ಜನರ ಕಷ್ಟ ಕಾರ್ಪಣ್ಯಗಳು ಮತ್ತು ಸಮಸ್ಯೆಗಳ ನಿವಾರಣೆ ಮಾಡಲೆಂದೇ ಅವತರಿಸಿದ ಪವಾಡ ಪುರುಷರು ಶ್ರೀ ಗುರು ರಾಘವೇಂದ್ರ ತೀರ್ಥರು, ಇವರ ಬಗ್ಗೆ ಹೇಳುತ್ತಾ ಹೋದ್ರೆ ಒಂದೊಂದು ಘಟನೆಗಳು ಮತ್ತು ಪವಾಡಗಳನ್ನ ನೆನೆಸಿಕೊಂಡರೆ ಮೈ ರೋಮಾಂಚನ ಆಗುತ್ತದೆ, ರಾಯರು ಅತ್ಯಂತ್ಯ ಶಕ್ತಿಶಾಲಿ ಪವಾಡ ಪುರುಷರು ಇವರನ್ನು ನಂಬಿ ನಡೆದಲ್ಲಿ ಎಂತ ಸಮಸ್ಯೆ ಇದ್ರೆ ಅದು ಕೆಲವೇ ಕ್ಷಣದಲ್ಲಿ ಪರಿಹಾರ ಸಿಗುತ್ತೆ, ಇವರನು ನಂಬಿರುವ ಲಕ್ಷಾಂತರ ಜನಕ್ಕೆ ಇವರೇ ದಾರಿ ದೀಪ,
ರಾಯರಿಗೆ ಬರೀ ಹಿಂದೂಗಳು ಮಾತ್ರ ಪೂಜೆ ಮಾಡೋದಿಲ್ಲ ಅನ್ಯ ಧರ್ಮದ ಕ್ರಿಸ್ತ, ಮುಸ್ಲಿಂ, ಬೌದ, ಜೈನ ಧರ್ಮ ಹೀಗೆ ಪ್ರಪಂಚದಲಿ ಎಷ್ಟು ಧರ್ಮಗಳು ಇದ್ಯೋ ಅಷ್ಟು ಧರ್ಮದ ಜನ ಇವರನ್ನ ಪೂಜೆ ಮಾಡ್ತಾರೆ, ರಾಯರು ಯಾವ ಭಕ್ತರನ್ನು ಎಂದು ಸಹ ಜಾತಿ ಧರ್ಮ ಬೇಧ ಮಾಡಿಲ್ಲ ಭಕ್ತಿಯಿಂದ ನಡೆದರೆ ಸಾಕು ಎಲ್ಲರನ್ನು ಒಂದೇ ರೀತಿಯಿಂದ ಕಾಣುತ್ತಾರೆ, ಅದು ಬಡವ ಇರಲಿ ಸಾಹುಕಾರ ಇರಲಿ ರಾಯರಿಗೆ ಎಲ್ಲರು ಒಂದೇ.
ಅಂದು ದನ ಕಾಯುತ್ತಿದ್ದವನು ದಿವಾನನಾದ, ಅಂದು ಬಿಜಾಪುರವನ್ನು ಆದಿಲ್ ಷಾ ದೊರೆ ಆಳುತ್ತಿದ್ದ, ಇಡೀ ರಾಜ್ಯವನ್ನ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದ, ಹೀಗೆ ಒಮ್ಮೆ ಆದಿಲ್ ಷಾ ಭಾವನದ ಸಿದ್ದಿಕ್ ವಸುದ್ ಅವರು ಕಂದಾಯ ವಸುಲಿಗೆಂದು ಕಂದನತಿ ಬಳಿ ತೆರಳಿದ್ದರು, ಆ ಗ್ರಾಮದಲ್ಲಿದಾಗ ಇಬ್ಬರು ಕುದುರೆ ಸವಾರರು ಬಂದು ಸಿದ್ದಿಕ್ ವಸುದ್ ಅವರಿಗೆ ಒಂದು ಪ್ರತ್ರವನ್ನು ನೀಡಿದರು ಆದ್ರೆ ಸಿದ್ದಿಕ್ ವಸುದ್ ಅವರಿಗೆ ಕನ್ನಡ ಓದಲು ಬಾರದ ಕಾರಣ ಅಲ್ಲೇ ಧನ ಕಾಯುತ್ತಿದ ವೆಂಕಣ್ಣನನ್ನು ಕರೆದು ಪ್ರತ ಓದಲು ಹೇಳಿದರು.
