ಮಂಗಳವಾರ ಈ ವ್ರತ ಮಾಡಿದವರಿಗೆ ಸರ್ವ ದೋಷಗಳು ಕಳೆದು ಶುಭವಾಗಲಿದೆ

0
1029

೨೧ ಮಂಗಳವಾರ ಈ ಪೂಜೆ ಮಾಡಿದ್ರೆ ಸಕಲ ದೋಷಗಳು ನಿವಾರಣೆ ಆಗುತ್ತೆ ಎಂಬ ನಂಬಿಕೆ ಇದೆ

ಮನುಷ್ಯ ಎಂದಮೇಲೆ ಆಸೆ ಆನೋದು ಇದ್ದೆ ಇರುತ್ತೆ ಒಂದು ಮನೆ ಕಟ್ಟಬೇಕು ಮಗನಿಗೆ ಒಳ್ಳೆ ಕೆಲಸ ಸಿಗಬೇಕು ಆರ್ಥಿಕವಾಗಿ ಸುಧಾರಣೆ ಆಗ್ಬೇಕು ಎಲ್ಲ ಸಮಸ್ಯೆಗಳು ದೂರ ಆಗ್ಬೇಕು ಯಾರಿಗೆ ಆಸೆ ಇರೋದಿಲ್ಲ ಹೇಳಿ  ಆದ್ರೆ ಯಾವುದೊ ಒಂದು ಕಾರಣದಿಂದ ಮತ್ತು ಶಕ್ತಿಯಿಂದ ಸಮಸ್ಯೆ ಹೆಚ್ಚಾಗಿ ಕಾಡುತ್ತಾ ಇರುತ್ತೆ ಕೆಲವರಿಗೆ ಧರ್ಮ ಮತ್ತು ದೇವರ ಮೇಲೆ ಭಕ್ತಿ ಇರುತ್ತೆ ಮತ್ತು ಕೆಲವು ಜನಕ್ಕೆ ತಮ್ಮ ಶ್ರಮದ ಮೇಲೆ ಮಾತ್ರ ನಂಬಿಕೆ ಇರುತ್ತೆ ಮತ್ತೋ ಕೆಲವು ಜನಕ್ಕೆ ಅದೃಷ್ಟದ ಮೇಲೆ ನಂಬಿಕೆ ಜನರಿಗೆ ಹೀಗೆ ಒಂದೊಂದು ರೀತಿಯ ನಂಬಿಕೆ ಇರುತ್ತೆ ನಮ್ಮ ವಿಜ್ಞಾನ ಎಷ್ಟೇ ಮುಂದುವರೆದಿದ್ದರು ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಕಾಣದ ಅಗೋಚರ ಶಕ್ತಿ ಇದೆ ಅದು ನಮ್ಮನು ಹಿಂಬಾಲಿಸುತ್ತಲೇ ಇರುತ್ತದೆ ಎನ್ನುವುದು ಸತ್ಯವಾದ ಮಾತು ನಿಮ್ಮ ಅರ್ಥಿಕ ಸಮಸ್ಯೆ ಮತ್ತು ನಿಮ್ಮ ಇತರೆ ಸಮಸ್ಯೆ ಸರಿ ಹೋಗಲು ನೀವು 21 ವಾರಗಳ ಕಾಲ ನಾವು ಹೇಳಿದ ರೀತಿಯಲ್ಲಿ ಹನುಮಂತನ ವ್ರತ ಮಾಡಿದರೆ ನಿಮ್ಮ ಪಾಪ ಕಳೆದು ಪುಣ್ಯ ಲಭಿಸುವುದು.

