ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ ಅದಕ್ಕೆ ಪರಿಹಾರ ಸಹ ಇದೆ

0
581

ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಪ್ಪದೇ ತಿಳಿದುಕೊಳ್ಳಿ

ಮೇಷ : ಈ ವಾರ ನಿಮಗೆ ಆರ್ಧಿಕವಾಗಿ ಒಂದಿಷ್ಟು ಹಣದ ಲಾಭ ಹೆಚ್ಕಾಗಲಿದೆ, ಉತ್ತಮ ಅವಕಾಶಗಳು ನಿಮ್ಮನು ಹುಡುಕಿಕೊಂಡು ಬರುತ್ತವೆ, ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಗಮನ ಹರಿಸಬೇಕು.ನಿಮಗೆ ಏನಾದ್ರು ನಿಮ್ಮ ಮೇಲದಿಕಾರಿಯಿಂದ ಸಮಸ್ಯೆ ಇದ್ರೆ ಅದೆಲ್ಲವೂ ಸರಿ ಹೋಗುವ ಉತ್ತಮ ವಾರ ಅಂತ ಹೇಳಿದ್ರೆ ತಪ್ಪಾಗಲಾರದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಹೆಚ್ಚು ಗಮನ ಕೊಡಿ, ನೀವು ಸ್ವಲ್ಪ ತಪ್ಪು ನಿರ್ಣಯ ತೆಗೆದುಕೊಂಡರು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ, ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ನೀವು ಶಿವನಿಗೆ ಪೂಜಿಸಿ.

ವೃಷಭ: ಈ ವಾರ ನಿಮ್ಮ ಕಷ್ಟದ ಸಮಯ ಬಂದಾಗ ನಿಮ್ಮ ಸ್ನೇಹಿತರಿಂದ ಹಣದ ಸಹಾಯ ಆಗುವ ಸಾಧ್ಯತೆ ಹೆಚ್ಚಿದೆ, ಕೆಲಸ ಹುಡುಕುತ್ತಿರುವ ಜನರು ಈ ವಾರ ನಿಮಗೆ ಅಷ್ಟು ಶ್ರೇಯಸ್ಸು ಇಲ್ಲ, ಸಿಕ್ಕ ಕೆಲಸವನ್ನೇ ಮಾಡುವುದು ಉತ್ತಮ, ಸರ್ಕಾರಿ ಕೆಲಸ, ಅಥವ ನಿಮ್ಮ ಕೋರಿಕೆಯಂತೆ ಕೆಲಸ ಸಿಗಲು ಕಷ್ಟ ಆಗಬಹುದು, ಈ ವಾರ ಉಷ್ಣ ಹೆಚ್ಚಾಗುವ ಸಾಧ್ಯತೆ ನಿಮಗಿದೆ ಆದ್ದರಿಂದ ಒಂದಿಷ್ಟು ಜಾಗೃತರಾಗಿರುವುದು ಒಳ್ಳೆಯದು, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ನಿಮ್ಮ ಮನೆ ಹತ್ತಿರ ಇರುವ ಒಬ್ಬ ಬಡವನಿಗೆ ಒಂದು ಹಿಡಿ ತಪ್ಪದೇ ಅಕ್ಕಿ ನೀಡಿ.

ಮಿಥುನ: ಈ ವಾರ ನಿಮ್ಮ ಹೆಂಡತಿಯೊಂದಿಗೆ ಜಗಳ ಆಗುವ ಸಾಧ್ಯತೆ ಹೆಚ್ಚಿದೆ ಅದಕ್ಕೆ ನೀವು ನಿಮ್ಮ ಮಾತಿನ ಮೇಲೆ ಹೆಚ್ಚಿನ ಗಮನ ಕೊಡಿ, ಸ್ನೇಹಿತರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಸಹ ಹೆಚ್ಚಿದೆ ಅದಕ್ಕೆ ನೀವು ಹಣಕಾಸಿನ ವಿಚಾರದಲ್ಲಿ ಈ ವಾರ ಎಚ್ಚರಿಕೆಯಿಂದ ಇರುವುದು ಸೂಕ್ತ, ಯಾರೊಂದಿಗೆ ಆತುರದಿಂದ ಹಣಕಾಸಿನ ವಿಷಯದಲ್ಲಿ ಸಿಳುಕಬೇಡಿ. ಉದ್ಯೋಗಿಗಳಿಗೆ, ಮತ್ತು ವಿದ್ಯಾರ್ಥಿಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಈ ವಾರ ಅಷ್ಟು ಶ್ರೇಯಸ್ಸು ಇರೋದಿಲ್ಲ. ಆದರೆ ವ್ಯವಹಾರ ನಡೆಸುವ ಜನರಿಗೆ ಒಂದಿಷ್ಟು ಲಾಭ ಹೆಚ್ಚಾಗಿದೆ. ನಿಮ್ಮ ರಾಶಿ ಸಮಸ್ಯೆಗೆ ಪರಿಹಾರ ಸಿಗಲು ಗಣಪತಿಗೆ ಅಭಿಷೇಕ ಬುದವಾರ ಮಾಡಿಸಿ.