ಓದು ಬರಹ ಬಾರದ ವೆಂಕಣ್ಣ ಎಷ್ಟು ಹೇಳಿದ್ರು ಬಿಡದೆ ಪ್ರತ ಓದಲೇ ಬೇಕು ಎಂದು ಹಠ ಹಿಡಿದರು ಪಾಪ ವೆಂಕಣ್ಣನಿಗೆ ಒಂದಕ್ಷರವೂ ಬರುವುದಿಲ್ಲ ಆತ ಅಂದು ಅವಿದ್ಯಾವಂತ ನಾಗಿದ್ದ, ನೀನು ಪ್ರತ್ರ ಓದಿಲ್ಲ ಅಂದ್ರೆ ಶಿಕ್ಷೆ ಕೊಡುತ್ತೇನೆ ಎಂದು ವೆಂಕಣ್ಣನಿಗೆ ಧಮಕಿ ಹಾಕಿ ಕತ್ತಿ ತೋರಿಸದರು, ಕಷ್ಟ ಬಂದಾಗ ನನ್ನು ನೆನೆಸಿಕೊ ಎಂದು ಗುರು ರಾಯರು ಹೇಳಿದ್ದ ಮಾತು ವೆಂಕಣ್ಣನಿಗೆ ನೆನಪಿಗೆ ಬಂತು. ಗುರು ರಾಘವೇಂದ್ರ ಸಾರ್ವಭೌಮರು ನೀಡಿದ ಮಂತ್ರಾಕ್ಷತೆ ಹಿಡಿದು ಭಕ್ತಿಯಿಂದ ರಾಯ ನೀನೆ ನನಗೆ ಗತಿ ಎನ್ನುತ್ತಾ ಎರಡು ನಿಮಿಷ ಪ್ರಾರ್ಥನೆ ಮಾಡಿದರು ನಂತರ ವೆಂಕಣ್ಣನಿಗೆ ಯಾವುದೇ ಕಷ್ಟವಾಗದೆ ಸುಲಭವಾಗಿ ಸ್ಪಷ್ಟವಾಗಿ ಪತ್ರ ಓದಿದರು ಇದನ್ನು ಕಂಡು ಆಗಿನ ಆದಿಲ್ ಷಾ ದೊರೆ ಶಬ್ಭಾಸ್ ಗಿರಿ ಕೊಟ್ಟರು.
ವೆಂಕಣ್ಣನ ಬುದ್ದಿವಂತಿಕೆ ಮೆಚ್ಚಿ ಆಗಿನ ನವಾಬರು ದಿವಾನ್ ಗಿರಿ ಪಟ್ಟವನ್ನು ಕೊಟ್ಟರು, ದಿವಾನ್ ವೆಂಕಣ್ಣನ ರಾಯರಿಗೆ ಅತ್ಯಂತ ಪ್ರಿಯವಾಗಿದ್ದ ಎರಡು ಬರುಡು ಭೂಮಿಯನ್ನು ಕೊಡಿಸಿದರು, ಇದು ಯಾವುದೋ ಕಟ್ಟು ಕಥೆ ಅಲ್ಲವೇ ಅಲ್ಲ, ಇದು ರಾಯರ ನಿಜವಾದ ಪವಾಡಗಳಲ್ಲಿ ಇದು ಕೇವಲ ಒಂದು ಉದಾಹರಣೆ ಮಾತ್ರ,