡು ಕುಡಿದರೆ ದೇಹ ತಂಪಾಗಿ ಇರುತ್ತದೆ.
ರಾಗಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇದ್ದು ಇದು ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಹೃದಯಾಘಾತದಿಂದ ಉಂಟಾಗುವಂತಹ ಪಾರ್ಶ್ವವಾಯುಗಳ ಅಪಾಯವನ್ನು ತಪ್ಪಿಸಲು ಈ ರಾಗಿ ಸಹಾಯ ಮಾಡುತ್ತದೆ. ರಾಗಿಯಲ್ಲಿ ಇರುವಂತಹ ಕ್ವೆಸ್ರೆಟಿನ್ ಎಂಬ ಅಂಶವು ನಮ್ಮ ದೇಹದಲ್ಲಿ ಇರುವ ವಿಷ ಆಮ್ಲದ ವಿರುದ್ಧ ಹೋರಾಡುತ್ತದೆ. ರಾಗಿಯಲ್ಲಿ ಇರುವ ಹಿಮೋಗ್ಲೋಬಿನ್ ಅಂಶವು ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತ ಹೀನತೆಯನ್ನು ತಡೆಯುತ್ತದೆ. ರಾಗಿಯಲ್ಲಿ ಇರುವ ಸೆಲೆನಿಯಂ. ಪ್ಯಾಂಟಿಥೆನಿಕ್. ಫೈಬರ್ ಅಂಶವು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
ಮನುಷ್ಯನ ದೇಹದಲ್ಲಿ ಸೇರಿಕೊಳ್ಳುವ ಸೂಕ್ಮ ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುವ ಶಕ್ತಿ ಈ ರಾಗಿಗೆ ಇದೆ. ಆದ್ದರಿಂದ ರಾಗಿ ಕಪ್ಪು ಎಂದು ಬಿಡದೆ ಅದನ್ನು ಉಪಯೋಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಎಲ್ಲ ಧಾನ್ಯಗಳಿಗಿಂತ ಉತ್ತಮ ಧಾನ್ಯವಾಗಿದೆ ಈ ರಾಗಿ ನೋಡಲು ಚಿಕ್ಕದಾದರೂ ಕೀರ್ತಿ ದೊಡ್ಡದು ಹಾಗಾಗಿ ಇದನ್ನು ನಿತ್ಯ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.