ಕರ್ಕಾಟಕ: ಈ ವಾರ ನೀವು ವಾಹನ ಚಲಾಯಿಸುವಾಗ ಅತ್ಯಂತ ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೇದು, ಹಣದ ಕಾಸಿನ ವಿಷಯದಲ್ಲಿ ಸ್ನೇಹಿತರೊಂದಿಗೆ ಎಚ್ಚರ ಇರಲಿ, ಈ ವಾರ ನಿಮಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಬರುವ ಸಾಧ್ಯತೆ ಇರುತ್ತೆ, ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವ ಈ ರಾಶಿಯವರು ಸೂಕ್ತ ಮದ್ದು ತೆಗೆದುಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರ ಆಗುವ ಸಾಧ್ಯತೆ ಹೆಚ್ಚಿದೆ, ನಿಮ್ಮ ರಾಶಿಗೆ ಪರಿಹಾರ ಮಂಗಳವಾರ ಹನುಮಂತ ದೇವರ ದರ್ಶನ ಮಾಡಿ.

ಸಿಂಹ: ಈ ವಾರ ಸಿಂಹ ರಾಶಿಯವರು ನಿಮಗೆ ಸಂಭಂದ ಪಡದ ವಿಷಯದಲ್ಲಿ ಮೂಗು ತೋರಿಸದೆ ಇರುವುದೇ ಸೂಕ್ತ ಏಕೆ ಅಂದ್ರೆ ನೀವು ಮತ್ತೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಮೋಸ ಹೋಗುವ ಅಥವ ನೀವೇ ಸಮಸ್ಯೆಗಳಿಗೆ ಸಿಲುಕುವ ಅವಕಾಶ ಹೆಚ್ಚಿದೆ, ಆಸ್ತಿ ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ದೂರ ಇರಿ, ಸ್ತ್ರೀಯರಿಗೆ ತಾನು ಮಾಡದ ತಪ್ಪಿಗೆ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ, ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕುಜ ಮಂತ್ರ ಜಪಿಸಿ.

ಕನ್ಯಾ: ಈ ವಾರ ಕನ್ಯಾ ರಾಶಿಯವರಿಗೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಸಾಧ್ಯತೆ ಹೆಚ್ಚಿದೆ, ನೀವು ತಿನ್ನುವ ಆಹಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ, ಸಹೋದರ ಅಥವ ಸಹೋದರಿ ಜೊತೆಗೆ ಜಗಳ ಆಗುವ ಸಾಧ್ಯತೆ ಹೆಚ್ಚಿದೆ, ಈ ವಾರ ನಿಮ್ಮ ಪೋಷಕರು ಅಥವ ಹಿರಿಯರ ಸಲಹೆಗಳನ್ನ ಪಡೆಯುವುದು ತುಂಬಾ ಒಳ್ಳೇದು, ನಿಮ್ಮ ಈ ವಾರದ ಎಲ್ಲ ಸಮಸ್ಯೆಗಳು ದೂರ ಆಗಬೇಕು ಅಂದ್ರೆ ಚಾಮುಂಡಿ ದೇಗುಲಕ್ಕೆ ತೆರಳಿ ಅರಿಶಿನ ಮತ್ತು ಕುಂಕುಮ ದಾನ ಮಾಡಿ.