ಮಂಗಳವಾರ ಅಂದ್ರೆ ಹನುಮಂತ ದೇವರಿಗೆ ಪ್ರಿಯವಾದ ಎಂದು ಎಲ್ಲರಿಗು ಗೊತ್ತು ಈ ದಿನ ಹನುಮಂತನ ಪೂಜೆ ಮಾಡುವವರು ಬೆಳ್ಳಗೆ ಎದ್ದು ಸಾಧ್ಯವಾದರೆ ತಣ್ಣನೆ ನೀರಿನಲ್ಲಿ ಸ್ನಾನ ಮುಗಿಸಬೇಕು, ನಂತರ ದಿನ ಪೂರ್ತಿ ಗೋದಿ ಪದಾರ್ಥ ಮತ್ತು ಬೆಲ್ಲದ ವಸ್ತುಗಳು ಮತ್ತು ನೀರು ಮಾತ್ರ ಸೇವನೆ ಯೋಗ್ಯ ಬೇರೆ ಏನು ಸೇವಿಸುವ ಹಾಗಿಲ್ಲ.

ಹನುಮ ದೇವರಿಗೆ ಕೆಂಪು ವಸ್ತ್ರ ಅರ್ಪಣೆ ಮಾಡಬೇಕು ಪೂಜೆಯ ನಂತರ ಅದನ್ನು ಬಡವರಿಗೆ ಅಥವ ಬ್ರಾಹ್ಮಣರಿಗೆ ದಾನ ಮಾಡಬೇಕು, ಪೂಜೆಗೆ ನೀವು ಕೆಂಪು ಬಣ್ಣದ ಹೂವುಗಳನ್ನ ಮಾತ್ರ ಬಳಸಬೇಕು, ಹಾಗೆಯೇ ನೀವು ಕೆಂಪು ವಸ್ತ್ರ ಧರಿಸಿ ಪೂಜೆ ಮಾಡಬೇಕು ಮೊದಲಿಗೆ ವಿಘ್ನನಿವಾರಕ ಗಣಪತಿ ಧ್ಯಾನ ಮಾಡಿದ ನಂತರವೇ ಹನುಮಂತನ ಪೂಜೆ ಶುರು ಮಾಡುವುದು ಸಂಪ್ರದಾಯ,

ಮೊದಲಿಗೆ ಹನುಮಾನ್ ಚಾಲೀಸ ಓದಿ ನಂತರ, ಭಕ್ತಿ ಮತ್ತು ಶ್ರದ್ದೆಯಿಂದ ಹನುಮಾನ್ ಸಂಪೂರ್ಣ ಕಥೆ ಓದಿ ನಂತರ ಹನುಮಂತ ದೇವರ ಈ ಶಕ್ತಿಶಾಲಿ ಮಂತ್ರ 108 ಬಾರಿ ಹೇಳಲೇ ಬೇಕು ”ಅಂಜನಿ ಗರ್ಭ ಸಂಭೂತ ಸುಗ್ರೀವ ಸಚೀವೋತ್ತಮ, ರಾಮಪ್ರಿಯ ನಮಸ್ತುಭ್ಯಂ ಹನುಮಾನ್ ಪಾಹಿಮಾಂ ಸದಾ” ಎಂದು

ಮಂತ್ರ ಹೇಳಿ ಮುಗಿಸಿದ ನಂತರ ಹನುಮಂತನಿಗೆ ತೆಂಗಿನಕಾಯಿ, ದೂಪ ದೀಪ, ಕುಂಕುಮ ಎಲ್ಲವನು ಅರ್ಪಣೆ ಮಾಡಿ, ಯಾರು ಹನುಮಂತನನ್ನು ಹೀಗೆ 21 ವಾರಗಳ ಕಾಲ ಪೂಜೆ ಮಾಡುವರೋ ಅವರಿಗೆ ಹನುಮಂತನ ಕೃಪೆ ಸಿಗಲಿದೆ, ನೀವು ಮಾಡುವ ಪೂಜೆಯಲ್ಲಿ ಶ್ರದ್ದೆ ಮತ್ತು ಭಕ್ತಿ ಮುಖ್ಯವಾಗಿದೆ. ನೀವು ದೇವರಿಗೆ ನೀಡುವ ಭಕ್ತಿ ಅನುಸಾರದ ಮೇಲೆ ನಿಮ್ಮ ಅದೃಷ್ಟ ಬದಲಾಗಲಿದೆ.

LEAVE A REPLY

Please enter your comment!
Please enter your name here