ತುಲಾ ರಾಶಿ: ಈ ವಾರ ತುಲಾ ರಾಶಿಯವರಿಗೆ ಆರೋಗ್ಯಕ್ಕೆ ಸಂಬಂಧಪಟ್ಟ ಸಣ್ಣ ಪುಟ್ಟ ಸಮಸ್ಯೆಗಳು ಬರಬಹುದು ಮತ್ತು ಕೆಲಸದಲ್ಲಿ ಒತ್ತಡ ಹೆಚ್ಚುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕುಗ್ಗುವ ಪರಿಸ್ತಿತಿ ಬಂದರು ಬರಬಹುದು, ಇಷ್ಟೆಲ್ಲಾ ಸಮಸ್ಯೆಗಳಿಂದ ದೂರ ಇರಲು ನೀವು ಆದಷ್ಟು ವಿಗ್ನ ನಿವಾರಕ ಗಣಪತಿಯ ದರ್ಶನ ಪ್ರತಿ ನಿತ್ಯ ಪಡೆದರೆ ನಿಮ್ಮ ಸಮಸ್ಯೆಗಳು ದೂರ ಆಗುತ್ತೆ.

ವೃಶ್ಚಿಕ: ಈ ವಾರ ನಿಮ್ಮಿಂದ ನಿಮ್ಮ ಸ್ನೇಹಿತರಿಗೆ ಒಳ್ಳೇದು ಆಗುವ ಸಾಧ್ಯತೆ ಹೆಚ್ಚು, ಕೋರ್ಟಿನ ಕೆಲಸಗಳು ಮತ್ತು ಇತರೆ ವ್ಯಾಜ್ಯಗಳು ಇದ್ದರೆ ಅದು ಮುಂದೂಡುವ ಸಾಧ್ಯತೆ ಇದೆ, ಈ ವಾರ ನಿಮಗೆ ದೈವ ನಂಬಿಕೆ ಹೆಚ್ಚಾಗಿ, ಹೆಚ್ಚು ದೇವರ ದರ್ಶನಗಳು ಪಡೆಯುವ ಸಾಧ್ಯತೆ ಇದೆ, ಆರ್ದಿಕ ಸಮಸ್ಯೆ ಅಷ್ಟಾಗಿ ಬರುವುದಿಲ್ಲ, ಹಲವು ದಿನಗಳಿಂದ ಹಣದ ಸಮಸ್ಯೆ ಕಾಡುತ್ತಿದ್ದರೆ ಈ ವಾರ ನಿಮಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾಗಲಿದೆ, ಈ ವಾರ ನೀವು ಮತ್ತಷ್ಟು ವಿಶೇಷ ಲಾಭ ಪಡೆಯಲು ಬಿಳಿ ವಸ್ತ್ರ ಬಡವನಿಗೆ ದಾನ ಮಾಡಿ.

ಧನು: ಈ ವಾರ ನಿಮ್ಮ ನೇರ ಮಾತು ನಿಮ್ಮ ನೇರ ನುಡಿ ಕೆಲವರಿಗೆ ಬೇಸರ ತರಿಸುವ ಸಾಧ್ಯತೆ ಇದೆ, ಈ ವಾರ ನೀವು ಮಾತಿನ ಮೇಲೆ ಒಂದಿಷ್ಟು ಹಿಡಿತ ಸಾಧಿಸುವುದು ಉತ್ತಮ, ಆಫೀಸ್ ನಲ್ಲಿ ಕೆಲಸ ಮಾಡುವ
ಜನಕ್ಕೆ ಹೆಚ್ಚನ ಒತ್ತಡ ಬರಬಹುದು, ಈ ವಾರ ನಿಮ್ಮ ಸಮಸ್ಯಗಳಿಗೆ ಒಬ್ಬ ಆಪ್ತ ಗೆಳತಿ ಅಥವ ಗೆಳೆಯನಿಂದ ಸಹಾಯ ಆಗುವ ಸಾಧ್ಯತೆ ಸಹ ಇದೆ, ನೀವು ಕುಡಿಯುವ ನೀರಿನ ಬಗ್ಗೆ ಸಹ ಹೆಚ್ಚಿನ ಗಮನ ಹರಿಸಿ. ಈ ವಾರ ನಿಮ್ಮ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಂಜೆ ಸಮಯದಲ್ಲಿ ಸುಬ್ರಮಣ್ಯನ ದರ್ಶನ ಪಡೆಯಿರಿ.

ಮಕರ: ಈ ವಾರ ಉದ್ಯೋಗಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತೆ, ರಾಜಕೀಯದಲ್ಲಿ ನಂಟು ಇರುವ ಜನಕ್ಕೆ ಸಮಸ್ಯೆ ಬಂದರು ಬರಬಹುದು ಆದರಿಂದ ಮಾಡುವ ಕೆಲ್ಸಕ್ಕೆ ಮುಂಚೆ ಹತ್ತಾರು ಬಾರಿ ಯೋಚಿಸಿ ನಿರ್ಣಯ ತೆಗೆದುಕೊಳ್ಳಿ, ಮದ್ವೆ ಆಗದ ಹೆಣ್ಣು ಅಥವ ಗಂಡು ಮಕ್ಕಳಿಗೆ ಕಂಕಣ ಭಾಗ್ಯ ಕೊಡಿ ಬರುವ ಸಾಧ್ಯತೆ ಇದೆ. ನೀವು ಈ ವಾರ ಮತ್ತಷ್ಟು ಲಾಭಗಳನ್ನು ಪಡೆಯಲು ಮತ್ತು ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಪ್ರತಿ ನಿತ್ಯ ಸಂಜೆ ಒಮ್ಮೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕುಂಭ: ಈ ವಾರ ಕುಂಭ ರಾಶಿಯವರಿಗೆ ಕೆಲವು ನಕ್ಷತ್ರದ ಪ್ರಕಾರ ಮಾತ್ರ ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತೆ, ಜಮೀನು ತಗಾದೆ ಅಥವ ಮಾತಿನ ಚಕಮಕಿ ನಡೆದು ಗಲಾಟೆ ಆಗುವ ಸಾಧ್ಯೆತೆ ಇದೆ, ನಿಮ್ಮ ಸಹೋದರ ಅಥವ ಸಹೋದರಿಯಿಂದ ನಿಮಗೆ ಹೆಚ್ಚಿನ ಸಹಾಯ ಆಗುತ್ತೆ ಮತ್ತು ಹೆಣ್ಣುಮಕ್ಕಳಿಗೆ ಈ ವಾರ ಸ್ವಲ್ಪ ಸಿಟ್ಟು ಹೆಚ್ಚಾಗುವ ಸಾಧ್ಯೆ ಇದೆ, ನಿಮ್ಮ ಸ್ನೇಹಿತರು ನಿಮ್ಮ ಕಷ್ಟ ಕಾಲದಲ್ಲಿ ಭಾಗಿಯಾಗುವರು, ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ನಿಮ್ಮ ಈ ವಾರ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗಲು ಮತ್ತು ಮನೆ ಹತ್ತಿರ ಇರುವ ಶಿವನ ದೇಗುಲಕ್ಕೆ ಭೇಟಿ ನೀಡಿ ಮತ್ತು ಸಾಧ್ಯ ಆದ್ರೆ ಪ್ರತಿ ನಿತ್ಯ 18 ಬಾರಿ ಗಾಯತ್ರಿ ಮಂತ್ರ ಜಪ ಮಾಡಿ.

ಮೀನ: ಈ ರಾಶಿಯವರಿಗೆ ಈ ವರ ಒಂದಿಷ್ಟು ಶುಭ ಮತ್ತು ಒಂದಿಷ್ಟು ಅಶುಭ ಫಲ ಎರಡು ಇದೆ, ಅವಿವಾಹಿತರಿಗೆ ಕಂಕಣ ಕೊಡಿ ಬರುವ ಸಾಧ್ಯತೆ ಇದೆ, ಹೆಚ್ಚಿನ ಶ್ರಮ ಪಟ್ಟರು ನಿಮಗೆ ಈ ವರ ಪ್ರತಿಫಲ ಕಡಿಮೆ ಇದೆ, ಹೆಣ್ಣುಮಕ್ಕಳಿಗೆ ಒಂದಿಷ್ಟು ಆರ್ಥಿಕ ಸಮಸ್ಯೆಗಳು ದೂರ ಆಗುವ ಸಾಧ್ಯತೆ ಹೆಚ್ಚು, ಮತ್ತಷ್ಟು ಲಾಭ ಪಡೆಯಲು ನೀವು ನಿಮ್ಮ ಗುರು ಹಿರಿಯರ ಮಾರ್ಗ ದರ್ಶನ ಹೆಚ್ಚು ಪಡೆಯಿರಿ ಮತ್ತು ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಎಳ್ಳು ಬತ್ತಿ ಹಚ್ಚಿ ಬನ್ನಿ.

LEAVE A REPLY

Please enter your comment!
Please enter your name here